ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

ಸ್ವೀಡಿಷ್ ಮೂಲದ ಕಾರು ತಯಾರಕ ಕಂಪನಿಯಾದ Volvo ಪ್ರಪಂಚದಾದ್ಯಂತದ ಸುಮಾರು 4,00,000 ಕಾರುಗಳನ್ನು ರಿಕಾಲ್ ಮಾಡಿದೆ. ಈ ಕಾರುಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ರಿಕಾಲ್ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಈ ಕಾರುಗಳನ್ನು ರಿಕಾಲ್ ಮಾಡಲು ಕಂಪನಿಯು ಗ್ರಾಹಕರನ್ನು ವೈಯಕ್ತಿಕವಾಗಿ ಸಂಪರ್ಕಿಸುತ್ತದೆ. 2000 ಮೇ ಯಿಂದ 2009 ರ ಮಾರ್ಚ್ ವರೆಗೆ ತಯಾರಿಸಿದ ಕಾರು ಮಾದರಿಗಳನ್ನು ರಿಕಾಲ್ ಮಾಡಲಾಗುತ್ತಿದೆ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

ಅಪಘಾತದ ಸಮಯದಲ್ಲಿ ಏರ್ ಬ್ಯಾಗ್ ಗಳಲ್ಲಿ ಲೋಹದ ತುಣುಕುಗಳು ಕಂಡು ಬಂದಿವೆ. ಇದರಿಂದ ಪ್ರಯಾಣಿಕರಿಗೆ ಗಾಯಗಳಾವಾಗುವ ಸಾಧ್ಯತೆಗಳಿವೆ ಎಂದು ಕಂಪನಿ ಹೇಳಿದೆ. ರಿಕಾಲ್ ಮಾಡಲಾದ ಕಾರುಗಳಲ್ಲಿ Volvo ಕಂಪನಿಯ ಪ್ರಮುಖ ಕಾರುಗಳಾದ S 60 ಹಾಗೂ S 80 ಸೆಡಾನ್ ಕಾರುಗಳು ಸಹ ಸೇರಿವೆ. ಈಗ Volvo ಕಂಪನಿಯು ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿರುವ ಅಂದಾಜು ವೆಚ್ಚದ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

ಇದುವರೆಗೂ Volvo ಕಂಪನಿಯು ಪ್ರತಿ ದೇಶದಿಂದ ರಿಕಾಲ್ ಮಾಡಲಾದ ಕಾರುಗಳ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. Volvo ಕಂಪನಿಯು ಭಾರತದಲ್ಲಿ S 60 ಮಾದರಿಯನ್ನು ಮಾರಾಟ ಮಾಡುತ್ತದೆ. Volvo ಯುಎಸ್ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (NHTSA) ಗೆ ಸುರಕ್ಷತಾ ಮರು ಪಡೆಯುವಿಕೆ ವರದಿಯಲ್ಲಿ ಈ ದೋಷದಿಂದ ಕೇವಲ ಒಬ್ಬರು ಮೃತ ಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

Volvo ಕಂಪನಿಯು ಪ್ರಯಾಣಿಕರಿಗೆ ಮಾರಕವಾಗಬಹುದಾದ ಸಮಸ್ಯೆಯನ್ನು ಗುರುತಿಸಲಾಗಿದೆ ಎಂದು ಹೇಳಿದೆ. ಏರ್ ಬ್ಯಾಗ್ ಇನ್ ಫ್ಲೇಟರ್ ನ ಪ್ರೊಪೆಲ್ಲಂಟ್ ಕೊಳೆಯುತ್ತದೆ ಹಾಗೂ ತೇವಾಂಶ ಅಥವಾ ಅಧಿಕ ತಾಪಮಾನಕ್ಕೆ ಒಡ್ಡಿಕೊಂಡಾಗ ಧೂಳಿನ ಕಣಗಳಾಗಿ ಬದಲಾಗುತ್ತದೆ ಎಂದು ಕಂಪನಿ ಹೇಳಿದೆ. ಈ ಕಾರಣದಿಂದಾಗಿ ಏರ್ ಬಬಲ್ ಸಿಡಿಯುವ ಅಪಾಯವಿರುತ್ತದೆ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

Volvo ಕಾರುಗಳ ಏರ್‌ಬ್ಯಾಗ್‌ಗಳಲ್ಲಿನ ತಾಂತ್ರಿಕ ದೋಷವು ಟಕಾಟಾ ಏರ್‌ಬ್ಯಾಗ್ ಇನ್ಫ್ಲೇಟರ್‌ಗಳಂತೆಯೇ ಇರುತ್ತದೆ. ಟಕಾಟಾ ಏರ್‌ಬ್ಯಾಗ್‌ಗಳನ್ನು ಬಳಸಿದ 100 ಮಿಲಿಯನ್ ಕಾರುಗಳನ್ನು ವಿಶ್ವದಾದ್ಯಂತ ರಿಕಾಲ್ ಮಾಡಲಾಗಿದೆ. ಇದರಲ್ಲಿಯೂ ಇದೇ ರೀತಿಯ ದೋಷಗಳು ಕಂಡು ಬಂದಿವೆ. ಟಕಾಟಾ ಏರ್‌ಬ್ಯಾಗ್ ಬಿಕ್ಕಟ್ಟು ಪ್ರಪಂಚದ ಪ್ರತಿಯೊಂದು ಪ್ರಮುಖ ಕಾರು ತಯಾರಕ ಕಂಪನಿಗಳ ಮೇಲೆ ಪರಿಣಾಮ ಬೀರಿದೆ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

