ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ತನ್ನ ಕಾರಿನಲ್ಲಿ ಪದೆ ಪದೇ ಎಂಜಿನ್ ಸಮಸ್ಯೆ ಕಾಣಿಸುತ್ತಿದೆ, ಸರ್ವಿಸ್‌ ಕೇಂದ್ರಗಳು ಕೂಡ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲವೆಂದು ಕುಪಿತಗೊಂಡ ಕಾರು ಮಾಲೀಕನೊಬ್ಬ ತನ್ನ ವಾಹನವನ್ನು ಶೋರೂಮ್‌ಗೆ ಕೊಂಡೊಯ್ದು ಬೆಂಕಿ ಹಚ್ಚಿದ ವಿಚಿತ್ರ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಜನಪ್ರಿಯ ಕಾರು ತಯಾರಿಕಾ ಕಂಪನಿಯಾದ ಕಿಯಾದ ಕಾರು ಈ ಘಟನೆಯಲ್ಲಿ ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ ಸುಟ್ಟು ಕರಕಲಾಗಿರುವ ಕಾರು ಕಿಯಾ ಸೆಲ್ಟೋಸ್ ಎಂದು ತಿಳಿದುಬಂದಿದೆ. ಮಾಲೀಕ ತನ್ನ ಕಾರಿನಲ್ಲಿ ಎಂಜಿನ್ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಕಾರನ್ನು ಶೋ ರೂಮ್‌ಗೆ ಕೊಂಡೊಯ್ದಿದ್ದಾನೆ.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಅಲ್ಲಿನ ಮ್ಯಾನೇಜರ್‌ಗೆ ಕಾರಿನಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ವಿವರಿಸಿದ್ದಾನೆ. ನಂತರ ಮ್ಯಾನೇಜರ್ ತನ್ನ ಸಿಬ್ಬಂದಿಯನ್ನು ಕರೆದು ಈ ಹಿಂದಿನ ಸರ್ವಿಸ್ ಕುರಿತು ಪ್ರಶ್ನಿಸಿದ್ದಾನೆ. ಈ ಸಂಧರ್ಭದಲ್ಲಿ ಕಾರು ಮಾಲೀಕ ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಈ ವೇಳೆ ಜಗಳ ತಾರಕಕ್ಕೇರಿ ಮಾಲೀಕ ತನ್ನ ಬಾಟಲ್‌ನಲ್ಲಿದ್ದ ಪೆಟ್ರೋಲನ್ನು ಕಿಯಾ ಸೆಲ್ಟಸ್ ಕಾರಿನ ಮೇಲೆ ಸುರಿದಿದ್ದಾನೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಆದರೆ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ, ಬೆಂಕಿಯನ್ನು ನಂದಿಸುವಲ್ಲಿ ವಿಫಲರಾಗಿದ್ದಾರೆ.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಘಟನೆಯಲ್ಲಿ ಸರ್ವೀಸ್ ಸೆಂಟರ್‌ನ ಇಬ್ಬರು ಸಿಬ್ಬಂದಿಗಳಿಗೆ ಗಾಯಗಳಾಗಿದ್ದು, ಇಬ್ಬರಿಗೂ ಸಹ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಘಟನೆಯನ್ನು ವೆಸ್ಟರ್ನ್ ರಾಜಸ್ಥಾನ್ ಡೀಲರ್ ಅಸೋಸಿಯೇಷನ್ ಖಂಡಿಸಿದ್ದು, ಕಾರು ಮಾಲೀಕ ಯಾವ ರೀತಿಯ ಸಮಸ್ಯೆ ಎದುರಿಸಿದ್ದಾನೆ ಎಂಬುದು ತಿಳಿದುಬಂದಿಲ್ಲ.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಘಟನಾ ಸ್ಥಳದಲ್ಲಿ ಆತಂಕವನ್ನು ಸೃಷ್ಟಿಸಿದ ಕುರಿತು ಪೊಲೀಸರಿಗೆ ದೂರು ನೀಡಿದ್ದರಿಂದ ಕೂಡಲೇ ಇಬ್ಬರನ್ನೂ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಇಬ್ಬರೂ ಬಿಡುಗಡೆಯಾಗಿದ್ದು, ಮತ್ತೊಮ್ಮೆ ಕೊಲೆ ಯತ್ನದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಕಾರು ಮಾಲೀಕನ ವಾದ

