ಆಕರ್ಷಕ ಬೆಲೆಗಳಲ್ಲಿ ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ Volkswagen India ಕಂಪನಿ!
ಕೋವಿಡ್ ಪರಿಣಾಮ ಉದ್ಯಮ ವ್ಯವಹಾರಗಳಲ್ಲಿ ಸಾಕಷ್ಟು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ವಾಹನಗಳ ಮೇಲೆ ಲೀಸ್ ಆಯ್ಕೆಯನ್ನು ಹೆಚ್ಚಿಸುತ್ತಿವೆ.

ಫೋಕ್ಸ್‌ವ್ಯಾಗನ್ ಇಂಡಿಯಾ(Volkswagen India) ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿವಿಧ ಕಾರ್ ರೆಂಟಲ್ ಕಂಪನಿಗಳೊಂದಿಗೆ ಜೊತೆಗೂಡಿ ಲೀಸ್ ಆಯ್ಕೆ ಆರಂಭಿಸಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಾದ ಪೊಲೊ(Polo), ವೆಂಟೊ(Vento) ಮತ್ತು ಟಿ-ರಾಕ್(T-Roc) ಕಾರುಗಳನ್ನು ಕಾರ್ ರೆಂಟಲ್ ಕಂಪನಿಗಳಲ್ಲಿ ಆಸಕ್ತ ಗ್ರಾಹಕರಿಗೆ ಸಬ್‌ಸ್ಕ್ರೈಬ್ ಆಯ್ಕೆ ಪರಿಚಯಿಸಿದೆ.

ಆಟೋ ಕಂಪನಿಗಳಿಗೆ ಕೋವಿಡ್‌ನಿಂದಾಗುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಕಾರ್ ಸಬ್‌ಸ್ಕೈಬ್ ಯೋಜನೆಗಳು ಸಾಕಷ್ಟು ಸಹಕಾರಿಯಾಗುತ್ತಿದ್ದು, ಫೋಕ್ಸ್‌ವ್ಯಾಗನ್ ಕಂಪನಿಯು ಕೂಡಾ ತನ್ನ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಚಂದಾದಾರಿಕೆಯನ್ನು ನೀಡುತ್ತಿದೆ.

ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಗ್ರಾಹಕರು ಹೊಸ ವಾಹನಗಳ ಖರೀದಿಯ ಬದಲು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಗ್ರಾಹಕರು ಫೋಕ್ಸ್‌ವ್ಯಾಗನ್ ಹೊಸ ಕಾರು ಮಾದರಿಗಳನ್ನು ಪ್ರತಿ ತಿಂಗಳು ಆರಂಭಿಕವಾಗಿ ರೂ.16,500 ಲೀಸ್ ದರದ ಮೇಲೆ 24, 36 ಮತ್ತು 48 ತಿಂಗಳ ಅವಧಿಗೆ ಮಾಲೀಕತ್ವ ಪಡೆದುಕೊಳ್ಳಬಹುದಾಗಿದ್ದು, ಕಾರುಗಳು ಮತ್ತು ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪ್ರತಿ ತಿಂಗಳ ಲೀಸ್ ದರ ಅನ್ವಯವಾಗುತ್ತದೆ.

ಫೋಕ್ಸ್‌ವ್ಯಾಗನ್ ಕಂಪನಿಯು ಮುಂಬೈ ಮೂಲಕ ಓರಿಕ್ಸ್ ಕಾರ್ ಸಬ್‌ಸ್ಕ್ರೈಬ್ ಕಂಪನಿ ಜೊತೆಗೂಡಿ ಹೊಸ ಯೋಜನೆ ಚಾಲನೆ ನೀಡಿದ್ದು, ಸಬ್‌ಸ್ಕ್ರೈಬ್ ಯೋಜನಯಲ್ಲಿ ಪೊಲೊ ಕಾರು ಪ್ರತಿ ತಿಂಗಳಿಗೆ ಆರಂಭಿಕವಾಗಿ ರೂ.16,500 ದರ ಹೊಂದಿದ್ದರೆ ವೆಂಟೊ ಕಾರು ಮಾದರಿಯು ರೂ. 27,000 ಮತ್ತು ಟಿ-ರಾಕ್ ಕಾರು ಮಾದರಿಯು ರೂ.59,000 ದರ ಹೊಂದಿದೆ.

ಆರಂಭಿಕವಾಗಿ ಪ್ರಮುಖ ಏಳು ನಗರಗಳಲ್ಲಿ ಆರಂಭ
ಹೌದು, ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಕಾರ್ ಸಬ್‌ಸ್ಕೈಬ್ ಯೋಜನೆಯನ್ನು ಆರಂಭಿಕವಾಗಿ ದೆಹಲಿ, ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ್, ಚೆನ್ನೈ ಮತ್ತು ಅಹಮದಾಬಾದ್ ನಗರಗಳಲ್ಲಿ ಆರಂಭಿಸಿದ್ದು, ಹೊಸ ಕಾರ್ ಸಬ್‌ಸ್ಕೈಬ್ ಯೋಜನೆಗಳು ಹಲವಾರು ನೀತಿ ನಿಯಮಗಳ ಪಾಲನೆಗಳನ್ನು ಒಳಗೊಂಡಿದೆ.

