ಹೊಸ ಟೊಯೊಟಾ ಗ್ಲಾಂಝಾ ಕಾರು ಬಿಡುಗಡೆ ದಿನಾಂಕ ಬಹಿರಂಗ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬಲೆನೊ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಮಾರುತಿ ಬಲೆನೊ ಈಗಾಗಲೇ 25,000 ಬುಕ್ಕಿಂಗ್‌ಗಳೊಂದಿಗೆ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಇದೀಗ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಕಂಪನಿ ಕೂಡ ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾದ ಗ್ಲಾಂಜಾವನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಟೊಯೊಟಾ ಗ್ಲಾಂಝಾ ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿರುವುದರಿಂದ, ಜಪಾನಿನ ತಯಾರಕರು ನವೀಕರಿಸಿದ ಮಾರುತಿ ಸುಜುಕಿ ಬಲೆನೊವನ್ನು ಆಧರಿಸಿ ಹೊಸ ಗ್ಲಾಂಜಾವನ್ನು ಬಿಡುಗಡೆ ಮಾಡುತ್ತಾರೆ. ಹೊಸ ಟೊಯೊಟಾ ಗ್ಲಾಂಝಾ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿತ್ತು.

ಇದೀಗ ಟೊಯೊಟಾ ಕಂಪನಿಯು ಗ್ಲಾಂಝಾ ಕಾರಿನ ಟೀಸರ್ ಅನ್ನು ಬಿಡುಗಡೆ ಮಾಡಿದೆ, ಟೀಸರ್ ನಲ್ಲಿ ಹೊಸ ಗ್ಲಾಂಝಾ ಕಾರು ಇದೇ ಮಾರ್ಚ್ 15 ರಂದು ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ, 10-ಸೆಕೆಂಡ್ ಟೀಸರ್ ವೀಡಿಯೋ ನವೀಕರಿಸಿದ ಗ್ಲಾಂಝಾದ ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ತೋರಿಸುತ್ತದೆ.

ಇದು ಆಕಾರ ಮತ್ತು ಗಾತ್ರದಲ್ಲಿ ಫೇಸ್‌ಲಿಫ್ಟೆಡ್ ಬಲೆನೊದಂತೆಯ ಇದೆ, ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ನ್ಯಾವಿಗೇಷನ್ ಮತ್ತು ವಾಯ್ಸ್ ಕಮಾಂಡ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಟಚ್‌ಸ್ಕ್ರೀನ್‌ನ ಕೆಳಗೆ ಇರಿಸಲಾಗಿರುವ ಕ್ಲೈಮೆಂಟ್ ವೆಂಟ್ ಗಳು ಮತ್ತು ಹಝರ್ಡ್ ಲ್ಯಾಂಪ್ ಸ್ವಿಚ್ ಸಹ 2022 ಬಲೆನೊಗೆ ಹೋಲುತ್ತವೆ,

ಗ್ಲಾಂಝಾದಲ್ಲಿ ಡ್ಯಾಶ್‌ಬೋರ್ಡ್ ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ, ಒಟ್ಟಾರೆ ವಿನ್ಯಾಸವು ಬಲೆನೊವನ್ನು ನೆನಪಿಸುತ್ತದೆ. ಲೋ ಸ್ಪೆಕ್ ರೂಪಾಂತರಗಳು ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 7-ಇಂಚಿನ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುವ ಸಾಧ್ಯತೆಯಿದೆ.

ಇದು ಹೆಡ್ಸ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಕ್ರೂಸ್ ಕಂಟ್ರೋಲ್, ಹೊಸ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್ ಮತ್ತು ಇತರವುಗಳೊಂದಿಗೆ ಪ್ಯಾಕ್ ಮಾಡುವ ನಿರೀಕ್ಷೆಯಿದೆ.

ಹೆಚ್ಚಿನ ವಿನ್ಯಾಸ ಮತ್ತು ಒಳಾಂಗಣ ಬದಲಾವಣೆಗಳು ಹೊಸ ಬಲೆನೊಗೆ ಅನುಗುಣವಾಗಿರುತ್ತವೆ, ಹೊಸ ಟೊಯೊಟಾ ಗ್ಲಾಂಝಾ ಕೂಡ ಕೆಲವು ಹೆಚ್ಚುವರಿ ಬದಲಾವಣೆಗಳನ್ನು ಪಡೆಯುತ್ತದೆ. ಬಲೆನೊದಲ್ಲಿರುವ ಹಲವಾರು ಪ್ರೀಮಿಯಂ ಪೀಚರ್ಸ್ ಗಳನ್ನು ಹೊಂದಿರುತ್ತದೆ.

