ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಜರ್ಮನಿ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ಟೈಗನ್ ಮಿಡ್ ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಬಿಡುಗಡೆ ಸಮಾರಂಭದಲ್ಲಿ, ಕಂಪನಿಯು ಎರಡು ಹೊಸ ಕಾರುಗಳನ್ನು ಮುಂದಿನ ದಿನಗಳಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಫೋಕ್ಸ್‌ವ್ಯಾಗನ್ ಬಹುನಿರೀಕ್ಷಿತ 5-ಸೀಟರ್ ಟಿಗ್ವಾನ್ ಫೇಸ್‌ಲಿಫ್ಟ್ ಮತ್ತು ಮಿಡ್ ಸೈಜ್ ಸೆಡಾನ್ ಅನ್ನು ಪರಿಚಯಿಸಲಿದೆ. ಈ ಹೊಸ ಮಿಡ್ ಸೈಜ್ ಸೆಡಾನ್ ವಿರ್ಟಸ್ ಆಗಿರಬಹುದು ಎಂದು ನಿರೀಕ್ಷಿಸಬಹುದು. ಫೋಕ್ಸ್‌ವ್ಯಾಗನ್ ಕಂಪನಿಯು ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಅನಾವರಣಗೊಳಿಸಲಾಗಿದೆ, ಈ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯು ಈ ವರ್ಷದ ಮಧ್ಯಂತರ ಅವಧಿಯಲ್ಲಿ ಬಿಡುಗಡೆಗೊಳಿಸಲು ನಿರ್ದರಿಸಲಾಗಿತ್ತು. ಆದರೆ ಕೊರೋನಾ ಆತಂಕದಿಂದ ಇದರ ಬಿಡುಗಡೆಯು ವಿಳಂಬವಾಗಿದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಅಧಿಕೃತ ಬಿಡುಗಡೆಗೂ ಮುನ್ನ ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಲ್ಲಿ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ಹೆಸರನ್ನು ಪಟ್ಟಿಮಾಡಿದೆ. ಇನ್ನು ಈ ಟಿಗ್ವಾನ್ ಎಸ್‍ಯುವಿಯು ಭಾರತಕ್ಕೆ ಹೊಸದಲ್ಲ, ಈ ಹಿಂದೆ ಮಾರಾಟದಲ್ಲಿತ್ತು. ಆದರೆ ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಟಿಗ್ವಾನ್ ಎಸ್‍ಯುವಿಯನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಟಿಗ್ವಾನ್ ಎಸ್‍ಯುವಿ ಎಲ್ಲಾ ಹೊಸ ವಿನ್ಯಾಸ, ನೂತನ ವೈಶಿಷ್ಟ್ಯಗಳು ಮತ್ತು ಹೊಸ ಎಂಜಿನ್ ಅನ್ನು ಪಡೆದುಕೊಂಡಿದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಇ ಹೊಸ ಟಿಗ್ವಾನ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ವಲ್ಪ ಇದು ದೇಶದಲ್ಲಿ ಮಾರಾಟವಾಗಿದ್ದ ಅದರ ಹಿಂದಿನ ಮಾದರಿಗೆ ಸ್ವಲ್ಪ ಹೋಲುತ್ತದೆ. ಆದರೆ ಕೆಲವು ಟ್ವೀಕ್‌ಗಳಿವೆ.ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ ನಯವಾದ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಎಲ್ಇಡಿ ಮ್ಯಾಟ್ರಿಕ್ಸ್ ತಂತ್ರಜ್ಞಾನವನ್ನು ಕೂಡಿದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಕ್ರೋಮ್ ಫಿನಿಶಿಂಗ್ ಹೊಂದಿರುವ ವಿಂಡೋ ಲೈನ್ ಇದರ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತದೆ. ಹೊಸ ಎಸ್‍ಯುವಿಯಲ್ಲಿ ಸ್ಪ್ಲಿಟ್-ಸ್ಟೈಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬಂಪರ್‌ನಲ್ಲಿ ಕ್ರೋಮ್ ಅಸ್ಸೆಂಟ್ ಗಳು, ದೊಡ್ಡ ಪ್ರತಿಫಲಿತ ಸ್ಟ್ರಿಪ್ ಮತ್ತು ಬೂಟ್ ಲಿಡ್ ಮಧ್ಯದಲ್ಲಿ ಇರಿಸಲಾಗಿರುವ ವಿಡಬ್ಲ್ಯೂ ಬ್ಯಾಡ್ಜ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಈ ಎಸ್‍ಯುವಿಯಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟ್ ಆಗಿರುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಇದರಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಕಫ್ ಪ್ಲೇಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು 30 ಮಾದರಿಯ ಅಂಬೈಟ್ ಲೈಟ್ ಗಳನ್ನು ಕೂಡ ಹೊಂದಿವೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಹೊಸ ಟಿಗ್ವಾನ್ ಹಿಂಭಾಗದಲ್ಲಿ ಎಸಿ ವೆಂಟ್ಸ್, ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್ ಜೊತೆಗೆ ಅನೇಕ ಯುಎಸ್‌ಬಿ ಸ್ಲಾಟ್‌ಗಳು, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ಬಳಕೆಯ ಸುಲಭವಾದ ಕನೆಕ್ಟಿವಿಟಿ ಹೊಂದಿರುವ ತಂತ್ರಜ್ಞಾನದವನ್ನು ಕೂಡ ಒಳಗೊಂಡಿದೆ. ಇನ್ನು ಈ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0-ಲೀಟರ್ ಟಿಎಸ್ಐ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರಲ್ಲಿ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ನೀಡಲಾಗಿದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಆರು ಏರ್‌ಬ್ಯಾಗ್‌ಗಳು, ಎಬಿಎಸ್, ಇಎಸ್‌ಪಿ, ಆಂಟಿ-ಸ್ಪಿಲ್ ಕಂಟ್ರೋಲ್, ಆಟೋ-ಹೋಲ್ಡ್, ಹಿಲ್ ಸ್ಟಾರ್ಟ್ ಅಸಿಸ್ಟ್ & ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಂಭಾಗದಲ್ಲಿ 3 ಹೆಡ್‌ರೆಸ್ಟ್‌ಗಳು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್, ಡ್ರೈವರ್ ಅಲರ್ಟ್ ಸಿಸ್ಟಂ ಮತ್ತು ಎಲ್ಇಡಿ ಕಾರ್ನರಿಂಗ್ ಲ್ಯಾಂಪ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಫೋಕ್ಸ್‌ವ್ಯಾಗನ್ ಹೊಸ ಮಿಡ್ ಸೈಜ್ ಸೆಡಾನ್ ಡಾನ್ ಅನ್ನು ಸಿದ್ಧಪಡಿಸುತ್ತಿದೆ, ಇದು ವರ್ಟಸ್ ಸೆಡಾನ್‌ನ ಭಾರತೀಯ ಆವೃತ್ತಿಯಾಗಿರಬಹುದು. ಈ ವಿಡಬ್ಲ್ಯೂ ವರ್ಟಸ್ ಅನ್ನು ಭಾರತೀಯ ರಸ್ತೆಗಳಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ವರ್ಟಸ್ ಕಾರನ್ನು ಮುಂದಿನ ವರ್ಷ ಬಿಡುಗಡೆಗೊಳಿಸಬಹುದು. ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ವಿರ್ಟಸ್ ಸೆಡಾನ್ ಅನ್ನು ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಸೆಡಾನ್ ಅನ್ನು ಸ್ಥಳಿಯವಾಗಿ ಅಭಿವೃದ್ದಿ ಪಡಿಸಬಹುದು ಎಂದು ಹೇಳಲಾಗುತ್ತಿದೆ. ಸ್ಕೋಡಾ-ಫೋಕ್ಸ್‌ವ್ಯಾಗನ್ ಇಂಡಿಯಾ 2.0 ಯೋಜನೆಯಡಿ ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅನ್ನು ಎಂಕ್ಯೂಬಿ ಎಒ ಇನ್ ಎಂದು ಸ್ಥಳೀಕರಿಸಲಾಗುತ್ತದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಇನ್ನು ಟೈಗನ್ ಮಿಡ್ ಸೈಜ್ ಎಸ್‍ಯುವಿಯು ಇದೇ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರುಸಲಾಗಿದೆ. ಇದರ ಪರಿಣಾಮವಾಗಿ, ವಿರ್ಟಸ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪ್ರತ್ಯೇಕವಾಗಿ ತಯಾರಿಸಲು ಮೂಲ ಮಾದರಿಯಾಗಿ ಬಳಸಲಾಬಹುದು. ಇನ್ನು ವಿರ್ಟಸ್ ಕಾರಿನ ಆಯಾಮಗಳು ಜಾಗತಿಕ-ಸ್ಪೆಕ್ ವರ್ಚಸ್‌ನಂತೆಯೇ ಇರುತ್ತದೆ. ಇದು 4,482 ಎಂಎಂ ಉದ್ದ, 1,751 ಎಂಎಂ ಅಗಲ ಮತ್ತು 1,472 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಸೆಡಾನ್ 2,651 ಎಂಎಂ ವ್ಹೀಲ್‌ಬೇಸ್‌ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಹೊಸ ಸೆಡಾನ್ ಮಾದರಿಗೆ ಯಾವ ಟಿಎಸ್‌ಐ ಎಂಜಿನ್ ಅನ್ನು ಅಳವಡಿಸಬಹುದು ಎಂದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ವಿಡಬ್ಲ್ಯೂ 1.5-ಲೀಟರ್ ಮತ್ತು 1.0-ಲೀಟರ್ ಎಂಜಿನ್ ಆಯ್ಕೆಗಳನ್ನು ನೀಡುವ ಸಾಧ್ಯತೆಗಳಿದೆ. ದೇಶದಲ್ಲಿ ಮಾರಾಟವಾಗುವ ಹಲವಾರು ಮಾದರಿಗಳಲ್ಲಿ ಈ ಎರಡು ಎಂಜಿನ್ ಗಳನ್ನು ನೀಡಲಾಗಿದೆ. ಇದರಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5500 ಆರ್‌ಪಿಎಂನಲ್ಲಿ 108 ಬಿಹೆಚ್‍ಪಿ ಪವರ್ ಮತ್ತು 1750 ಆರ್‌ಪಿಎಂನಲ್ಲಿ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Volkswagen

ಇನ್ನು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5000 ಆರ್‌ಪಿಎಂನಲ್ಲಿ 148 ಬಿಹೆಚ್‍ಪಿ ಪವರ್ ಮತ್ತು 1500 ಆರ್‌ಪಿಎಂನಲ್ಲಿ 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ವಿರ್ಟಸ್ ಸೆಡಾನ್ ಕಾರಿನಲ್ಲಿರುವ ಎಲ್ಇಡಿ ಲೈಟಿಂಗ್, ಸ್ಟ್ರಾಂಗ್ ಹೆಲ್ಡರ್ ಲೈನ್, ಫ್ರಂಟ್ ಫ್ಯಾಸಿಯಾ ಮತ್ತು ಅಲಾಯ್ ವೀಲ್ಸ್ ಅನ್ನು ಇಂಡಿಯನ್-ಸ್ಪೆಕ್ ಕೂಡ ಹೊಂದಿರುತ್ತದೆ.

More from DriveSpark

Article Published On: Monday, September 27, 2021, 10:12 [IST]
English summary
Volkswagen launch two new cars in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+