ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಮೋಟಾರ್‌ಸೈಕಲ್‌ಗಳು

ಪ್ರಯಾಣಿಕ ಮೋಟಾರ್‌ಸೈಕಲ್ ವಿಭಾಗವು ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಈ ವಿಭಾಗದಲ್ಲಿ ದ್ವಿಚಕ್ರ ವಾಹನ ದೈತ್ಯ ಹೀರೋ ಮೋಟೋಕಾರ್ಪ್ ಪ್ರಾಬಲ್ಯ ಸಾಧಿಸಿದೆ. ಟಿವಿಎಸ್ ರೈಡರ್ 125 ಅಥವಾ ಬಜಾಜ್ ಪ್ಲಾಟಿನಾ 100 ABSನಂತಹ ಹಲವಾರು ಇತರೆ ಅತ್ಯಾಕರ್ಷಕ ಮೋಟಾರ್‌ಸೈಕಲ್‌ಗಳು ಈ ವಿಭಾಗವನ್ನು ಇನ್ನಷ್ಟು ರೋಮಾಂಚನಗೊಳಿಸುತ್ತಿವೆ.

2023ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಪ್ರಮುಖ ಐದು ಮೋಟಾರ್‌ಸೈಕಲ್‌ಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಇವುಗಳಲ್ಲಿ ಕೆಲವು ಲಾಂಚ್ ಆಗುವ ಬಗ್ಗೆ ಖಚಿತ ಮಾಹಿತಿ ಇದೆ. ಇತರವುಗಳ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಈ ಪಟ್ಟಿಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ICE-ಚಾಲಿತ ಮೋಟಾರ್‌ಸೈಕಲ್‌ಗಳನ್ನು ಒಳಗೊಂಡಿದೆ. ಇವು ಬಿಡುಗಡೆಯಾದ ಮೇಲೆ ಬೆಲೆ, ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರವಾಗಿ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಹೇಳಬಹುದು. ಇದರಿಂದ ನೀರಿಕ್ಷೆಗಳು ಸಾಕಷ್ಟು ಹೆಚ್ಚಿವೆ.

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಮೋಟಾರ್‌ಸೈಕಲ್‌ಗಳು

ಹೋಂಡಾ 100-110ಸಿಸಿ ಮೋಟಾರ್‌ಸೈಕಲ್‌ಗಳು:
ಕಳೆದ ವರ್ಷ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ (ಎಚ್‌ಎಂಎಸ್‌ಐ) ಅಧ್ಯಕ್ಷ ಅಟ್ಸುಶಿ ಒಗಾಟಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬ್ರ್ಯಾಂಡ್ ದೇಶದಲ್ಲಿ ಹೊಸ ಪ್ರಯಾಣಿಕ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದ್ದರು. ಮುಂಬರುವ ಈ ಪ್ರಯಾಣಿಕ ಮೋಟಾರ್‌ಸೈಕಲ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದಾಗ್ಯೂ, ಇದು CD110 ಡ್ರೀಮ್‌ಗಿಂತ ಹೆಚ್ಚು ಇಂಧನ-ಕಾರ್ಯಕ್ಷಮತೆಯನ್ನು ಹೊಂದಿರಲಿದೆ. ಆದರೆ, ಪ್ಯಾಶನ್ ಮತ್ತು ಸ್ಪ್ಲೆಂಡರ್‌ಗಳ ವಿರುದ್ಧ ಎಂದಿಗೂ ಪ್ರಬಲ ಸ್ಪರ್ಧೆಯನ್ನು ಒಡ್ಡಲು ಸಾಧ್ಯವಾಗಲಿಲ್ಲ.

ಓಲಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌:
ತನ್ನ ಅಧಿಕೃತ ಬ್ಲಾಗ್‌ನಲ್ಲಿ, ಓಲಾ ಎಲೆಕ್ಟ್ರಿಕ್ ಸಿಇಒ, ಭವಿಶ್ ಅಗರ್ವಾಲ್, ಈ ವರ್ಷ ಬ್ರ್ಯಾಂಡ್ ಪ್ರಯಾಣಿಕ ಮೋಟಾರ್‌ಸೈಕಲ್ ವಿಭಾಗಕ್ಕೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ. '2023, 2024ರಲ್ಲಿ ನಾವು ಇನ್ನೂ ಅನೇಕ 2W EV ಉತ್ಪನ್ನಗಳನ್ನು ಪ್ರಾರಂಭಿಸುತ್ತೇವೆ' ಎಂದಿದ್ದಾರೆ. ಹೋಂಡಾ ಮೋಟಾರ್‌ಸೈಕಲ್‌ನಂತೆ ಮುಂಬರುವ Ola ಮೋಟಾರ್‌ಸೈಕಲ್‌ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಓಲಾ S1 ಮತ್ತು S1 Pro ಸ್ಕೂಟರ್‌ಗಳಲ್ಲಿ ಲಭ್ಯವಿರುವ ಬ್ಯಾಟರಿಗಳಿಗಿಂತ ಹೊಸ ಮೋಟಾರ್‌ಸೈಕಲ್‌ ದೊಡ್ಡ ಬ್ಯಾಟರಿಯನ್ನು ಹೊಂದಿರಬಹುದು.

