ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಬಿವೈಡಿ ಕಂಪನಿಯು ಇ6 ಎಲೆಕ್ಟ್ರಿಕ್ ಎಂಪಿವಿ ಬಿಡುಗಡೆಯ ನಂತರ ಭಾರತದಲ್ಲಿ ಮತ್ತಷ್ಟು ಹೊಸ ಇವಿ ಕಾರು ಮಾದರಿಗಳ ಬಿಡುಗಡೆಗೆ ಸಜ್ಜಾಗುತ್ತಿದ್ದು, ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೆ ಸಜ್ಜಾಗುತ್ತಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಭಾರತದಲ್ಲಿ ಮೊದಲ ಹಂತದಲ್ಲಿ ಇ6 ಎಂಪಿವಿ ಕಾರು ಬಿಡುಗಡೆ ಮಾಡಿದ್ದ ಕಂಪನಿಯು ಇದೀಗ ಎಸ್‌ಯುವಿ ವಿಭಾಗಕ್ಕೆ ಹೊಸ ಅಟ್ಟೊ 3 ಪರಿಚಯಿಸುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ಈಗಾಗಲೇ ಟೀಸರ್ ಸಹ ಪ್ರಕಟಿಸುವ ಮೂಲಕ ಹೊಸ ಕಾರು ಬಿಡುಗಡೆ ಯೋಜನೆಯನ್ನು ಖಾತ್ರಿಪಡಿಸಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಮಾರಾಟಗೊಳ್ಳುತ್ತಿರುವ ಬಿವೈಡಿ ಅಟ್ಟೊ 3 ಎಸ್‌ಯುವಿ ಮಾದರಿಯು ಇದೀಗ ಭಾರತದಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿ ಜೆಡ್ಎಸ್ ಇವಿ ಮತ್ತು ಹ್ಯುಂಡೈ ಕೊನಾ ಇವಿ ಕಾರುಗಳಿಗೆ ಇದು ಉತ್ತಮ ಪೈಪೋಟಿಯಾಗಲಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಬಿವೈಡಿ ಕಂಪನಿಯು ಹೊಸ ಅಟ್ಟೊ 3 ಕಾರು ಮಾದರಿಯನ್ನು ಸದ್ಯ ಸಿಂಗಪುರ್, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡುತ್ತಿದ್ದು, ರೈಟ್ ಹ್ಯಾಂಡ್ ಚಾಲಾನಾ ಶೈಲಿ ಹೊಂದಿರುವ ಹೊಸ ಕಾರು ದೇಶಿಯ ಮಾರುಕಟ್ಟೆಗಾಗಿ ಲೆಫ್ಟ್ ಹ್ಯಾಂಡ್ ಚಾಲನಾ ಶೈಲಿ ಸೇರಿದಂತೆ ಕೆಲವು ಹೊಸ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಹೊಸ ಅಟ್ಟೊ 3 ಕಾರು ಮಾದರಿಯನ್ನು ಕಂಪನಿಯು ವಿದೇಶಿ ಮಾರುಕಟ್ಟೆಗಳಿಂದಲೇ ಭಾರತಕ್ಕೆ ಸೆಮಿ ನಾಕ್ಡ್ ಡೌನ್ ಆಮದು ನೀತಿಯಡಿ ತರುವ ಸಾಧ್ಯತೆಗಳಿದ್ದು, ತನ್ನ ಹೊಸ ಕಾರಿನ ಬಿಡಿಭಾಗಗಳನ್ನು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಂಡು ಹೊಸ ಉತ್ಪಾದನಾ ಘಟಕದಲ್ಲಿ ಮರುಜೋಡಣೆ ಮಾಡಿ ಮಾರಾಟ ಮಾಡಲಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ಲಾಂಗ್‌ವೀಲ್ಹ್ ಬೆಸ್ ಹೊಂದಿದ್ದು, ಆರಾಮದಾಯಕ ಪ್ರಯಾಣವನ್ನು ಒದಗಿಸುವುದರ ಜೊತೆಗೆ ಹೆಚ್ಚಿನ ಮೈಲೇಜ್ ಪ್ರೇರಣೆ ಹೊಂದಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಅಟ್ಟೊ 3 ಎಸ್‌ಯುವಿ ಮಾದರಿಯಲ್ಲಿ ಬಿವೈಡಿ ಕಂಪನಿಯು 60.48kWh ಮತ್ತು 49.92kWh ಬ್ಯಾಟರಿ ಪ್ಯಾಕ್ ಆಯ್ಕೆ ನೀಡುವ ಸಾಧ್ಯತೆಯಿದ್ದು, ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಖರೀದಿಸಬಹುದಾಗಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

