ಆಕರ್ಷಕ ವಿನ್ಯಾಸದಲ್ಲಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕರಾದ ಆಡಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ 2022ರ ಆಡಿ ಎ8 ಎಲ್ ಕಾರನ್ನು ಬಿಡುಗಡೆಗೊಳಿಸಿದೆ. ಈ 2022ರ ಆಡಿ ಎ8 ಎಲ್ ಕಾರಿನ ಆರಂಭಿಕ ಬೆಲೆಯು ರೂ,1.29 ಕೋಟಿಯಾಗಿದೆ.

ಹೊಸ ಆಡಿ ಎ8 ಎಲ್ ಈಗಾಗಲೇ ಭಾರತದಾದ್ಯಂತ ಡೀಲರ್‌ಶಿಪ್‌ಗಳನ್ನು ತಲುಪಿದೆ. ಖರೀದಿದಾರರು ಹೊಸ ಮಾದರಿಯನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಆಡಿ ಡೀಲರ್‌ಶಿಪ್‌ಗಳಲ್ಲಿ ರೂ.10 ಲಕ್ಷ ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಹೊಸ ಆಡಿ ಎ8 ಎಲ್ ಕಾರು ಸೆಲೆಬ್ರೇಶನ್ ಎಡಿಷನ್ ಮತ್ತು ಟೆಕ್ನಾಲಜಿ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಈ ಸೆಲೆಬ್ರೇಶನ್ ಎಡಿಷನ್ ರೂಪಾಂತರದ ಬೆಲೆಯು ರೂ.1.29 ಕೋಟಿಯಾದರೆ ಟೆಕ್ನಾಲಜಿ ರೂಪಾಂತರದ ಬೆಲೆಯು ರೂ.1.57 ಕೋಟಿಯಾಗಿದೆ.

2022ರ ಆಡಿ ಎ8 ಎಲ್ ಕಾರು ಪರಿಷ್ಕೃತ ಕ್ರೋಮ್ ಸ್ಟ್ರಿಪ್ ಸುತ್ತಮುತ್ತಲಿನ ಹೊಸ ಫಾಗ್ ಲ್ಯಾಂಪ್ ಅಸೆಂಬ್ಲಿ ಮತ್ತು ಕೋನೀಯ ಏರ್ ಇನ್ ಟೆಕ್ ಅನ್ನು ಹೊಂದಿದೆ. ಹೊಸ ಡಿಜಿಟಲ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಬೆಳಕನ್ನು ಪ್ರತ್ಯೇಕ ಪಿಕ್ಸೆಲ್‌ಗಳಾಗಿ ವಿಭಜಿಸಲು ಸುಮಾರು 1.3 ಮಿಲಿಯನ್ ಮೈಕ್ರೋ ಮಿರರ್‌ಗಳನ್ನು ಹೊಂದಿವೆ ಎಂದು ಹೇಳಲಾಗಿದೆ

ಈ ಐಷಾರಾಮಿ ಕಾರಿನಲ್ಲಿ ಹೊಸ ಎಸ್ ಲೈನ್ ಪ್ಯಾಕೇಜ್ ಅನ್ನು ಸಹ ಹೊಂದಿದೆ, ಇದು S8-ಪ್ರೇರಿತ ಬ್ಲೇಡ್‌ಗಳನ್ನು ಸೈಡ್ ಇನ್‌ಟೇಕ್‌ಗಳಲ್ಲಿ ಒಳಗೊಂಡಿರುತ್ತದೆ. ಇದು ಐಚ್ಛಿಕ ಕ್ರೋಮ್ ಮತ್ತು ಕಪ್ಪು ಬಾಹ್ಯ ಪ್ಯಾಕೇಜ್ಗಳೊಂದಿಗೆ ಬರುತ್ತದೆ. ಐಷಾರಾಮಿ ಸೆಡಾನ್ ಡಿಜಿಟಲ್ OLED ಬ್ರೇಕ್ ಲ್ಯಾಂಪ್ ಗಳನ್ನು ಪ್ರಾಕ್ಸಿಮಿಟಿ ಸೆನ್ಸರ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿದೆ.

ಈ ಐಷಾರಾಮಿ 2022ರ ಆಡಿ ಎ8 ಎಲ್ ಫೇಸ್‌ಲಿಫ್ಟ್ ಕಾರಿನ ಕ್ಯಾಬಿನ್ ಒಳಗೆ, ಹಿಂಭಾಗದ ಪ್ರಯಾಣಿಕರ ಮನರಂಜನೆಗಾಗಿ ಎರಡು ಹೆಚ್ಚುವರಿ 10.1-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಗಳೊಂದಿಗೆ ಬರುತ್ತದೆ. ಇದು ಡ್ಯುಯಲ್-ಟೋನ್ ಬೀಜ್ ಮತ್ತು ಬ್ಲ್ಯಾಕ್ ಆಗಿದೆ. ಈ ಕಾರಿನಲ್ಲಿ 4-ವಲಯ ಕ್ಲೈಮೆಂಟ್ ಕಂಟ್ರೋಲ್, ನವೀಕರಿಸಿದ ವರ್ಚುವಲ್ ಕಾಕ್‌ಪಿಟ್, ನವೀಕರಿಸಿದ MIB 3 ಸಾಫ್ಟ್‌ವೇರ್ ಮತ್ತು ಡ್ರೈವರ್ ಅಸಿಸ್ಟ್ ಸಿಸ್ಟಂಗಳೊಂದಿಗೆ ಬರುತ್ತದೆ.

ಈ ಕಾರಿನಲ್ಲಿ ಫೋಲ್ಡ್-ಔಟ್ ಸೆಂಟರ್ ಕನ್ಸೋಲ್ ಟೇಬಲ್, ಬಾರ್ ಕಂಪಾರ್ಟ್‌ಮೆಂಟ್‌ನೊಂದಿಗೆ ಕೂಲರ್ ಮತ್ತು ಐಚ್ಛಿಕ ಕೊಡುಗೆಗಳಾಗಿ ಸುಗಂಧ ದ್ರವ್ಯದ ಕಾರ್ಯವನ್ನು ಪಡೆಯುತ್ತದೆ. ಹೊಸ ಆಡಿ ಎ8 ಎಲ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಈ ಐಷಾರಾಮಿ 2022ರ ಆಡಿ ಎ8 ಎ ಗೇರ್‌ಬಾಕ್ಸ್ ಮತ್ತು ಆಡಿಯ ಕ್ವಾಟ್ರೋ AWD (ಆಲ್-ವೀಲ್-ಡ್ರೈವ್) ಸಿಸ್ಟಮ್‌ಗೆ ಜೋಡಿಸಲ್ಪಟ್ಟಿದೆ. ಲ್ ಕಾರಿನಲ್ಲಿ ಅದೇ 3.0-ಲೀಟರ್ TFSI ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ತ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಟಿಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಆಡಿಯ ಕ್ವಾಟ್ರೋ AWD (ಆಲ್-ವೀಲ್-ಡ್ರೈವ್) ಸಿಸ್ಟಮ್‌ಗೆ ಜೋಡಿಸಲ್ಪಟ್ಟಿದೆ.

2022ರ ಆಡಿ ಎ8 ಎಲ್ ಕಾರಿಗೆ ನೇರವಾಗಿ ಬಿಎಂಡಬ್ಲ್ಯು 7 ಸೇರಿಸ್ ಮತ್ತು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರುಗಳು ಪೈಪೋಟಿ ನೀಡುತ್ತದೆ. ಹೊಸ ಆಡಿ ಎ8 ಎಲ್ ಕಾರು ಪ್ರತಿಸ್ಪರ್ಧಿಗಳಾದ ಎಸ್-ಕ್ಲಾಸ್ ಮತ್ತು 7-ಸೀರಿಸ್ ಗಿ ಕ್ರಮವಾಗಿ ರೂ.31 ಲಕ್ಷ ಮತ್ತು ರೂ.11 ಲಕ್ಷ ಅಗ್ಗವಾಗಿದೆ.

