ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ..

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ , ಕಾರು ಮಾರಾಟದಲ್ಲಿ ಎರಡನೇ ಸ್ಥಾನಕ್ಕಾಗಿ ಹುಂಡೈನೊಂದಿಗೆ ಸ್ಪರ್ಧಿಸುತ್ತಿದ್ದು, ಮುಂದೆ ಕಾಜಿರಂಗಾ ಎಡಿಷನ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಅಲ್ಲದೆ ಇದೇ ಸಮಯದಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಟಾಟಾ ಬ್ರ್ಯಾಂಡ್‌ನಿಂದ ಹೊರ ಬರಲಿರುವ ಕಾರುಗಳಲ್ಲಿ ಕೆಲವು ಎಲೆಕ್ಟ್ರಿಕ್ ಕಾರುಗಳೂ ಸಹ ಇವೆ. ಈಗ ಈ ಎಲೆಕ್ಟ್ರಿಕ್ ಕಾರುಗಳು ಸೇರಿದಂತೆ ಟಾಟಾದಿಂದ ಮುಂದೆ ಬಿಡುಗಡೆಯಾಗಬಹುದಾದ 5 ಕಾರುಗಳ ಮಾಹಿತಿ ಇಲ್ಲಿದೆ.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ನವೀಕರಿಸಿದ ಟಾಟಾ ನೆಕ್ಸನ್ ಇವಿ

ಟಾಟಾ ಮೋಟಾರ್ಸ್, ತನ್ನ ನೆಕ್ಸನ್ ಇವಿಯನ್ನು ನವೀಕರಿಸಲು ಮುಂದಾಗಿದೆ. ಈಗಾಗಲೇ ಸಾರ್ವಜನಿಕವಾಗಿ ಹೊಸ ನೆಕ್ಸನ್ ಇವಿಯ ಪರೀಕ್ಷಾ ಮಾದರಿಗಳನ್ನು ನೋಡಿದ್ದೇವೆ. ಹೊಸ ನೆಕ್ಸನ್ ಎಲೆಕ್ಟ್ರಿಕ್ ಎಸ್‌ಯುವಿ ನೋಟದಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಹೆಚ್ಚಿನ ಶ್ರೇಣಿಯನ್ನು ಪಡೆಯುವ ನಿರೀಕ್ಷೆಯಿದೆ.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಮೂಲಗಳ ಪ್ರಕಾರ, ಹೊಸ ನೆಕ್ಸನ್ ಇವಿ 40 ಐಒಎಸ್ ಬ್ಯಾಟರಿ ಸೆಟ್‌ನಿಂದ ಚಾಲಿತವಾಗಲಿದೆ. 2022ರ ಮಧ್ಯದಲ್ಲಿ ನವೀಕರಿಸಿದ ನೆಕ್ಸನ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಟಾಟಾ ಅಲ್ಟ್ರಾಸ್ ಇವಿ

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್ ಬ್ಯಾಕ್ ಅಲ್ಟ್ರಾಸಿನ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ತರಲಿದೆ ಎಂಬುದು ತಿಳಿದಿರುವ ವಿಚಾರವೆ. ಏಕೆಂದರೆ ಬಹುತೇಕ ಸಂಪೂರ್ಣವಾಗಿ ವಿನ್ಯಾಸಗೊಳಿಸಲಾದ ಅಲ್ಟ್ರಾಸ್ ಇವಿಯನ್ನು 2020ರ ಆಟೋ ಎಕ್ಸ್‌ ಪೋದಲ್ಲಿಯೇ ಈಗಾಗಲೇ ಪ್ರದರ್ಶಿಸಲಾಗಿತ್ತು.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಟಾಟಾ 2020ರ ಕೊನೆಯಲ್ಲಿ ಅಲ್ಟ್ರಾಸ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಬಿಡುಗಡೆ ಮಾಡಬಹುದು. ಅದೇ ರೀತಿ, ನವೀಕರಿಸಿದ ನೆಕ್ಸನ್ ಇವಿಯಲ್ಲಿ ದೊಡ್ಡ ಬ್ಯಾಟರಿ ಪ್ಯಾಕೇಜ್‌ನೊಂದಿಗೆ ಅಲ್ಟ್ರಾಸ್ ಇವಿಯನ್ನು ಸಹ ನೀಡುತ್ತಿರುವುದಾಗಿ ತಿಳಿದುಬಂದಿದೆ.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಮಧ್ಯಮ ಗಾತ್ರದ ಎಸ್‌ಯುವಿ (ಟಾಟಾ ಬ್ಲ್ಯಾಕ್ ಬರ್ಡ್)

