ನಾಳೆ ಕಾಣಿಸಲಿದೆ ಬಹುನೀರಿಕ್ಷಿತ LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್: ಬೆಲೆ ಕಡಿಮೆಯೇ?

ಭಾರತದ ಒಂದು ಕಾಲದ ಪ್ರಸಿದ್ಧ ವಾಹನ ತಯಾರಿಕ ಕಂಪನಿ LML (ಲೋಹಿಯಾ ಮೆಷಿನರಿ ಲಿಮಿಟೆಡ್) ಮತ್ತೆ ರೀ-ಎಂಟ್ರಿ ಕೊಡಲು ಸಿದ್ಧವಾಗಿದೆ. ಈ ಬಾರಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ, ಮತ್ತೆ ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ಮೇಲೆ ಗ್ರಾಹಕರಿಗೆ ನಿರೀಕ್ಷೆಗಳು ಹೆಚ್ಚಿವೆ.

LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸುವ ನಿರೀಕ್ಷೆ ಇತ್ತು. ಆದರೆ, ಅದಕ್ಕೂ ಮೊದಲು ಈ ಸ್ಕೂಟರ್ ಅನ್ನು ನಾಳೆ GICW (ಗುರುಗ್ರಾಮ್ ಇಂಟರ್ನ್ಯಾಷನಲ್ ಕೌಚರ್ ವೀಕ್)ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು LML ಘೋಷಿಸಿದೆ. ಈ ಕಾರ್ಯಕ್ರಮ ಜನವರಿ 6 ರಿಂದ 8ರವರೆಗೆ ನಡೆಯಲಿದೆ. ಕಂಪನಿಯು ತನ್ನ ಭಾರತದ ಮಾರುಕಟ್ಟೆಗೆ ರೀ-ಎಂಟ್ರಿ ಘೋಷಿಸಿದಾಗ, ಮೂರು ಇ-ಸ್ಕೂಟರ್‌ಗಳನ್ನು ಅನಾವರಣಗೊಳಿಸಲಾಯಿತು. ಅವುಗಳೆಂದರೆ, LML ಓರಿಯನ್, ಮೂನ್‌ಶಾಟ್ ಮತ್ತು ಸ್ಟಾರ್. ಸದ್ಯ ಸ್ಟಾರ್ ಸ್ಕೂಟರ್ ಉತ್ಪಾದನೆಗೆ ಹೋಗುವ ನಿರೀಕ್ಷೆಯಿದ್ದು, ನಂತರ ಈ ವರ್ಷ ಗ್ರಾಹಕರಿಗೆ ಖರೀದಿಗೆ ಸಿಗಲಿದೆ.

ನಾಳೆ ಕಾಣಿಸಲಿದೆ ಬಹುನೀರಿಕ್ಷಿತ LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್

ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಡ್ಯುಯಲ್-ಟೋನ್ ಥೀಮ್‌ನೊಂದಿಗೆ ಭವಿಷ್ಯದ ವಿನ್ಯಾಸವನ್ನು ಹೊಂದಿದ್ದು, ಇದು DRLಗಳೊಂದಿಗೆ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಅನ್ನು ಹೊಂದಿರಲಿದ್ದು, ಸ್ಕೂಟರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಫೋರ್ಕ್ ಫ್ರಂಟ್ ಸಸ್ಪೆನ್ಷನ್ ಜೊತೆಗೆ ಹಿಂಭಾಗದಲ್ಲಿ ಮೊನೊಶಾಕ್, ರೈಡ್ ಮೋಡ್, ರಿವರ್ಸ್ ಮೋಡ್, TPMS ಸೇರಿದಂತೆ ಹತ್ತು ಹಲವು ವೈಶಿಷ್ಠ್ಯಗಳನ್ನು ಹೊಂದಿದೆ. ಇವು ಹೊಸ ಖರೀದಿದಾರರನ್ನು LML ಕಂಪನಿ ತನ್ನತ್ತ ಸೆಳೆಯಲು ಸಹಕಾರಿಯಾಗಲಿದೆ.

ಈ ಸ್ಕೂಟರ್‌ ಹಲವು ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಒಂದು ಪೂರ್ಣ ಚಾರ್ಜ್‌ನಲ್ಲಿ 120 ಕಿ.ಮೀ ರೇಂಜ್ ನೀಡಲಿದ್ದು, ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. LML ಸ್ಟಾರ್, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಬಜಾಜ್ ಚೇತಕ್, TVS iQube, Ola S1, Vida V1, Simple one, ಮತ್ತು Ather 450Xಗೆ ಭಾರೀ ಪೈಪೋಟಿ ನೀಡಬಹುದು.

