2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ರೂ.10 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭ

ಜರ್ಮನ್ ಐಷಾರಾಮಿ ಕಾರು ತಯಾರಕರಾದ ಆಡಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ 2022ರ ಆಡಿ ಎ8 ಎಲ್ ಸೆಡಾನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಈ ವರ್ಷ ಬಿಡುಗಡೆಯಾಗುವ ಬ್ರ್ಯಾಂಡ್‌ನ ಎರಡನೇ ಮಾದರಿಯಾಗಿದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಕಂಪನಿಯು ಅಧಿಕೃತವಾಗಿ 2022ರ ಆಡಿ ಎ8 ಎಲ್ ಸೆಡಾನ್ ಖರೀದಿಗಾಗಿ ಬುಕ್ಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಆಸಕ್ತ ಖರೀದಿದಾರರು ರೂ. 10 ಲಕ್ಷ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಈ ಐಷಾರಾಮಿ ಸೆಡಾನ್ ಅನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ನಲ್ಲಿ ಮುಂಗಡವಾಗಿ ಬುಕ್ ಮಾಡಬಹುದು. 2022ರ ಆಡಿ ಎ8 ಎಲ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಆಡಿ ಇಂಡಿಯಾದ ಮುಖ್ಯಸ್ಥರಾದ ಬಲ್ಬೀರ್ ಸಿಂಗ್ ಧಿಲ್ಲೋನ್ ಅವರು ಮಾತನಾಡಿ, "ಇಂದು, ನಾವು ನಮ್ಮ ಪ್ರಮುಖ ಸೆಡಾನ್ - ಹೊಸ ಆಡಿ ಎ8 ಎಲ್ ಗಾಗಿ ಬುಕಿಂಗ್ ಅನ್ನು ತೆರೆಯುತ್ತೇವೆ. ಈ ಸೆಡಾನ್ ಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ. ಭಾರತದಲ್ಲಿ ಮತ್ತು ಈ ಸುಂದರವಾದ ಸೆಡಾನ್ ತನ್ನ ಬಲವಾದ ಕಾರ್ಯಕ್ಷಮತೆಯನ್ನು ಮುಂದುವರಿಸುತ್ತದೆ ಎಂದು ನಾವು ನಂಬುತ್ತೇವೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಆಡಿ ಎ8 ಎಲ್ ಜೊತೆಗೆ, ನಾವು ನಮ್ಮ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಪ್ರಮುಖ ಕಾರುಗಳ ಮೇಲೆ ನಮ್ಮ ಗಮನವನ್ನು ಮುಂದುವರಿಸುತ್ತಿದ್ದೇವೆ, ಏಕೆಂದರೆ ನಾವು ಉತ್ತಮ ಬೇಡಿಕೆಯನ್ನು ವೀಕ್ಷಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