60.48kWh ಬ್ಯಾಟರಿ ಪ್ಯಾಕ್ ಮಾದರಿಯು ಪ್ರತಿ ಚಾರ್ಜ್‌ಗೆ 420 ಕಿ.ಮೀ ಮೈಲೇಜ್ ಹೊಂದಿದ್ದರೆ 49.92kWh ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಮಾದರಿಯು 320 ಕಿ.ಮೀ ಮೈಲೇಜ್ ಹೊಂದಿದ್ದು, ಉತ್ತಮ ಮೈಲೇಜ್ ಪ್ರೇರಣೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಹೊಸ ಕಾರಿನಲ್ಲಿ ಪರ್ಫಾಮೆನ್ಸ್ ಮೋಟಾರ್ ಕೇವಲ 7.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳಲಿದ್ದು, 201 ಬಿಎಚ್‌ಪಿ ಮತ್ತು 310 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಎಂಟ್ರಿ ಲೆವಲ್ ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಳ್ಳುತ್ತದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಜೊತೆಗೆ ಹೊಸ ಕಾರಿನಲ್ಲಿ ಕಂಪನಿಯು ಅಡ್ವಾನ್ಸ್ ಡ್ರೈವರ್ ಅಸಿಸ್ಟ್(ಎಡಿಎಎಸ್) ಸೌಲಭ್ಯವನ್ನು ಸಹ ಜೋಡಣೆ ಮಾಡಿದ್ದು, ಇದು ಹಲವಾರು ಸುರಕ್ಷಾ ಸೌಲಭ್ಯಗಳೊಂದಿಗೆ ಕಾರು ಚಾಲನೆಯನ್ನು ಸುರಕ್ಷಿತಗೊಳಿಸುತ್ತದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಹಾಗೆಯೇ ಹೊಸ ಕಾರಿನಲ್ಲಿರುವ ಇತರೆ ಫೀಚರ್ಸ್‌ಗಳು ಉತ್ತಮವಾಗಿದ್ದು, 4,455 ಎಂಎಂ ಉದ್ದಳತೆಯೊಂದಿಗೆ 1,875 ಅಗಲ, 2,720 ಎಂಎಂ ವ್ಹೀಲ್‌ಬೆಸ್ ಹೊಂದಿದೆ. ಇದು ಜೆಡ್ಎಸ್ ಇವಿಗಿಂತಲೂ 132 ಎಂಎಂ ಹೆಚ್ಚುವರಿ ಉದ್ದಳತೆಯೊಂದಿಗೆ ಅರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಈ ಮೂಲಕ ಹೊಸ ಕಾರು ಭಾರತದಲ್ಲಿ ಪ್ರಮುಖ ಎರಡು ಬ್ಯಾಟರಿ ಆಯ್ಕೆ ಹೊಂದಿರುವುದರಿಂದ ಎಕ್ಸ್‌ಶೋರೂಂ ಪ್ರಕಾರ ರೂ. 20 ಲಕ್ಷದಿಂದ ರೂ. 24 ಲಕ್ಷದ ತನಕ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಮಾದರಿಗಿಂತಲೂ ತುಸು ಕಡಿಮೆ ಮೈಲೇಜ್‌ ಹೊಂದಿದ್ದರೂ ಫೀಟರ್ಸ್ ಮತ್ತು ತಂತ್ರಜ್ಞಾನ ಸೌಲಭ್ಯದಲ್ಲಿ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಇನ್ನು ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಕಳೆದ ವರ್ಷದ ಕೊನೆಯಲ್ಲಿ ಚಾಲನೆ ನೀಡಿದ್ದ ಬಿವೈಡಿ ಕಂಪನಿಯು ಆರಂಭದಲ್ಲಿ ಪ್ರಮುಖ ಕಾರು ಮಾರಾಟ ಕಂಪನಿಗಳ ಜೊತೆಗೂಡಿ ಕೇವಲ ಬಿ ಟು ಬಿ ಉದ್ದೇಶಕ್ಕಾಗಿ ಹೊಸ ಇ6 ಇವಿ ಕಾರಿನ ಮಾರಾಟ ಆರಂಭಿಸಿತ್ತು. ಇದೀಗ ಕಂಪನಿಯು ವೈಯಕ್ತಿಕ ಕಾರು ಬಳಕೆದಾದರಿಗೂ ಹೊಸ ಇವಿ ಕಾರಿನ ವಿತರಣೆಯನ್ನು ಆರಂಭಿಸಿದ್ದು, ಇದಕ್ಕಾಗಿ ಕಂಪನಿಯು ಪ್ರತ್ಯೇಕ ಮಾರಾಟ ಸೌಲಭ್ಯಕ್ಕಾಗಿ ಅಧಿಕೃತ ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ನಮ್ಮ ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ಸ್ ಜೊತೆಗೂಡಿ ಹೊಸ ಮಾರಾಟ ಮಳಿಗೆಯನ್ನು ಆರಂಭಿಸಿದ್ದು, ಪಿಪಿಎಸ್ ಮೋಟಾರ್ಸ್ ಜೊತೆಗೆ ದಕ್ಷಿಣ ಭಾರತದಲ್ಲಿ ಆರಂಭಿಸುವ ಎರಡನೇ ಮಾರಾಟ ಮಳಿಗೆ ಶುರುಮಾಡಿದೆ.

ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಕಳೆದ ತಿಂಗಳು ವಿಜಯವಾಡದಲ್ಲಿ ಪಿಪಿಎಸ್ ಮೋಟಾರ್ಸ್ ಜೊತೆಗೆ ಹೊಸ ಮಾರಾಟ ಮಳಿಗೆ ಆರಂಭಿಸಿದ್ದ ಬಿವೈಡಿ ಕಂಪನಿಯು ಇದೀಗ ನಮ್ಮ ಬೆಂಗಳೂರಿನ ಯಲಹಂಕದಲ್ಲಿ ಅತಿದೊಡ್ಡ ಇವಿ ಕಾರು ಮಾರಾಟ ಮಳಿಗೆಯನ್ನು ಆರಂಭಿಸಿದೆ. ಹೊಸ ಕಾರು ಮಾರಾಟ ಮಳಿಗೆಗಳಲ್ಲಿ ಮಾರಾಟ, ಮಾರಾಟ ನಂತರದ ಗ್ರಾಹಕರ ಸೇವೆಗಳು ಮತ್ತು ಚಾರ್ಜಿಂಗ್ ಸೌಲಭ್ಯವನನ್ನು ಹೊಂದಿದ್ದು, ಶೀಘ್ರದಲ್ಲಿಯೇ ಹೊಸ ಇ6 ಕಾರು ದೇಶದ ಪ್ರಮುಖ ನಗರಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

More from DriveSpark

Article Published On: Friday, September 16, 2022, 8:45 [IST]
English summary
Byd atto 3 electric suv battery pack options details
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+