ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಸೆಲೆಬ್ರಿಟಿಗಳು ಭಾರತೀಯ ರಸ್ತೆಗಳಲ್ಲಿ ಸ್ಕೂಟರ್-ಬೈಕ್ ಸವಾರಿ ಮಾಡುತ್ತಾ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಒಂದು ವೇಳೆ ಅವರು ದ್ವಿಚಕ್ರ ವಾಹನಗಳನ್ನು ಓಡಿಸಿದರೂ, ಸಾರ್ವಜನಿಕರು ಗುರುತುಹಿಡಿಯದಂತೆ ಹೆಲ್ಮೆಟ್ ದರಿಸಿ ಓಡಾಡುತ್ತಾರೆ.

Recommended Video

Ather 450X & 450 Plus Gen 3 Launched | ಅತ್ಯಧಿಕ ಮೈಲೇಜ್, ಆಕರ್ಷಕ ಬೆಲೆ ಮತ್ತು ಹೊಸ ಫೀಚರ್ಸ್..

ಅದೇ ರೀತಿ ಇದೀಗ ಸೆಲಬ್ರಿಟಿ ದಂಪತಿಯೊಂದು ಮುಂಬೈ ರಸ್ತೆಗಳಲ್ಲಿ ಫುಲ್‌ ಜೋಷ್‌ನಲ್ಲಿ ರೌಂಡ್‌ ಹಾಕಿದ್ದಾರೆ. ಅವರು ಯಾರಂದ್ರೇ... ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ. ಇವರಿಬ್ಬರ ಇತ್ತೀಚಿನ ವಿಡಿಯೋ ಸಖತ್ ಆರಲ್ ಆಗಿದೆ.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಇತ್ತೀಚೆಗೆ ಸುಜುಕಿ ಆಕ್ಸೆಸ್ 125 ನಲ್ಲಿ ಮುಂಬೈನ ಮಾಧ್ ಐಸ್‌ಲ್ಯಾಂಡ್‌ನಲ್ಲಿ ಚಿತ್ರೀಕರಣಕ್ಕಾಗಿ ಬಂದಿದ್ದರು, ಇದೇ ವೇಳೆ ಅವರು ಸ್ಕೂಟರ್ ರೈಡ್ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಕೊಹ್ಲಿ ಮತ್ತು ಶರ್ಮಾ ಇಬ್ಬರೂ ಡಾರ್ಕ್ ವೈಸರ್‌ಗಳನ್ನು ಹೊಂದಿರುವ ಹೆಲ್ಮೆಟ್‌ಗಳನ್ನು ಧರಿಸಿದ್ದರು, ಇಲ್ಲದಿದ್ದರೆ ಅವರಿಬ್ಬರನ್ನು ಜನರು ಮುತ್ತಿಕೊಳ್ಳುತ್ತಿದ್ದರು.

ಆದ್ರೂ ಕೆಲ ದೂರ ಹೋದ ಮೇಲೆ ಕೆಲವರು ಗುರುತುಹಿಡಿದ ಕಾರಣ ವಿರಾಟ್ ಕೊಹ್ಲಿ ವೇಗವಾಗಿ ಶೂಟಿಂಗ್ ಸ್ಪಾಟ್‌ಗೆ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಅವರಿಬ್ಬರು ಮುಂಬೈ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸಿ ರೌಂಡ್ ಹಾಕಿರುವ ವಿಡಿಯೋ ಇದೀಗ ಸಾಮಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿರುವುದು ಬಹುಶಃ ಇದೇ ಮೊದಲು. ಸಾಮಾನ್ಯವಾಗಿ, ಈ ದಂಪತಿ ತಮ್ಮ ಕಾರುಗಳಲ್ಲಿ ಓಡಾಡಲು ಹೆಚ್ಚು ಆದ್ಯತೆ ನೀಡುತ್ತಾರೆ. ಇಬ್ಬರೂ ಸೆಲೆಬ್ರಿಟಿಗಳು ಬೆಂಟ್ಲಿ ನಿಂದ ರೇಂಜ್ ರೋವರ್‌ಗಳವರೆಗಿನ ಉನ್ನತ-ಮಟ್ಟದ ಕಾರುಗಳಿಂದ ತುಂಬಿರುವ ಗ್ಯಾರೇಜ್ ಅನ್ನು ಹೊಂದಿದ್ದಾರೆ.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಹಿಂದೆಯೂ ವಿರಾಟ್ ಕೊಹ್ಲಿ ಟೊಯೊಟಾ ಮತ್ತು ಟಿವಿಎಸ್ ಮೋಟಾರ್ಸ್‌ನಂತಹ ಆಟೋಮೊಬೈಲ್ ಬ್ರಾಂಡ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ್ದರು. ಅದೇ ರೀತಿ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಸಿನಿಮಾಗಳಲ್ಲಿ ಹೆಸರು ಮಾಡಿದ್ದ ಸಮಯದಲ್ಲಿ ಟಿವಿಎಸ್ ಸ್ಕೂಟಿ ಪೆಪ್ ಆಟೋಮ್ಯಾಟಿಕ್ ಸ್ಕೂಟರ್‌ಗೆ ಬ್ರಾಂಡ್‌ ಅಂಬಾಸಿಡರ್ ಆಗಿದ್ದರು.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದ್ವಿಚಕ್ರ ವಾಹನಗಳಲ್ಲಿ ಕಾಣಿಸಿಕೊಂಡಿದ್ದು ಕೇವಲ ಅವರ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ಸಮಯದಲ್ಲಿ ಮಾತ್ರ. ಇನ್ನು ಸುಜುಕಿ ಆಕ್ಸೆಸ್ 125 ವಿಷಯಕ್ಕೆ ಬಂದರೆ ಭಾರತದ ಅತಿ ಹೆಚ್ಚು ಮಾರಾಟವಾಗುವ ಆಟೋಮ್ಯಾಟಿಕ್ (ಗೇರ್‌ಲೆಸ್) ಸ್ಕೂಟರ್‌ಗಳಲ್ಲಿ ಒಂದಾಗಿದೆ.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಇದು 125cc, ಫ್ಯೂಯಲ್ ಇಂಜೆಕ್ಟೆಡ್ ಫೋರ್ ಸ್ಟ್ರೋಕ್ ಎಂಜಿನ್ ನಿಂದ ಚಾಲಿತವಾಗಿದ್ದು, 8.7 PS ಪೀಕ್ ಪವರ್ ಮತ್ತು 10 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಎಂಜಿನ್ ಅನ್ನು CVT ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಸ್ಕೂಟರ್‌ನ ಬೆಲೆಯು ರೂ. 77,600 (ಎಕ್ಸ್ ಶೋ ರೂಂ ದೆಹಲಿ) ಇದೆ.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಆಟೋಮ್ಯಾಟಿಕ್ ಸ್ಕೂಟರ್‌ಗಳು ನಗರ ಸಂಚಾರಕ್ಕೆ ಉತ್ತಮ ಆಯ್ಕೆ

ಆಟೋಮ್ಯಾಟಿಕ್ ಸ್ಕೂಟರ್ ಸವಾರಿಯು ಭಾರತೀಯ ನಗರಗಳಲ್ಲಿ ಸುತ್ತಲು ಅತ್ಯಂತ ಪರಿಣಾಮಕಾರಿ ಆಯ್ಕೆಯಾಗಿದೆ. ಇದೇ ಕಾರಣಕ್ಕೆ ಸ್ವಯಂಚಾಲಿತ ಸ್ಕೂಟರ್‌ಗಳ ಮಾರಾಟವು ದೇಶದಲ್ಲಿ ಅತ್ಯಂತ ಪ್ರಬಲವಾಗಿದೆ. ಗೇರ್‌ಗಳನ್ನು ಬದಲಾಯಿಸದೇ ಸ್ಟಾಪ್ ಮತ್ತು ಗೋ ಟ್ರಾಫಿಕ್‌ನಲ್ಲಿ ಓಡಿಸಲು ಈ ಸ್ಕೂಟರ್‌ಗಳು ದೊಡ್ಡ ವರದಾನವಾಗಿವೆ.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಎಲೆಕ್ಟ್ರಿಕ್ ಸ್ಕೂಟರ್‌ನ ಏರಿಕೆ

