Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಫೋಕ್ಸ್‌ವ್ಯಾಗನ್ ಇಂಡಿಯಾ(Volkswagen India) ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಪೊಲೊ(Polo) ಮತ್ತು ವೆಂಟೊ(Vento) ಮಾದರಿಗಳಲ್ಲಿ ಸೀಮಿತ ಅವಧಿಗಾಗಿ ಮ್ಯಾಟ್ ಎಡಿಷನ್(Matt Edition) ಬಿಡುಗಡೆ ಮಾಡಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಪೊಲೊ ಮತ್ತು ವೆಂಟೊ ಮ್ಯಾಟ್ ಎಡಿಷನ್ ಮಾದರಿಗಳನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಮುಂದಿನ ಕೆಲ ದಿನಗಳವರೆಗೆ ಮಾತ್ರ ಮಾರಾಟ ಮಾಡಲಿದ್ದು, ನಿಗದಿತ ಸಂಖ್ಯೆಯ ಕಾರು ಮಾರಾಟದ ನಂತರ ಸ್ಥಗಿತವಾಗಲಿವೆ. ಮ್ಯಾಟ್ ಎಡಿಷನ್ ಸ್ಥಗಿತ ನಂತರ ಸ್ಟ್ಯಾಂಡರ್ಡ್ ಮಾದರಿಗಳ ಮಾರಾಟವು ಎಂದಿನಂತೆ ಲಭ್ಯವಿರಲಿದ್ದು, ಗ್ರಾಹಕರ ಅಭಿರುಚಿಯಂತೆ ಇದೀಗ ಹೊಸ ಬಣ್ಣದ ಆಯ್ಕೆ ನೀಡಲಾಗಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಮ್ಯಾಟ್ ಎಡಿಷನ್‌ಗಳು ಪೊಲೊ ಹ್ಯಾಚ್‌ಬ್ಯಾಕ್ ಕಾರಿನ ಜಿಟಿ ಆವೃತ್ತಿಯಲ್ಲಿ ಖರೀದಿ ಲಭ್ಯವಿದ್ದರೆ ವೆಂಟೊ ಕಾರಿನ ಹೈ ಲೈನ್ ಮಾದರಿಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.34 ಲಕ್ಷ ಬೆಲೆ ಹೊಂದಿವೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಪೊಲೊ ಮ್ಯಾಟ್ ಎಡಿಷನ್ ಮಾದರಿಯಲ್ಲಿ ಕೇವಲ ಒಂದೇ ಮಾದರಿಯೊಂದಿಗೆ ರೂ. 9.99 ಲಕ್ಷ ಬೆಲೆ ಹೊಂದಿದ್ದರೆ ವೆಂಟೊ ಕಾರಿನಲ್ಲಿ ಹೈ ಲೈನ್ ಮಾದರಿಯ ಮ್ಯಾಟ್ ಎಡಿಷನ್ ಆರಂಭಿಕವಾಗಿ ರೂ.11.94 ಲಕ್ಷದಿಂದ ಹೈ ಎಂಡ್ ಮಾದರಿಯು ರೂ. 13.34 ಲಕ್ಷ ಬೆಲೆ ಹೊಂದಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಮ್ಯಾಟ್ ಎಡಿಷನ್ ಕಾರು ಮಾದರಿಗಳು ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫೀಚರ್ಸ್‌ಗಳನ್ನು ಹೊಂದಿದ್ದು, ಸ್ಪೆಷಲ್ ಎಡಿಷನ್‌ನಲ್ಲಿ ಹೆಚ್ಚುವರಿಯಾಗಿ ಕಾರ್ಬನ್ ಸ್ಟೀಲ್ ಮ್ಯಾಟ್ ಶೇಡ್ ಬಣ್ಣದ ಆಯ್ಕೆ ನೀಡಲಾಗಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಕಾರಿನ ಹೊರಮೈ ಜೊತೆಗೆ ಫ್ರಂಟ್ ಗ್ರಿಲ್, ಲಿಪ್ ಸ್ಪಾಯ್ಲರ್, ಬಾಡಿ ಮೊಲ್ಡಿಂಗ್, ರಿಯರ್ ಡಿಫ್ಯೂಸರ್, ಟೈಲ್‌ಗೇಟ್ ಸ್ಪಾಯ್ಲರ್, ಟ್ರಕ್ ಲಿಪ್ ಗಾರ್ನಿಶ್‌ನಲ್ಲಿ ಗ್ಲಾಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ನೀಡಲಾಗಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಹೊಸ ಪೊಲೊ ಮತ್ತು ವೆಂಟೊ ಮ್ಯಾಟ್ ಎಡಿಷನ್ ಮಾದರಿಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಟೆಲ್ಲರ್ ಗ್ರೇ ಮತ್ತು ಬ್ಲ್ಯಾಕ್ ಬಣ್ಣದ ಡ್ಯುಯಲ್ ಟೋನ್ ಇಂಟಿರಿಯಲ್ ಬಣ್ಣದ ಆಯ್ಕೆ ನೀಡಿದ್ದು, ಲೆದರ್ ಆಸನಗಳಲ್ಲಿ ಆಕ್ಲಾಂಟರ್ ಇನ್ಸರ್ಟರ್ ನೀಡಲಾಗಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಜೊತೆಗೆ ಸ್ಪೆಷಲ್ ಎಡಿಷನ್ ಮಾದರಿಗಾಗಿ ಕಂಪನಿಯು ಹೆಚ್ಚುವರಿ ಫಾರ್ ಎವರ್ ಕಾರ್ ಕೇರ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಲ್ಲಿ ಹೊಸ ಕಾರಿನ ಮೇಲೆ 4 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ, 4 ವರ್ಷಗಳ ರೋಡ್ ಸೈಡ್ ಅಸಿಸ್ಟ್ ಮತ್ತು ಸ್ಟ್ಯಾಂಡರ್ಡ್ ಆಗಿರುವ ಮೂರು ಉಚಿತ ಕಾರು ಸರ್ವಿಸ್‌ಗಳನ್ನು ನೀಡುತ್ತದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಇದರೊಂದಿಗೆ ಹೊಸ ಕಾರು ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ತಾಂತ್ರಿಕ ಸೌಲಭ್ಯಗಳು, ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ದೇಶಾದ್ಯಂತ ಲಭ್ಯವಿರುವ ಫೋಕ್ಸ್‌ವ್ಯಾಗನ್ ಅಧಿಕೃತ ಡೀಲರ್ಸ್‌ಗಳಲ್ಲಿ ಮ್ಯಾಟ್ ಎಡಿಷನ್ ಕಾರುಗಳು ಖರೀದಿಗೆ ಲಭ್ಯವಿವೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಇನ್ನು ಫೋಕ್ಸ್‌ವ್ಯಾಗನ್ ವೆಂಟೊ ಕಾರು ಕಂಫರ್ಟ್‌ಲೈನ್, ಹೈಲೈನ್ ಮತ್ತು ಹೈಲೈನ್ ಪ್ಲಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, ಪೊಲೊ ಮತ್ತು ವೆಂಟೊ ಕಾರುಗಳನ್ನು ಸ್ಥಳಿಯವಾಗಿ ತಯಾರಿಸಲಾಗುತ್ತಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಮತ್ತು ವೆಂಟೊ ಕಾರುಗಳಲ್ಲಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸುತ್ತಿದ್ದು, ಈ ಎಂಜಿನ್ 110 ಬಿ‍‍ಹೆಚ್‍‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಹಿಂದಿನ ತಲೆಮಾರಿನ ಮಾದರಿಗಳಲ್ಲಿ ಅಳವಡಿಸಲಾಗುತ್ತಿದ್ದ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಬದಲಾಯಿಸಲಾಗಿದ್ದು, ಹೊಸ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನ್ಯುವಲ್ ಗೇರ್‍‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇದರಲ್ಲಿ 6 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಸಹ ನೀಡಲಾಗಿದ್ದು, ಈ ಮೂಲಕ ಪ್ರತಿ ಲೀಟರ್‌ಗೆ 18.24 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಹೊಸ 1.0 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಹೆಚ್ಚಿನ ಪವರ್ ಡ್ರೈವಿಬಿಲಿಟಿ, ಉತ್ತಮ ಕಾರ್ಯಕ್ಷಮತೆ, ಸುಧಾರಿತ ಇಂಧನ ದಕ್ಷತೆಯನ್ನು ಮತ್ತು ಹೆಚ್ಚು ಸಮರ್ಥನೀಯ ಎಂಜಿನ್ ಎಂದು ಜನಪ್ರಿಯತೆಯನ್ನು ಗಳಿಸುತ್ತಿದ್ದು, ವೆಂಟೊ ಕಾರಿನಲ್ಲೂ ಟಿ‍ಎಸ್‍ಐ ಎಂಜಿನ್ ಆಯ್ಕೆ ಉತ್ತಮ ಬೇಡಿಕೆ ತಂದುಕೊಡುತ್ತಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಈ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಹಲವಾರು ಹೊಸ ನವೀಕರಿರಣಗಳನ್ನು ಪಡೆದುಕೊಂಡಿದೆ. ಹೊಸ ತಲೆಮಾರಿನ ಪೊಲೊದಲ್ಲಿ ಬಳಸಲಾಗುವ ಅದೇ ಎಂಕ್ಯೂಬಿ ಎಒ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ನವೀಕರಿಸಿದೆ.

