ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ನವೀಕರಿಸಿದ ಕ್ಯಾಮ್ರಿ ಹೈಬ್ರಿಡ್‌ ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್‌ ಸೆಡಾನ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.41.70 ಲಕ್ಷವಾಗಿದೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ನವೀಕರಿಸಿದ ಟೊಯೊಟಾ ಕ್ಯಾಮ್ರಿ ಅದರ ಬಾಹ್ಯ ವಿನ್ಯಾಸ, ಕ್ಯಾಬಿನ್ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಪಟ್ಟಿಯನ್ನು ಒಳಗೊಂಡಿರುವ ನವೀಕರಣಗಳನ್ನು ಪಡೆದಿದೆ. ಈ ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್‌ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿಸಲಾಗಿದೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್ ಅಥವಾ ಟೊಯೊಟಾ ಡೀಲರ್‌ಶಿಪ್‌ಗಳಿಗೆ ತೆರಳಿ ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದು.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

2013ರಲ್ಲಿ ಭಾರತದಲ್ಲಿ ಮೊದಲು ಪರಿಚಯಿಸಲಾದ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಸಾವಿರಾರು ಯುನಿಟ್ ಗಳನ್ನು ಮಾರಾಟ ಕಂಡಿತ್ತು, ಇದೀಗ ರಿಫ್ರೆಶ್ ಮಾಡಲಾದ ಮಾದರಿಯನ್ನು ಪ್ರಾರಂಭಿಸುವುದರೊಂದಿಗೆ, ಕಂಪನಿಯು ಭಾರತದಲ್ಲಿ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಹೊಸ ಮುಂಭಾಗ ರಿಫ್ರೆಶ್ಡ್ ಬಂಪರ್ ವಿನ್ಯಾಸ, ಗ್ರಿಲ್ ಮತ್ತು ಅಲಾಯ್ ವ್ಹೀಲ್ ಗಳನ್ನು ಹೊಂದಿದೆ, ಈ ಕಾರು ಆಕರ್ಷಕ ಮತ್ತು ಅತ್ಯಾಧುನಿಕ ಲುಕ್ ಅನ್ನು ಹೊಂದಿದೆ, ಈ ಸೆಲ್ಫ್ ಚಾರ್ಜಿಂಗ್ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಸೆಡಾನ್ ಮೆಟಲ್ ಸ್ಟ್ರೀಮ್ ಮೆಟಾಲಿಕ್. ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್, ಗ್ರ್ಯಾಫೈಟ್ ಮೆಟಾಲಿಕ್, ರೆಡ್ ಮೈಕಾ, ಆಟಿಟ್ಯೂಡ್ ಬ್ಲ್ಯಾಕ್ ಮತ್ತು ಬರ್ನಿಂಗ್ ಬ್ಲ್ಯಾಕ್‌ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ಈ ಹೊಸ ಕಾರಿನ ಒಳಭಾಗದಲ್ಲಿ, ಕ್ಯಾಬಿನ್ ರಿಫ್ರೆಶ್ ವಿನ್ಯಾಸವನ್ನು ಪಡೆಯುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಲೇ ಹೊಂದಿಕೆಯಾಗುವ ಫ್ಲೋಟಿಂಗ್-ಟೈಪ್ ದೊಡ್ಡ 9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ, ಸಂಯೋಜಿತ ಮಾದರಿಯೊಂದಿಗೆ ಬರುವ ಬ್ಲ್ಯಾಕ್ ಇಂಜಿನಿಯರ್ಡ್ ವುಡ್ ಎಫೆಕ್ಟ್ ಫಿಲ್ಮ್‌ನೊಂದಿಗೆ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ಈ ಕಾರಿನ ಇತರ ಇಂಟಿರಿಯರ್ ಫೀಚರ್ಸ್ ಗಳಲ್ಲಿ, 10-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ORVM ಮತ್ತು ಮೆಮೊರಿ ಫಂಕ್ಷನ್ ನೊಂದಿಗೆ ಟಿಲ್ಟ್-ಟೆಲಿಸ್ಕೋಪಿಕ್ ಸ್ಟೀರಿಂಗ್ ಕಾಲಮ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಮತ್ತು ಹೆಡ್ಸ್-ಅಪ್ ಡಿಸ್ಪ್ಲೇ ಸೇರಿವೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ಇದರೊಂದಿಗೆ ಈ ಸೆಡಾನ್ ಕಾರಿನಲ್ಲಿ ಹಿಂಬದಿಯ ಸೀಟುಗಳು ರಿಕ್ಲೈನರ್ ವೈಶಿಷ್ಟ್ಯ, ಪವರ್ ಅಸಿಸ್ಟೆಡ್ ರಿಯರ್ ಸನ್‌ಶೇಡ್, ಹಿಂಭಾಗದ ಆರ್ಮ್ ರೆಸ್ಟ್‌ನಲ್ಲಿ ಇರಿಸಲಾಗಿರುವ ಕೆಪ್ಯಾಸಿಟಿವ್ ಟಚ್ ಪ್ಯಾನೆಲ್‌ನಲ್ಲಿ ಆಡಿಯೋ ಮತ್ತು ಎಸಿ ಕಂಟ್ರೋಲ್ ಗಳೊಂದಿಗೆ ಬರುತ್ತವೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ಈ ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನಲ್ಲಿ 2.5-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಡೈನಾಮಿಕ್ ಫೋರ್ಸ್ ಎಂಜಿನ್‌ ಅನ್ನು ಹೊಂದಿದೆ, ಇದು ಶಕ್ತಿಯುತ ಮೋಟಾರ್ ಜನರೇಟರ್‌ನೊಂದಿಗೆ ಜೋಡಿಯಾಗಿ 160kW (218PS) ಸಂಯೋಜಿತ 218 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ವಾಹನದ ಹೈಬ್ರಿಡ್ ಬ್ಯಾಟರಿಯು ಎಂಟು ವರ್ಷಗಳ ಅಥವಾ 1,60,000 ಕಿಲೋಮೀಟರ್‌ಗಳ ವಾರಂಟಿಯೊಂದಿಗೆ ಬರುತ್ತದೆ, ಈ ಕಾರು ಸ್ಪೋರ್ಟ್, ಇಕೋ ಮತ್ತು ನಾರ್ಮಲ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗುತ್ತದೆ. ಸ್ಪೋರ್ಟ್ ಮೋಡ್‌ನಲ್ಲಿ, ಕ್ಯಾಮ್ರಿಯ ಡೈನಾಮಿಕ್ ಫೋರ್ಸ್ ಎಂಜಿನ್ ರೇಖಾತ್ಮಕವಲ್ಲದ ಥ್ರೊಟಲ್ ಕಂಟ್ರೋಲ್ ನಿಂದ ವೇಗವರ್ಧಕ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ಟೊಯೊಟಾ ಹೇಳಿಕೊಂಡಿದೆ, ಬಲವಾದ ಹೈಬ್ರಿಡ್ ವಾಹನಗಳು ಎಲೆಕ್ಟ್ರಿಕ್ ಮೋಡ್‌ನಲ್ಲಿ 60% ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ, ಹೀಗಾಗಿ ಹೆಚ್ಚಿನ ಇಂಧನ ದಕ್ಷತೆಯನ್ನು ನೀಡುತ್ತದೆ. 2022ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಅನ್ನು ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (ಟಿಎನ್‌ಜಿಎ) ಮೇಲೆ ನಿರ್ಮಿಸಲಾಗಿದೆ, ಇದು ಹೆಚ್ಚಿನ ದೇಹದ ದೃಡತೆ, ಅಭೂತಪೂರ್ವ ಸೌಕರ್ಯ, ಸುಧಾರಿತ ಸ್ಥಿರತೆ ಮತ್ತು ಉತ್ತಮ ನಿರ್ವಹಣೆಯನ್ನು ಒದಗಿಸುತ್ತದೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ಇನ್ನು ಟೊಯೊಟಾ ಕಂಪನಿಯು 2021ರ ಡಿಸೆಂಬರ್ ತಿಂಗಳ ಮಾಸಿಕ ಮಾರಾಟದ ಅಂಕಿ ಅಂಶಗಳ ವರದಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ವರದಿ ಪ್ರಕಾರ, ಟೊಯೊಟಾ ಕಂಪನಿಯು ಕಳೆದ ತಿಂಗಳು ಭಾರತದಲ್ಲಿ 10,832 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಟೊಯೊಟಾ ಕಂಪನಿಯು 7,487 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.45 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

2021ರ ವರ್ಷದಲ್ಲಿ ಜಪಾನಿನ ಕಾರು ತಯಾರಕರು ಭಾರತದಲ್ಲಿ 1,30,768 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ, ಇನ್ನು 2020ರ ವರ್ಷದಲ್ಲಿ 76,111 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ವಾರ್ಷಿಕ ಮಾರಾಟದಲ್ಲಿ ಶೇ.72 ರಷ್ಟು ಬೆಳವಣಿಗೆಯಾಗಿದೆ.

ಅತ್ಯುತ್ತಮ ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ Toyota Camry Hybrid ಕಾರು

ಪ್ರಸ್ತುತ ಟೊಯೊಟಾ ಕಾರುಗಳು ಮಾರಾಟದಲ್ಲಿ ಕಂಪನಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಇದರೊಂದಿಗೆ ಹೊಸ ಮಾದರಿಗಳ ಮೂಲಕ ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಅದರಂತೆ ಈ ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಕೂಡ ಮಾರಾಟದಲ್ಲಿ ಉತ್ತಮ ಕೊಡುಗೆಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಟೊಯೊಟಾ toyota
English summary
2022 toyota camry hybrid launched in india price new updates details
Story first published: Wednesday, January 12, 2022, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X