ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಖೇಮು ದೂರು

ಬಾಲಿವುಡ್‌ ನಟ ಕುನಾಲ್ ಖೇಮು ಹಾಗೂ ಅವರ ಪತ್ನಿ ಸೇರಿದಂತೆ ಇನ್ನಿತರರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕಾರು ಚಾಲಕನೊಬ್ಬನ ಕೆಟ್ಟ ವರ್ತನೆಯ ಬಗ್ಗೆ ನಟ ಕುನಾಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಅವರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಕೆಮ್ಮು ದೂರು

ನಟ ಕುನಾಲ್ ಖೇಮು ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಬರೆದುಕೊಂಡಿರುವ ವಿಚಾರ ಹೀಗಿದ್ದು.. ಘಟನೆ ನಡೆದಾಗ ಕುನಾಲ್ ಕೆಮ್ಮು, ಪತ್ನಿ ಸೋಹಾ ಅಲಿ ಖಾನ್ ಮತ್ತು ಮಗಳು ಇನಾಯಾ (ಸಾವಾ) ಇದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ತಮ್ಮ ಕಾರಿನಲ್ಲಿ ಪತ್ನಿ, ಮಗಳು, ಸಂಬಂಧಿಕರ ಮಕ್ಕಳು ಜೊತೆಗೂಡಿ ಹತ್ತಿರದ ಜುಕು ಎಂಬ ಪ್ರದೇಶಕ್ಕೆ ಬ್ರೇಕ್‌ಫಾಸ್ಟ್‌ಗೆಂದು ತೆರಳಿದ್ದರು.

ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಕೆಮ್ಮು ದೂರು

ಆ ಸಮಯದಲ್ಲಿ ಪುದುಚೇರಿ ನೋಂದಣಿಯ ಬಿಳಿ ಬಣ್ಣದ ಲ್ಯಾಂಬೋರ್ಗಿನಿ ಗಲ್ಲಾರ್ಡೊ ಕಾರು ಚಾಲಕನೊಬ್ಬ ಕಾರನ್ನು ಅಜಾಗರೂಕತೆಯಿಂದ ಓಡಿಸಿದ್ದಲ್ಲದೆ, ಇದ್ದಕ್ಕಿದ್ದಂತೆ ಕುನಾಲ್ ಅವರ ಕಾರನ್ನು ಓವರ್‌ ಟೇಕ್‌ ಮಾಡಲು ಪ್ರಯತ್ನಿಸಿದ್ದಾನೆ. ಬಳಿಕ ಕಾರಿನ ಮುಂದೆ ಬಂದು ಬ್ರೇಕ್ ಹಾಕಿದ್ದಾನೆ. ಆ ವೇಳೆ ಕುನಾಲ್ ಕೂಡ ಸಡನ್ ಬ್ರೇಕ್ ಹಾಕಿ ಆಗಬಹುದಾದ ಅನಾಹುತ ತಪ್ಪಿಸಿರುವುದಾಗಿ ಬರೆದುಕೊಂಡಿದ್ದಾರೆ.

ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಕೆಮ್ಮು ದೂರು

ಈ ಕೃತ್ಯವನ್ನು ರೆಕಾರ್ಡ್ ಮಾಡಲು ಮೊಬೈಲ್‌ ಅನ್ನು ತೆಗೆದಾಗ, ಅವನು ಕಾರಿಗೆ ಹತ್ತಿ ಪರಾರಿಯಾಗಿದ್ದಾನೆ. ಈ ದುರ್ನಡತೆಯನ್ನು ಪರಿಶೀಲಿಸುವಂತೆ ಮುಂಬೈ ಪೊಲೀಸರನ್ನು ಒತ್ತಾಯಿಸಿ, ಕಾರು ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದಾರೆ. ಪೊಲೀಸರು ದೂರಿನ ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆಯೇ? ಎಂಬುದು ಇನ್ನು ತಿಳಿದುಬಂದಿಲ್ಲ.

ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಕೆಮ್ಮು ದೂರು

ರಸ್ತೆಗಳಲ್ಲಿ ಅನಗತ್ಯವಾಗಿ ವಾಹನ ಚಾಲಕರ ನಡುವಿನ ಇಂತಹ ವಿವಾದಗಳು ಆಗಾಗ ನಡಯುತ್ತಲೇ ಇರುತ್ತವೆ. ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇರುವ ಸಂದರ್ಭಗಳಲ್ಲಿ ಶಾಂತ ಮನಸ್ಸಿನಿಂದ ವಾಹನ ಚಾಲನೆ ಮಾಡುವುದು ತುಂಬಾ ಕಷ್ಟ. ವಾಹನ ಚಾಲಕರು ಉದ್ವಿಗ್ನರಾಗಲು ಮತ್ತು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಇದು ಒಂದು ಕಾರಣವಾಗಿದೆ.

ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಕೆಮ್ಮು ದೂರು

ಇತರೆ ವಾಹನ ಚಾಲಕರೊಂದಿಗೆ ಆಗಬಹುದಾದ ಕೆಲವು ತೊಂದರೆಗಳನ್ನು ತಪ್ಪಿಸಲು ಕೆಲವು ಮಾರ್ಗಗಳನ್ನು ಅನುಸರಿಸಬೇಕು. ಡ್ರೈವಿಂಗ್ ಯಾವಾಗಲೂ ನಿರಾಳವಾಗಿರಬೇಕು. ಸಾಧ್ಯವಾದಷ್ಟು ಶಾಂತ ರೀತಿಯಲ್ಲಿ ಇರಬೇಕು, ಸಂಗೀತ ಮತ್ತು ಎಸಿ ಆನ್ ಮಾಡಿಕೊಂಡರೆ ಸ್ವಲ್ಪ ನೆಮ್ಮದಿಯ ಡ್ರೈವಿಂಗ್‌ ಮಾಡಬಹುದು.

ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಕೆಮ್ಮು ದೂರು

ವಾಹನವನ್ನು ಓಡಿಸಲು ಕುಳಿತ ತಕ್ಷಣ ಯಾವಾಗಲೂ ನೆಮ್ಮದಿಯ ಮನಸ್ಸಿರಬೇಕು, ರಸ್ತೆಯಲ್ಲಿ ಇತರ ವಾಹನ ಚಾಲಕರಿಗೆ ಉದ್ವಿಗ್ನತೆಯನ್ನು ಪ್ರದರ್ಶಿಸಬಾರದು. ಅಲ್ಲದೆ ಸಂಚಾರ ನಿಯಮಗಳನ್ನು ಸರಿಯಾಗಿ ಅನುಸರಿಸಬೇಕು, ಇದು ಇತರ ವಾಹನ ಚಾಲಕರಿಗೆ ನಿಮ್ಮ ಮೇಲೆ ಕೋಪಗೊಳ್ಳದಿರಲು ಸಹಾಯ ಮಾಡುತ್ತದೆ.

ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಕೆಮ್ಮು ದೂರು

ಯಾವಾಗಲೂ ವೇಗದ ಮಿತಿಯನ್ನು ಅನುಸರಿಸಿ. ಅಗತ್ಯವಿದ್ದಾಗ ಇತರ ವಾಹನ ಚಾಲಕರಿಗೆ ಸಂಕೇತ ನೀಡಿ, ಉದಾಹರಣೆಗೆ ಎಡಕ್ಕೆ ತಿರುಗುವಾಗ ಎಡ ಸೂಚಕವನ್ನು ಆನ್ ಮಾಡಬೇಕು. ಬಹುತೇಕ ಮಂದಿ ಎಡಕ್ಕೆ ತಿರುಗುವಾಗ ಬಲಕ್ಕೆ ಇಂಡಿಕೇಟರ್‌ ಆನ್ ಮಾಡುತ್ತಾರೆ. ಇದು ದೊಡ್ಡ ಅನಾಹುತಗಳಿಗೆ ಕಾರಣವಾಗಬಹುದು. ಅಲ್ಲದೆ ಹಿಂಬರುವವರ ಕೋಪಕ್ಕೆ ಕಾರಣವಾಗಬಹುದು.

ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಕೆಮ್ಮು ದೂರು

ಅಲ್ಲದೇ ಅನಗತ್ಯ ಸಮಸ್ಯೆಗಳು ಉದ್ಭವಿಸಬಹುದು. ಅದೇ ರೀತಿ, ನಿಮ್ಮ ವಾಹನದ ಹಿಂಭಾಗದ ನೋಟ ಕನ್ನಡಿಗಳನ್ನು ಸರಿಯಾಗಿ ಬಳಸಬೇಕು. ಕೆಲವೊಮ್ಮೆ ನೀವು ಸರಿಯಾಗಿದ್ದರೂ, ತಾಳ್ಮೆಯಿಂದಿದ್ದರೂ ಇತರ ವಾಹನ ಚಾಲಕರು ಜಗಳ ತೆಗೆಯಬಹುದು. ಇಂತಹವರನ್ನು ನಿರ್ಲಕ್ಷಿಸಿ ಅಲ್ಲಿಂದ ಹೊರಡುವುದು ಉತ್ತಮ.

ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್‌ ಕೆಮ್ಮು ದೂರು

ಇದು ನಿಮ್ಮ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ ಅನಗತ್ಯ ಸಮಯ ವ್ಯರ್ಥವಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಅನಗತ್ಯ ಜಗಳಗಳಿಂದ ಉದ್ವಿಗ್ನವಾದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಉದ್ವೇಗವನ್ನು ಕಡಿಮೆ ಮಾಡಲು ಮತ್ತು ತಕ್ಷಣವೇ ಸಮಾಧಾನಗೊಳ್ಳಲು ಕೆಲ ಮಾರ್ಗಗಳನ್ನು ಕಂಡುಕೊಳ್ಳುವುದು ಉತ್ತಮ.

Most Read Articles

Kannada
English summary
Actor kunal kemmu shares road rage incident
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X