ಕಾರಿನಲ್ಲಿ ಪದೆ ಪದೇ ಎಂಜಿನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಸರ್ವೀಸ್ ಸೆಂಟರ್‌ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಇದರಿಂದ ಕೋಪಗೊಂಡು ಶೋ ರೂಮ್‌ನಲ್ಲಿಯೇ ಕಾರಿಗೆ ಬೆಂಕಿ ಹಚ್ಚಿರುವುದಾಗಿ ಮಾಲೀಕ ಹೇಳಿಕೊಂಡಿದ್ದಾನೆ.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಕಾರು ಮಾಲೀಕ ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುದ್ದು, ಹಲವು ಬಾರಿ ಈ ಕುರಿತಾಗಿ ಕಾರ್ ಸರ್ವೀಸ್ ಸೆಂಟರ್ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಿಲ್ಲ. ಇದರಿಂದ ಬೇಸತ್ತು ನನ್ನ ಸ್ನೇಹಿತನೊಂದಿಗೆ ಕಾರನ್ನು ಜೋಧ್‌ಪುರದ ಕಿಯಾ ಶೋ ರೂಮ್‌ಗೆ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇನೆ ಎಂದು ಹೇಳಿದ್ದಾನೆ.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಡೆಲಿವರಿ ಪಡೆದ ದಿನವೇ ಕೈಕೊಟ್ಟ ಸೆಲ್ಟೋಸ್

ಈ ಹಿಂದೆ ಹೊಸ ಕಿಯಾ ಸೆಲ್ಟೋಸ್ ಕಾರನ್ನು ಡೆಲಿವರಿ ಪಡೆದ ದಿನವೇ ಮೂರು ಬಾರಿ ಕೈಕೊಟ್ಟ ಘಟನೆ ಪುಣೆಯ ಬಾರಾಮತಿಯ ಧೋನೆ ಕಿಯಾ ಡೀಲರ್‌ಶಿಪ್‌ನಲ್ಲಿ ನಡೆದಿತ್ತು. ಕಿಯಾ ಸೆಲ್ಟೋಸ್ ಅನ್ನು ವಿತರಣೆ ಪಡೆದ ಬಾಲಸೊ ಬಬನ್‌ರಾವ್ ಎಂಬುವವರು ಈ ಕುರಿತು ಅಸಮಾಧಾನ ಹೊರಹಾಕಿದ್ದರು.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಬಲಸೊ ತಮ್ಮ ಹೊಸ ಕಾರನ್ನು ಡೆಲಿವರಿ ಪಡೆಯುತ್ತಿರುವ ಹಿನ್ನೆಲೆ ಸ್ನೇಹಿತರೊಂದಿಗೆ ಡೀಲರ್‌ಶಿಪ್‌ಗೆ ಹೋಗಿದ್ದರು. ಕಾರನ್ನು ಸುಮಾರು 2:30 ಕ್ಕೆ ಹೊರ ತಂದಿದ್ದಾರೆ. ಆದರೆ ಡೆಲಿವರಿಯಾದ ಕೂಡಲೇ ಸಮಸ್ಯೆ ಶುರುವಾಗಿದೆ. ಹೊಚ್ಚಹೊಸ ಕಿಯಾ ಸೆಲ್ಟೋಸ್ ಸ್ಟಾರ್ಟ್‌ ಆಗಿಲ್ಲ ಎಂದು ಬಾಲಸೊ ಅಸಮಾಧಾನ ಹೊರಹಾಕಿದ್ದರು.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಡ್ರೈವಿಂಗ್ ಮಾಡುವಾಗ ಈ ಕಾರಿನಲ್ಲಿ ನನಗೆ ಸಂಪೂರ್ಣ ನಂಬಿಕೆ ಬರುವುದಿಲ್ಲ. ಭವಿಷ್ಯದಲ್ಲಿ ಸಮಸ್ಯೆ ಮರುಕಳಿಸದಂತೆ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ತುರ್ತು ಸಮಯದಲ್ಲಿ ಕಾರು ಸ್ಟಾರ್ಟ್ ಆಗದಿದ್ದರೆ ಏನು ಮಾಡಬೇಕು? ಇದು 2 ದಿನಗಳಲ್ಲಿ ಮೂರು ಬಾರಿ ಸಮಸ್ಯೆಯನ್ನು ತಂದೊಡ್ಡಿದೆ ಎಂದು ವಾಗ್ವಾದಕ್ಕಿಳಿದು ಕಾರುನ್ನು ಹಿಂತಿರುಗಿಸಿದ್ದರು.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಹೀಗೆ ಹತ್ತು ಹಲವು ಪ್ರಕರಣಗಳು ಭಾರತದಲ್ಲಿ ಕಿಯಾ ಕಾರುಗಳ ಕಳಪೆ ಗುಣಮಟ್ಟವನ್ನು ಸಾಭೀತುಪಡಿಸುತ್ತಿವೆ. ಇನ್ನಾದರು ಕಿಯಾ ಕಂಪನಿ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕಿದೆ. ಅಲ್ಲದೇ ಕಾರು ವಿತರಣೆಗೂ ಮುಂಚೆ ಎಲ್ಲಾ ವಿಧಗಳಲ್ಲೂ ಗುಣಮಟ್ಟವನ್ನು ಪರಿಶೀಲಿಸಬೇಕಿದೆ.

