Just In
Don't Miss!
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Sports
ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಬಹುನಿರೀಕ್ಷಿತ 2022ರ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ತನ್ನ 2022ರ ಟ್ಯೂಸಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಹ್ಯುಂಡೈ ಕಂಪನಿಯು ಈ ಹೊಸ ಟ್ಯೂಸಾನ್ ಎಸ್‍ಯುವಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ.

ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು 2022ರ ಜುಲೈ 13 ರಂದು ಬಿಡುಗಡೆಯಾಗಲಿದೆ. ಇನ್ನು ಹ್ಯುಂಡೈ ಕಂಪನಿಯು ಟ್ಯೂಸಾನ್ ಎಸ್‍ಯುವಿಯ ಖರೀದಿಗಾಗಿ. ಅಧಿಕೃತ ಬುಕ್ಕಿಂಗ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಹ್ಯುಂಡೈ ಕಂಪನಿಯ ಕಾರುಗಳ ಸರಣಿಯಲ್ಲಿ ಟ್ಯೂಸಾನ್ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಹ್ಯುಂಡೈ ಕಂಪನಿಯು ಇತ್ತೀಚೆಗೆ ಭಾರತೀಯ ವೆಬ್‌ಸೈಟ್‌ನಲ್ಲಿ 2022ರ ಟ್ಯೂಸಾನ್ ಎಸ್‍ಯುವಿಯ ಹೆಸರನ್ನು ಪಟ್ಟಿ ಮಾಡಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟ್ಯೂಸಾನ್ ಎಸ್‍ಯುವಿಯನ್ನು ಕೊನೆಯದಾಗಿ 2020ರ ಜುಲೈ ತಿಂಗಳಿನಲ್ಲಿ ನವೀಕರಿಸಲಾಗಿತ್ತು.

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು 2020 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತು. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ.

ಇನ್ನು 2022ರ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತದಲ್ಲಿ ಹಲವಾರು ಹೊಸ ಅಪ್ದೇಟ್ ಗಳೊಂದಿಗೆ ಬಿಡುಗಡೆಯಾಗಲಿದೆ. ಹೊಸ ಹ್ಯುಂಡೈ ಟ್ಯೂಸಾನ್ ಮಾದರಿಯು ಗಮನಾರ್ಹ ವಿನ್ಯಾಸ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಪಡೆಯುತ್ತದೆ

ಈ ಹೊಸ ಟ್ಯೂಸಾನ್ ಎಸ್‍ಯುವಿಯು ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.25 ಲಕ್ಷದಿಂದ ರೂ.35 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಎಸ್‍ಯುವಿಯನ್ನು ಸಿಕೆಡಿ (ಸಂಪೂರ್ಣವಾಗಿ ನಾಕ್ಡ್ ಡೌನ್) ಯುನಿಟ್ ಆಗಿ ಬರುತ್ತದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತದಲ್ಲಿ ಕಾಣಿಸಿಕೊಂಡ ಸ್ಪೈ ಚಿತ್ರಗಳು ಬಹಿರಂಗವಾಗಿತ್ತು.

ಈ 2022ರ ಹ್ಯುಂಡೈ ಟ್ಯೂಸಾನ್ ಮುಂಭಾಗ ಆಕರ್ಷಕ ಲುಕ್ ಅನ್ನು ಹೊಂದಿದ, ಈ ಹೊಸ ಎಸ್‍ಯುವಿಯು ಸ್ಪೋರ್ಟಿ ಲುಕ್ ನಲ್ಲಿ ಕಾಣುವಂತೆ ಅಗ್ರೇಸಿವ್ ವಿನ್ಯಾಸದಿಂದ ಕೂಡಿದೆ. ಈ ಹೂಸ ಎಸ್‍ಯುವಿಯ ಹೆಡ್‌ಲ್ಯಾಂಪ್ ಯುನಿಟ್ ಹೆಚ್ಚು ಆಕರ್ಷಕವಾಗಿದೆ. ಇದರಲ್ಲಿ ಕ್ರೋಮ್ ಸ್ಟ್ರಿಪ್ ಅನ್ನು ಹೊಂದಿದೆ.

ಈ ಹೊಸ ಎಸ್‍ಯುವಿಯ ಕೊನೆಯಲ್ಲಿ ವಿಶಿಷ್ಟವಾದ ಸಿ-ಪಿಲ್ಲರ್ ಆಕಾರವನ್ನು ರೂಪಿಸಿದೆ. ಈ ಹೊಸ ಎಸ್‍ಯುವಿಯ ಹಿಂದಿನ ಪ್ರೊಫೈಲ್‌ನಲ್ಲಿ ಉದ್ದವಾದ ಬೆಲ್ಟ್ ಲೈನ್ ಗಳಿವೆ. ಈ ಎಸ್‍ಯುವಿಯಲ್ಲಿ 19 ಇಂಚಿನ ವ್ಹೀಲ್ಸ್ ಅನ್ನು ಹೊಂದಿದೆ. ಈ ವ್ಹೀಲ್ ಗಳು ವಿಭಿನ್ನವಾದ ವಿನ್ಯಾಸವನ್ನು ಕೂಡ ಹೊಂದಿದೆ.

