ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇತ್ತೀಚೆಗೆ ತನ್ನ ಹೊಸ ವೆನ್ಯೂ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಇದೀಗ ಹ್ಯುಂಡೈ ಕಂಪನಿಯು ಈ ಹೊಸ ವೆನ್ಯೂ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯು ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ 2022ರ ಹ್ಯುಂಡೈ ವೆನ್ಯೂ ಗಮನಾರ್ಹ ವಿನ್ಯಾಸ ಬದಲಾವಣೆಗಳು ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಒಳಾಂಗಣದೊಂದಿಗೆ ಬರುತ್ತದೆ. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ, ಹ್ಯುಂಡೈ ಹೊಸ ವೆನ್ಯೂ ಫೇಸ್‌ಲಿಫ್ಟ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ವೇಳೆ ಯಾವುದೇ ಮರೆಮಾಚುವಿಕೆ ಇಲ್ಲದೆ ಇತ್ತೀಚೆಗೆ ಕಾಣಿಸಿಕೊಂಡಿತ್ತು. ಈ ಹೊಸ ಬಣ್ಣದ ಆಯ್ಕೆಯನ್ನು 'ಟೈಟಾನ್ ಗ್ರೇ' ಎಂದು ಕರೆಯಲಾಗುತ್ತದೆ ಮತ್ತು ಎಸ್‌ಯುವಿಗೆ ಅತ್ಯಂತ ಸ್ಪೋರ್ಟಿ ವೈಬ್ ಅನ್ನು ನೀಡುತ್ತದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಬಣ್ಣಗಳು

ಮುಂಬರುವ ಹೊಸ ಹುಂಡೈ ವೆನ್ಯೂ 7 ಬಣ್ಣ ಆಯ್ಕೆಗಳು ಮತ್ತು 6 ಟ್ರಿಮ್ ಹಂತಗಳಲ್ಲಿ ಬಿಡುಗಡೆಯಾಗಲಿದೆ, ಆಫರ್‌ನಲ್ಲಿರುವ ಬಣ್ಣ ಆಯ್ಕೆಗಳು ಟೈಫೂನ್ ಸಿಲ್ವರ್, ಟೈಟಾನ್ ಗ್ರೇ, ಪೋಲಾರ್ ವೈಟ್, ಫ್ಯಾಂಟಮ್ ಬ್ಲಾಕ್, ಡೆನಿಮ್ ಬ್ಲೂ, ಫಿಯರಿ ರೆಡ್ ಮತ್ತು ಫಿಯರಿ ರೆಡ್ (ಡ್ಯುಯಲ್-ಟೋನ್) ಸೇರಿವೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ವಿನ್ಯಾಸ

ಹೊಸ ಹ್ಯುಂಡೈ ವೆನ್ಯೂ ಗಮನಾರ್ಹವಾಗಿ ಪರಿಷ್ಕೃತ ವಿನ್ಯಾಸದೊಂದಿಗೆ ಬರುತ್ತದೆ, ಏಕೆಂದರೆ ಇದು ಬ್ರ್ಯಾಂಡ್‌ನ ಹೊಸ ಸೆನ್ಸೌಸ್ ಸ್ಪೋರ್ಟಿನೆಸ್ ವಿನ್ಯಾಸದ ತತ್ತ್ವಶಾಸ್ತ್ರವನ್ನು ಒಳಗೊಂಡಿದೆ. ಎಸ್‌ಯುವಿಯ ಮುಂಭಾಗದ ವಿನ್ಯಾಸವು ಹೊಸ ಟ್ಯೂಸಾನ್ ಮತ್ತು ಪಾಲಿಸೇಡ್ ಎಸ್‍ಯುವಿಗಳಿಂದ ಹೆಚ್ಚು ಪ್ರೇರಿತವಾಗಿದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಹೊಸ ವೆನ್ಯೂ ಎಸ್‍ಯುವಿಯಲ್ಲಿ ಡಾರ್ಕ್ ಕ್ರೋಮ್‌ನೊಂದಿಗೆ ಹೊಸ ಗ್ರಿಲ್ ಅನ್ನು ಒಳಗೊಂಡಿರುವ ಪರಿಷ್ಕೃತ ಮುಂಭಾಗದ ಫಾಸಿಕದೊಂದಿಗೆ ಬರುತ್ತದೆ. ಇನ್ನು ಕೆಳಗಿನ ಬಂಪರ್ ಸ್ಪೋರ್ಟಿ ಲುಕ್ ಗಾಗಿ ಹೆಚ್ಚು ಸ್ಪಷ್ಟವಾದ ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಜೊತೆಗೆ ಎಲ್ಇಡಿ DRL ಗಳನ್ನು ಮೇಲ್ಭಾಗದಲ್ಲಿ ಮತ್ತು ಮೈನ್ ಹೆಡ್‌ಲ್ಯಾಂಪ್ ಕೆಳಗಿರುತ್ತದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಮೇಲಿನ ಲೈಟಿಂಗ್ ಗ್ರಿಲ್ನ ವಿಸ್ತರಣೆಯಂತೆ ಕಾಣುತ್ತದೆ. ಈ ಹೊಸ ವೆನ್ಯೂ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಒಳಗೊಂಡಿದೆ. ಈ 2022ರ ಹ್ಯುಂಡೈ ವೆನ್ಯೂ ಸೈಡ್ ಪ್ರೊಫೈಲ್ ಪ್ರಸ್ತುತ ಮಾದರಿಗೆ ಹೆಚ್ಚಾಗಿ ಹೋಲುತ್ತದೆ; ಆದರೆ ಇದು ಹೊಸ ಅಲಾಯ್ ವ್ಹೀಲ್ ಗಳು ಮತ್ತು ವೀಲ್ ಕ್ಯಾಪ್ ಅನ್ನು ಪಡೆಯುತ್ತದೆ. ಈ ಎಸ್‌ಯುವಿ ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಅನ್ನು ಪಡೆಯುತ್ತದೆ,