ಪದೆ ಪದೇ ಎಂಜಿನ್ ಸಮಸ್ಯೆ, ಪ್ರತಿಕ್ರಿಯಿಸದ ಸಿಬ್ಬಂದಿ: ಶೋ ರೂಮ್‌ನಲ್ಲೇ ಕಿಯಾ ಕಾರಿಗೆ ಬೆಂಕಿಯಿಟ್ಟ ಮಾಲೀಕ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಗ್ರಾಹಕರು ಕೆಟ್ಟ ಉತ್ಪನ್ನಗಳಿಂದ ಸಮಸ್ಯೆಗೆ ಒಳಗಾದಾಗ ಅವರ ಬೆಂಬಲಕ್ಕೆ ನಿಲ್ಲುವಂತಹ ಯಾವುದೇ ಕಾನೂನು ಭಾರತದಲ್ಲಿಲ್ಲ. ಭಾರತದಲ್ಲಿ ಕನ್ಸೂಮರ್ ಕೋರ್ಟ್‌ಗಳಿದ್ದರೂ, ನೇರವಾಗಿ ಕಂಪೆನಿಯೊಂದಿಗೆ ಸಂಪರ್ಕಿಸಿ ಬದಲಿಗೆ ಹೊಸ ಉತ್ಪನ್ನಗಳನ್ನು ಪಡೆಯುವ ವ್ಯವಸ್ಥೆಯೂ ನಮ್ಮಲ್ಲಿಲ್ಲ. ಆದರೆ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಗ್ರಾಹಕರ ಪರವಾಗಿ ನಿಲ್ಲುವ ಕಾನೂನುಗಳಿವೆ. ಅದೇ ರೀತಿಯ ಕಾನೂನುಗಳು ಭಾರತಕ್ಕೂ ಬಂದರೆ ಇಲ್ಲಿನ ಗ್ರಾಹಕರೂ ಸಹ ನಿರಾಳವಾಗಬಹುದು.

Most Read Articles

Kannada
English summary
Car owner burned kia seltos in the showroom
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X