Just In
- 17 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 17 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
ಶೀಘ್ರವೇ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಪಿಯೂಷ್ ಗೋಯಲ್
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಇಂಧನ ಖರ್ಚಿಲ್ಲದೇ ಕೈಗೆಟುಕುವ ಬೆಲೆಗೆ ಸೋಲಾರ್ ಕಾರನ್ನು ಅಭಿವೃದ್ಧಿಪಡಿಸಿದ ಶಿಕ್ಷಕ
ದೇಶದೆಲ್ಲಡೆ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಆಯಾ ರಾಜ್ಯ ಸರ್ಕಾರಗಳು ಸಾಕಷ್ಟು ಶ್ರಮಿಸುತ್ತಿವೆ. ಮುಂದಿನ ದಿನಗಳಲ್ಲಿ ಕಾರ್ಬನ್ ಮುಕ್ತ ದೇಶವನ್ನಾಗಿಸಲು ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಬ್ಸಿಡಿ ನೀಡಿ ಪ್ರೋತ್ಸಾಹಿಸುತ್ತಿದೆ. ಆದರೂ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯ ವೇಗವು ನಿಧಾನವಾಗುತ್ತಿದೆ.

ಇದಕ್ಕೆ ಹಲವು ಕಾರಣಗಳಿವೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವು ಇನ್ನೂ ಅಭಿವೃದ್ಧಿಯ ಹಂತದಲ್ಲಿವೆ. ಅಲ್ಲದೇ ಇವಿ ವಾಹನಗಳು ಸೀಮಿತ ವ್ಯಾಪ್ತಿಯನ್ನು ಹೊಂದಿರುವುದರ ಜೊತೆಗೆ ಅವು ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇವೆಲ್ಲದರ ಜೊತೆಗೆ ಆಗಾಗ್ಗೆ ವರದಿಯಾಗುತ್ತಿರುವ ಇವಿ ವಾಹನಗಳ ಬೆಂಕಿ ಅವಘಗಳು ಸಹ ಪ್ರಮುಖ ಕಾರಣವಾಗಿವೆ.

ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾತ್ರವಲ್ಲದೇ ಜನರಿಗೆ ಕಡಿಮೆ ವೆಚ್ಚ, ಹೆಚ್ಚು ಪ್ರಮಾಣಿತ ಹಾಗೂ ಇಂಧನವಿಲ್ಲದೇ ಪ್ರಯಾಣಿಸುವ ವಾಹನಗಳನ್ನು ಕೊಡುಗೆಯಾಗಿ ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಶಿಕ್ಷಕರೊಬ್ಬರು ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವ ಬದಲು ಉತ್ತಮ ಪರ್ಯಾಯವನ್ನು ಕಂಡುಕೊಂಡಿದ್ದು, ಸೌರ ಶಕ್ತಿಯಿಂದ ಚಲಿಸುವ ಕಾರನ್ನು ಅಭಿವೃದ್ಧಿ ಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಿಲಾಲ್ ಅಹ್ಮದ್ ಎಂಬ ಗಣಿತ ಶಿಕ್ಷಕ ಮೊದಲ ಬಾರಿಗೆ ಸೌರ ಶಕ್ತಿಯಿಂದ ಚಲಿಸುವ ಅಗ್ಗದ ಎಲೆಕ್ಟ್ರಿಕ್ ಕಾರನ್ನು ಕಂಡುಹಿಡಿದಿದ್ದಾರೆ. ಮಾಹಿತಿ ಪ್ರಕಾರ, ಶ್ರೀನಗರದ ಸನತ್ ನಗರದ ನಿವಾಸಿ ಅಹ್ಮದ್ ಬಿಲಾಲ್ 11 ವರ್ಷಗಳ ಕಠಿಣ ಪರಿಶ್ರಮ ಮತ್ತು ಸಂಶೋಧನೆಯ ನಂತರ ಈ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ.

