ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಬಿವೈಡಿ ಕಂಪನಿಯು ತನ್ನ ಹೊಸ ಇ6 ಎಲೆಕ್ಟ್ರಿಕ್ ಎಂಪಿವಿ ಮಾದರಿಯೊಂದಿಗೆ ದೇಶಿಯ ಮಾರಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಹೊಸ ಕಾರು ಮಾರಾಟಕ್ಕಾಗಿ ದೇಶಾದ್ಯಂತ ಅಧಿಕೃತ ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಕಳೆದ ವರ್ಷದ ಕೊನೆಯಲ್ಲಿ ಚಾಲನೆ ನೀಡಿದ್ದ ಬಿವೈಡಿ ಕಂಪನಿಯು ಆರಂಭದಲ್ಲಿ ಪ್ರಮುಖ ಕಾರು ಮಾರಾಟ ಕಂಪನಿಗಳ ಜೊತೆಗೂಡಿ ಕೇವಲ ಬಿ ಟು ಬಿ ಉದ್ದೇಶಕ್ಕಾಗಿ ಹೊಸ ಕಾರು ಮಾರಾಟ ಆರಂಭಿಸಿತ್ತು. ಇದೀಗ ಕಂಪನಿಯು ವೈಯಕ್ತಿಕ ಕಾರು ಬಳಕೆದಾದರಿಗೂ ಹೊಸ ಇವಿ ಕಾರಿನ ವಿತರಣೆಯನ್ನು ಆರಂಭಿಸಿದ್ದು, ಇದಕ್ಕಾಗಿ ಕಂಪನಿಯು ಪ್ರತ್ಯೇಕ ಮಾರಾಟ ಸೌಲಭ್ಯಕ್ಕಾಗಿ ಅಧಿಕೃತ ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಬ್ರಾಂಡ್ ಅಡಿಯಲ್ಲಿ ಈಗಾಗಲೇ ಮೂರು ಅಧಿಕೃತ ಮಾರಾಟ ಮಳಿಗೆಗಳನ್ನು ತೆರೆದಿರುವ ಬಿವೈಡಿ ಕಂಪನಿಯು ಇದೀಗ ನಾಲ್ಕನೇ ಮಾರಾಟ ಮಳಿಗೆಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭಿಸಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಲ್ಯಾಂಡ್‌‌ಮಾರ್ಕ್ ಸಹಭಾಗೀತ್ವದಲ್ಲಿ ದೆಹಲಿಯ ಓಕ್ಲಾ ಕೈಗಾರಿಕಾ ಪ್ರದೇಶದಲ್ಲಿ ಹೊಸ ಮಾರಾಟ ಮಳಿಗೆಯನ್ನು ಆರಂಭಿಸಿರುವ ಬಿವೈಡಿ ಕಂಪನಿಯು ಮುಂಬರುವ ದಿನಗಳಲ್ಲಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ತನ್ನ ಹೊಸ ಕಾರು ಮಾರಾಟ ಮಳಿಗೆಗಳನ್ನು ಹೆಚ್ಚಿಸುವ ಯೋಜನೆಯಲ್ಲಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಹೊಸ ಮಾರಾಟ ಮಳಿಗೆಗಳಲ್ಲಿ ಮಾರಾಟ, ಮಾರಾಟ ನಂತರದ ಗ್ರಾಹಕರ ಸೇವೆಗಳು ಮತ್ತು ಚಾರ್ಜಿಂಗ್ ಸೌಲಭ್ಯಗಳನ್ನು ಹೊಂದಿದ್ದು, ಮಾರಾಟ ಮಳಿಗೆಗಳಲ್ಲಿ ಮಾತ್ರವಲ್ಲದೇ ವಿವಿಧ ಖಾಸಗಿ ಕಂಪನಿಗಳ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ತೆರೆಯಲಾಗುತ್ತಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

