ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಆಡಿ ಇಂಡಿಯಾ ಕಂಪನಿಯು ಮುಂಬರುವ ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ತನ್ನ ಫ್ಲ್ಯಾಗ್‌ಶಿಪ್ ಎಸ್‌ಯುವಿಯಾದ ಕ್ಯೂ7 ಲಿಮಿಟೆಡ್ ಎಡಿಷನ್ ಪರಿಚಯಿಸಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 88.08 ಲಕ್ಷ ಬೆಲೆ ಹೊಂದಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಮುಂಬರುವ ಹಬ್ಬದ ಋತುಗಳ ವಿಶೇಷತೆಗಾಗಿ ವಿವಿಧ ವಾಹನ ಕಂಪನಿಗಳು ತನ್ನ ಪ್ರಮುಖ ವಾಹನಗಳಲ್ಲಿ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೀಗ ಆಡಿ ಕಂಪನಿಯು ಸಹ ಕ್ಯೂ7 ಎಸ್‌ಯುವಿ ವಿಶೇಷ ಆವೃತ್ತಿಯನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆ ಮಾಡಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಲಿಮಿಟೆಡ್ ಎಡಿಷನ್ ಮಾದರಿಯಾಗಿರುವುದರಿಂದ ಹೊಸ ಕಾರು ಕೇವಲ 50 ಯುನಿಟ್ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸ ಮಾದರಿಗಾಗಿ ಆಡಿ ಕಂಪನಿಯು ವಿಶೇಷವಾದ ಬ್ಯಾರಿಕ್ ಬ್ರೌನ್ ಎಂಬ ಬಾಹ್ಯ ಬಣ್ಣವನ್ನು ನೀಡಿದ್ದು, ವಿಶೇಷವಾದ ಬಾಹ್ಯ ಬಣ್ಣಗಳ ಹೊರತಾಗಿ ಸೀಮಿತ ಅವಧಿಯ ಮಾದರಿಗಾಗಿ ಐಷಾರಾಮಿ ಲುಕ್ ಹೆಚ್ಚಿಸಲು ರನ್ನಿಂಗ್ ಬೋರ್ಡ್‌ಗಳು ಮತ್ತು ಕ್ವಾಟ್ರೊ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸದಾಗಿ ಬಿಡುಗಡೆಯಾದ ಕ್ಯೂ7 ಸೀಮಿತ ಆವೃತ್ತಿಯು ಟಾಪ್-ಸ್ಪೆಕ್ ಟೆಕ್ನಾಲಜಿ ರೂಪಾಂತರವನ್ನು ಆಧರಿಸಿದ್ದು, ಹಬ್ಬದ ಋತುಗಳಲ್ಲಿ ಗ್ರಾಹಕರಿಗೆ ವಿಭಿನ್ನ ಆಯ್ಕೆಗಳನ್ನು ನೀಡುವ ಉದ್ದೇಶದಿಂದ ಹೊಸ ಮಾದರಿಯನ್ನು ಪರಿಚಯಿಸಿರುವುದಾಗಿ ಕಂಪನಿಯು ಹೇಳಿಕೊಂಡಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ವಿಶೇಷ ಮಾದರಿಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಾಗಿರುವ ಕೆಲವು ಹೊಸ ಫೀಚರ್ಸ್‌ಗಳೊಂದಿಗೆ ಸ್ಟ್ಯಾಂಡರ್ಡ್ ಮಾದರಿಗಳಲ್ಲಿನ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಎಂಜಿನ್‌ ಆಯ್ಕೆ ಈ ಹಿಂದಿನಂತೆಯೇ ಮುಂದುವರಿಸಲಾಗಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಆಡಿ ಕ್ಯೂ7 ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಎನ್ನುವ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ನಾಕ್ಡ್ ಡೌನ್ (CKD) ಆಮದು ನೀತಿಯಡಿ ಭಾರತಕ್ಕೆ ಪ್ರವೇಶಿಸಿ ಔರಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಸ್ಥಾವರದಲ್ಲಿ ಮರುಜೋಡಣೆಗೊಳ್ಳುತ್ತದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸ ಎಸ್‌ಯುವಿಯು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ನವೀಕರಿಸಿದ ಈ ಹೊಸ ಎಸ್‍ಯುವಿಯಲ್ಲಿ 3.0-ಲೀಟರ್, ಟ್ವಿನ್-ಟರ್ಬೊ ಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸ ಎಂಜಿನ್ ಮಾದರಿಯು 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಣೆಯೊಂದಿಗೆ 335 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಪಡೆಯುತ್ತದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಮೈಲ್ಡ್-ಹೈಬ್ರಿಡ್ ಸಿಸ್ಟಂನೊಂದಿಗೆ ಇದು 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರ್, ಲೀಥಿಯಂ-ಐಯಾನ್ ಬ್ಯಾಟರಿ ಮತ್ತು ಬೆಲ್ಟ್ ಆಲ್ಟರ್ನೇಟರ್ ಸ್ಟಾರ್ಟರ್ (BAS) ಅನ್ನು ಒಳಗೊಂಡಿದ್ದು, ಕ್ವಾಟ್ರೊ ಆಲ್-ವೀಲ್-ಡ್ರೈವ್ ಸಿಸ್ಟಂನೊಂದಿಗೆ ಇದು ಪ್ರತಿ ಗಂಟೆಗೆ ಇದು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಕ್ಯೂ7 ಎಸ್‌ಯುವಿಯ ಎಂಟ್ರಿ ಲೆವೆಲ್ ಪ್ರೀಮಿಯಂ ಪ್ಲಸ್ ರೂಪಾಂತರವು 19-ಇಂಚಿನ ಅಲಾಯ್ ವ್ಹೀಲ್ ಗಳು, ಎಂಟು ಏರ್‌ಬ್ಯಾಗ್‌ಗಳು, ಪನರೋಮಿಕ್ ಸನ್‌ರೂಫ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಅಡಾಪ್ಟಿವ್ ಏರ್ ಸಸ್ಪೆನ್ಷನ್, ಆಂಬಿಯೆಂಟ್ ಲೈಟಿಂಗ್ ಮತ್ತು ಎಲೆಕ್ಟ್ರಿಕ್ ಬಟನ್ ಮೂಲಕ ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಇದರೊಂದಿಗೆ ಮುಂಭಾಗದ ಸೀಟುಗಳಿಗೆ ಲಂಬೂರ್ ಸಂಪೂರ್ಟ್, ಪಾರ್ಕಿಂಗ್ ಅಸಿಸ್ಟ್ ಜೊತೆಗೆ ಕ್ರೂಸ್ ಕಂಟ್ರೋಲ್, ಫ್ಹೋರ್ ಜೋನ್ ಕಂಟ್ರೋಲ್, ಪವರ್-ಹೊಂದಾಣಿಕೆ ಮುಂಭಾಗದ ಸೀಟುಗಳು ಮತ್ತು ಡ್ರೈವರ್ ಸೀಟ್‌ಗಾಗಿ ಮೆಮೊರಿ ಫಂಕ್ಷನ್, ವರ್ಚುವಲ್ ಕಾಕ್‌ಪಿಟ್ ಮತ್ತು ಲೇನ್ ಡಿಪರ್ಚರ್ ಎಕ್ಸಿಟ್ ಅನ್ನು ಹೊಂದಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಇದರೊಂದಿಗೆ ಡ್ಯುಯಲ್-ಸ್ಕ್ರೀನ್ ಎಂಎಂಐ ಪ್ಲಸ್, ಆಡಿ ಡ್ರೈವ್ ಆಯ್ಕೆ, ಆಡಿ ಸೌಂಡ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಆಡಿ ಫೋನ್ ಬಾಕ್ಸ್ ಮತ್ತು ಆಡಿ ಸ್ಮಾರ್ಟ್‌ಫೋನ್ ಇಂಟರ್ಫೇಸ್ ಅನ್ನು ಒಳಗೊಂಡಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಜೊತೆಗೆ ಆಡಿ ಕ್ಯೂ7 ಫೇಸ್‌ಲಿಫ್ಟ್ ಟೆಕ್ನಾಲಜಿ ರೂಪಾಂತರವು ಅಡಾಪ್ಟಿವ್ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಪಡೆದುಕೊಂಡಿದ್ದು, ಸೆನ್ಸಾರ್-ಕಂಟ್ರೋಲ್ಡ್ ಲಗೇಜ್ ಕಂಪಾರ್ಟ್‌ಮೆಂಟ್ ರೀಲಿಸ್ ಕಂಫರ್ಟ್ ಕೀ, ಹಿಂಭಾಗದಲ್ಲಿ ಚಾರ್ಜಿಂಗ್ ಫಂಕ್ಷನ್ ನೊಂದಿಗೆ ಯುಎಸ್‌ಬಿ ಪೋರ್ಟ್‌ಗಳು, ಆಡಿ ಪಾರ್ಕ್ ಅಸಿಸ್ಟ್ ಜೊತೆಗೆ 3ಡಿ ಸರೌಂಡ್ ಕ್ಯಾಮೆರಾಗಳು, 730 ವೊಲ್ಟ್ ಬ್ಯಾಂಗ್ ಮತ್ತು ಸರೌಂಡ್ ಸೌಂಡ್ ಸಿಸ್ಟಂ ಮತ್ತು ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಕ್ಯೂ7 ಎಸ್‍ಯುವಿಯ ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ ಹೊಸ ಎಸ್‍ಯುವಿಯಲ್ಲಿ ದೊಡ್ಡದಾದ ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಜೋಡಿಸಲಾಗಿದ್ದು, ನೇರವಾದ ಸ್ಲ್ಯಾಟ್‌ಗಳು, ಸ್ಪೋರ್ಟಿಯರ್ ಬಂಪರ್, ಎರಡು ಭಾಗಗಳಲ್ಲಿ ಸೈಡ್ ಏರ್ ಇನ್‌ಲೈಟ್‌ಗಳು, ದಪ್ಪದಾದ ಕ್ಲಾಡಿಂಗ್ ಮತ್ತು ಎಲ್-ಆಕಾರದ ಏರ್ ಸ್ಪ್ಲಿಟರ್ ಅನ್ನು ಹೊಂದಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಆಡಿ ಕ್ಯೂ7 ಲಿಮಿಟೆಡ್ ಎಡಿಷನ್ ಬಿಡುಗಡೆ

ಹಾಗೆಯೇ ಲೇಸರ್ ಲೈಟ್ ನೊಂದಿಗೆ ಹೆಚ್‌ಡಿ ಮ್ಯಾಟ್ರಿಕ್ಸ್ ಎಲ್ಇಡಿ, 19-ಇಂಚಿನ ಅಲಾಯ್ ವ್ಹೀಲ್, ಕ್ರೋಮ್ ಸ್ಟ್ರಿಪ್ ಮೂಲಕ ಕನೆಕ್ಟ್ ಆಗಿರುವ ಹೊಸ ಟೈಲ್‌ಲ್ಯಾಂಪ್‌ಗಳು, ನವೀಕರಿಸಿದ ರಿಯರ್ ಬಂಪರ್ ಒಳಗೊಂಡಿದ್ದು, ಹೊಸ ಎಸ್‍ಯುವಿಯ ಹಿಂದಿನ ಮಾದರಿಗೆ ಹೋಲಿಸಿದರೆ 11 ಎಂಎಂ ಹೆಚ್ಚುವರಿ ಸ್ಥಳಾವಕಾಶದೊಂದಿಗೆ 5,063 ಎಂಎಂ ಉದ್ದ ಹೊಂದಿದೆ.

More from DriveSpark

Article Published On: Saturday, September 10, 2022, 19:41 [IST]
English summary
Audi q7 limited edition launched in india at rs 88 08 lakh
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+