ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಫೇಸ್‌ಲಿಫ್ಟ್ ಎಸ್‍ಯುವಿ
ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಟಿ-ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು 2019ರ ಫೆಬ್ರವರಿ ತಿಂಗಳಲ್ಲಿ ಪರಿಚಯಿಸಿತ್ತು. ಕಂಪನಿಯು ಈಗ ಜನಪ್ರಿಯ ಟಿ-ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಮಿಡ್-ಲೈಫ್ ಫೇಸ್‌ಲಿಫ್ಟ್ ಅನ್ನು ಸಿದ್ಧಪಡಿಸುತ್ತಿದೆ.

ಈ ಹೊಸ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು 2022ರ ಮಾದರಿಯಾಗಿ ಪರಿಚಯಿಸಲಾಗುವುದು ಮತ್ತು 200 ಟಿಎಸ್‌ಐ ಮತ್ತು 250 ಟಿಎಸ್‌ಐ ಎಂಜಿನ್‌ಗಳನ್ನು ಉಳಿಸಿಕೊಳ್ಳಲಿದೆ. ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಫೇಸ್‌ಲಿಫ್ಟ್ ಹೊಸ ಲೋಗೊದೊಂದಿಗೆ ಬರಲಿದೆ ಇದನ್ನು ಬ್ರೆಜಿಲ್‌ನಲ್ಲಿ ನಿವಸ್‌ನಲ್ಲಿ ಪರಿಚಯಿಸಲಾಯಿತು. ಲೋಗೋ ಮಾತ್ರವಲ್ಲ, ನವೀಕರಿಸಿದವು ನಿವಸ್‌ನಿಂದ ಸ್ಟೀಯರಿಂಗ್ ವ್ಹೀಲ್ ಅನ್ನು ಹಂಚಿಕೊಳ್ಳುತ್ತದೆ.

ಹೊಸ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಸ್ಟೈಲಿಂಗ್ ವಿಷಯದಲ್ಲಿ, ನವೀಕರಿಸಿದ ಟಿ-ಕ್ರಾಸ್ ಪರಿಷ್ಕೃತ ಫ್ರಂಟ್ ಗ್ರಿಲ್ ಮತ್ತು ನವೀಕರಿಸಿದ ಫ್ರಂಟ್ ಬಂಪರ್ ಅನ್ನು ಹೊಂದಿರುತ್ತದೆ. ಆದರೆ ಪ್ರಮುಖ ಬದಲಾವಣೆಗಳನ್ನು ಮಾಡಲಾಗುವುದಿಲ್ಲ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಅದೇ 1.0-ಲೀಟರ್ ಮತ್ತು 1.4-ಲೀಟರ್ ಟಿಎಸ್‌ಐ ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ. ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ.

ಇದರಲ್ಲಿ 1.0-ಲೀಟರ್ ಟಿಎಸ್‌ಐ ಎಂಜಿನ್ 116 ಬಿಹೆಚ್ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನಾವಾಟರ್ ಗೇರ್ ಬಾಕ್ಸ್ ಅನ್ನು ಹೊಂದಿರುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು 1.4-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ 150 ಬಿಹೆಚ್ಪಿ ಪವರ್ ಮತ್ತು 50 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಈ ಹೊಸ ವಿಡಬ್ಲ್ಯೂ ಟಿ-ಕ್ರಾಸ್ ಬ್ರ್ಯಾಂಡ್‌ನ ಹೊಸ ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, , ಅದು ಹೊಸ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವರ್ಟಸ್‌ಗೆ ಸಹ ಆಧಾರವಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಟೈಗನ್ ಮತ್ತು ಸ್ಕೋಡಾ ಕುಶಾಕ್ ಸಹ ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಫೋಕ್ಸ್‌ವ್ಯಾಗನ್ 2.0 ಯೋಜನೆಯಡಿಯಲ್ಲಿ ಬಿಡುಗಡೆಯಾಗಲಿರುವ ಮೊದಲ ಮಾದರಿ ಟೈಗನ್ ಆಗಿರಲಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ನಲ್ಲಿ ಸಿದ್ದವಾದ ಭಾರತದ ಮೊದಲ ವಾಹನವಾಗಲಿದೆ. ಆದರೆ ಈ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ.


Click it and Unblock the Notifications