2024ರ ವೇಳೆಗೆ ದೇಶಾದ್ಯಂತ ಬಿವೈಡಿ ಕಂಪನಿಯು ಒಟ್ಟು 18 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸುವ ಭರವಸೆ ನೀಡಿದ್ದು, ಹೆಚ್ಚುತ್ತಿರುವ ಇವಿ ವಾಹನಗಳಿಗೆ ದೇಶದ ಯಾವುದೇ ಪ್ರದೇಶಗಳಿಗೂ ನಿಲುಗಡೆ ಮುಕ್ತ ಚಾರ್ಜಿಂಗ್ ಒದಗಿಸುವ ಗುರಿಹೊಂದಲಾಗಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಇನ್ನು ಬಿವೈಡಿ ಹೊಸ ಕಾರು ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಅತ್ಯುತ್ತಮ ಫೀಚರ್ಸ್‌ ಮತ್ತು ಅತ್ಯಧಿಕ ಮೈಲೇಜ್ ರೇಂಜ್‌‍‌ನೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಶೀಘ್ರದಲ್ಲಿಯೇ ಹೊಸ ಕಾರು ದೇಶದ ಪ್ರಮುಖ ನಗರಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಆರಂಭದಲ್ಲಿ ಫ್ಲೀಟ್ ಆಪರೇಟರ್‌ಗಳು, ಹೋಟೆಲ್ ಉದ್ಯಮಗಳು ಮತ್ತು ಇತರೆ ಕಾರ್ಪೊರೇಟ್ ಸಂಸ್ಥೆಗಳು ಹೊಸ ಇ6 ಕಾರು ಮಾದರಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿಕೊಂಡಿದ್ದು, ಇದೀಗ ಕಂಪನಿಯು ಸಾಮಾನ್ಯ ಗ್ರಾಹಕರಿಗೂ ಹೊಸ ಕಾರು ಖರೀದಿಗೆ ಅವಕಾಶ ನೀಡಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮಾದರಿಯಾಗಿರುವ ಇ6 ಇವಿ ಕಾರು 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 71.6kWh 'ಬ್ಲೇಡ್' ಲಿಥಿಯಂ ಫೆರೋ ಫಾಸ್ಫೇಟ್ (LiFePO4) ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಹೊಸ ಕಾರಿನಲ್ಲಿ ಬ್ಲೇಡ್ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್‌ AC ಮತ್ತು DC ಫಾಸ್ಟ್ ಚಾರ್ಜಿಂಗ್ ಮಾನದಂಡಗಳನ್ನು ಬೆಂಬಲಿಸಲಿದ್ದು, WLTP ಮಾನದಂಡಗಳ ಪ್ರಕಾರ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 415 ಕಿ.ಮೀ ನಿಂದ ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಹೊಸ ಕಾರಿನ ಮೈಲೇಜ್ ಪ್ರಮಾಣವು ಕಾರಿನಲ್ಲಿರುವ ವಿವಿಧ ಡ್ರೈವಿಂಗ್ ಮೋಡ್ ಆಧರಿಸಿ ನಿರ್ಧಾರವಾಗಲಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಹೊಸ ಕಾರಿನಲ್ಲಿರುವ ಎಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದಾಗ ಪೂರ್ತಿಯಾಗಿ ಚಾರ್ಜ್ ಆಗಲು ಗರಿಷ್ಠ 6 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಿದ್ದರೆ ಡಿಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ ಕೇವಲ 35 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಲಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಇ6 ಕಾರಿನಲ್ಲಿರುವ ಕೋಬಾಲ್ಟ್-ಮುಕ್ತ LiFePO4 ಬ್ಯಾಟರಿ ಪ್ಯಾಕ್ ಹೆಚ್ಚು ಸುರಕ್ಷಿತವಾಗಿದ್ದು, ಸ್ಫೋಟ ಮುಕ್ತವಾಗಿರುವ ಈ ಬ್ಯಾಟರಿ ಹೆಚ್ಚು ವಿಶ್ವಾರ್ಹತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಮೇಲೆ ಅಭಿವೃದ್ದಿಗೊಂಡಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳೊಂದಿಗೆ ಉತ್ತಮವಾದ ಚಾಲನಾ ಅನುಭವವನ್ನು ಒದಗಿಸುವ ಹೊಸ ಕಾರು 4,695 ಎಂಎಂ ಉದ್ದ, 1,810 ಎಂಎಂ ಅಗಲ ಮತ್ತು 1,670 ಎಂಎಂ ಎತ್ತರ ಹೊಂದಿದ್ದು, 570 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದುಕೊಂಡಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಹಾಗೆಯೇ ಸ್ಪೋರ್ಟಿ ವಿನ್ಯಾಸದೊಂದಿಗೆ ಹೊಸ ಇ6 ಎಂಪಿವಿ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್‌, ಕ್ರೋಮ್ ಬಾರ್‌ ಒಳಗೊಂಡ ಬಿವೈಡಿ ಲೊಗೊ, ಆಕರ್ಷಕ ಸ್ಪಾಯ್ಲರ್, ಸ್ಲಿಕ್ ಎಲ್ಇಡಿ ಟೈಲ್‌ಲೈಟ್‌ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿದೆ.

ನಾಲ್ಕನೇ ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ

ಹೊಸ ಕಾರಿನಲ್ಲಿ ಹೊರಭಾಗದಲ್ಲಿರುವಂತೆ ಒಳಭಾಗದಲ್ಲಿರುವ ಫೀಚರ್ಸ್‌ಗಳು ಕೂಡಾ ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ನೊಂದಿಗೆ 10 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಲೆದರ್ ಸೀಟ್‌ಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ಸೀಟ್‌ಗಳು ಮತ್ತು ಏರ್ ಫಿಲ್ಟರ್ ಸಿಸ್ಟಂ ಹೊಂದಿದೆ.

More from DriveSpark

Article Published On: Thursday, September 8, 2022, 11:57 [IST]
English summary
Byd india inaugurates its first showroom in delhi details
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+