ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ದೆಹಲಿ ಸರ್ಕಾರವು ತನ್ನ ಗ್ರೀನ್ ದೆಹಲಿ ಅಭಿಯಾನದ ಅಡಿಯಲ್ಲಿ 4,261 ಇ ಆಟೋಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ, ಇ ಆಟೋ ಪರವಾನಗಿಯಲ್ಲಿ 33% ನಷ್ಟು ಪರವಾನಗಿಯನ್ನು ಮಹಿಳೆಯರಿಗಾಗಿ ಕಾಯ್ದಿರಿಸಲಾಗಿದೆ. ಇದರ ಅನ್ವಯ ದೆಹಲಿ ಸರ್ಕಾರವು ಮಹಿಳೆಯರಿಗೆ 1,406 ಪರವಾನಗಿಗಳನ್ನು ನೀಡಲಿದೆ.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ರವರು ಇ ಆಟೋ ಪರವಾನಗಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.ಈ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ನೀಡಿರುವ ಅವರು, ಇ ಆಟೋ ಪರ್ಮಿಟ್ ನೀಡುವುದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ದೆಹಲಿಯನ್ನು ಎಲೆಕ್ಟ್ರಿಕ್ ವಾಹನ ರಾಜಧಾನಿಯಾಗಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಪರಿಣಾಮಕಾರಿ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ದೆಹಲಿ ಸರ್ಕಾರವು ದೆಹಲಿಯಲ್ಲಿ ಮಾಲಿನ್ಯ ರಹಿತ, ವಿಶ್ವ ದರ್ಜೆಯ ಸಾರಿಗೆ ಸೇವೆಯನ್ನು ನೀಡಲು ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ದೆಹಲಿ ಸರ್ಕಾರವು ತನ್ನ ಎಲೆಕ್ಟ್ರಿಕ್ ವಾಹನ ನೀತಿಯ ಅಡಿಯಲ್ಲಿ ಇ ಆಟೋಗಳನ್ನು ಖರೀದಿಸಲು ರೂ. 30,000 ಗಳ ಆರ್ಥಿಕ ಸಹಾಯವನ್ನು ನೀಡುತ್ತಿದೆ. ದೆಹಲಿ ವಿಳಾಸ, ಲಘು ಮೋಟಾರು ವಾಹನದ ಮಾನ್ಯ ಚಾಲನಾ ಪರವಾನಗಿ ಅಥವಾ ಆಧಾರ್ ಸಂಖ್ಯೆಯೊಂದಿಗೆ ಟಿಎಸ್‌ಆರ್ ಚಾಲನಾ ಪರವಾನಗಿ ಹೊಂದಿರುವ ಯಾವುದೇ ವ್ಯಕ್ತಿ ಇ ಆಟೋ ಪರವಾನಗಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ಇ ಆಟೋ ಪರವಾನಗಿಗೆ ಅರ್ಜಿ ಸಲ್ಲಿಸಲು ಈ ವರ್ಷದ ನವೆಂಬರ್ 1 ಕೊನೆಯ ದಿನವಾಗಿದೆ. ಇ ಆಟೋಗಳನ್ನು ಖರೀದಿಸುವ ಗ್ರಾಹಕರು ದೆಹಲಿ ಸರ್ಕಾರದಿಂದನಾಮನಿರ್ದೇಶಿತವಾದ ಹಣಕಾಸು ಏಜೆನ್ಸಿಗಳಿಂದ 5% ಬಡ್ಡಿಯೊಂದಿಗೆ ಸಾಲ ಪಡೆಯಬಹುದು. ದೆಹಲಿ ಸರ್ಕಾರವು ಅಕ್ಟೋಬರ್ 25 ರಿಂದ ಅಕ್ಟೋಬರ್ 31 ರವರೆಗೆ ಐಡಿಟಿಆರ್ ಸರಾಯ್ ಕಾಳೆ ಖಾನ್ ಹಾಗೂ ಲೋನಿಗಳಲ್ಲಿ ಇ ಆಟೋ ಮೇಳವನ್ನು ಆಯೋಜಿಸಲಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ಆಟೋ ಮೇಳದಲ್ಲಿ ಭಾಗವಹಿಸುವ ಆಸಕ್ತ ಗ್ರಾಹಕರು ಇ ಆಟೋ ಮಾದರಿಯ ಟೆಸ್ಟ್ ಡ್ರೈವ್ ತೆಗೆದುಕೊಳ್ಳಬಹುದು ಹಾಗೂ ಸಾಲದ ಬಗ್ಗೆ ಮಾಹಿತಿ ಪಡೆಯಬಹುದು. ದೆಹಲಿಯ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೋಟ್ ದೆಹಲಿ ಇವಿ ನೀತಿಯಡಿಯಲ್ಲಿ ಇ ಆಟೋಗಳ ಖರೀದಿಗೆ ರೂ. 30,000 ಗಳವರೆಗೆ ಸಬ್ಸಿಡಿ ಘೋಷಿಸಿದ್ದಾರೆ. ದೆಹಲಿಯಲ್ಲಿ ಇ ಆಟೋ ಬೆಲೆ ರೂ. 2.70 ಲಕ್ಷಗಳಾಗಿದೆ.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ಈ ಬೆಲೆ ಸಿ‌ಎನ್‌ಜಿ ಆಟೋ ಬೆಲೆಗೆ ಸಮನಾಗಿದೆ. ಆದರೆ ದೆಹಲಿ ಸರ್ಕಾರವು ನೀಡುವ ಸಬ್ಸಿಡಿಯ ನಂತರ ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಹೊಂದಿರುವ ಇ ಆಟೋಗಳ ಬೆಲೆ ಸುಮಾರು ರೂ. 1.80 ಲಕ್ಷಗಳಾಗುತ್ತದೆ. ದೆಹಲಿ ಸರ್ಕಾರವು 2020ರ ಆಗಸ್ಟ್ ತಿಂಗಳಿನಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸಿತ್ತು. ಈ ಇವಿ ನೀತಿಯಲ್ಲಿ ದೆಹಲಿ ಸರ್ಕಾರವು 2024 ರ ವೇಳೆಗೆ 24% ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಗುರಿಯನ್ನು ಹೊಂದಿದೆ.