ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ
ಜರ್ಮನಿ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‍ಯುವಿಗಳಲ್ಲಿ ಒಂದಾಗಿದೆ.

ಅಧಿಕೃತ ಬಿಡುಗಡೆಗೂ ಮುನ್ನ ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಲ್ಲಿ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ಹೆಸರನ್ನು ಪಟ್ಟಿಮಾಡಿದೆ. ಇದೀಗ ಈ ಎಸ್‍ಯುವಿಯ ಖರೀದಿಗಾಗಿ ಆಯ್ದ ಡೀಲರ್ ಫೋಕ್ಸ್‌ವ್ಯಾಗನ್ ಡೀಲರುಗಳು ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಫೋಕ್ಸ್‌ವ್ಯಾಗನ್ ಖರೀದಿಸಲು ಬಯಸುವ ಗ್ರಾಹಕರು ಈ ಆಯ್ದ ಡೀಲರ್ ಗಳ ಬಳಿ ತೆರಳಿ ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಈ ಟಿಗ್ವಾನ್ ಎಸ್‍ಯುವಿಯು ಭಾರತಕ್ಕೆ ಹೊಸದಲ್ಲ, ಈ ಹಿಂದೆ ಮಾರಾಟದಲ್ಲಿತ್ತು. ಆದರೆ ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಟಿಗ್ವಾನ್ ಎಸ್‍ಯುವಿಯನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಟಿಗ್ವಾನ್ ಎಸ್‍ಯುವಿ ಎಲ್ಲಾ ಹೊಸ ವಿನ್ಯಾಸ, ನೂತನ ವೈಶಿಷ್ಟ್ಯಗಳು ಮತ್ತು ಹೊಸ ಎಂಜಿನ್ ಅನ್ನು ಪಡೆದುಕೊಂಡಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಟಿಗ್ವಾನ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ವಲ್ಪ ಇದು ದೇಶದಲ್ಲಿ ಮಾರಾಟವಾಗಿದ್ದ ಅದರ ಹಿಂದಿನ ಮಾದರಿಗೆ ಸ್ವಲ್ಪ ಹೋಲುತ್ತದೆ. ಆದರೆ ಕೆಲವು ಟ್ವೀಕ್‌ಗಳಿವೆ.ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ ನಯವಾದ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಎಲ್ಇಡಿ ಮ್ಯಾಟ್ರಿಕ್ಸ್ ತಂತ್ರಜ್ಞಾನವನ್ನು ಕೂಡಿದೆ.

ಕ್ರೋಮ್‌ನ ಫಿನಿಶಿಂಗ್ ಗ್ರಿಲ್ ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಏರ್ ಟೆಕ್ ಅನ್ನು ಒಳಗೊಂಡಿದೆ. ಬಂಪರ್ ಮೇಲೆ ಇರಿಸಲಾಗಿರುವ ಮುಂಭಾಗದ ಸೆನ್ಸಾರ್ ಗಳನ್ನು ಒಳಗೊಂಡಿವೆ. ಹೊಸ ಟಿಗ್ವಾನ್ ವಿನ್ಯಾಸದ ವಿಷಯದಲ್ಲಿ ಹೆಚ್ಚು ಬದಲಾವಣೆಗಳನ್ನು ಕಂಡು ಬಂದಿಲ್ಲ. ಹೊಸ ಟಿಗ್ವಾನ್ ಈಗ 18 ಇಂಚಿನ ಅಲಾಯ್ ವ್ಹೀಲ್‌ಗಾಗಿ ಹೊಸ ವಿನ್ಯಾಸವನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಕ್ರೋಮ್ ಫಿನಿಶಿಂಗ್ ಹೊಂದಿರುವ ವಿಂಡೋ ಲೈನ್ ಇದರ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತದೆ. ಹೊಸ ಎಸ್‍ಯುವಿಯಲ್ಲಿ ಸ್ಪ್ಲಿಟ್-ಸ್ಟೈಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬಂಪರ್‌ನಲ್ಲಿ ಕ್ರೋಮ್ ಅಸ್ಸೆಂಟ್ ಗಳು, ದೊಡ್ಡ ಪ್ರತಿಫಲಿತ ಸ್ಟ್ರಿಪ್ ಮತ್ತು ಬೂಟ್ ಲಿಡ್ ಮಧ್ಯದಲ್ಲಿ ಇರಿಸಲಾಗಿರುವ ವಿಡಬ್ಲ್ಯೂ ಬ್ಯಾಡ್ಜ್ ಅನ್ನು ಒಳಗೊಂಡಿದೆ.

ಇದರೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟ್ ಆಗಿರುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಇದರಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಕಫ್ ಪ್ಲೇಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು 30 ಮಾದರಿಯ ಅಂಬೈಟ್ ಲೈಟ್ ಗಳನ್ನು ಕೂಡ ಹೊಂದಿವೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಟಿಗ್ವಾನ್ ಹಿಂಭಾಗದಲ್ಲಿ ಎಸಿ ವೆಂಟ್ಸ್, ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್ ಜೊತೆಗೆ ಅನೇಕ ಯುಎಸ್‌ಬಿ ಸ್ಲಾಟ್‌ಗಳು, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ಬಳಕೆಯ ಸುಲಭವಾದ ಕನೆಕ್ಟಿವಿಟಿ ಹೊಂದಿರುವ ತಂತ್ರಜ್ಞಾನದವನ್ನು ಕೂಡ ಒಳಗೊಂಡಿದೆ.

ಇನ್ನು ಈ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0-ಲೀಟರ್ ಟಿಎಸ್ಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರಲ್ಲಿ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ನೀಡಲಾಗಿದೆ.

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಆರು ಏರ್‌ಬ್ಯಾಗ್‌ಗಳು, ಎಬಿಎಸ್, ಇಎಸ್‌ಪಿ, ಆಂಟಿ-ಸ್ಪಿಲ್ ಕಂಟ್ರೋಲ್, ಆಟೋ-ಹೋಲ್ಡ್, ಹಿಲ್ ಸ್ಟಾರ್ಟ್ ಅಸಿಸ್ಟ್ & ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಂಭಾಗದಲ್ಲಿ 3 ಹೆಡ್‌ರೆಸ್ಟ್‌ಗಳು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್, ಡ್ರೈವರ್ ಅಲರ್ಟ್ ಸಿಸ್ಟಂ ಮತ್ತು ಎಲ್ಇಡಿ ಕಾರ್ನರಿಂಗ್ ಲ್ಯಾಂಪ್ ಅನ್ನು ಹೊಂದಿದೆ.


Click it and Unblock the Notifications