ಎಲೆಕ್ಟ್ರಿಕ್ ಸ್ಕೂಟರ್‌ಗಳು ಈಗ ಪೆಟ್ರೋಲ್ ಚಾಲಿತ ಆಟೋಮ್ಯಾಟಿಕ್ ಸ್ಕೂಟರ್‌ಗಳಿಗೆ ಸವಾಲು ಹಾಕುತ್ತಿವೆ. ಮುಂದಿನ 5 ವರ್ಷಗಳಲ್ಲಿ ಈ ಜಾಗದಲ್ಲಿ ಪ್ರಾಬಲ್ಯ ಸಾಧಿಸಬಹುದು. ಎಲೆಕ್ಟ್ರಿಕ್ ಸ್ಕೂಟರ್‌ಗಳು ಸ್ವಯಂಚಾಲಿತ ಸ್ಕೂಟರ್ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆ ಹೇಗೆ ಸಾಧಿಸಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸುಲಭ.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಆಮೋಮ್ಯಾಟಿಕ್ ಸ್ಕೂಟರ್‌ಗಳಲ್ಲಿ ಸಾಮಾನ್ಯವಾಗಿ ಕಡಿಮೆ ಇಂಧನವಿದ್ದಲ್ಲಿ ಕಡಿಮೆ ಕಿಲೋಮೀಟರ್‌ಗಳ ಪ್ರಯಾಣಕ್ಕೆ ಬಳಸಲಾಗುತ್ತದೆ. ವ್ಯಾಪ್ತಿಯ ಆತಂಕದ ನಡುವೆ ಈ ವಾಹನಗಳನ್ನು ಓಡಿಸಬೇಕಾಗುತ್ತದೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಮೋಡ್‌ಗಳನ್ನು ಬಳಸಿಕೊಂಡು ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಸುಲಭವಾಗಿ ಕ್ರಮಿಸಬಹುದು.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಪ್ರತಿ ಚಾರ್ಜ್‌ಗೆ ಸುಮಾರು 100-120 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅಪಾರ ಸಂಖ್ಯೆಯ ಖರೀದಿದಾರರಿಗೆ ದೈನಂದಿನ ಪ್ರಯಾಣಕ್ಕೆ ಸಾಕಷ್ಟು ಸಹಾಕವಾಗಿದೆ. ಇಂಧನ ವೆಚ್ಚಗಳು ಏರಿಕೆಯಾಗುತ್ತಿದ್ದರೇ, ಇತ್ತ ಕಡಿಮೆ ವಿದ್ಯುತ್ ವೆಚ್ಚವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಲಾಯಿಸಲು ಅತ್ಯಂತ ಕೈಗೆಟುಕುವಂತೆ ಮಾಡುತ್ತಿದೆ.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ವಾಸ್ತವವಾಗಿ, ಎಲೆಕ್ಟ್ರಿಕ್ ಸ್ಕೂಟರ್‌ನ ಚಾಲನೆಯ ವೆಚ್ಚವು ಪೆಟ್ರೋಲ್ ಚಾಲಿತ ಸ್ವಯಂಚಾಲಿತ ಸ್ಕೂಟರ್‌ನ 1/10 ಕ್ಕಿಂತ ಕಡಿಮೆಯಿರುತ್ತದೆ. ಇದನ್ನು ಮನಗಂಡಿರುವವರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಮೊದಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆಯಿತ್ತು. ಆದರೆ ಇವಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳಿಂದ ತುಸು ಬೇಡಿಕೆ ಕಡಿಮೆಯಾಗಿದೆ.

ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ರೌಂಡ್ಸ್ ಹಾಕಿದ ಸೆಲೆಬ್ರಿಟಿ ದಂಪತಿ: ಆದ್ರೂ ಕ್ಯಾಮರಾ ಕಣ್ಣಿಗೆ ಬಿದ್ರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಸುಜುಕಿ ಆಕ್ಸೆಸ್ 125 ಅತಿ ಹೆಚ್ಚು ಮಾರಾಟವಾಗುವ ಎರಡನೇ ಸ್ಕೂಟರ್ ಆಗಿ ಗುರುತಿಸಿಕೊಂಡಿದೆ. ಮೊದಲ ಸ್ಥಾನದಲ್ಲಿ ಹೋಂಡಾ ಆಕ್ಟೀವಾ ಇದ್ದು, ಉಳಿದಂತೆ ಕ್ರಮವಾಗಿ ಡಿಯೋ, ಜುಪಿಟರ್‌ನಂತಹ ವಾಹನಗಳಿವೆ. ಮುಂಬರುವ ದಿನಗಳಲ್ಲಿ ಇಂಧನ ಚಾಲಿತ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳು ಸೆಡ್ಡು ಹೊಡಿಯುವ ಸಾಧ್ಯತೆಯಿದೆ.

Most Read Articles

Kannada
English summary
A celebrity couple who did rounds on the Mumbai roads wearing a helmet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X