Polo ಮತ್ತು Vento Matt Edition ಬಿಡುಗಡೆ ಮಾಡಿದ Volkswagen India

ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಲೈಟ್ ಬಾರ್ ಫೋಕ್ಸ್‌ವ್ಯಾಗನ್ ನಿಂದ ಬ್ಯಾಟರಿ-ಎಲೆಕ್ಟ್ರಿಕ್ ಐಡಿ ಮಾದರಿಗಳಿಗೆ ಮತ್ತು ಗಾಲ್ಫ್, ಆರ್ಟಿಯಾನ್ ಮತ್ತು ಟಿಗ್ವಾನ್ ನಂತಹ ಯಶಸ್ವಿ ಮಾದರಿಗಳ ಹೊಸ ವಾಹನ ಪೀಳಿಗೆಗೆ ಶೈಲಿಯ ಸಂಪರ್ಕವನ್ನು ಸೃಷ್ಟಿಸುತ್ತದೆ. ಈ ಕಾರಿನಲ್ಲಿ ಬೆಸ್ಪೋಕ್ ಚಾಸಿಸ್, ಮುಂಭಾಗದ ಆಕ್ಸಲ್ನಲ್ಲಿ ದೊಡ್ಡ ಸ್ಟೆಬಿಲೈಜರ್, ಹಿಂಭಾಗದಲ್ಲಿ ಗಟ್ಟಿಯಾದ ಆಕ್ಸಲ್ ಲೊಕೇಟಿಂಗ್ ಮೌಂಟ್ಸ್, ಮುಂಭಾಗದಲ್ಲಿ ಕಟ್ಟುನಿಟ್ಟಿನ ಜೋಡಣೆ ರಾಡ್ಗಳು ಮತ್ತು ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

More from DriveSpark

Article Published On: Wednesday, October 6, 2021, 15:39 [IST]
English summary
Volkswagen launches polo and vento limited matt edition in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+