ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ಬೆಂಗಳೂರು ಮೂಲದ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಮತ್ತು ಫಿಟ್‌ನೆಸ್ ತರಬೇತುದಾರ ಜೋತಿ ವಿಂಕೇಶ್ ಅವರು ಇತ್ತೀಚೆಗೆ ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋದಲ್ಲಿ ಬೆಂಗಳೂರಿನಿಂದ ಖರ್ದುಂಗ್ ಲಾಗೆ ತಲುಪಿದ್ದಾರೆ.

Recommended Video

Toyota Hilux India Launch In Kannada | Bookings Open | Expected Price, Deliveries, Specs, Features

ಈ ಮೂಲಕ ಖರ್ದುಂಗ್ ಲಾ ಪಾಸ್‌ಗೆ ಎಲೆಕ್ಟ್ರಿಕ್ ಆಟೋರಿಕ್ಷಾದಲ್ಲಿ ತಲುಪಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ಖರ್ದುಂಗ್ ಲಾ ಪ್ರದೇಶವು ವಾಹನಗಳು ಸಂಚರಿಸುವ ವಿಶ್ವದ ಅತಿ ಎತ್ತರದ ಪ್ರದೇಶವಾಗಿದೆ. 2021ರ ಡಿಸೆಂಬರ್ 5 ರಂದು ವಿಧಾನಸೌಧದಿಂದ ತಮ್ಮ ಪ್ರಯಾಣ ಆರಂಭಿಸಿದ್ದಜೋತಿ ವಿಂಕೇಶ್ ಅವರು ಎಲೆಕ್ಟ್ರಿಕ್ ಆಟೋರಿಕ್ಷಾದಲ್ಲಿ ಸುದೀರ್ಘ ಪ್ರಯಾಣ ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ಟ್ರಿಯೊ ಎಲೆಕ್ಟ್ರಿಕ್ ಆಟೋದಲ್ಲಿ 17,852 ಅಡಿ ಎತ್ತರದ (5,359 ಮೀಟರ್) ಖರ್ದುಂಗ್ ಲಾ ಪಾಸ್‌ ತಲುಪಿದ್ದಾರೆ. ಎಲೆಕ್ಟ್ರಿಕ್ ಟ್ರಿಯೊದಲ್ಲಿ ವಿಂಕೇಶ್ ಅವರ ಸಾಧನೆಯನ್ನು ಮಹೀಂದ್ರಾ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ವಿಂಕೇಶ್ ಸಾಧನೆಗೆ ಶುಭಕೋರಿದ್ದಾರೆ.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ಪ್ರಯಾಣ ಆರಂಭಿಸಿದಾಗಿನಿಂದಲೂ ಮಹೀಂದ್ರಾ ಅವರು ಜೋತಿ ವಿಂಕೇಶ್ ಅವರ ಪ್ರಯಾಣವನ್ನು ಶ್ಲಾಘಿಸುತ್ತಲೇ ಬಂದಿದ್ದರು. ಇದೀಗ ಖರ್ದುಂಗ್ ಲಾ ಪಾಸ್‌ಗೆ ತಲುಪಿದ ಹಿನ್ನೆಲೆ ಮತ್ತೊಮ್ಮೆ ಆನಂದ್ ಮಹೀಂದ್ರಾ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಅರುಣಾಚಲ ಪ್ರದೇಶದಲ್ಲಿ ನಿಂತ ರಿಕ್ಷಾದ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದ ಆನಂದ್ ಮಹಿಂದ್ರಾ #Treoದ ನೀಲಿ ಸ್ಫಟಿಕ ಸ್ಪಷ್ಟ ನೀಲಿ ಆಕಾಶದೊಂದಿಗೆ ವಿಲೀನಗೊಳ್ಳುತ್ತಿದೆ. ಒಳ್ಳೆಯದು. ಜಗತ್ತು ಇರಬೇಕಾದ ರೀತಿಯಲ್ಲಿ ಇದು ಒಂದು ಚಿತ್ರ...ಎಂದು ಟ್ವೀಟ್ ಮಾಡಿದ್ದರು.