ಇದರ ಜೊತೆಗೆ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನಗಳ ಪ್ರಾಬಲ್ಯವನ್ನು ತಡೆಯಲು ಹೊಸ ಮಧ್ಯಮ ಗಾತ್ರದ ಎಸ್‌ಯುವಿ ವಿನ್ಯಾಸದಲ್ಲಿ ತೊಡಗಿಸಿಕೊಂಡಿದೆ. ಇತರೆ ಕಂಪನಿಗಾಳಾದ ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಕೂಡ ಇದೇ ಮಾರ್ಗವನ್ನು ಅನುಸರಿಸುತ್ತಿವೆ.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಇದು ನೆಕ್ಸನ್ ಕಾಂಪ್ಯಾಕ್ಟ್‌ ಎಸ್‌ಯುವಿಯ ಎಕ್ಸ್‌1 ಪ್ಲಾಟ್ ಫಾರ್ಮ್ ಆಧಾರಿತ ಕೂಪೆ ಶೈಲಿಯ ಎಸ್‌ಯುವಿಯಾಗಲಿದೆ. ಈಗ ಬ್ಲ್ಯಾಕ್ ಬರ್ಡ್ ಎಂದು ಕರೆಯಲ್ಪಡುವ ಹೊಸ ಟಾಟಾ ಮಧ್ಯಮ ಗಾತ್ರದ ಎಸ್‌ಯುವಿಯನ್ನು 2023ರಲ್ಲಿ 1.5 ಲೀಟರ್ ಟರ್ಬೊ-ಪೆಟ್ರೋಲ್ ಮತ್ತು ಟರ್ಬೊ-ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗುವುದು.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಟಾಟಾ ಪಂಚ್ ಟರ್ಬೊ/ಇವಿ

ಟಾಟಾ ಬ್ರಾಂಡ್‌ನಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ ಕೊನೆಯ ಮತ್ತು ಸಣ್ಣ ಗಾತ್ರದ ಮೈಕ್ರೋ-ಎಸ್‌ಯುವಿ ಪಂಚ್ ಪ್ರಸ್ತುತ ಕೇವಲ 1.2 ಲೀಟರ್ ಸ್ವಾಭಾವಿಕವಾಗಿ ಆಸ್ಪೆರೇಟೆಡ್ ಪೆಟ್ರೋಲ್ ಎಂಜಿನ್ ಪರೀಕ್ಷೆಯಲ್ಲಿ ಮಾತ್ರ ಮಾರಾಟವಾಗುತ್ತಿದೆ. ಟಾಟಾ ಪಂಚ್ ಮಾದರಿಗೆ ಶೀಘ್ರದಲ್ಲೇ ಹೊಸ 1.2 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡುವ ನಿರೀಕ್ಷೆಯಿದೆ.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಜೊತೆಗೆ ಪಂಚ್ ಮಾದರಿಯ ಎಲೆಕ್ಟ್ರಿಕ್ ಆವೃತ್ತಿಯು ವಿನ್ಯಾಸ ಪ್ರಗತಿಯಲ್ಲಿದೆ. ನಮಗೆ ತಿಳಿದಿರುವಂತೆ ಟಾಟಾ ಪಂಚ್ ಕಾರಿನಲ್ಲಿ ಮೊದಲ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಇದೇ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಬಹುದು. ಇದರ ನಂತರ ಪಂಚ್ ಇವಿಯನ್ನು ಬಿಡಲು ಯೋಜಿಸಿದ್ದು, ಇದನ್ನು 2023 ರಲ್ಲಿ ಪರಿಚಯಿಸಬಹುದು.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಟಾಟಾ ಸಿಯೆರಾ ಇವಿ

ಟಾಟಾ ಸಿಯೆರಾ ಇವಿ 2020 ಆಟೋ ಎಕ್ಸ್ ಪೋದಲ್ಲಿ ಟಾಟಾ ಪರವಾಗಿ ಹಲವಾರು ಪರಿಕಲ್ಪನೆ ಮಾದರಿಗಳನ್ನು ಪ್ರದರ್ಶಿಸಲಾಯಿತು. ಇವುಗಳಲ್ಲಿ ಒಂದು ಸಿಯೆರಾ ಇವಿ ಮಾದರಿ. ಟಾಟಾ ಮೋಟಾರ್ಸ್ ಇತ್ತೀಚೆಗೆ ಸಿಯೆರಾ ಇವಿ ಪರಿಕಲ್ಪನೆಯಿಂದ ಉತ್ಪನ್ನ ಮಾದರಿಯನ್ನು ಅಭಿವೃದ್ಧಿಪಡಿಸಲು ಹಸಿರು ನಿಶಾನೆ ತೋರಿಸಿತ್ತು. ಇದು ಪ್ರದರ್ಶನದಲ್ಲಿ ಗ್ರಾಹಕರನ್ನು ಆಕರ್ಷಿಸಿತ್ತು.

ಟಾಟಾ ಮೋಟಾರ್ಸ್‌ನಿಂದ ಮುಂಬರಲಿರುವ 5 ಕಾರು ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ!

ಸಿಯೆರಾ ಇವಿಯನ್ನು ಟಾಟಾ ಬ್ರಾಂಡ್‌ನ ಒಮೆಗಾ ಪ್ಲಾಟ್ ಫಾರ್ಮ್‌ನ ಇವಿ ಆವೃತ್ತಿಯಾದ ಸಿಗ್ಮಾ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಇದೀಗ ವಿನ್ಯಾಸ ಕಾರ್ಯವನ್ನು ಪ್ರಾರಂಭಿಸಿದರೂ, ಕಾರು ಸಂಪೂರ್ಣವಾಗಿ ಸಿದ್ಧವಾಗಿ 2025ರಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.

Article Published On: Tuesday, March 1, 2022, 14:13 [IST]
English summary
2022 upcoming new tata cars 5 new models
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+