ಅಹ್ಮದ್ ಬಿಲಾಲ್ ಅವರ ಈ ಆವಿಷ್ಕಾರದ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಜನರು ಅವರ ಸೌರ ಚಾಲಿತ ಎಲೆಕ್ಟ್ರಿಕ್ ಕಾರನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೂಡ ಅಹ್ಮದ್ ಬಿಲಾಲ್ ಅವರ ಈ ಸಾಧನೆಯ ಬಗ್ಗೆ ಶ್ಲಾಘಿಸಿದ್ದಾರೆ.

ಈ ಸಾಧನೆ ಬಗ್ಗೆ ಅವರು ಟ್ವಿಟ್ಟರ್‌ನಲ್ಲಿ " ಕಾರಿನ ದೇಹದ ಮೇಲೆ ಸೌರ ಫಲಕಗಳಿವೆ ಕಾರು ಮುಂದೊಂದು ದಿನ ಹಾರಲುಬಹುದು" ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಅಹ್ಮದ್ ಬಿಲಾಲ್ ಅವರ ಬಗ್ಗೆ ಮಾತನಾಡುವುದಾದರೆ, ಇವರಿಗೆ ಐಷಾರಾಮಿ ಕಾರು ತಯಾರಿಸುವ ಆಸೆ. ಅದೇ ಸಮಯದಲ್ಲಿ ಅದು ಸಾಮಾನ್ಯ ಜನರ ಕೈಗೆಟುಕುವಂತಿರಬೇಕು ಎಂಬುದು ಸಹ ಮುಖ್ಯ ಧ್ಯೇಯವಾಗಿತ್ತು.

ಅಂತಹ ಪರಿಸ್ಥಿತಿಯಲ್ಲಿ ಅವರು 50ರ ದಶಕದಿಂದ ತಯಾರಿಸಿದ ಕಾರುಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು, ಬಳಿಕ ಇದೇ ಅಧ್ಯಯನವು ಸೋಲಾರ್ ಕಾರನ್ನು ತಯಾರಿಸಲು ಪ್ರೇರೇಪಿಸಿತು. ಇದೇ ವೇಳೆ ಆಟೋಮೊಬೈಲ್ ಕಂಪನಿ DMC ಮಾಲೀಕತ್ವದ ಯುಎಸ್‌ನ ಡೆಟ್ರಾಯಿಟ್‌ನ ಎಂಜಿನಿಯರ್ ಮತ್ತು ನವೋದ್ಯಮಿಗಳ ಕೆಲಸದಿಂದ ಅವರು ಸ್ಫೂರ್ತಿ ಪಡೆದರು.

ಮರ್ಸಿಡಿಸ್, ಫೆರಾರಿ ಮತ್ತು ಬಿಎಂಡಬ್ಲ್ಯು ಕಾರುಗಳು ಸಾಮಾನ್ಯ ಜನರ ಕನಸು, ಶ್ರೀಮಂತರು ಮಾತ್ರ ಅಂತಹ ಕಾರುಗಳನ್ನು ಖರೀದಿಸಬಹುದಾಗಿದೆ. ಇದೇ ಐಷಾರಾಮಿಯನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ಜನರಿಗೆ ದುಬಾರಿ ಕಾರುಗಳ ಭಾವನೆಯನ್ನು ನೀಡುವುದು ಉತ್ತಮ ಎಂದು ಅವರು ನಿರ್ಣಯಿಸಿದರು.