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ಈ ಬಗ್ಗೆ ಪ್ರತಿಕ್ರಿಯಿಸಿದ ಜೋತಿ ಆನಂದ್ ಮಹೀಂದ್ರಾ ಅವರು ನನ್ನ ಗುರಿಸಾಧನೆಯ ಬಗ್ಗೆ ಸಾಕಷ್ಟು ಮುಂಚಿತವಾಗಿ ಟ್ವೀಟ್ ಮಾಡುತ್ತಾರೆ ಎಂದು ನಾನು ಭಾವಿಸಿದ್ದೆ. ಇದು ನನಗೆ ಆಶಾದಾಯಕವಾಗಿ ಪ್ರಾಯೋಜಕತ್ವವನ್ನು ಪಡೆಯಲು ಸಹಾಯ ಮಾಡಿದೆ ಮತ್ತು ಮತ್ತಷ್ಟು ಹುಮ್ಮಸ್ಸು ನೀಡಿದೆ. ಇಲ್ಲಿಯವರೆಗೆ, ನಾನು ಜನರ ಆತಿಥ್ಯದಿಂದ ಬದುಕುಳಿದಿದ್ದೇನೆ ಎಂದು ಜೋತಿ ವಿಕ್ನೇಶ್ ಅರುಣಾಚಲ ಪ್ರದೇಶದ ಶೇರ್ಗಾಂವ್ ಎಂಬ ಹಳ್ಳಿಯಿಂದ ಈ ಹಿಂದೆ ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ವಿಂಕೇಶ್ ತಮ್ಮ ಸಾಧನೆಯ ಹಾದಿಯಲ್ಲಿ ಅನೇಕ ರಾಜ್ಯಗಳಿಗೆ ಭೇಟಿ ನೀಡಿದ್ದು, ತಮ್ಮ 8 ತಿಂಗಳ ಪ್ರಯಾಣದಲ್ಲಿ ಈಗಾಗಲೇ 17,000 ಕಿಲೋಮೀಟರ್ ಮತ್ತು 20 ರಾಜ್ಯಗಳನ್ನು ಕ್ರಮಿಸಿದ್ದಾರೆ. ಈ ಪ್ರಯಾಣದುದ್ದಕ್ಕೂ ಮಾಲಿನ್ಯ ಮುಕ್ತ ಭಾರತ ಸಂದೇಶವನ್ನು ಹರಡುತ್ತಿದ್ದಾರೆ. ಇನ್ನು ಟ್ರಿಯೊದಲ್ಲಿನ ಪ್ರಯಾಣವನ್ನು ವಿಂಕೇಶ್ ಅವರು ತಮ್ಮ ಯುಟ್ಯೂಬ್ ಚಾನೆಲ್ ಇಂಡಿಯಾ ಆನ್ 3 ವೀಲ್ಸ್‌ನಲ್ಲಿ ಮತ್ತು ಅವರ ಇತರ ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾದ ಓಡೋಮೀಟರ್ ಪ್ರಕಾರ 30,000 ಕಿಲೋಮೀಟರ್‌ಗಳ ಮೂಲಕ ದೇಶದಾದ್ಯಂತ ತಮ್ಮ ಪ್ರಯಾಣವನ್ನು ಮುಗಿಸಲು ಯೋಜಿಸಿದ್ದಾರೆ. ಈಗಾಗಲೇ ಆಟೋದಲ್ಲಿ ದಾಖಲೆ ಮಟ್ಟದಲ್ಲಿ ಯಾರೂ ಪ್ರಯಾಣಿಸದ 20,000-ಕಿಲೋಮೀಟರ್‌ಗಳನ್ನು ಪ್ರಯಾಣಿಸಿದ್ದಾರೆ.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ವಿಂಕೇಶ್ ಅವರು ಖರ್ದುಂಗ್ ಲಾಗೆ ತಲುಪಿರುವುದು ಮತ್ತು ಹೋಪ್ ದಿ ಟ್ರಿಯೊನಲ್ಲಿ ರಾಷ್ಟ್ರದಾದ್ಯಂತ ಪ್ರಯಾಣಿಸಿ ದಾಖಲೆಗಳನ್ನು ಸೃಷ್ಟಿಸಿರುವುದು ಇದೆ ಮೊದಲ ಬಾರಿಗೆ ಅಲ್ಲ. ಕಳೆದ ಮೇ ತಿಂಗಳಲ್ಲಿ ವಿಂಕೇಶ್ ತನ್ನ ಟ್ರಿಯೋವನ್ನು ಅಪ್ ಬುಮ್ಲಾ ಪಾಸ್‌ ಎಂಬ ಪ್ರದೇಶಕ್ಕೆ ಕೊಂಡೊಯ್ದಿದ್ದರು, ಇದು ಸಮುದ್ರ ಮಟ್ಟದಿಂದ ಸುಮಾರು 15,200 ಅಡಿ (4,600 ಮೀಟರ್) ಎತ್ತರವಿದ್ದು, ಈ ಪ್ರದೇಶಕ್ಕೆ ತಲುಪಿದ ಮೊದಲ ಆಟೋರಿಕ್ಷಾ ಟ್ರಿಯೊ ಆಗಿದೆ.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ವಿಂಕೇಶ್ ಬಳಸಿದ ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋರಿಕ್ಷಾವು 7.37kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಒಂದೇ ಚಾರ್ಜ್‌ನಲ್ಲಿ 141 ಕಿಲೋ ಮೀಟರ್‌ಗಳ ಪ್ರಮಾಣೀಕೃತ ಶ್ರೇಣಿಯನ್ನು ತಲುಪಿಸಬಹುದು ಎಂದು ಮಹೀಂದ್ರಾ ಹೇಳಿಕೊಂಡಿದೆ.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

