2023ರಲ್ಲಿ ನೀವು ಖರೀದಿಸಬಹುದು... 1 ಲಕ್ಷದೊಳಗೆ ಸಿಗುವ ಟಾಪ್ 6 ಬೈಕ್‌ಗಳು

ಪ್ರಯಾಣಿಕ ಮೋಟಾರ್‌ಸೈಕಲ್‌ಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಾಗಿವೆ. ದೇಶದಲ್ಲಿ ಪ್ರತಿಯೊಂದು ಬೈಕ್ ತಯಾರಕ ಕಂಪನಿಯು ಈ ವಿಭಾಗದಲ್ಲಿ ಹಲವು ಮಾದರಿಗಳನ್ನು ಹೊಂದಿವೆ. ಕೈಗೆಟುಕುವ ಬೆಲೆ, ಚಾಲನೆಯಲ್ಲಿರುವ ಕಡಿಮೆ ವೆಚ್ಚ ಅವುಗಳನ್ನು ಖರೀದಿಸಲು ಪ್ರಮುಖ ಕಾರಣಗಳಾಗಿದ್ದು, ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಾರೆ ಎಂದು ಹೇಳಬಹುದು.

ಪ್ರಯಾಣಿಕ ಮೋಟಾರ್‌ಸೈಕಲ್‌ಗಳು ಸಾಮಾನ್ಯವಾಗಿ 110 ಸಿಸಿ - 125 ಸಿಸಿ ನಡುವಿನ ಚಿಕ್ಕ ಎಂಜಿನ್ ಸಾಮರ್ಥ್ಯದಿಂದ ಚಾಲಿತವಾಗಲಿದ್ದು, ಅವುಗಳ ಇಂಧನ ದಕ್ಷತೆಯು ಹೆಚ್ಚಾಗಿರುತ್ತದೆ. ಈಗಾಲೂ ಈ ಮೋಟರ್‌ಸೈಕಲ್‌ಗಳ ಮಾರಾಟ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಕೆಳಗೆ ಪಟ್ಟಿ ಮಾಡಿರುವ ವಿವಿಧ ಮೋಟಾರ್‌ಸೈಕಲ್‌ಗಳು, ನಿಮಗೆ ಆಕರ್ಷಕ ರೈಡಿಂಗ್ ಅನುಭವ ನೀಡುತ್ತವೆ. ನೀವು ಖರೀದಿಸಲು ಯೋಗ್ಯವಾದ 1 ಲಕ್ಷದೊಳಗೆ ದೊರೆಯುವ ಆರು ಪ್ರಯಾಣಿಕ ಮೋಟಾರ್‌ಸೈಕಲ್‌ಗಳು ಇಲ್ಲಿವೆ.

2023ರಲ್ಲಿ ನೀವು ಖರೀದಿಸಬಹುದು... 1 ಲಕ್ಷದೊಳಗೆ ಸಿಗುವ ಟಾಪ್ 6 ಬೈಕ್‌ಗಳು

ಟಿವಿಎಸ್ ಸ್ಪೋರ್ಟ್ (ರೂ.64,050 ರಿಂದ ಪ್ರಾರಂಭ, ಎಕ್ಸ್ ಶೋರೂಂ, ದೆಹಲಿ):
ಟಿವಿಎಸ್ ಸ್ಪೋರ್ಟ್ 7350 rpmನಲ್ಲಿ 8.18 hp ಮತ್ತು 4500 rpmನಲ್ಲಿ 8.7 Nm ಪೀಕ್ ಟಾರ್ಕ್ ಉತ್ಪಾದಿಸಲು ಸಾಮರ್ಥ್ಯವಿರುವ 110 ಸಿಸಿ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ ETFi ತಂತ್ರಜ್ಞಾನವನ್ನು ಹೊಂದಿದೆ (ಅಂದರೆ ಇಕೋ ಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ಟೆಕ್ನಾಲಜಿ). ಇದು ಸ್ಪೋರ್ಟ್ 15% ಉತ್ತಮ ಮೈಲೇಜ್ ಹಿಂತಿರುಗಿಸಲು ಸಹಾಯ ಮಾಡುತ್ತದೆ. ಟಿವಿಎಸ್ ಸ್ಪೋರ್ಟ್‌ನ ಆನ್-ರೋಡ್ ಮೈಲೇಜ್ 110 km/l ದಾಖಲಾಗಿದ್ದು, ಇದು ಪ್ರಯಾಣಿಕ ಮೋಟಾರ್‌ಸೈಕಲ್‌ಗಳಲ್ಲಿ ಅತ್ಯಧಿಕವಾಗಿದೆ.

ಹೋಂಡಾ ಸಿಡಿ 110 ಡ್ರೀಮ್ (ರೂ. 71,113 ರಿಂದ ಪ್ರಾರಂಭ, ಎಕ್ಸ್ ಶೋರೂಂ, ದೆಹಲಿ):
ಹೋಂಡಾ ಸಿಡಿ 110 ಡ್ರೀಮ್ ಟಿವಿಎಸ್ ಸ್ಪೋರ್ಟ್‌ಗಿಂತ ಸ್ವಲ್ಪ ಹೆಚ್ಚು ಪವರ್, ಟಾರ್ಕ್ ಅನ್ನು 7500 rpmನಲ್ಲಿ 8.67 hp ಮತ್ತು 5500 rpmನಲ್ಲಿ 9.30 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. TVSನ ETFi ತಂತ್ರಜ್ಞಾನದಂತೆಯೇ, ಹೋಂಡಾ ತನ್ನ PGM-Fi ತಂತ್ರಜ್ಞಾನವನ್ನು ಹೊಂದಿದ್ದು, 70-75 km/l ಮೈಲೇಜ್ ನೀಡಲಿದೆ. ಆದ್ದರಿಂದ, ನೀವು 1 ಲಕ್ಷದೊಳಗಿನ ಕಾರ್ಯಕ್ಷಮತೆ-ಆಧಾರಿತ 110cc ಪ್ರಯಾಣಿಕ ಮೋಟಾರ್‌ಸೈಕಲ್‌ಗಾಗಿ ಹುಡುಕುತ್ತಿದ್ದರೆ, CD 110 Dream ನಿಮ್ಮ ಆಯ್ಕೆಯಾಗಬಹುದು.

ಟಿವಿಎಸ್ ಸ್ಟಾರ್ ಸಿಟಿ+ (ರೂ.75,890, ಎಕ್ಸ್ ಶೋರೂಂ, ದೆಹಲಿ):
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಟಿವಿಎಸ್ ಸ್ಪೋರ್ಟ್‌ಗಿಂತ ಬೆಲೆಯಲ್ಲಿ ಕೊಂಚ ದುಬಾರಿ. ಇದು TVSನ ETFi ತಂತ್ರಜ್ಞಾನವನ್ನು ಹೊಂದಿರುವ ಅದೇ 110 ಸಿಸಿ ಎಂಜಿನ್ ಅನ್ನು ಪಡೆದುಕೊಂಡಿದೆ. ಸ್ಟಾರ್ ಸಿಟಿ+ನ ಪವರ್ ಔಟ್‌ಪುಟ್ 7350 rpm ನಲ್ಲಿ 8.08 hp ಮತ್ತು 4500 rpm ನಲ್ಲಿ 8.7 Nm ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸ್ಟಾರ್ ಸಿಟಿ+ 80-86 ಕಿಮೀ/ಲೀ ನಡುವೆ ಮೈಲೇಜ್ ನೀಡುತ್ತದೆ ಎಂದು ಬೈಕ್ ಉಪಯೋಗ ಮಾಡುವರೂ ಹೇಳಿದ್ದಾರೆ.

ಬಜಾಜ್ ಪಲ್ಸರ್ 125 (ರೂ. 87,149, ಎಕ್ಸ್ ಶೋರೂಂ, ದೆಹಲಿ):
ಪ್ರಯಾಣಿಕರ ಮೋಟಾರ್‌ಸೈಕಲ್ ಪಟ್ಟಿಯನ್ನು ಪಲ್ಸರ್ ಬೈಕ್ ಹೆಸರು ಉಲ್ಲೇಖಿಸದೇ ಇರಲು ಸಾಧ್ಯವಿಲ್ಲ. ಬಜಾಜ್ ಪಲ್ಸರ್ 125 ಇನ್ನೂ ಹಿಂದಿನ ತಲೆಮಾರಿನ ಬಾಡಿ ಸ್ಟೈಲಿಂಗ್ ಅನ್ನು ಉಳಿಸಿಕೊಂಡಿದೆ. ಇದು ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ ಕಾರ್ಬನ್ ಫೈಬರ್ (CF) ಮತ್ತು ನಿಯಾನ್ ಸಿಂಗಲ್ ಸೀಟ್. 125 ಸಿಸಿ ಎಂಜಿನ್ ಹೊಂದಿರುವ ಪಲ್ಸರ್ 125, 110 ಸಿಸಿ ಮೋಟಾರ್‌ಸೈಕಲ್‌ಗಳಿಗಿಂತ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ. ಪಲ್ಸರ್ 53-55 km/l ಮೈಲೇಜ್ ನೀಡುತ್ತದೆ.

ಹೀರೋ ಪ್ಯಾಶನ್ ಪ್ರೊ (ರೂ.74,408 ರಿಂದ ಪ್ರಾರಂಭ, ಎಕ್ಸ್ ಶೋರೂಂ, ದೆಹಲಿ):
ಹೀರೋ ಪ್ಯಾಶನ್ ಪ್ರೊ ಈ ಪಟ್ಟಿಯಲ್ಲಿರುವ ಅತ್ಯಂತ ಜನಪ್ರಿಯ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. 113 cc ಎಂಜಿನ್ ಹೊಂದಿದ್ದು, ಇದು 9.02 hp ಮತ್ತು 9.89 Nm ಪೀಕ್ ಟಾರ್ಕ್ ಉತ್ಪಾದಿಸಲು ಸಾಮರ್ಥ್ಯ ಹೊಂದಿದೆ. ಪ್ಯಾಶನ್ ಪ್ರೊ ಎಲೆಕ್ಟ್ರಿಕ್ ಸ್ಟಾರ್ಟ್ ಅಥವಾ ಕಿಕ್ ಸ್ಟಾರ್ಟ್‌ನೊಂದಿಗೆ ಲಭ್ಯವಿದೆ. ಪ್ಯಾಶನ್ ಪ್ರೊದಲ್ಲಿ ಆರಾಮದಾಯಕ ಪ್ರಯಾಣ ಮಾಡಬಹುದಾಗಿರುವುದರಿಂದ ಗ್ರಾಹಕರು ಇಷ್ಟಪಡುತ್ತಾರೆ ಎಂದು ಹೇಳಬಹುದು.

ಹೋಂಡಾ CB ಶೈನ್ (ರೂ.78,687 ರಿಂದ ಪ್ರಾರಂಭ, ಎಕ್ಸ್ ಶೋರೂಂ, ದೆಹಲಿ):
ಹೋಂಡಾ ಮತ್ತೊಂದು ಬೈಕ್ CB ಶೈನ್, 125 cc ಎಂಜಿನ್‌ನಿಂದ ಚಾಲಿತವಾಗಲಿದ್ದು, 10.59 hp ಮತ್ತು 11 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. CD 110 ಡ್ರೀಮ್‌ನಂತೆಯೇ, CB ಶೈನ್ ಹೋಂಡಾದ PGM-Fi ತಂತ್ರಜ್ಞಾನದೊಂದಿಗೆ ಲಭ್ಯವಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಇವೆಲ್ಲ ಕಾರಣಗಳಿಗೆ ಈ ಬೈಕ್ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ.

Most Read Articles

Kannada
English summary
Top 6 bikes under 1 lakh
Story first published: Wednesday, January 4, 2023, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X