Just In
- 48 min ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 54 min ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 2 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
- 2 hrs ago
ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಇಂದು ಬಿಡುಗಡೆ: ಹೇಗರಲಿವೆ ವಿನ್ಯಾಸ, ಬೆಲೆ, ವೈಶಿಷ್ಟ್ಯಗಳು!
Don't Miss!
- News
ಮನೆ ಬಾಡಿಗೆ ಮೇಲೂ ಶೇಕಡಾ 18ರಷ್ಟು ಜಿಎಸ್ಟಿ ಕಟ್ಟಬೇಕಾ?: ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
- Technology
ಸದ್ದಿಲ್ಲದೇ ಮತ್ತೆ ಹೊಸ ಪ್ಲ್ಯಾನ್ ಪರಿಚಯಿಸಿದ 'ಜಿಯೋ'!..180GB ಡೇಟಾ ಪಕ್ಕಾ!
- Movies
ನೇರ ನುಡಿಯ ಸ್ವಾಭಿಮಾನಿ ಗಾಯಕ ಶಿವಮೊಗ್ಗ ಸುಬ್ಬಣ್ಣ: ಗಾಯಕಿ ಬಿ. ಕೆ ಸುಮಿತ್ರಾ ಸಂದರ್ಶನ
- Finance
ತೆರಿಗೆ ದರ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಪ್ರಯೋಜನ ನೋಡಿ!
- Sports
Asia Cup 2022: ರಾಹುಲ್ ಅಲ್ಲ, ಈತ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿ; ಪಾಕ್ ಕ್ರಿಕೆಟಿಗ
- Travel
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
- Lifestyle
ಹಣ್ಣು ಹೇಗೆ ಸೇವಿಸಬೇಕು? : ಹಣ್ಣು ಸೇವನೆ ವೇಳೆ ಈ ರೀತಿಯ ಮಿಸ್ಟೇಕ್ ನೀವು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಿ
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಅಪಘಾತದಲ್ಲಿ ತೆರೆದುಕೊಳ್ಳದ ಏರ್‌ಬ್ಯಾಗ್: ಹ್ಯುಂಡೈನಿಂದ ರೂ.1.25 ಲಕ್ಷ ಪರಿಹಾರ ಪಡೆದ ಕಾರ್ ಮಾಲೀಕ!
ಅಪಘಾತಗಳ ಸಂದರ್ಭದಲ್ಲಿ ಗರಿಷ್ಠ ಸುರಕ್ಷತೆ ಸಿಗಲಿ ಎನ್ನುವ ಉದ್ದೇಶದಿಂದ ಬಹುತೇಕ ಕಾರು ಮಾಲೀಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಉತ್ತಮ ಸುರಕ್ಷಾ ಸೌಲಭ್ಯವಿರುವ ಕಾರುಗಳನ್ನೇ ಖರೀದಿ ಮಾಡಿರುತ್ತಾರೆ. ಆದರೆ ಹ್ಯುಂಡೈನಿಂದ ಖರೀದಿಸಿದ್ದ ಕಾರೊಂದರಲ್ಲಿ ಅಪಘಾತವಾದರೂ ಏರ್‌ಬ್ಯಾಗ್ ತೆರೆದುಕೊಂಡಿಲ್ಲ. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದ ಗ್ರಾಹಕನಿಗೆ ಕೊನೆಗೂ ಜಯ ಸಿಕ್ಕಿದೆ.

ಭಾರತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಕಾರು ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ, ಕಳೆದ ತಿಂಗಳು ದೇಶೀಯ ಮಾರಾಟದಲ್ಲಿ 50,500 ಯುನಿಟ್‌ಗಳನ್ನು ನೋಂದಾಯಿಸಿದೆ. ರಫ್ತು ಸೇರಿದಂತೆ, ಹುಂಡೈ ಇಂಡಿಯಾ 63,851 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಶೇ5.98 ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ ಪ್ರಯಾಣಿಕರಿಗೆ ಸುರಕ್ಷತೆ ನೀಡುವಲ್ಲಿ ಮಾತ್ರ ವಿಫಲವಾಗಿದೆ.

ಅಪಘಾತವಾದರೂ ಏರ್‌ಬ್ಯಾಗ್‌ಗಳು ತೆರದುಕೊಂಡಿಲ್ಲವೆಂದು ಆರೋಪಿಸಿ ಗುಜರಾತ್‌ನ ಹ್ಯುಂಡೈ ಕಾರಿನ ಮಾಲೀಕರೊಬ್ಬರು ಗುಜರಾತ್ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಕಾರು ಮಾಲೀಕನಿಗೆ ರೂ. 1.25 ಲಕ್ಷ ಪರಿಹಾರ ನೀಡುವಂತೆ ಹ್ಯುಂಡೈ ಇಂಡಿಯಾಗೆ ಆದೇಶಿಸಿದೆ.