16A ಮೂರು-ಪಿನ್ ಸಾಕೆಟ್‌ಗೆ ಪ್ಲಗ್ ಮಾಡಿದರೆ ಅದರ ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಮರುಪೂರಣಗೊಳಿಸಲು Treo 3 ಗಂಟೆ 50 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. Treo ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 10.72bhp (8kW) ಮತ್ತು 42Nm ಟಾರ್ಕ್‌ನ ಗರಿಷ್ಠ ಉತ್ಪಾದನೆಯನ್ನು ನೀಡುತ್ತದೆ.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ಇದು ಶೂನ್ಯ-ಹೊರಸೂಸುವಿಕೆಯ ಆಟೋರಿಕ್ಷಾವಾಗಿದ್ದು, 55km/h ಗರಿಷ್ಠ ವೇಗವನ್ನು ತಲುಪಲು ಅನುವು ಮಾಡಿಕೊಡುತ್ತದೆ. ಟ್ರಿಯೊ 12.7 ಡಿಗ್ರಿಗಳ ಗ್ರೇಡಬಿಲಿಟಿಯನ್ನು ಹೊಂದಿದ್ದು, ಇದು ವಿಂಕೇಶ್ ಪರ್ವತದ ಹಾದಿಗಳಲ್ಲಿ ಆಟೋ ಕ್ಲೈಂಬಿಂಗ್ ಇಳಿಜಾರುಗಳಲ್ಲಿ ಪ್ರಯಾಣಿಸಲು ಸುಲಭಗೊಳಿಸುತ್ತದೆ.

ಇವಿ ಆಟೋದಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ತಲುಪಿ ದಾಖಲೆ ನಿರ್ಮಿಸಿದ ಬೆಂಗಳೂರು ಯುವಕ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬೆಂಗಳೂರಿನಿಂದ ಖರ್ದುಂಗ್ ಲಾವರೆಗೆ ಆಟೋದಲ್ಲಿ ಪ್ರಯಾಣಿಸುವುದು ಎಂದರೆ ಸುಲಭದ ಮಾತಲ್ಲ. ಇ-ಆಟೋ ನೀಡುವ ಮೈಲೇಜ್ ಹಾಗೂ ಅದರ ವೇಗವನ್ನು ಆಧರಿಸಿ ದಿನಕ್ಕೆ ಇಂತಿಷ್ಟೇ ಓಡಿಸಬೇಕು ಎಂಬ ಯೋಜನೆ ರೂಪಿಸಿಕೊಂಡು ಪ್ರಯಾಣದುದ್ದಕ್ಕೂ ಎದುರಾಗುವ ಸವಾಲುಗಳನ್ನು ಹಿಮ್ಮೆಟ್ಟಬೇಕಾಗುತ್ತದೆ. ಇವೆಲ್ಲವನ್ನು ದಾಟಿ ವಿಂಕೇಶ್ ಅವರು ಖರ್ದುಂಗ್ ಲಾವರೆಗೆ ಆಟೋದಲ್ಲಿ ಪ್ರಯಾಣಿಸಿರುವುದು ಅಪ್ರತಿಮ ಸಾಧನೆ ಎಂದೇ ಹೇಳಬಹುದು. ವಿಕೇಶ್ ಅವರು ಇನ್ನಷ್ಟು ಸಾಧನೆಗಳನ್ನು ಮಾಡಿ ರಾಜ್ಯಕ್ಕೆ ಹೆಸರು ತಂದುಕೊಡಬೇಕು ಎಂಬುದು ನಮ್ಮ ಆಶಯ.

Most Read Articles

Kannada
English summary
Bengaluru guy set a record by reaching the worlds highest point in an EV auto
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X