ಆಟೋ ಎಕ್ಸ್‌ಪೋ 2023: ಟಾಪ್ 5 ಬಹುನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳಿವು...

ಬರೋಬ್ಬರಿ 3 ವರ್ಷಗಳ ಕಾಯುವಿಕೆಯ ನಂತರ, ಜನವರಿ ಎರಡನೇ ವಾರದಲ್ಲಿಅತಿದೊಡ್ಡ ಆಟೋ ಎಕ್ಸ್‌ಪೋ 2023 ದೆಹಲಿಯಲ್ಲಿ ಆರಂಭವಾಗಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಲವು ನೂತನ EV ವಾಹನಗಳನ್ನು ಪರಿಚಯಿಸಲು ಕಂಪನಿಗಳು ಸಿದ್ದತೆಯನ್ನು ನಡೆಸಿವೆ. ಆಟೋ ಎಕ್ಸ್‌ಪೋದಲ್ಲಿ ಕಾಣಿಸಿಕೊಳ್ಳಲಿರುವ ಬಹುನಿರೀಕ್ಷಿತ ಟಾಪ್ 5 ಎಲೆಕ್ಟ್ರಿಕ್ ಕಾರುಗಳು ಇಲ್ಲಿವೆ.

1) ಹ್ಯುಂಡೈ ಅಯೋನಿಕ್ 5 (EV):
ಭಾರತೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಹ್ಯುಂಡೈ ಕಂಪನಿ, ತನ್ನ ಪ್ರಮುಖ ಎಲೆಕ್ಟ್ರಿಕ್ ಕಾರು Ioniq 5 ಅನ್ನು ಅಧಿಕೃತವಾಗಿ ಆಟೋ ಎಕ್ಸ್‌ಪೋ 2023 ರಲ್ಲಿ ಪರಿಚಯಿಸಲಿದೆ. Ioniq 5 ಕಾರನ್ನು ಸ್ಥಳೀಯವಾಗಿ CKD ಕಿಟ್‌ಗಳನ್ನು ಬಳಸಿಕೊಂಡು ಚೆನ್ನೈ ಸಮೀಪವಿರುವ ಹುಂಡೈ ತಯಾರಿಕಾ ಘಟಕದಲ್ಲಿ ರೆಡಿ ಮಾಡಲಾಗಿದೆ. ಅಲ್ಲದೆ, ಡಿಸೆಂಬರ್ 20 ರಿಂದಲೇ ಈ ಹ್ಯುಂಡೈ ಅಯೋನಿಕ್ 5 ಕಾರಿಗೆ ಬುಕಿಂಗ್ ಆರಂಭವಾಗಿದೆ.

ಆಟೋ ಎಕ್ಸ್‌ಪೋ 2023: ಟಾಪ್ 5 ಬಹುನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳಿವು...

ಈ ಹೊಸ ಹ್ಯುಂಡೈ Ioniq 5 ದೊಡ್ಡ 72.6kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಬರೋಬ್ಬರಿ 460km ಮೈಲೇಜ್ ನೀಡುತ್ತದೆ. ಈ ಬ್ಯಾಟರಿ ಪ್ಯಾಕ್ ಅನ್ನು ಕಿಯಾ EV6ನಲ್ಲಿಯೂ ಸಹ ಕಾಣಬಹುದಾಗಿದೆ. Ioniq 5ನ ಬ್ಯಾಟರಿ ಪ್ಯಾಕ್ ಆವೃತ್ತಿಯನ್ನು ಸಿಂಗಲ್ ಮೋಟಾರ್ (RWD - 218bhp) ಮತ್ತು ಡ್ಯುಯಲ್-ಮೋಟರ್ (AWD - 302bhp) ಆಯ್ಕೆಗಳಲ್ಲಿ ನೀಡಲಾಗಿತ್ತದೆ. ಇಷ್ಟೇ ಅಲ್ಲದೆ, 383km ಮೈಲೇಜ್ ನೀಡಬಹುದಾದ ಸಣ್ಣ 58kWh ಬ್ಯಾಟರಿ ಪ್ಯಾಕ್ ಜೊತೆಗೆ ಕಡಿಮೆ ಪವರ್ ಮೋಟಾರ್‌ ಸಹ ಈ ಕಾರು ಹೊಂದಿರುವ ನಿರೀಕ್ಷೆಯಿದೆ.

2) ಹುಂಡೈ ಕೋನಾ (EV):
ಭಾರತೀಯ ಮಾರುಕಟ್ಟೆಯಲ್ಲಿ ಕೋನಾ ಎಲೆಕ್ಟ್ರಿಕ್ ಎಸ್‌ಯುವಿ ರೂಪದಲ್ಲಿ ಬರುತ್ತದೆ. ಫೇಸ್‌ಲಿಫ್ಟೆಡ್ ಕೋನಾ EV ಎಕ್ಸ್‌ಪೋದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ಭಾರತದಲ್ಲಿ ಪ್ರಸ್ತುತ ಮಾರಾಟದಲ್ಲಿರುವ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಕಾರಿನಲ್ಲಿ ಮುಂಭಾಗ ಮತ್ತು ಹಿಂಭಾಗದ ಭಾಗಗಳನ್ನು ನವೀಕರಿಸಲಾಗಿದೆ, ಹೊಸ ಅಲಾಯ್ ವೀಲ್ಸ್ ಮತ್ತು ಒಳಾಂಗಣವನ್ನು ಮತ್ತಷ್ಟು ನವೀಕರಣ ಮಾಡಲಾಗಿದೆ. ಜಾಗತಿಕವಾಗಿ, ಕೋನಾ EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದೆ ಎಂದು ಹೇಳಬಹುದು.