ಟೊಯೊಟಾ ಗ್ಲಾಂಝಾ ಕಾರು ಹಿಂಭಾಗದ ಬಂಪರ್, ಫೆಂಡರ್‌ಗಳು ಮತ್ತು ಟೈಲ್‌ಗೇಟ್ ಅನ್ನು ಬಲೆನೊದೊಂದಿಗೆ ಹಂಚಿಕೊಳ್ಳುತ್ತದೆ. ಆದರೆ ಅಲಾಯ್ ವ್ಹೀಲ್ ಗಳು ಮತ್ತು ಟೈಲ್-ಲೈಟ್‌ಗಳಿಗಾಗಿ ಹೊಸ ಇನ್‌ಸರ್ಟ್‌ಗಳನ್ನು ಹೊಂದಿರುತ್ತದೆ. ಹೊಸ ಬಲೆನೊಗೆ ಹೋಲಿಸಿದರೆ ಹ್ಯಾಚ್‌ಬ್ಯಾಕ್ ವಿಭಿನ್ನ ಮುಂಭಾಗದ ವಿನ್ಯಾಸವನ್ನು ಪಡೆಯುತ್ತದೆ
ಇದು ಹೊಸ ಮುಂಭಾಗದ ಬಂಪರ್, ವಿಭಿನ್ನ ಗ್ರಿಲ್ ವಿನ್ಯಾಸ ಮತ್ತು ವಿಭಿನ್ನ DRL (ಡೇಟೈಮ್ ರನ್ನಿಂಗ್ ಲೈಟ್) ಜೊತೆಗೆ ಹೊಸ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಒಟ್ಟಿನಲ್ಲಿ ಹೊಸ ಟೊಯೊಟಾ ಗ್ಲಾಂಝಾ ಕಾರು ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ.

ಹೊಸ ಬಲೆನೊದಂತೆಯೇ, ಹೊಸ ಟೊಯೊಟಾ ಗ್ಲಾಂಝಾ ಕಾರು 1.2-ಲೀಟರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಟೊಯೊಟಾ ತನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ವಾಹನಗಳನ್ನು ಬಿಡುಗಡೆ ಮಾಡಲಿದೆ.

ಮುಂದಿನ 2 ವರ್ಷಗಳಲ್ಲಿ ಭಾರತದಲ್ಲಿ ಹೊಸ 10 ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಬಿಡುಗಡೆಯಾಗಲಿರುವ ಹೊಸ ಟೊಯೊಟಾ ಕಾರುಗಳ ಬಗ್ಗೆ ಖರೀದಿದಾರರಲ್ಲಿ ನಿರೀಕ್ಷೆಯು ಸಾಕಷ್ಟು ಹೆಚ್ಚಾಗಿದೆ. ಈಗಗಾಲೇ ಟೊಯೊಟಾ ಕಂಪನಿಯು ಬಹುತೇಕ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಇದರ ನಡುವೆ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿ ಟೊಯೊಟಾ ವಾಹನ ಮಾರಾಟದ ಸಂಖ್ಯೆ ಹೆಚ್ಚಿಸಲು ಸಜ್ಜಾಗುತ್ತಿದೆ, ಜಪಾನಿನ ಕಾರು ತಯಾರಕರು ಟೊಯೊಟಾ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್‌ನೊಂದಿಗೆ ಹೊಸ ಮಾರಾಟದ ಮೈಲಿಗಲ್ಲನ್ನು ತಲುಪಿದ್ದಾರೆ. ಎರಡೂ ವಾಹನಗಳು ಭಾರತದಲ್ಲಿ 1 ಲಕ್ಷ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ಸಂಚಿತವಾಗಿ ದಾಟಿವೆ.

ಇನ್ನು ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ಮೊದಲ ಬಾರಿಗೆ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಅಭಿವೃದ್ದಿಗೊಳ್ಳುತ್ತಿದ್ದು, ಹೊಸ ಕಾರು ಮಧ್ಯಮ ಗಾತ್ರದ ಇವಿ ಕಾರು ಮಾದರಿಗಳಲ್ಲಿಯೇ ವಿಶೇಷ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಡುಗಡೆಯಾಗಲಿದೆ. ಪಾಲುದಾರಿಕೆ ಯೋಜನೆ ಅಡಿ ನಿರ್ಮಾಣಗೊಳ್ಳುತ್ತಿರುವ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 500 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಹೊಸ ಕಾರು 2025ರ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದುಇ ಹೇಳಲಾಗುತ್ತಿದೆ.

ಟೊಯೊಟಾ ಗ್ಲಾಂಝಾದಂತಹ ಹೆಚ್ಚಿನ ಪ್ರಮಾಣದ ಮಾದರಿಗಳು ಭಾರತದಲ್ಲಿ ತನ್ನ ಮಾರಾಟ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಟೊಯೊಟಾ ಮುಂಬರುವ ಗ್ಲಾಂಝಾಗೆ ಕೆಲವು ಬದಲಾವಣೆಗಳನ್ನು ಸೇರಿಸುತ್ತದೆ. ಇದು 2022ರ ಮಾರುತಿ ಸುಜುಕಿ ಬಲೆನೊದಿಂದ ದೃಶ್ಯಾತ್ಮಕವಾಗಿ ಪ್ರತ್ಯೇಕಿಸುತ್ತದೆ.


Click it and Unblock the Notifications