ಇನ್ನು ಆಡಿ ಹೊಸ ಅರ್ಬನ್‌ಸ್ಪಿಯರ್ ಕಾನ್ಸೆಪ್ಟ್ ಕಾರ್ ಅನ್ನು ಏಪ್ರಿಲ್ ತಿಂಗಳಿನಲ್ಲಿ ಅನಾವರಣಗೊಳಿಸಿತ್ತು ಈ ಹೊಸ ಆಡಿ ಅರ್ಬನ್‌ಸ್ಪಿಯರ್ ಮೂಲಭೂತವಾಗಿ ಆಟೋನೊಮಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾನ್ಸೆಪ್ಟ್ ಆಗಿದೆ. ಹೊಸ ಆಡಿ ಅರ್ಬನ್‌ಸ್ಪಿಯರ್ ಕಾನ್ಸೆಪ್ಟ್, ಸ್ಕೈಸ್ಪಿಯರ್ ಕೂಪ್ ಮತ್ತು ಗ್ರ್ಯಾಂಡ್‌ಸ್ಪಿಯರ್ ಸೆಡಾನ್ ಕಾನ್ಸೆಪ್ಟ್ ಸರಣಿಯನ್ನು ಸೇರುತ್ತದೆ. ಭವಿಷ್ಯದಲ್ಲಿ ಆಡಿ ಕಂಪನಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಕಾನ್ಸೆಪ್ಟ್ ಮಾದರಿಯಿಂದ ಉತ್ತರ ಸಿಗುತ್ತದೆ. ವಿನ್ಯಾಸ ಭಾಷೆಯು ಯಾವಾಗಲೂ 'ಭವಿಷ್ಯದ ಪ್ರಗತಿಶೀಲ ಪ್ರೀಮಿಯಂ ಚಲನಶೀಲತೆಯನ್ನು ವ್ಯಾಖ್ಯಾನಿಸುತ್ತದೆ' ಎಂದು ಜರ್ಮನ್ ಬ್ರ್ಯಾಂಡ್ ಹೇಳುತ್ತದೆ.

ಬೀಜಿಂಗ್ ಆಟೋ ಶೋದಲ್ಲಿ ಆಡಿ ಅರ್ಬನ್‌ಸ್ಪಿಯರ್ ತನ್ನ ಚೊಚ್ಚಲ ಪ್ರದರ್ಶನವನ್ನು ರದ್ದುಗೊಳಿಸಿತು. ಆಡಿ ಅರ್ಬನ್‌ಸ್ಪಿಯರ್ ಕಾನ್ಸೆಪ್ಟ್ 5500 ಎಂಎಂ ಉದ್ದ ಮತ್ತು 1780 ಎಂಎಂ ಎತ್ತರವನ್ನು ಹೊಂದಿದೆ, ಇನ್ನು ಇದು 2000 ಮೀಟರ್‌ಗಿಂತಲೂ ಹೆಚ್ಚು ಅಗಲವಾಗಿರುತ್ತದೆ. ಮುಂಭಾಗದ ತುದಿಯು ದೊಡ್ಡ ಸಿಂಗಲ್‌ಫ್ರೇಮ್ ಗ್ರಿಲ್‌ನಿಂದ ಪ್ರಾಬಲ್ಯ ಹೊಂದಿದೆ, ಅದರ ಹಿಂದೆ ಡಿಜಿಟಲ್ ಲೈಟ್ ಹೊಂದಿದೆ. ಸಿಂಗಲ್ಫ್ರೇಮ್ನ ಮೇಲಿನ ಮತ್ತು ಕೆಳಗಿನ ಅಂಚುಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇನ್ನು ಲೈಟಿಂಗ್ ಎಲ್ಇಡಿಗಳಿಂದ ಲಂಬ ಸಂಪರ್ಕಗಳನ್ನು ರಚಿಸಿದೆ,

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
2022ರ ಆಡಿ ಎ8 ಎಲ್ ಐಷಾರಾಮಿ ಸೆಡಾನ್ ಕಾರು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹೊಸ ಐಷಾರಾಮಿ ಸೆಡಾನ್ ಆಡಿ ಎ8 ಎಲ್ ಕಾರು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ.


Click it and Unblock the Notifications








