ಭಾರತದಲ್ಲಿ 10 ಲಕ್ಷದೊಳಗೆ ಸಿಗಲಿರುವ 7-ಆಸನಗಳ ಬೆಸ್ಟ್ ಕಾರುಗಳು
ಕಾರು ತಯಾರಕ ಕಂಪನಿಗಳು, ಭಾರತೀಯ ಕುಟುಂಬಗಳ ಅವಶ್ಯಕತೆಗಳಿಗೆ ಸರಿಹೊಂದುವ ಎಂವಿಪಿ ಮತ್ತು ಎಸ್‌ಯುವಿಗಳನ್ನು ಪರಿಚಯಿಸುತ್ತಿದ್ದು, ಅಪಾರ ಪ್ರಮಾಣದ ಜನಪ್ರಿಯತೆಯನ್ನು ಗಳಿಸಿವೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ರೂ.10 ಲಕ್ಷದೊಳಗೆ ಲಭ್ಯವಿರುವ 7-ಸೀಟ್ ಕಾರುಗಳ ಪಟ್ಟಿ ಇಲ್ಲಿದ್ದು, ಅವುಗಳ ವೈಶಿಷ್ಟ್ಯ ಹಾಗೂ ಸದ್ಯದ ಬೆಲೆಗಳ ಕುರಿತಾದ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.
ರೆನಾಲ್ಟ್ ಟ್ರೈಬರ್:
ಭಾರತದಲ್ಲಿ ಅತ್ಯಂತ ಕೈಗೆಟುಕುವ 7-ಆಸನಗಳ ಕಾರು ರೆನಾಲ್ಟ್ ಟ್ರೈಬರ್ ಆಗಿದೆ. ಇದರ ಬೆಲೆಗಳು ರೂ.5.92 ಲಕ್ಷದಿಂದ ಪ್ರಾರಂಭವಾಗಿ ರೂ. 8.51 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರುತ್ತದೆ. ಟ್ರೈಬರ್ 1.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನಿಂದ ಚಲಿಸಲಿದೆ. ಅದು 72 PS ಗರಿಷ್ಠ ಪವರ್ ಮತ್ತು 96 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ ಐಚ್ಛಿಕ 5-ಸ್ಪೀಡ್ ಎಎಂಟಿಯನ್ನು ಹೊಂದಿರಬಹುದು.

ಏಳು ಆಸನಗಳ ರೆನಾಲ್ಟ್ ಟ್ರೈಬರ್ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಆಂಡ್ರಾಯ್ಡ್ ಆಟೋ ಮತ್ತು Apple Car Play ಜೊತೆಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಡ್ರೈವರ್ ಸೀಟ್‌ಗೆ ಎತ್ತರ ಹೊಂದಾಣಿಕೆ, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಸೆಕೆಂಡ್, ಥರ್ಡ್ ರೋಗೆ ಎಸಿ ವೆಂಟ್‌ಗಳು, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಹಾಗೂ ಸೆಂಟರ್ ಕನ್ಸೋಲ್‌ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿದೆ ಎಂದು ಹೇಳಬಹುದು.
ಮಹೀಂದ್ರಾ ಬೊಲೆರೋ ನಿಯೋ:
ಭಾರತದ ಮಾರುಟ್ಟೆಯಲ್ಲಿ ಅತ್ಯಂತ ಕೈಗೆಟುಕುವ 7 ಆಸನಗಳ ಎಸ್‌ಯುವಿಯಾಗಿ ಮಹೀಂದ್ರಾ ಬೊಲೆರೊ ನಿಯೋ ಮುಂದುವರೆದಿದೆ. ಇದರ ಬೆಲೆಗಳು ರೂ. 9.48 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇದು 100 PS ಪವರ್ ಮತ್ತು 260 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.