ಲೀಸ್ ಪಡೆದ ಕಾರುಗಳ ಚಂದಾ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿರುವ ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಕಾರುಗಳನ್ನು 24, 36 ಅಥವಾ 48 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ.

ಲೀಸ್‌ನಲ್ಲಿ ನೀಡಲಾಗುವ ಪ್ರತಿ ಕಾರು ಮಾದರಿಯು ಸಹ ಹೊಸ ಕಾರು ಆವೃತ್ತಿಯಾಗಿದ್ದು, ಮಾಲೀಕ್ವದ ಸಂದರ್ಭದಲ್ಲಿ ಸಾಮಾನ್ಯ ತಾಂತ್ರಿಕ ಅಂಶಗಳ ಸಮಸ್ಯೆಗಳನ್ನು ಹೊರತುಪಡಿಸಿ ತಪ್ಪು ಚಾಲನೆಯಿಂದಾಗುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಚಂದಾದಾರರೇ ಹೊಣೆಯಾಗಿರುತ್ತಾರೆ.

ಲೀಸ್ ಹೊಂದಿರುವ ಕಾರುಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಸಲುವಾಗಿ ಕಂಪನಿಯು ಬಂಪರ್ ಟು ಬಂಪರ್ ಸುರಕ್ಷೆಗೆಗಾಗಿ ದುಬಾರಿ ಬೆಲೆಯ ಸಮಗ್ರ ವಿಮಾ ಪಾಲಿಸಿ ಹೊಂದಿರಲಿದ್ದು, ಲೀಸ್ ಸಂದರ್ಭದಲ್ಲಿ ಕಾರುಗಳ ಚಾಲನೆಗೆ ಪ್ರತಿ ತಿಂಗಳು ಇಂತಿಷ್ಟು ಕಿ.ಮೀ ನಿಗದಿಪಡಿಸಲಾಗಿರುತ್ತದೆ.

ಕಂಪನಿಯು ಒಂದು ತಿಂಗಳು ಅಥವಾ ಒಂದು ವರ್ಷದ ಅವಧಿಯಲ್ಲಿ ನಿಗದಿಪಡಿಸಿದ ಕಿ.ಮೀ ಗಿಂತಲೂ ಹೆಚ್ಚು ಚಾಲನೆಗೊಂಡಿದ್ದರೆ ಚಂದಾ ದರಕ್ಕಿಂತಲೂ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಿದ್ದು, ಪ್ರತಿ ಕಿ.ಮೀ ಗೆ ಹೆಚ್ಚುವರಿಯಾಗಿ ವಿವಿಧ ಕಾರುಗಳ ಅನುಗುಣವಾಗಿ ರೂ.7 ರಿಂದ ರೂ.10 ತನಕ ಶುಲ್ಕ ನಿಗದಿಪಡಿಸುತ್ತದೆ.

ಹಾಗೆಯೇ ಸಬ್‌ಸ್ಕೈಬ್ ಯೋಜನೆ ಅಡಿ ಪಡೆದ ಕಾರುಗಳನ್ನು ಕಡ್ಡಾಯವಾಗಿ ಸ್ವಂತ ಬಳಕೆ ಮಾತ್ರ ಬಳಕೆ ಮಾಡಬೇಕಿದ್ದು, ಯಾವುದೇ ಕಾರಣಕ್ಕೂ ಸೆಲ್ಪ್ ಡ್ರೈವ್ ರೆಂಟ್‌ಗಾಗಿ ಹಸ್ತಾಂತರ ಮಾಡುವುದಾಗಲಿ ಅಥವಾ ಟಾಕ್ಸಿ ಸೇವೆಗಾಗಿ ಬಳಕೆ ಮಾಡಲು ಅವಕಾಶ ನೀಡುವುದಿಲ್ಲ.

ಇದು ಹೊಸ ಕಾರು ಖರೀದಿಯಿಂದಾಗುವ ಆರ್ಥಿಕ ಹೊರೆಗಿಂತಲೂ ತುಸು ಭಿನ್ನವಾಗಿದ್ದು, ಚಂದಾದಾರಿಕೆಯ ನಂತರ ಬಳಕೆಯ ಅವಶ್ಯಕತೆಯಿಲ್ಲ ಎಂದಾದಲ್ಲಿ ಮರಳಿ ನೀಡಬಹುದಾದ ಆಯ್ಕೆಯಿರುತ್ತದೆ.

ಆದರೆ ಹೊಸ ವಾಹನ ಖರೀದಿ ನಂತರ ಆಗುವ ಆರ್ಥಿಕ ಹೊರೆಯನ್ನು ನೀವು ಸಲಿಸುವ ಮೂಲಕ ನಿರ್ವಹಣೆ ಮಾಡಲೇಬೇಕಾದ ಅನಿವಾರ್ಯತೆಯಿರುತ್ತದೆ. ಹೀಗಾಗಿ ಕಾರ್ ಸಬ್‌ಸ್ಕೈಬ್ ಯೋಜನೆಗಳು ಅವಶ್ಯವಿದ್ದಾಗ ಕಾರು ಮಾಲೀಕತ್ವ ಪಡೆದುಕೊಳ್ಳಲು ಸಾಕಷ್ಟು ಸಹಕಾರಿಯಾಗಿದೆ ಎನ್ನಬಹುದು.


Click it and Unblock the Notifications