2022ರ ಆಡಿ ಎ8 ಎಲ್ ಸೆಡಾನ್ ದೊಡ್ಡದಾದ ಗ್ರಿಲ್ ಮತ್ತು ಹೆಚ್ಚು ಅಗ್ರೇಸಿವ್ ಮೆಶ್ ಮಾದರಿ ಮತ್ತು ದಪ್ಪವಾದ ಬಂಪರ್ ಅನ್ನು ಒಳಗೊಂಡಿರುವ ಸ್ಪೋರ್ಟಿ ನಿಲುವುಗಳೊಂದಿಗೆ ಬರುತ್ತದೆ. ಗ್ರಿಲ್ ದಪ್ಪ ಕ್ರೋಮ್‌ನಿಂದ ಸುತ್ತುವರಿದಿದೆ ಮತ್ತು ಕ್ರೋಮ್ ಮೆಶ್ ಮಾದರಿಯಲ್ಲಿಯೂ ನೀಡಲಾಗುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಹೊಸ ಕಾರು ದಪ್ಪ ಕ್ರೋಮ್ ಸ್ಟ್ರಿಪ್ ಇದೆ, ಅದು ಫಾಗ್ ಲ್ಯಾಂಪ್ ಹೌಸಿಂಗ್ ಅನ್ನು ಸುತ್ತುವರೆದಿದೆ ಮತ್ತು ಮುಂಭಾಗದ ಬಂಪರ್‌ನ ಅಗಲದಲ್ಲಿ ಚಲಿಸುತ್ತದೆ. ವಾಹನವು ದೊಡ್ಡದಾದ ಡಿಜಿಟಲ್ ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ OLED ಟೈಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಹೊಸ ಆಡಿ ಎ8 ಎಲ್ ಕಾರು ಒಳಾಂಗಣವು ಗಮನಾರ್ಹ ಬದಲಾವಣೆಗಳನ್ನು ಸ್ವೀಕರಿಸುವುದಿಲ್ಲ. ಆದರೆ ಆಯ್ಕೆಯ 10-ಇಂಚಿನ ಟಚ್‌ಸ್ಕ್ರೀನ್‌ನ ಐಚ್ಛಿಕ ಸೆಟ್ ಅನ್ನು ಪಡೆಯುತ್ತದೆ. ಸೀಟ್ ರಿಕ್ಲೈನ್ ಮತ್ತು ಇತರ ಕಾರ್ಯಗಳನ್ನು ನಿಯಂತ್ರಿಸಲು ಸೆಂಟರ್ ಆರ್ಮ್‌ರೆಸ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಗಾತ್ರದ ಹಿಂಭಾಗದ ಟಚ್‌ಸ್ಕ್ರೀನ್ ರಿಮೋಟ್ ಇದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಸಂಗೀತ ಪ್ರಿಯರಿಗಾಗಿ, ಐಷಾರಾಮಿ ಸೆಡಾನ್ 23-ಸ್ಪೀಕರ್ ಬ್ಯಾಂಗ್ ಮತ್ತು ಒಲುಫ್ಸೆನ್ ಸೌಂಡ್ ಸಿಸ್ಟಂ ಅನ್ನು ಹೊಂದಿದೆ. ಇದು ನಾಲ್ಕು-ಝೋನ್ ಕ್ಲೈಮೇಂಟ್ ಕಂಟ್ರೋಲ್ ಸಿಸ್ಟಂ, ಮ್ಯಾಟ್ರಿಕ್ಸ್ LED ಲ್ಯಾಂಪ್ ಮತ್ತು ಕನೆಕ್ಟಿವಿಟಿ ಕಾರ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ನೀಡುವುದನ್ನು ಮುಂದುವರಿಸುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಆಡಿ ಎ8 ಎಲ್ ಕಾರಿನಲ್ಲಿ 3.0-ಲೀಟರ್ TFSI ಎಂಜಿನ್‌ನಿಂದ 48V ಸೌಮ್ಯ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಚಾಲಿತವಾಗುತ್ತದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 540 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಐಕಾನಿಕ್ ಆಲ್-ವೀಲ್ ಡ್ರೈವ್ ಸಿಸ್ಟಮ್ ಮತ್ತು ಪ್ರಿಡಿಕ್ಟಿವ್ ಏರ್ ಸಸ್ಪೆನ್ಷನ್ ಅನ್ನು ಸಹ ಪಡೆಯುತ್ತದೆ.