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಎಲ್‌ಇಡಿ ಲೈಟ್ ಬಾರ್ ಮೂಲಕ ಸಂಪರ್ಕಗೊಂಡಿರುವ ಹೊಸ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಎಸ್‍ಯುವಿಯ ಪರಿಷ್ಕೃತ ಬಂಪರ್ ಅನ್ನು ಪಡೆಯುತ್ತದೆ, ಅದು ಎರಡೂ ಕಡೆಗಳಲ್ಲಿ ಬ್ರೇಕ್ ಲೈಟಿಂಗ್‌ನೊಂದಿಗೆ ಬ್ಲ್ಯಾಕ್ ಫಿನಿಶಿಂಗ್ ಹೊಂದಿದೆ. ಎಸ್‍ಯುವಿ ಕೆಳಗಿನ ಬಂಪರ್ ಪ್ರಮುಖ ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿರಲಿದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಫೀಚರ್ಸ್

ವೆನ್ಯೂ ಫೇಸ್‌ಲಿಫ್ಟ್ ಎಸ್‍ಯುವಿ ಹೊಸ ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಇಂಟಿರಿಯರ್ ಥೀಮ್‌ನೊಂದಿಗೆ ಬರುತ್ತದೆ, ಇದು ಪ್ರಿ-ಫೇಸ್‌ಲಿಫ್ಟ್ ಮಾದರಿಯಲ್ಲಿ ನೀಡಲಾದ ಆಲ್-ಬ್ಲ್ಯಾಕ್ ಸ್ಕೀಮ್ ಅನ್ನು ಬದಲಾಯಿಸುತ್ತದೆ. ಎಸ್‍ಯುವಿ ಹೊಸ ಫೋರ್-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಸಹ ಹೊಂದಿದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಇದು ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಡ್ರೈವ್ ಮೋಡ್ ಸೆಲೆಕ್ಟರ್‌ನೊಂದಿಗೆ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್. ಎಂಬ ಮೂರು ಡ್ರೈವ್ ಮೋಡ್‌ಗಳೊಂದಿಗೆ ಬರುತ್ತದೆ. ಇದರೊಂದಿಗೆ ಹಲವಾರು ಟೆಕ್ ನವೀಕರಣಗಳನ್ನು ಸಹ ಪಡೆಯುತ್ತದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಹೊಸ ವೆನ್ಯೂ ಗ್ರಾಹಕರು ಈಗ ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್‌ನೊಂದಿಗೆ ಹೋಮ್ ಟು ಕಾರ್ (H2C) ಮೂಲಕ ಅನೇಕ ಕಾರ್ ಕಾರ್ಯಗಳನ್ನು ನಿಯಂತ್ರಿಸಬಹುದು. ಇದು 60+ ಬ್ಲೂಲಿಂಕ್ ಸಂಪರ್ಕಿತ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.ಈ ಹೊಸ ವೆನ್ಯೂ ವಿಭಾಗ-ಮೊದಲ 2 ಹಂತದ ಹಿಂಭಾಗದ ಒರಗಿಕೊಳ್ಳುವ ಸೀಟ್‌ನೊಂದಿಗೆ ಬರಲಿದ. ಇದು ಹೊಸ ವೈಶಿಷ್ಟ್ಯದೊಂದಿಗೆ ಬರುತ್ತದೆ - ಸೌಂಡ್ಸ್ ಆಫ್ ನೇಚರ್ - ಇದು ಚಾಲನೆ ಮಾಡುವಾಗ ಕ್ರ್ಯಾಕ್ಲಿಂಗ್ ಬೆಂಕಿ ಅಥವಾ ಸಮುದ್ರದ ಅಲೆಗಳಂತಹ ಅಕೌಸ್ಟಿಕ್ ಶಬ್ದಗಳನ್ನು ಪ್ಲೇ ಮಾಡುತ್ತದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಎಂಜಿನ್

ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿ E, S, S+, S(O), SX ಮತ್ತು SX(O) ಎಂಬ ವೆರಿಯೆಂಟ್ ಗಳಲ್ಲಿ ಬಿಡುಗಡೆಯಾಗಲಿದೆ. ಈ ಎಸ್‍ಯುವಿಯು 2 ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಮತ್ತು ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ. ಈ ಎಸ್‍ಯುವಿಯಲ್ಲಿ 1.2 ಲೀಟರ್ 4-ಸಿಲಿಂಡರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 83 ಬಿಹೆ‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಇದರೊಂದಿಗೆ 1.0 ಲೀಟರ್ ಟರ್ಬೊ ಪೆಟ್ರೋಲ್ ಯುನಿಟ್ 120 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಐಎಂಟಿ ಮತ್ತು 7-ಸ್ಪೀಡ್ ಡಿಸಿಟಿಯೊಂದಿಗೆ ಜೋಡಿಸಲಾಗುತ್ತದೆ. ಇನ್ನು 1.5 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 240 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ವೆನ್ಯೂ ಎಸ್‍ಯುವಿಯ ವಿಶೇಷತೆಗಳು...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಗಮನಾರ್ಹ ವಿನ್ಯಾಸ ಬದಲಾವಣೆಗಳು ಮತ್ತು ಅನೇಕ ವಿಭಾಗದ ಪ್ರಮುಖ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಒಳಾಂಗಣದೊಂದಿಗೆ ನಾಳೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಗಳೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
2022 hyundai venue suv set to be launched tomorrow top things to know details
Story first published: Wednesday, June 15, 2022, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X