ಈ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯಲ್ಲಿ ಶಾರ್ಕ್ ಫಿನ್ ಆಂಟೆನಾ, ಬಾಡಿ ಕಲರ್‌ನಲ್ಲಿ ರೂಫ್-ರೈಲ್ ಮತ್ತು ಫ್ಲೋಟಿಂಗ್ ರೂಫ್‌ಲೈನ್ ಹೊಂದಿದೆ. ಎಸ್‍ಯುವಿಯ ಹಿಂಭಾಗದಲ್ಲಿ ಅಗಲವಾಗಿ ಉದ್ದಕೂ ರೆಡ್ ಎಲ್ಇಡಿ ಲೈಟ್ ಅನ್ನು ಅಳವಡಿಸಿದೆ. ಇದು ಟೈಲ್-ಲ್ಯಾಂಪ್‌ಗಳನ್ನು ಕನೆಕ್ಟ್ ಆಗಿದೆ. ಇನ್ನು ಟ್ಯೂಸನ್ ಎಸ್‍ಯುವಿಯಲಿರುವ ಟೈಲ್-ಲೈಟ್ ಕ್ರೆಟಾದ ಟೈಲ್-ಲ್ಯಾಂಪ್‌ನ ವಿಕಾಸಗೊಂಡ ಆವೃತ್ತಿಯಂತೆ ಕಾಣುತ್ತದೆ.

ಈ ಹೊಸ ಎಸ್‍ಯುವಿಯ ಕೆಳಗಿನ ಬಂಪರ್ ಸಿಲ್ವರ್ ಸ್ಕಿಡ್ ಪ್ಲೇಟ್, ಸ್ಟಾಪ್ ಲ್ಯಾಂಪ್‌ಗಳು ಮತ್ತು ಏರ್ ವೆಂಟ್ಸ್ ಗಳನ್ನು ಹೊಂದಿರುತ್ತದೆ. ಇದು ಇಂಟಿಗ್ರೇಟೆಡ್ ಬ್ರೇಕ್ ಲೈಟ್ ಗಳೊಂದಿಗೆ ರೂಫ್ ಸ್ಪಾಯ್ಲರ್ ಅನ್ನು ಹೊಂದಿದೆ. ಈ ಹೊಸ ಟ್ಯೂಸಾನ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

ಇದರೊಂದಿಗೆ ಟ್ಯೂಸಾನ್ ಎಸ್‍ಯುವಿಯ ಎಸಿ ಮತ್ತು ಇತರ ಕಂಟ್ರೋಲ್ ಗಳಿಗಾಗಿ ಟಚ್-ಪ್ಯಾನೆಲ್‌ಗಳು, ಅನನ್ಯವಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಪಾರ್ಕಿಂಗ್ ಬ್ರೇಕ್, ಗೇರ್‌ಬಾಕ್ಸ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ. ವೈರ್‌ಲೆಸ್ ಚಾರ್ಜಿಂಗ್ ಮತ್ತು ನೂತನ ಕನೆಕ್ಟಿವಿಟಿ ಫೀಚರ್ ಗಳನ್ನು ಕೂಡ ಹೊಂದಿರಲಿದೆ.

ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು ಟರ್ಬೊ-ಡೀಸೆಲ್ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಜೀಪ್ ಕಂಪಾಸ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಮತ್ತು ಸಿಟ್ರೊಯೆನ್ ಸಿ5 ಏರ್‌ಕ್ರಾಸ್‌ಗಳ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಹ್ಯುಂಡೈ ಕಂಪನಿಯು ತನ್ನ ಹೊಸ ಟ್ಯೂಸಾನ್ ಎಸ್‍ಯುವಿಯನ್ನು ಯುರೋ NCAP ಕ್ರ್ಯಾಶ್ ಟೆಸ್ಟ್‌ಗೆ ಇತ್ತೀಚೆಗೆ ಒಳಪಡಿಸಿತ್ತು. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಯುರೋ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಟ್ಯೂಸಾನ್ ಎಸ್‍ಯುವಿಯು ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಶೇ.86 ರಷ್ಟು ಮತ್ತು ಮಕ್ಕಳ ಸುರಕ್ಷತಾ ವಿಭಾಗದಲ್ಲಿ ಶೇ.87 ರಷ್ಟು ಅಂಕಗಳನ್ನು ಗಳಿಸಿದೆ. ಈ ಯುರೋ NCAP ಪ್ರಕಾರ, ಟ್ಯೂಸಾನ್ ಎಸ್‍ಯುವಿ ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿಯು ಸ್ಥಿರವಾಗಿತ್ತು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಈಗಾಗಲೇ ಹಲವು ವಿದೇಶಗಳಲ್ಲಿನ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಇದೀಗ ಈ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ 2022ರ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಮುಂದಿನ ತಿಂಗಳು ಪ್ರವೇಶಿಸಲಿದೆ.