ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ನವೀಕರಿಸಿದ ಕ್ಯಾಮ್ರಿ ಹೈಬ್ರಿಡ್‌ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಟೊಯೊಟಾ ಕಂಪನಿಯು ಈ ಹೊಸ ಕ್ಯಾಮ್ರಿ ಹೈಬ್ರಿಡ್‌ ಕಾರಿನ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಈ ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್‌ (Toyota Camry Hybrid) ಕಾರು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಟೀಸರ್ ಅನುಮೋದಿಸಲಾದ ಮುಂಬರುವ ಸೆಡಾನ್‌ನ ಸ್ನೀಕ್ ಪೀಕ್ ಅನ್ನು ನೀಡುತ್ತದೆ. ಪ್ರಸ್ತುತ, ಕ್ಯಾಮ್ರಿ ಹೈಬ್ರಿಡ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 41.20 ಲಕ್ಷವಾಗಿದೆ.ಪ್ರಸ್ತುತ ತಲೆಮಾರಿನ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು 2019ರ ಜನವರಿ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ಟೊಯೊಟಾ ಕಂಪನಿಯು ಈ ಕಾರನ್ನು ನವೀಕರಿಸಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಯುರೋಪಿಯನ್ ಮಾರುಕಟ್ಟೆಯಲ್ಲಿ, ನವೀಕರಿಸಿದ ಕ್ಯಾಮ್ರಿ ಹೈಬ್ರಿಡ್ ಕಾರನ್ನು 2020ರಲ್ಲಿ ಮುಖ್ಯವಾಗಿ ಹೊರಭಾಗದಲ್ಲಿ ಗಮನಾರ್ಹವಾದ ನವೀಕರಣಗಳೊಂದಿಗೆ ಪರಿಚಯಿಸಲಾಯಿತು. ಹೊರಭಾಗವು ನವೀಕರಿಸಿದ ಗ್ರಿಲ್ ಮತ್ತು ಬಂಪರ್ ವಿಭಾಗದೊಂದಿಗೆ ಮರುಹೊಂದಿಸಲಾದ ಮುಂಭಾಗದ ಫಾಸಿಕವನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಸಮತಲವಾದ ಲೋವರ್ ಗ್ರಿಲ್ ಬಾರ್‌ಗಳನ್ನು ಯುರೋಪ್‌ನಲ್ಲಿ ಬ್ಲ್ಯಾಕ್ ಅಥವ ಗ್ರೇ ಬಣ್ಣದಲ್ಲಿ ಖರೀದಿಸಬಹುದು ಮತ್ತು ಇದು ವಿಶಾಲವಾದ ನಿಲುವು ನೀಡುವ ಸೈಡ್ ಫ್ರೊಫೈಲ್ ಹೊಂದಿದೆ. ಇತರ ಬಾಹ್ಯ ಮುಖ್ಯಾಂಶಗಳು ಹೊಸದಾಗಿ ವಿನ್ಯಾಸಗೊಳಿಸಲಾದ 17- ಮತ್ತು 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಇದರೊಂದಿಗೆ ಹೊಸ ಡೀಪ್ ಮೆಟಲ್ ಗ್ರೇ ಬಣ್ಣದ ಸ್ಕೀಮ್ ಅನ್ನು ಟೀಸರ್‌ನಲ್ಲಿಯೂ ಕಾಣಬಹುದು. ಎಲ್‌ಇಡಿ ಟೈಲ್‌ಲೈಟ್‌ಗಳು ಸಣ್ಣ ನವೀಕರಣವನ್ನು ಸಹ ಪಡೆದುಕೊಂಡಿವೆ. 2022ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಒಳಭಾಗದಲ್ಲಿ ಕೆಲವು ನವೀಕರಣಗಳನ್ನು ನಡಿಸಲಾಗಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಈ ಕಾರಿನಲ್ಲಿ ಹೊಸ ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ Apple CarPlay ಮತ್ತು Android Auto ಹೊಂದಾಣಿಕೆಯೊಂದಿಗೆ ಬರುತ್ತದೆ. ಉತ್ತಮ ಏರೋಗಾಮಿಕ್ಸ್ ಡ್ಯಾಶ್‌ಬೋರ್ಡ್‌ನಲ್ಲಿ ಸ್ವಲ್ಪ ಮೇಲಕ್ಕೆ ಚಲಿಸುತ್ತದೆ. ಇದು ಫಿಸಿಕಲ್ ಬಟನ್‌ಗಳು ಮತ್ತು ಡಯಲ್‌ಗಳನ್ನು ಬಳಸಲು ಸುಲಭವಾಗಿದೆ ಮತ್ತು ವೇಗವಾದ ಸಾಫ್ಟ್‌ವೇರ್ ಮತ್ತು ಹೆಚ್ಚು ಅರ್ಥಗರ್ಭಿತ ಸ್ಕ್ರೀನ್ ಹೊಂದಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಇನ್ನು ಇದರೊಂದಿಗೆ ಹೆಡ್ಸ್-ಅಪ್ ಡಿಸ್ ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೆಟಡ್ ಫ್ರಂಟ್ ಸೀಟ್, ಮೋರು ಜೋನ್ ಕ್ಲೈಮೇಂಟ್ ಕಂಟ್ರೋಲ್, ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುದಾದ ಸ್ಟೀಯರಿಂಗ್, ಮತ್ತು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವಾಗ ಫೇಸ್‌ಲಿಫ್ಟೆಡ್ ಕ್ಯಾಮ್ರಿ ಹೈಬ್ರಿಡ್ ಕಾರಿನಲ್ಲಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಅದೇ ರೀತಿಯ ಫಿಚರ್ ಗಳನ್ನು ಮುಂದುವರೆಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಈ ಎಲ್ಲಾ ಬದಲಾವಣೆಗಳು ಇಂಡಿಯಾ-ಸ್ಪೆಕ್ ಆವೃತ್ತಿಯ ಭಾಗವಾಗಿರಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಸೀಟ್ ಬೀಜ್ ಅಥವಾ ಬ್ಲ್ಯಾಕ್ ಲೆದರ್ ನಿಂದ ಕೂಡಿರುತ್ತದೆ, ಇನ್ನು ಡ್ಯಾಶ್‌ಬೋರ್ಡ್ ಅನ್ನು ಬ್ಲ್ಯಾಕ್ ಇಂಜಿನಿಯರ್ಡ್ ವುಡ್ ಮತ್ತು ಟೈಟಾನಿಯಂ ಲೈನ್ ಮಾದರಿಯಲ್ಲಿ ಮಾಡಲಾಗಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಜಪಾನಿನ ಆಟೋ ಮೇಜರ್ ಟೊಯೊಟಾ ಸೇಫ್ಟಿ ಸೆನ್ಸ್ ಸೂಟ್ ಅನ್ನು 2022 ಕ್ಯಾಮ್ರಿ ಹೈಬ್ರಿಡ್‌ನಲ್ಲಿ ನವೀಕರಿಸಿದ ಪ್ರೀ-ಕೊಲಿಶನ್ ಸಿಸ್ಟಮ್‌ನ ಸೇರ್ಪಡೆಯೊಂದಿಗೆ ಸುಧಾರಿಸಿದೆ. ಈ ಕಾರಿನಲ್ಲಿ ವೈಕಲ್ ಡಿಟೆಕ್ಷನ್, ಎಮರ್ಜನ್ಸಿ ಸ್ಟೀಯರಿಂಗ್ ಅಸಿಸ್ಟ್,ನವೀಕರಿಸಿದ ಲೇನ್ ಟ್ರೇಸ್ ಅಸಿಸ್ಟ್, ಇಂಟೆಲಿಜೆಂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಇತ್ಯಾದಿಗಳನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಟೊಯೊಟಾ ಕ್ಯಾಮ್ರಿ ಫೇಸ್‌ಲಿಫ್ಟ್ ಕಾರಿನ ಕಾರ್ಯಕ್ಷಮತೆಯ ಯಾವುದೇ ಬದಲಾವಣೆಗಳಿಲ್ಲ, ಅದೇ 2.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್'ಗೆ ಸಂಯೋಜಿಸಲಾಗಿದೆ. ಈ ಸಂಯೋಜಿತ ಎಂಜಿನ್ 215 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಸಿವಿಟಿ ಗೇರ್‌ಬಾಕ್ಸ್ ಮೂಲಕ ಮುಂಭಾಗದ ಟಯರ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಟೊಯೊಟಾ ಕಂಪನಿಯು 2021ರ ಡಿಸೆಂಬರ್ ತಿಂಗಳ ಮಾಸಿಕ ಮಾರಾಟದ ಅಂಕಿ ಅಂಶಗಳ ವರದಿಯನ್ನು ಬಿಡುಗಡೆ ಮಾಡಿದೆ, ಈ ವರದಿ ಪ್ರಕಾರ, ಟೊಯೊಟಾ ಕಂಪನಿಯು ಕಳೆದ ತಿಂಗಳು ಭಾರತದಲ್ಲಿ 10,832 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಟೊಯೊಟಾ ಕಂಪನಿಯು 7,487 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.45 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Toyota Camry Hybrid ಕಾರು

ಇನ್ನು 2021ರ ವರ್ಷದಲ್ಲಿ ಜಪಾನಿನ ಕಾರು ತಯಾರಕರು ಭಾರತದಲ್ಲಿ 1,30,768 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ, ಇನ್ನು 2020ರ ವರ್ಷದಲ್ಲಿ 76,111 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ವಾರ್ಷಿಕ ಮಾರಾಟದಲ್ಲಿ ಶೇ.72 ರಷ್ಟು ಬೆಳವಣಿಗೆಯಾಗಿದೆ. ಇನ್ನು ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ, ಹೊಸ ಮಾದರಿಗಳ ಮೂಲಕ ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ ಟೊಯೊಟಾ ಕಾರುಗಳು ಮಾರಾಟದಲ್ಲಿ ಕಂಪನಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
2022 toyota camry hybrid new teaser released india launch soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X