ಮಹೀಂದ್ರಾ ಬೊಲೆರೋ ನಿಯೋ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ರಿಯರ್-ವೀಲ್ ಡ್ರೈವ್ ಸೆಟಪ್‌ನೊಂದಿಗೆ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಈ ಎಸ್‌ಯುವಿ ಆಧರಿಸಿದೆ ಎಂದು ಹೇಳಬಹುದು. ಇಷ್ಟೇ ಅಲ್ಲದೆ, ಮಹೀಂದ್ರಾ ಬೊಲೆರೋ ನಿಯೋ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಚಾಲಕ ಸೀಟ್ ಎತ್ತರ ಹೊಂದಾಣಿಕೆ, ಕೀಲೆಸ್‌ನಂತಹ ವೈಶಿಷ್ಟ್ಯಗಳೊಂದಿಗೆ ಮೆಕ್ಯಾನಿಕಲ್ ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಆಯ್ಕೆಯನ್ನು ಪಡೆದುಕೊಂಡಿದ್ದು, ಗ್ರಾಹಕರು ಈ ಎಸ್‌ಯುವಿ ಖರೀದಿಸಲು ಆಸಕ್ತಿ ತೋರಿದ್ದಾರೆ.
ಮಾರುತಿ ಸುಜುಕಿ ಎರ್ಟಿಗಾ:
ಭಾರತದಲ್ಲಿ ಹೆಚ್ಚು ಮಾರಾಟವಾಗುವ 7-ಆಸನಗಳ ಕಾರು, ಮತ್ತು ಥ್ರೀ-ರೋ ಎಂವಿಪಿ ಮಾರುತಿ ಸುಜುಕಿ ಎರ್ಟಿಗಾ ಆಗಿದೆ. ಪ್ರಸ್ತುತ ರೂ.8.35 ಲಕ್ಷದಿಂದ ರೂ.12.79 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಈ ಕಾರು 7-ಸೀಟರ್ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 103 PS ಪವರ್ ಮತ್ತು 137 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮ್ಯಾನ್ಯುವಲ್ ಮತ್ತು ಅಟೋಮೆಟಿಕ್ ಗೇರ್ ಆಯ್ಕೆಗಳೊಂದಿಗೆ ದೊರೆಯಲಿದೆ.
ಈ ಮಾರುತಿ ಸುಜುಕಿ ಎರ್ಟಿಗಾ ಕಾರಿನ VXI ಮತ್ತು ZXI ರೂಪಾಂತರಗಳೊಂದಿಗೆ ಐಚ್ಛಿಕವಾಗಿ CNG ಕಿಟ್ ಸಹ ಲಭ್ಯವಿದೆ. ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ Android Auto ಮತ್ತು Apple CarPlay, ಪ್ಯಾಡಲ್ ಶಿಫ್ಟರ್‌ಗಳು (AT ಮಾತ್ರ), ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲೈಟ್‌ಗಳು ಜೊತೆಗೆ ಆಟೋಮೆಟಿಕ್ ಕ್ಲೆಮೆಟ್ ಕಂಟ್ರೋಲ್ ಅನ್ನು ಒಳಗೊಂಡಿದ್ದು, ಬಹುತೇಕ ಭಾರತೀಯ ಖರೀದಿದಾರರು ಲೈಕ್ ಮಾಡುತ್ತಾರೆ.
ಮಹೀಂದ್ರಾ ಬೊಲೆರೋ:
ಭಾರತದಲ್ಲಿ ಮಹೀಂದ್ರಾದಿಂದ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾದ ಬೊಲೆರೋ, ಪ್ರಸ್ತುತ ರೂ.9.53 ಲಕ್ಷದಿಂದ ಆರಂಭವಾಗಲಿದೆ (ಎಕ್ಸ್ ಶೋ ರೂಂ). ಇದು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 75 PS ಗರಿಷ್ಠ ಪವರ್ ಮತ್ತು 210 Nm ಟಾರ್ಕ್ ಉತ್ಪಾದಿಸಲಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಏರ್ ಕಂಡೀಷನಿಂಗ್, AUX ಮತ್ತು USB ಸಂಪರ್ಕದೊಂದಿಗೆ ಬ್ಲೂಟೂತ್-ಸಕ್ರಿಯಗೊಳಿಸಿದ ಮ್ಯೂಸಿಕ್ ಸಿಸ್ಟಮ್, ಪವರ್ ವಿಂಡೋಗಳು, ಪವರ್ ಸ್ಟೀರಿಂಗ್ ವೀಲ್‌ನಂತಹ ಪ್ರಯೋಜನಕಾರಿ ವೈಶಿಷ್ಟ್ಯಗಳನ್ನು ಈ ಎಸ್‌ಯುವಿ ಹೊಂದಿದೆ.


Click it and Unblock the Notifications