ಇದು 39.2kWh ಮತ್ತು 64kWh. ಲೋಯರ್-ಸ್ಪೆಕ್ 39.2kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು ಒಂದೇ 136hp ಮೋಟಾರ್‌ನೊಂದಿಗೆ ಇದ್ದು, 304km ಮೈಲೇಜ್ ನೀಡುತ್ತದೆ. ಕೋನಾ EVಯ ದೊಡ್ಡ 64kWh ಬ್ಯಾಟರಿ ಪ್ಯಾಕ್ ಆವೃತ್ತಿಯು 483km ಮೈಲೇಜ್ ನೀಡುತ್ತದೆ ಜೊತೆಗೆ 201 bhp ಪವರ್ ಅನ್ನು ಉತ್ಪಾದಿಸುತ್ತದೆ. ಭಾರತದ ಮಾರುಕಟ್ಟೆಯಲ್ಲಿ ಲೋಯರ್-ಸ್ಪೆಕ್ ಹೊಂದಿರುವ ಕೋನಾ ಬಿಡುಗಡೆಯಾಗುವ ನೀರಿಕ್ಷೆ ಇದ್ದು, ಇದರ ಬೆಲೆ ಪ್ರಸ್ತುತ ಇರುವ ಕೋನಾ ಬೆಲೆಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ (ರೂ.24 ಲಕ್ಷ ಎಕ್ಸ್ ಶೋ ರೂಂ) ಎಂದು ನಿರೀಕ್ಷಿಸಲಾಗಿದೆ.

3) ಟಾಟಾ ಆಲ್ಟ್ರೊಜ್ (EV):
ಆಟೋ ಎಕ್ಸ್‌ಪೋ 2023ರಲ್ಲಿ ಟಾಟಾ ಆಲ್ಟ್ರೊಜ್ EVಯನ್ನು ಪರಿಚಯಿಸುವ ಸಾಧ್ಯತೆ ಇದೆ. ಆಲ್ಟ್ರೊಜ್ EV ಸಹ Nexon EV ಮ್ಯಾಕ್ಸ್‌ ರೀತಿಯೇ ಬ್ಯಾಟರಿ ಪ್ಯಾಕ್ ಮತ್ತು ಮೋಟರ್ ಅನ್ನು ಹೊಂದಿರುವ ನಿರೀಕ್ಷೆಯಿದ್ದು, ಒಂದು ಬಾರಿ ಪೂರ್ತಿ ಚಾರ್ಜ್‌ ಮಾಡಿದರೆ 400 ಕಿಲೋಮೀಟರ್‌ಗಿಂತಲೂ ಹೆಚ್ಚಿನ ಮೈಲೇಜ್ ನೀಡಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಿದ್ದವಾಗಿರುವ ಟಾಟಾ ಆಲ್ಟ್ರೊಜ್ EV ಬೆಲೆ ಸುಮಾರು 12- 15 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

4) ಎಂಜಿ ಏರ್ (EV):
ಬ್ರಿಟಿಷ್ ಕಾರು ತಯಾರಕ ಕಂಪನಿ MGಯ ಎರಡನೇ ಎಲೆಕ್ಟ್ರಿಕ್ ಕಾರು ಇದಾಗಿದೆ. ಇದು ಇಂಡೋನೇಷ್ಯಾದಲ್ಲಿ ಪ್ರಸ್ತುತ ಮಾರಾಟದಲ್ಲಿರುವ ವುಲಿಂಗ್ ಏರ್ EVಯೇ ಆಗಿದೆ. 3 ಮೀಟರ್‌ಗಿಂತ ಕಡಿಮೆ ಉದ್ದವನ್ನು ಹೊಂದಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವುಲಿಂಗ್ ಏರ್ EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದೆ. 17.3kWh (200km ಮೈಲೇಜ್) ಮತ್ತು 26.7kWh (300km ಮೈಲೇಜ್). MG ಏರ್ EV ಟಾಟಾದ ಟಿಯಾಗೊ EVಗೆ ಭಾರೀ ಪೈಪೋಟಿ ನೀಡಲಿದೆ. ಈ EV ಬೆಲೆ 8-10 ಲಕ್ಷ ರೂ.ವರೆಗೆ ಇರಬಹುದು.

5) ಸಿಟ್ರೊಯೆನ್ eC3 (EV):
ಫ್ರೆಂಚ್ ಕಾರು ತಯಾರಕ ಸಿಟ್ರೊಯೆನ್ ಇತ್ತೀಚೆಗೆ ಭಾರತದಲ್ಲಿ C3 ಹ್ಯಾಚ್‌ಬ್ಯಾಕ್ ಅನ್ನು ಬಿಡುಗಡೆ ಮಾಡಿತ್ತು. ಆ ವೇಳೆ, C3ನ EV ಆವೃತ್ತಿಯನ್ನು ಸದ್ಯದಲ್ಲಿಯೇ ಮಾರುಕಟ್ಟೆಗೆ ತರುವುದಾಗಿ ಕಂಪನಿ ಹೇಳಿತ್ತು ಸದ್ಯ, ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ಈ ಸಿಟ್ರೊಯೆನ್ eC3, 30.2kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು, ಸುಮಾರು 350km ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಇದು ಟಾಟಾ ಟಿಯಾಗೊ EV ಮತ್ತು ಟಿಗೂರ್ EVಗೆ ಪೈಪೋಟಿ ನೀಡಲಿದೆಯಂತೆ. ಎಲೆಕ್ಟ್ರಿಕ್ ಆವೃತ್ತಿ ಬೆಲೆ ರೂ.10 ಲಕ್ಷ ಇರಬಹುದು.

More from DriveSpark

Article Published On: Thursday, December 15, 2022, 11:17 [IST]
English summary
Auto expo top five most expected electric cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+