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಉತ್ತೇಜಿಸಲು, ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ನೋಂದಣಿ ಹಾಗೂ ರಸ್ತೆ ತೆರಿಗೆಯಲ್ಲಿ ವಿನಾಯಿತಿ ನೀಡುತ್ತಿದೆ. ದೆಹಲಿಯಲ್ಲಿ ಚಳಿಗಾಲಕ್ಕೂ ಮುನ್ನ ಮಾಲಿನ್ಯವನ್ನು ನಿಯಂತ್ರಿಸಲು ವಾಹನಗಳು ಮಾನ್ಯವಾದ ಪಿಯುಸಿ ಪ್ರಮಾಣಪತ್ರ (ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ) ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ಇದರಿಂದ ಇನ್ನು ಮುಂದೆ ದೆಹಲಿಯಲ್ಲಿ, ಮಾನ್ಯ ಪಿಯುಸಿ ಪ್ರಮಾಣಪತ್ರವಿಲ್ಲದೆ ಯಾರಾದರೂ ವಾಹನ ಚಾಲನೆ ಮಾಡುವಾಗ ಸಿಕ್ಕಿಬಿದ್ದರೆ ರೂ. 10,000 ದಂಡ ವಿಧಿಸಲಾಗುತ್ತದೆ. ಇದಷ್ಟೇ ಅಲ್ಲದೇ ವಾಹನಗಳಿಗೆ ಪಿಯುಸಿ ಮಾಡಿಸದಿದ್ದರೆ, 6 ತಿಂಗಳ ಜೈಲು ಶಿಕ್ಷೆ ವಿಧಿಸಬಹುದು ಅಥವಾ 3 ತಿಂಗಳ ಕಾಲ ಚಾಲನಾ ಪರವಾನಗಿಯನ್ನು ರದ್ದುಗೊಳಿಸಬಹುದು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಅಕ್ಟೋಬರ್ 7 ರಿಂದ 22 ದಿನಗಳ ವಾಯು ಮಾಲಿನ್ಯ ಅಭಿಯಾನವನ್ನು ಆರಂಭಿಸಿದೆ.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ಕಳೆದ ಕೆಲವು ವರ್ಷಗಳಿಂದ ದೆಹಲಿ ಸರ್ಕಾರಕ್ಕೆ ವಾಯು ಮಾಲಿನ್ಯವು ದೊಡ್ಡ ತಲೆನೋವಾಗಿದೆ. ಇದನ್ನು ತಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಪ್ರಪಂಚದೆಲ್ಲೆಡೆ ಕರೋನಾ ವೈರಸ್ ಆರಂಭವಾದ ನಂತರ ಫೇಸ್ ಮಾಸ್ಕ್ ಧರಿಸಿದರೆ ದೆಹಲಿಯ ಜನರು ವಾಯು ಮಾಲಿನ್ಯದ ಕಾರಣ ಕರೋನಾ ಆರಂಭಕ್ಕೂ ಮೊದಲೇ ಫೇಸ್ ಮಾಸ್ಕ್ ಬಳಕೆಯನ್ನು ಆರಂಭಿಸಿದ್ದರು.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ಈ ಅಭಿಯಾನದ ಅಂಗವಾಗಿ ಅಕ್ಟೋಬರ್ 9 ರಂದು ಒಂದೇ ದಿನ ವಾಯು ಮಾಲಿನ್ಯಕ್ಕೆ ಕಾರಣವಾದ 32 ಅಪರಾಧಗಳಿಗೆ ಸುಮಾರು ರೂ. 15 ಲಕ್ಷಗಳವರೆಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. ದೆಹಲಿ ಸರ್ಕಾರವು 31 ಸದಸ್ಯರ ತಂಡವನ್ನು ಸ್ಥಾಪಿಸಿದೆ. ಈ ತಂಡವು ನಗರದ ಒಳಗೆ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಲಿದ್ದು, ಈ ಸ್ಥಳಗಳಿಂದ ಹೊರಬರುವ ಧೂಳಿನ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲಿದೆ.

ಇ ಆಟೋ ಪರ್ಮಿಟ್ ಅಡಿ ಮಹಿಳೆಯರಿಗೂ ಸಿಗಲಿದೆ 1,400 ಕ್ಕೂ ಹೆಚ್ಕು ಪರವಾನಗಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಕರಿಸುವಂತೆ ದೆಹಲಿಯ ಜನರಿಗೆ ಮನವಿ ಮಾಡಿದ್ದು, ವಾಹನ ಸವಾರರು ವಾರದಲ್ಲಿ ಒಂದು ದಿನವಾದರೂ ತಮ್ಮ ವಾಹನಗಳನ್ನು ಹೊರತೆಗೆಯದಂತೆ ನೋಡಿಕೊಳ್ಳಬೇಕೆಂದು ಹಾಗೂ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸುವಂತೆ ಕೇಳಿಕೊಂಡಿದ್ದಾರೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Women to get more than 1400 e auto permit in delhi details
Story first published: Tuesday, October 19, 2021, 11:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X