ರಿಕ್ಲೈನರ್, ಫೂಟ್ ಮಸಾಜರ್ ಮತ್ತು ಹಲವಾರು ಇತರ ಸ್ಟ್ಯಾಂಡ್-ಔಟ್ ವೈಶಿಷ್ಟ್ಯಗಳೊಂದಿಗೆ ಹಿಂಭಾಗದ ವಿಶ್ರಾಂತಿ ಪ್ಯಾಕೇಜ್ ಸೇರಿದಂತೆ ಹಲವಾರು ಗ್ರಾಹಕೀಕರಣ ಪ್ಯಾಕೇಜ್‌ಗಳನ್ನು ಆಡಿ ನೀಡುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಅರ್ಬನ್‌ಸ್ಪಿಯರ್ ಕಾನ್ಸೆಪ್ಟ್ ಕಾರ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಆಡಿ ಅರ್ಬನ್‌ಸ್ಪಿಯರ್ ಮೂಲಭೂತವಾಗಿ ಆಟೋನೊಮಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾನ್ಸೆಪ್ಟ್ ಆಗಿದೆ. ಹೊಸ ಆಡಿ ಅರ್ಬನ್‌ಸ್ಪಿಯರ್ ಕಾನ್ಸೆಪ್ಟ್, ಸ್ಕೈಸ್ಪಿಯರ್ ಕೂಪ್ ಮತ್ತು ಗ್ರ್ಯಾಂಡ್‌ಸ್ಪಿಯರ್ ಸೆಡಾನ್ ಕಾನ್ಸೆಪ್ಟ್ ಸರಣಿಯನ್ನು ಸೇರುತ್ತದೆ. ಭವಿಷ್ಯದಲ್ಲಿ ಆಡಿ ಕಂಪನಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಕಾನ್ಸೆಪ್ಟ್ ಮಾದರಿಯಿಂದ ಉತ್ತರ ಸಿಗುತ್ತದೆ. ವಿನ್ಯಾಸ ಭಾಷೆಯು ಯಾವಾಗಲೂ 'ಭವಿಷ್ಯದ ಪ್ರಗತಿಶೀಲ ಪ್ರೀಮಿಯಂ ಚಲನಶೀಲತೆಯನ್ನು ವ್ಯಾಖ್ಯಾನಿಸುತ್ತದೆ' ಎಂದು ಜರ್ಮನ್ ಬ್ರ್ಯಾಂಡ್ ಹೇಳುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಬೀಜಿಂಗ್ ಆಟೋ ಶೋದಲ್ಲಿ ಆಡಿ ಅರ್ಬನ್‌ಸ್ಪಿಯರ್ ತನ್ನ ಚೊಚ್ಚಲ ಪ್ರದರ್ಶನವನ್ನು ರದ್ದುಗೊಳಿಸಿತು. ಆಡಿ ಅರ್ಬನ್‌ಸ್ಪಿಯರ್ ಕಾನ್ಸೆಪ್ಟ್ 5500 ಎಂಎಂ ಉದ್ದ ಮತ್ತು 1780 ಎಂಎಂ ಎತ್ತರವನ್ನು ಹೊಂದಿದೆ, ಇನ್ನು ಇದು 2000 ಮೀಟರ್‌ಗಿಂತಲೂ ಹೆಚ್ಚು ಅಗಲವಾಗಿರುತ್ತದೆ. ಮುಂಭಾಗದ ತುದಿಯು ದೊಡ್ಡ ಸಿಂಗಲ್‌ಫ್ರೇಮ್ ಗ್ರಿಲ್‌ನಿಂದ ಪ್ರಾಬಲ್ಯ ಹೊಂದಿದೆ, ಅದರ ಹಿಂದೆ ಡಿಜಿಟಲ್ ಲೈಟ್ ಹೊಂದಿದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ

ಸಿಂಗಲ್ಫ್ರೇಮ್ನ ಮೇಲಿನ ಮತ್ತು ಕೆಳಗಿನ ಅಂಚುಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇನ್ನು ಲೈಟಿಂಗ್ ಎಲ್ಇಡಿಗಳಿಂದ ಲಂಬ ಸಂಪರ್ಕಗಳನ್ನು ರಚಿಸಲಾಗಿದೆ. ಸಿಂಗಲ್‌ಫ್ರೇಮ್‌ನ ಸಂಪೂರ್ಣ ಮೇಲ್ಮೈ ಒಂದು ಹಂತ ಅಥವಾ ಕ್ಯಾನ್ವಾಸ್ ಆಗುತ್ತದೆ. ಇದನ್ನು "ಆಡಿ ಲೈಟ್ ಕ್ಯಾನ್ವಾಸ್" ಎಂದು ಕರೆಯಲಾಗುತ್ತದೆ.

More from DriveSpark

Article Published On: Thursday, May 5, 2022, 17:30 [IST]
English summary
Audi started to accept the booking for new a8 l in india details
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+