ಟಕಟಾ ಏರ್‌ಬ್ಯಾಗ್‌ಗಳನ್ನು ಬಳಸುವ ಕಂಪನಿಗಳಲ್ಲಿ Ford, Toyota, General Motors, Nissan, Tesla, Ferarri, Mercedes Benz, BMW, Porsche, Jaguar, Land Rover ನಂತಹ ಜನಪ್ರಿಯ ಆಟೋ ಮೊಬೈಲ್ ಕಂಪನಿಗಳು ತಯಾರಿಸಿದ ವಾಹನಗಳು ಸೇರಿವೆ. ಜಾಗತಿಕವಾಗಿ ಇಂತಹ ಸಮಸ್ಯೆಯಿಂದ ಕನಿಷ್ಠ 28 ಜನರು ಮೃತ ಪಟ್ಟಿದ್ದಾರೆ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

ಅಮೆರಿಕಾದಲ್ಲಿಯೇ ಈ ಸಮಸ್ಯೆಯಿಂದ 19 ಜನ ಸಾವನ್ನಪ್ಪಿದ್ದರೆ 400 ಕ್ಕೂ ಹೆಚ್ಚು ಪ್ರಯಾಣಿಕರು ದೋಷಯುಕ್ತ ಏರ್ ಬ್ಯಾಗ್ ಇನ್ ಫ್ಲೇಟರ್ ನಿಂದಾಗಿ ಗಾಯಗೊಂಡಿದ್ದಾರೆ. Volvo ತನ್ನ ಡಿಜಿಟಲ್ ತಂತ್ರಜ್ಞಾನ ಕೇಂದ್ರವನ್ನು ಭಾರತದಲ್ಲಿ ತೆರೆಯಲಿದೆ. ಈ ಕೇಂದ್ರದಲ್ಲಿ, ಕಂಪನಿಯು ಭವಿಷ್ಯದ ವಾಹನಗಳಿಗಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಿದೆ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

Volvo ತನ್ನ ಐಷಾರಾಮಿ ಕಾರುಗಳ ಮಾರಾಟ ಜಾಲವನ್ನು ಭಾರತದಲ್ಲಿ ವಿಸ್ತರಿಸಲು ಮುಂದಾಗಿದೆ. ಕಂಪನಿಯು ಇತ್ತೀಚೆಗೆ ಚೆನ್ನೈನಲ್ಲಿ ಹೊಸ ಡೀಲರ್ ಶಿಪ್ ಆರಂಭಿಸಿದೆ. Volvo ತಮಿಳುನಾಡಿನ ಈ ಡೀಲರ್ ಶಿಪ್ ಮೂಲಕ ಮಾರಾಟ ಹಾಗೂ ಸೇವಾ ಕಾರ್ಯಾಚರಣೆಗಳನ್ನು ಆರಂಭಿಸಿದೆ. Volvo ತನ್ನ XC 40 ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಯೋಜನೆಯನ್ನು ಮುಂದೂಡಿದೆ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು 2022 ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. XC 40 Volvo ಕಂಪನಿಯು ದೇಶದಲ್ಲಿ ಬಿಡುಗಡೆಗೊಳಿಸಲಿರುವ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ಭಾರತಕ್ಕೆ ಕಂಪ್ಲೀಟ್ಲಿ ಬಿಲ್ಟ್ ಯುನಿಟ್ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

ಸ್ವಿಡಿಷ್ ಆಟೋ ಕಂಪನಿಯು ಭವಿಷ್ಯ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ವಾಹನ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಶೀಘ್ರದಲ್ಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿನ ಡೀಸೆಲ್ ಎಂಜಿನ್ ಮಾದರಿಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಮಾಲಿನ್ಯ ತಡೆಗಾಗಿ ಈಗಾಗಲೇ ಮುಂದುವರಿದ ಹಲವು ರಾಷ್ಟ್ರಗಳು ಡೀಸೆಲ್ ಎಂಜಿನ್ ವಾಹನಗಳ ಬಳಕೆ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ.

ಸುಮಾರು ನಾಲ್ಕು ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ Volvo

ಇದಕ್ಕೆ ಪೂರಕವಾಗಿ ಭವಿಷ್ಯದ ವಾಹನ ಮಾದರಿಗಳ ಮೇಲೆ ಗಮನಹರಿಸಿರುವ ಆಟೋ ಉತ್ಪಾದನಾ ಕಂಪನಿಗಳು ಕೂಡಾ ಡೀಸೆಲ್ ವಾಹನಗಳ ಉತ್ಪಾದನೆಯನ್ನು ತಗ್ಗಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ವೊಲ್ವೊ ಕಂಪನಿಯು ಕೂಡಾ ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, 2022ರಿಂದ ಇನ್ನುಳಿದ ಕಾರು ಮಾದರಿಗಳಲ್ಲಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
Read more on ವೋಲ್ವೋ volvo
English summary
Volvo recalls about four lakh cars around the globe details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X