ಈ ಆದೇಶದಂತೆ ಹ್ಯುಂಡೈ ಇಂಡಿಯಾ ಕಂಪನಿಯು ರೂ. 1 ಲಕ್ಷ ಪರಿಹಾರ ಮತ್ತು ರೂ. 25,000 ಕಿರುಕುಳದ ಸಂಬಂಧ ನೀಡಬೇಕಾಗಿದೆ. ಇದನ್ನು ಹ್ಯುಂಡೈನ ಸೇವೆಯಲ್ಲಿನ ಕೊರತೆ ಎಂದು ಪರಿಗಣಿಸಿದ್ದ ಜಿಲ್ಲಾ ಆಯೋಗವು ರೂ. 2 ಲಕ್ಷ ಪರಿಹಾರ ಮತ್ತು ರೂ. 50,000 ಕಾನೂನು ವೆಚ್ಚಕ್ಕಾಗಿ ಆದೇಶಿಸಿತ್ತು. ಆದರೆ ರಾಜ್ಯ ಆಯೋಗವು ಇದೀಗ ಅದನ್ನು ಅರ್ಧಕ್ಕೆ ಇಳಿಸಿದೆ.

ಇಂತಹ ಹಲವು ಪ್ರಕರಣಗಳು ದಶಕಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಪ್ರಕರಣ ಗಮನಾರ್ಹವಾಗಿ ಬೇಗ ಪರಿಹಾರವಾಗಿದೆ. ರೂ. 1.25 ಲಕ್ಷ ಪರಿಹಾರ ಮೊತ್ತವನ್ನು ಇತ್ಯರ್ಥ ಪಡಿಸಲು ಕೇವಲ 11 ವರ್ಷ ತೆಗೆದುಕೊಂಡಿದೆ.

ಏನಿದು ಪ್ರಕರಣ
ಗುಜರಾತ್‌ನ ಸಬರಮತಿ ನಿವಾಸಿ ಅಭಯ್ ಕುಮಾರ್ ಜೈನ್ ಎಂಬುವರು 2010 ರಲ್ಲಿ ಹ್ಯುಂಡೈ ಹ್ಯಾಚ್‌ಬ್ಯಾಕ್‌ವೊಂದನ್ನು ಖರೀದಿಸಿದ್ದರು. ಈ ಕಾರಿನಲ್ಲಿ 2011 ರಲ್ಲಿ ಅವರು ಜುಂಡಾಲ್ ಕಡೆಗೆ ಕಾರಿನಲ್ಲಿ ಹೊರಟಿದ್ದಾಗ ಕಾರು ಬಂಡೆಗೆ ಡಿಕ್ಕಿ ಹೊಡೆದಿತ್ತು. ಚಾಲಕ ಸೇರಿದಂತೆ ನಾಲ್ವರು ಪ್ರಯಾಣಿಕರು ಬದುಕುಳಿದಿದ್ದರಾದರೂ ಕಾರು ಆಮೆಯಂತೆ ಉರುಳಿಬಿದ್ದು, ಬಹುತೇಕ ಜಖಂಗೊಂಡಿತ್ತು.

ಜೈನ್ ಧ್ವಂಸವಾದ ಕಾರಿನಿಂದಾಗಿ ವಿಮಾ ಕಂಪನಿಯಿಂದ ಐಡಿವಿಯನ್ನು ರೂ. 2.75 ಲಕ್ಷ ಪಡೆದಕೊಂಡಿದ್ದರು. ಉಳಿದಂತೆ ಏರ್‌ಬ್ಯಾಗ್‌ಗಳು ಕಾರಿನಲ್ಲಿ ಏಕೆ ತೆರುದುಕೊಂಡಿಲ್ಲ ಎಂಬುದನ್ನು ಪರಿಗಣಿಸಿದ ಜೈನ್ ಕೋರ್ಟ್ ಮೆಟ್ಟಿಲೇರಿದ್ದರು. ಆ ವೇಳೆ ಏರ್‌ಬ್ಯಾಗ್‌ಗಳು ದೋಷಪೂರಿತವಾಗಿವೆ ಮತ್ತು ಇದು ಉತ್ಪಾದನಾ ದೋಷವಾಗಿದೆ ಎಂದು ವಿಮಾ ಸರ್ವೇಯರ್ ಹೇಳಿದ್ದರು.