ಈ ಆಲೋಚನೆಯನ್ನು ಅನುಸರಿಸಿ ಅಹ್ಮದ್ ಬಿಲಾಲ್ ಅವರು ವಿವಿಧ ವಿಡಿಯೋಗಳನ್ನು ವೀಕ್ಷಿಸಿದ ನಂತರ ಕಾರನ್ನು ಮಾರ್ಪಡಿಸುವ ಮತ್ತು ಅದಕ್ಕೆ ಹೊಸ ವೈಶಿಷ್ಟ್ಯಗಳನ್ನು ಸೇರಿಸುವ ಕೆಲಸವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅಂಗವಿಕಲರಿಗಾಗಿ ಕಾರೊಂದನ್ನು ತಯಾರಿಸುವ ಉದ್ದೇಶವನ್ನು ಹೊಂದಿದ್ದರು. ಆದರೆ ಕೆಲವು ಆರ್ಥಿಕ ಸಮಸ್ಯೆಗಳಿಂದಾಗಿ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

2009 ರಲ್ಲಿ, ಅವರು ಸೋಲಾರ್-ರನ್ ಐಷಾರಾಮಿ ಕಾರನ್ನು ತಯಾರಿಸುವ ಆಲೋಚನೆಯನ್ನು ಮಾಡಿದರು ನಂತರ ಅವರು ಈ ಯೋಜನೆಯಲ್ಲಿ ತೊಡಗಿಸಿಕೊಂಡು ಯೋಜನೆಯನ್ನು ಈ ವರ್ಷ ಪೂರ್ಣಗೊಳಿಸಿದರು. ಈ ಸೌರಶಕ್ತಿ ಚಾಲಿತ ಕಾರಿಗೆ ಇತರ ಐಷಾರಾಮಿ ಕಾರುಗಳಂತೆಯೇ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.

ಮೋನೋಕ್ರಿಸ್ಟಲಿನ್ ಸೌರ ಫಲಕಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಶಕ್ತಿಯಿಂದ ಕಾರು ಸಂಪೂರ್ಣವಾಗಿ ಚಲಿಸುತ್ತದೆ. ಕಾರು ಮುನ್ನಡೆಯಲು ಅಹ್ಮದ್ ಅವರು ವಿಶಿಷ್ಟ ರೀತಿಯ ಸೌರ ಫಲಕಗಳನ್ನು ಬಳಸಿದ್ದಾರೆ, ಇದು ಕನಿಷ್ಠ ಪ್ರಮಾಣದ ಸೌರ ಶಕ್ತಿಯಲ್ಲೂ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

ಇದೀಗ ಇವರ ಆವಿಷ್ಕಾರ ಜನರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ತಗುಲಿದ ವೆಚ್ಚದ ಬಗ್ಗೆ ಯಾವುದೇ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ಆದರೆ ಈ ವಾಹನಕ್ಕಾಗಿ ಹೆಚ್ಚಾಗಿ ಖರ್ಚು ಮಾಡಿಲ್ಲ ಎಂದು ಶಿಕ್ಷಕ ತಿಳಿಸಿದ್ದಾರೆ. ಮುಂದೆ ಈ ಕಾರನ್ನು ಜನರಿಗೆ ಪರಿಚಯಿಸುವುದು ಇವರ ಉದ್ದೇಶವಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸೋಲಾರ್ ಕಾರುಗಳು ಸಹ ಸದ್ಯ ಮಾರಾಕ್ಕೆ ಲಭ್ಯವಿದೆ. ಆದರೆ ಅವುಗಳ ಬೆಲೆ ಕೂಡ ಹೆಚ್ಚು. ಇಂತಹ ಸಂದರ್ಭದಲ್ಲಿ ಕಾಶ್ಮೀರದ ಈ ಶಿಕ್ಷಕ ಸತತ ಶ್ರಮದಿಂದ ಸೋಲಾರ್ ಕಾರನ್ನು ಅಭಿವೃದ್ಧಿಪಡಿಸಿ ಜನರಿಗೆ ಕಡಿಮೆ ಬೆಲೆಗೆ ನೀಡಬೇಕು ಎಂಬಅವರ ಉದ್ದೇಶ ಶ್ಲಾಘನೀಯ. ಈ ಕಾರು ಮಾರುಕಟ್ಟೆ ತಲುಪಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ.