ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್4 ಪ್ರಿ-ಬುಕಿಂಗ್ ಆರಂಭ!
ಜನಪ್ರಿಯ ಐಷಾರಾಮಿ ಕಾರು ಕಂಪನಿಯಾದ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ಹೊಸ 2022ರ ಎಕ್ಸ್ 4 ಕೂಪೆ ಮಾದರಿಗಾಗಿ ಪ್ರೀ ಬುಕಿಂಗ್ ಆರಂಭಿಸಿದ್ದು, ಇದು ಬಿಎಂಡಬ್ಲ್ಯು ಎಕ್ಸ್4 ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯಾಗಿದೆ.

ಆಸಕ್ತ ಗ್ರಾಹಕರು ಆನ್ ಲೈನ್ ನಲ್ಲಿ ರೂ. 50,000 ಪಾವತಿಸುವ ಮೂಲಕ 5 ಆಸನಗಳ ಕೂಪೆ ಎಸ್‌ಯುವಿಯನ್ನು ಬುಕ್ ಮಾಡಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ. ಮೂಲಗಳ ಪ್ರಕಾರ, ಹೊಸ 2022 ಬಿಎಂಡಬ್ಲ್ಯು ಎಕ್ಸ್ 4 ಫೇಸ್‌ಲಿಫ್ಟ್ ಮಾದರಿಯು ಮಾರ್ಚ್ ನಲ್ಲಿ ಮಾರುಕಟ್ಟೆಗೆ ಬರಲಿದೆ.

ಮೊದಲು ಬುಕ್ ಮಾಡಿದವರಿಗೆ ಮೊದಲ ಆಧ್ಯತೆ ಆಧಾರದ ಮೇಲೆ ವಿತರಣೆಗಳು ನಡೆಯುವ ಸಾಧ್ಯತೆಯಿದೆ. ಹೊಸ ಬಿಎಂಡಬ್ಲ್ಯು ಎಕ್ಸ್ 4ಗಾಗಿ ಬಿಎಂಡಬ್ಲ್ಯುನ ಇಂಡಿಯಾ ವೆಬ್ ಸೈಟ್ ಮೂಲಕ ಮಾತ್ರ ಆನ್ ಲೈನ್ ನಲ್ಲಿ ಪ್ರೀ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಈ ಹೊಸ ಎಕ್ಸ್4 ಮಾಡಲ್ ಅನ್ನು ಜೂನ್ 2021ರಂದು ಜಾಗತಿಕವಾಗಿ ಮಾರುಕಟ್ಟೆಗೆ ಪರಿಚಯಿಸಲಾಯಿತು.

ಈ ಎಕ್ಸ್4 ಮಾಡಲ್‌ನ ಹಿಂದಿನ ಮಾದರಿಗೆ ಹೋಲಿಸಿಕೊಂಡರೆ ಇದು ಗಮನಾರ್ಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದ್ದು, ನವೀಕರಣಗೊಂಡ ಬಿಎಂಡಬ್ಲ್ಯು ಎಕ್ಸ್ 4 ಹೊಸ ವೈಶಿಷ್ಟ್ಯಗಳು ಮತ್ತು ಸ್ಟೈಲಿಂಗ್ ಫೀಚರ್ ಗಳನ್ನು ಮುಂಬರುವ ಭಾರತದಲ್ಲಿನ 2022 ಬಿಎಂಡಬ್ಲ್ಯು ಎಕ್ಸ್ 4 ನಲ್ಲಿ ನಿರೀಕ್ಷಿಸಲಾಗಿದೆ.

ಮೊದಲೇ ಹೇಳಿದಂತೆ, ಬಿಎಂಡಬ್ಲ್ಯು ಎಕ್ಸ್4 ನ ನವೀಕರಿಸಿದ ಆವೃತ್ತಿಯ ಔಟ್ ಲುಕ್ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸ ಮಾದರಿಗಳಿಗೆ ಅನುಗುಣವಾಗಿ ಎಕ್ಸ್ 4 ವಿನ್ಯಾಸವನ್ನು ಮಾಡಲಾಗಿದೆ. ಇಷ್ಟು ಬದಲಾವಣೆ ಹೊರತಾಗಿಯು ಬಿಎಂಡಬ್ಲ್ಯು ಎಕ್ಸ್4 ತನ್ನ ಹಿಂದಿನ ಮಾದರಿಯನ್ನೇ ಹೋಲುತ್ತದೆ.

ಈ ಮೂಲಕ ಬಿಎಂಡಬ್ಲ್ಯು ಎಕ್ಸ್ 4ನ ಹೊಸ ಫೇಸ್‌ಲಿಫ್ಟ್ ಆವೃತ್ತಿಯು ವಿವಾದಾಸ್ಪದ ದೊಡ್ಡ ಕಿಡ್ನಿ ಗ್ರಿಲ್ ಜೊತೆಗೆ ತೆಳುವಾದ ಮತ್ತು ಸ್ಲೀಕರ್-ಕಾಣುವ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ. ಮುಂಭಾಗದಲ್ಲಿ ಈ ಬದಲಾವಣೆಗಳ ಹೊರತಾಗಿ, ಹೊಸ ಬಿಎಂಡಬ್ಲ್ಯು ಎಕ್ಸ್4 ದೊಡ್ಡ ಸ್ಪೋರ್ಟಿಯರ್ ನಂತೆ ಕಾಣುವ ಏರ್ ವೆಂಟ್ ಗಳೊಂದಿಗೆ ಮರುಪ್ರೊಫೈಲ್ ಮಾಡಿದ ಮುಂಭಾಗದ ಬಂಪರ್ ಅನ್ನು ಸಹ ಪಡೆದುಕೊಂಡಿದೆ.

ಕಾರ್ ನ ಹಿಂಭಾಗದ ವಿಷಯಕ್ಕೆ ಬಂದರೆ, ಬಿಎಂಡಬ್ಲ್ಯು ಎಕ್ಸ್ 4ನ ಹೊಸ ಫೇಸ್‌ಲಿಫ್ಟ್ ಆವೃತ್ತಿಯು ತೆಳುವಾದ ಮತ್ತು ಸ್ಲೀಕರ್-ಲುಕಿಂಗ್ ಯುನಿಟ್ಸ್, ಷಾರ್ಪ್ ಕ್ರೀಸ್ ಗಳು ಮತ್ತು ನಿಷ್ಕಾಸ ಟಿಪ್ಸ್ ನೊಂದಿಗೆ ಹೊಸ ರಿಪ್ರೊಫೈಲ್ ಮಾಡಿದ ಹಿಂಭಾಗದ ಬಂಪರ್ ಗಳನ್ನು ಹೊಂದಿದೆ.

ಗ್ಲೋಸ್ ಬ್ಲ್ಯಾಕ್ ಇನ್ಸರ್ಟ್ ಗಳಿಂದ ಆದ ಬದಲಾವಣೆಗಳು ಬಿಎಂಡಬ್ಲ್ಯು ಎಕ್ಸ್ 4 ನ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ಹೆಚ್ಚು ಸ್ಪೋರ್ಟಿ ಮತ್ತು ಹೊಸ ಲುಕ್ ನಲ್ಲಿ ಕಾಣುವಂತೆ ಮಾಡುತ್ತವೆ.

ಇದಲ್ಲದೆ, ಬಿಎಂಡಬ್ಲ್ಯು ಕಂಪನಿಯ ಮುಂಬರುವ ಬಿಎಂಡಬ್ಲ್ಯು ಎಕ್ಸ್ 4 ಎಸ್‌ಯುವಿಯ ಬ್ಲ್ಯಾಕ್ ಶ್ಯಾಡೋ ಆವೃತ್ತಿಯ ಬಗ್ಗೆ ಹಿಂಟ್ ನೀಡಿದೆ. ಪ್ರಮಾಣಿತ ಮಾದರಿಗಿಂತ ಭಿನ್ನವಾಗಿ, ಬ್ಲ್ಯಾಕ್ ಶ್ಯಾಡೋ ಎಡಿಷನ್ ಕೇವಲ ಸೀಮಿತ ಸಂಖ್ಯೆಗಳಲ್ಲಿ ಲಭ್ಯವಿರಲಿದೆ. ಹಾಗೆಯೇ ದೇಶದಲ್ಲಿ ಲಭ್ಯವಾಗುವ ಬಿಎಂಡಬ್ಲ್ಯು ಎಕ್ಸ್4 ಬ್ಲ್ಯಾಕ್ ಶ್ಯಾಡೋ ಆವೃತ್ತಿಗಳ ನಿಖರ ಸಂಖ್ಯೆಯನ್ನು ಸ್ಪಷ್ಟಪಡಿಸಿಲ್ಲ.

ಹೊಸ ಬಿಎಂಡಬ್ಲ್ಯು ಎಕ್ಸ್4ನ ಒಳಭಾಗದಲ್ಲಿ ದೊಡ್ಡ 12.35-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಘಟಕವನ್ನು ಹೊಂದಿದೆ. ಅಲ್ಲದೆ ಪರದೆಯ ಕೆಳಗಿನ ಎಸಿ ವೆಂಟ್ ಗಳನ್ನು ಹೆಚ್ಚು ಅನುಪಾತದಲ್ಲಿ ಕಾಣುವಂತೆ ಮರುವಿನ್ಯಾಸಗೊಳಿಸಲಾಗಿದೆ.

ಇವುಗಳಲ್ಲದೆ, ಹೊಸ ಬಿಎಂಡಬ್ಲ್ಯು ಎಕ್ಸ್ 4 ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹವಾಮಾನ ನಿಯಂತ್ರಣದ ಹೊಸ ಸ್ವಿಚ್ ಗೇರ್ ಅನ್ನು ಸಹ ಹೊಂದಿದೆ. ಇದರ ಜೊತಗೆ ಇರುವ ಡ್ಯಾಶ್ ಬೋರ್ಡ್ ವಿನ್ಯಾಸವು ತುಲನಾತ್ಮಕವಾಗಿ ಒಂದೇ ಕಡೆ ಇರಲಿದೆ.

ಹುಡ್ ಕೆಳಗೆ ಬಿಎಂಡಬ್ಲ್ಯು ಎಕ್ಸ್4 ಮೂರು ಎಂಜಿನ್ ಆಯ್ಕೆಗಳಿಂದ ನಿರ್ಮಿಸಲಾಗಿದೆ. ಬೇಸ್ ಎಂಜಿನ್ 2.0 ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಆಗಿದ್ದು, 187ಬಿಎಚ್ ಪಿ ಪೀಕ್ ಪವರ್ ಹೊಂದಿದೆ, ಮತ್ತೊಂದು ಎಂಜಿನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಆಗಿದ್ದು, 248ಬಿಎಚ್ ಪಿ ಪೀಕ್ ಪವರ್ ನೊಂದಿಗೆ ಬಹುತೇಕ ಒಂದೇ ರೀತಿಯ ಸ್ಥಳದ ಅಂತರವನ್ನು ಹೊಂದಿದೆ.

ಮೂರನೆಯದು ದೊಡ್ಡ 3.0 ಲೀಟರ್ 6-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಗಿದ್ದು, 261ಬಿಎಚ್ ಪಿ ಪೀಕ್ ಪವರ್ ಹೊಂದಿದೆ. ಈ ಎಲ್ಲಾ ಎಂಜಿನ್ ಗಳು 8-ಸ್ಪೀಡ್ ಸ್ವಯಂಚಾಲಿತ ಟ್ರಾನ್ಸ್ ಮಿಷನ್ ಅನ್ನು ಪ್ರಮಾಣಿತವಾಗಿ ಜೋಡಿಸಲಾಗಿದೆ.

ಹೊಸ ಬಿಎಂಡಬ್ಲ್ಯು ಎಕ್ಸ್4, ಮರ್ಸಿಡಿಸ್-ಬೆಂಜ್ ಜಿಎಲ್ ಸಿ ಕೂಪೆಗೆ ಪ್ರತಿಸ್ಪರ್ಧಿಯಾಗಲಿದೆ. ಹೊಸ ಬಿಎಂಡಬ್ಲ್ಯು ಎಕ್ಸ್4 ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 60 ಲಕ್ಷದಿಂದ ರೂ. 75 ಲಕ್ಷ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ.

ಬಿಎಂಡಬ್ಲ್ಯು ಕಂಪನಿಯ ಎಕ್ಸ್ 4 ತುಂಬಾ ಸ್ಟೈಲಿಶ್ ಕೂಪೆ ಎಸ್‌ಯುವಿಯಾಗಿದ್ದು, ಐಷಾರಾಮಿ, ಕಾರ್ಯಕ್ಷಮತೆ ಮತ್ತು ವಿನ್ಯಾಸ ಆರಾಮದಾಯಕವಾಗಿದೆ. ನೀವು ಪ್ರೀಮಿಯಂ 5 ಆಸನಗಳ ಎಸ್‌ಯುವಿಗಾಗಿ ಹುಡುಕಾಟದಲ್ಲಿದ್ದರೆ ಹೊಸ ಬಿಎಂಡಬ್ಲ್ಯು ಎಕ್ಸ್ 4 ಯೋಗ್ಯವಾಗಿದೆ ಎಂದು ಹೇಳಬಹುದು.


Click it and Unblock the Notifications