ಜೈನ್ ಅವರು ಅಹಮದಾಬಾದ್ ಜಿಲ್ಲಾ ಗ್ರಾಹಕ ಪರಿಹಾರ ಆಯೋಗದಲ್ಲಿ ಡೀಲರ್ ವಿರುದ್ಧ ಮೊಕದ್ದಮೆ ಹೂಡಿದಾಗ, ಹುಂಡೈ ಪ್ರತಿನಿಧಿಗಳು ಗೈರುಹಾಜರಾಗಿದ್ದರು. ನಂತರ ಇದಕ್ಕೆ ವ್ಯತಿರಿಕ್ತವಾಗಿ, ಏರ್‌ಬ್ಯಾಗ್‌ಗಳು ದೋಷಪೂರಿತವಾಗಿವೆ ಎಂದು ಘೋಷಿಸಲು ಸರ್ವೇಯರ್ ಯೋಗ್ಯರಲ್ಲ ಎಂದು ಡೀಲರ್‌ಶಿಪ್‌ನವರು ವಾದಿಸಿದ್ದರು. ಅಲ್ಲದೆ, ಸೀಟ್‌ಬೆಲ್ಟ್‌ಗಳನ್ನು ಸರಿಯಾಗಿ ಹಾಕಿಕೊಳ್ಳದಿದ್ದರೂ ಏರ್‌ಬ್ಯಾಗ್‌ಗಳು ತೆರೆದುಕೊಳ್ಳುವುದಿಲ್ಲ ಎಂದು ವಾದಿಸಿದ್ದರು.

ಈ ಎಲ್ಲಾ ವಾದ-ವಿವಾದಗಳ ಬಳಿಕ ಅಭಯ್ ಕುಮಾರ್ ಜೈನ್ ದೈತ್ಯ ಹ್ಯುಂಡೈ ಕಂಪನಿ ವಿರುದ್ಧ ತಮ್ಮ ಪ್ರಕರಣದಲ್ಲಿ ಜಯ ಸಾಧಿಸಿದ್ದಾರೆ. ಹ್ಯುಂಡೈ ಕಂಪನಿಯ ಹಲವು ಕಾರುಗಳ ವಿರುದ್ಧ ಈ ಹಿಂದೆಯೂ ಇಂತಹ ಹಲವು ಪ್ರಕರಣಗಳನ್ನು ನೋಡಬಹುದು.

ಸೀಟ್‌ಬೆಲ್ಟ್‌ಗಳನ್ನು ಹಾಕದಿದ್ದರೆ ಏರ್‌ಬ್ಯಾಗ್‌ಗಳು ತೆರೆದುಕೊಳ್ಳುವುದಿಲ್ಲವೇ?
ಹೆಚ್ಚಿನ ಏರ್‌ಬ್ಯಾಗ್‌ಗಳು ಗ್ವಾನಿಡಿನ್ ನೈಟ್ರೇಟ್ ಎಂಬ ಉರಿಯುವ ಸಂಯುಕ್ತವನ್ನು ಹೊಂದಿರುತ್ತವೆ. ಇವು ಡಿಕ್ಕಿಯಾಗುತ್ತಿದ್ದಂತೆ 2 ಮಿಲಿಸೆಕೆಂಡ್‌ಗಳಲ್ಲಿ ಸಕ್ರಿಯಗೊಳ್ಳುತ್ತವೆ, ಇದು ಸಾರಜನಕ ಅನಿಲಗಳನ್ನು ವಿಸ್ತರಿಸುವುದರಿಂದ ಏರ್‌ಬ್ಯಾಗ್‌ಗಳನ್ನು 20 ರಿಂದ 30 ಮಿಲಿಸೆಕೆಂಡ್‌ಗಳಲ್ಲಿ ಉಬ್ಬಿಸುತ್ತದೆ. ಸಾರಜನಕ ಅನಿಲಗಳು 230 kmph ವೇಗದಲ್ಲಿ ವಿಸ್ತರಿಸುತ್ತವೆ.

ಕೆಲವು ಪ್ರಕರಣಗಳಲ್ಲಿ ಸೀಟ್ ಬೆಲ್ಟ್ ಧರಿಸದೇ ಇದ್ದಾಗ ಮತ್ತು ಕಾರಿನ ಮುಂಭಾದಲ್ಲಿ ಅತಿಯಾಗಿ ಮಾಡಿಫೈ ಮಾಡಿಸುವುದು ಕೂಡಾ ಅಪಘಾತಗಳ ಸಂದರ್ಭದಲ್ಲಿ ಏರ್‌ಬ್ಯಾಗ್ ಸೆನ್ಸಾರ್ ಕಾರ್ಯನಿರ್ವಹಣೆಗೆ ತೊಂದರೆ ಉಂಟು ಮಾಡುವ ಸಾಧ್ಯತೆಗಳಿರುತ್ತವೆ.