ಭಾರತ ಮಾರುಕಟ್ಟೆಗೆ ಸುದೀರ್ಘ ಸಮಯದ ಬಳಿಕ ಮತ್ತೆ ಬಂದಿರುವ LML, ಹೊಸ ಇವಿ ಉತ್ಪಾದನಾ ಸೌಲಭ್ಯಕ್ಕಾಗಿ ಸುಮಾರು 500 ಕೋಟಿ ರೂ. ಬಂಡವಾಳ ಹೂಡಿದೆ. ಈ ಮೂಲಕ ಕಂಪನಿಯು ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ತೀವ್ರ ಸ್ವರ್ಧೆಯೊಡ್ಡಲು ಪ್ರಯತ್ನಿಸುತ್ತಿದೆ. ಕಂಪನಿಯು ಶೀಘ್ರದಲ್ಲೇ ದೇಶಾದ್ಯಂತ 100-ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಸ್ಟಾರ್ ಸ್ಕೂಟರ್ ಬಳಿಕ, ಮಾರುಕಟ್ಟೆಗೆ ಮೂನ್‌ಶಾಟ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮತ್ತು ಓರಿಯನ್ ಎಲೆಕ್ಟ್ರಿಕ್ ಬೈಕ್‌ಗಳು ಬರಲಿವೆ.

LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ನಾಳೆ ಪ್ರದರ್ಶನಗೊಳ್ಳಲಿದೆ. ಆದರೆ, ಅದಕ್ಕೂ ಮೊದಲು ಅನೇಕ ಇವಿ ಸ್ಕೂಟರ್ ದೇಶೀಯ ಮಾರುಕಟ್ಟೆಯಲ್ಲಿವೆ. ಟಿವಿಎಸ್ iQube, 4.4kW ಮೋಟಾರ್ ಅನ್ನು ಹೊಂದಿದ್ದು, ಈ ಸ್ಕೂಟರ್ ಕೇವಲ 4.2 ಸೆಕೆಂಡುಗಳಲ್ಲಿ 40kmph ವೇಗವನ್ನು ಪಡೆಯಲಿದ್ದು, ಈ ಸ್ಕೂಟರ್ ಎಕಾನಮಿ ಮತ್ತು ಪವರ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಜೊತೆಗೆ ಕ್ಯೂ-ಅಸಿಸ್ಟ್ ರಿವರ್ಸ್ ಮೋಡ್ ಅನ್ನು ಸಹ ಹೊಂದಿದೆ. 3.4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಅದು 100km ರೇಂಜ್ ನೀಡಲಿದೆ.

ಎಥರ್ 450X ದೇಶದಲ್ಲಿ ದೊರೆಯುವ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ನವೀಕರಿಸಿದ 3.7kWh ಬ್ಯಾಟರಿಯನ್ನು ಹೊಂದಿದ್ದು, ARAI ಪ್ರಕಾರ, ಸ್ಕೂಟರ್ ಗರಿಷ್ಠ 146km ರೇಂಜ್ ಹಿಂದಿರುಗಿಸುತ್ತದೆ. ಸ್ಕೂಟರ್ ಐದು ರೈಡ್ ಮೋಡ್‌ಗಳನ್ನು ಹೊಂದಿದೆ. ಅವುಗಳೆಂದರೆ, ವಾರ್ಪ್, ಸ್ಪೋರ್ಟ್, ರೈಡ್, ಸ್ಮಾರ್ಟ್ ಇಕೋ ಮತ್ತು ಇಕೋ. ವಾರ್ಪ್ ಮೋಡ್‌ನಲ್ಲಿ ಗರಿಷ್ಠ ಪವರ್ ಉತ್ಪಾದನೆ ಮಾಡುತ್ತದೆ. ಅಲ್ಲಿ ಅದು 8.7 hp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Ola Electricನ S1 ಏರ್ ಇ-ಸ್ಕೂಟರ್ ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. 4 ಗಂಟೆ 30 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವ ಚಿಕ್ಕ 2.5kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿದ್ದು, ಇದರಲ್ಲಿರುವ ಮೋಟಾರ್ 4.5kW ಗರಿಷ್ಠ ಪವರ್ ಉತ್ಪಾದಿಸುತ್ತದೆ. 4.3 ಸೆಕೆಂಡುಗಳಲ್ಲಿ 0 ರಿಂದ 40kmph ವೇಗವನ್ನು ಪಡೆಯಲಿದ್ದು, 85kmph ಟಾಪ್ ಸ್ವೀಡ್ ಹೊಂದಿದೆ. Ola S1 ಏರ್ ಒಂದೇ ಚಾರ್ಜ್‌ನಲ್ಲಿ 101 ಕಿಮೀ ರೇಂಜ್ ನೀಡಲಿದೆ.

Most Read Articles

Kannada
English summary
The much awaited lml star electric scooter will be debut tomorrow
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X