ಓಲಾ ಭಾರತೀಯ ಮಾರುಕಟ್ಟೆಯಲ್ಲಿ S1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚಿಗೆ ಬಿಡುಗಡೆ ಮಾಡಿದೆ. ಇದರ ಬೆಲೆ ತುಂಬಾ ಕಡಿಮೆ. ಓಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.40 ಲಕ್ಷ ರೂ. ಇದ್ದು, ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ 1 ಲಕ್ಷ ರೂ. ಇದೆ. ಆದರೆ, ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 80 ಸಾವಿರ ರೂ. ಇದೆ. ಕೆಲ ದಿನಗಳ ಹಿಂದೆ, ಓಲಾ S1, S1 Pro ಸ್ಕೂಟರ್‌ಗಳಿಗೆ ಮೂವ್ ಓಎಸ್ 3.0 ಸಾಫ್ಟ್‌ವೇರ್ ಅಪ್‌ಡೇಟ್ ಪರಿಚಯ ಮಾಡಿತ್ತು.

ಟಿವಿಎಸ್ ಫಿಯೆರೋ 125:
2022ರಲ್ಲಿ, ಟಿವಿಎಸ್ ವಿವಿಧ ದ್ವಿಚಕ್ರ ವಾಹನಗಳ ಹೆಸರುಗಳನ್ನು ನೋಂದಾಯಿಸಿದೆ. ಅವುಗಳಲ್ಲಿ ಫಿಯೆರೊ ಕೂಡ ಒಂದಾಗಿದೆ. ಬ್ರ್ಯಾಂಡ್ ಈಗಾಗಲೇ ಸಾಕಷ್ಟು ಕಾರ್ಯಕ್ಷಮತೆಯ ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್‌ಗಳನ್ನು ಹೊಂದಿದೆ ಎಂದು ಹೇಳಬಹುದು. ಅವುಗಳಲ್ಲಿ ರೈಡರ್ 125 ಬೈಕ್ ಪ್ರಮುಖವಾಗಿದೆ. ಟಿವಿಎಸ್ ಅದರ ಆಧಾರದ ಮೇಲೆ ಫಿಯೆರೊ ಬ್ಯಾಡ್ಜ್ ಅನ್ನು ಮರಳಿ ತಂದರೆ ಆಶ್ಚರ್ಯವೇನಿಲ್ಲ. ಈ ಬೈಕ್ ಮೇಲೆ ಖರೀದಿದಾರರಿಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಿವೆ.

ಯಮಹಾ XSR 125:
ಭಾರತದಲ್ಲಿ ಬಿಡುಗಡೆಯಾಗಲು ಯಮಹಾ XSR 125 ರೆಡಿಯಾಗುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ, ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಇದು ಈಗಾಗಲೇ ಯುರೋಪಿಯನ್ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ರೆಟ್ರೊ ಮೋಟಾರ್‌ಸೈಕಲ್ ಆಗಿ ಮಾರಾಟವಾಗುತ್ತಿದೆ. ಇದು 125 ಸಿಸಿ, ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 14.75 bhp ಪವರ್ ಮತ್ತು 10.85 Nm ಪೀಕ್ ಟಾರ್ಕ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎಂಟ್ರಿ-ಲೆವೆಲ್ ಮೋಟಾರ್‌ಸೈಕಲ್ ಆಗಿದ್ದರೂ, XSR125 ಫುಲ್-LED ಲೈಟಿಂಗ್, ಡ್ಯುಯಲ್-ಚಾನೆಲ್ ABS, ಇನ್ವರ್ಟೆಡ್ ಫ್ರಂಟ್ ಫೋರ್ಕ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ.

ಪ್ಯೂರ್ ಇವಿ EcoDryft:
ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ, ಪ್ಯೂರ್ ಇವಿ ಈಗಾಗಲೇ ಇಕೋಡ್ರೈಫ್ಟ್ ಪ್ರಯಾಣಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಈಗಾಗಲೇ ತಯಾರಿಸಲಾಗುತ್ತಿದ್ದು, ಬ್ರ್ಯಾಂಡ್‌ನ ಹೊಸ ಪ್ರಮುಖ ಮೋಟಾರ್‌ಸೈಕಲ್ ಆಗಿದೆ ಎಂದು ಹೇಳಬಹುದು. EcoDryft ಮುಂಬರುವ 2023 ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದ್ದು, ಅಲ್ಲಿಯೇ ಬೈಕಿನ ಬೆಲೆಯನ್ನು ಬಹಿರಂಗಪಡಿಸಲಾಗುತ್ತದೆ ಎಂದು ವರದಿಯಾಗಿದೆ. ಸದ್ಯ ಈ ಮೋಟಾರ್‌ಸೈಕಲ್ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಿವೆ.

Most Read Articles

Kannada
English summary
Top five motorcycles to be launched in india this year
Story first published: Thursday, January 5, 2023, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X