ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ದೇಶದ ಅಗ್ರಗಣ್ಯ ಟೈರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಸಿಯೆಟ್ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ವಿಶೇಷ ವಿನ್ಯಾಸದ ಟೈರ್ ಬಿಡುಗಡೆ ಮಾಡಿದ್ದು, ಎನರ್ಜಿಡ್ರೈವ್ ಸೈಲೆಂಟ್ ಟೈರ್‌ಗಳು ಇವಿ ವಾಹನಗಳ ಅತ್ಯುತ್ತಮ ಆಯ್ಕೆಯಾಗಲಿವೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ದೇಶಾದ್ಯಂತ ಇವಿ ಕಾರುಗಳ ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ವಿವಿಧ ಕಂಪನಿಗಳ ಇವಿ ಕಾರು ಮಾದರಿಗಳಿಗಾಗಿ ಟೈರ್ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಇವಿ ಕಾರುಗಳಿಗೆ ಚಾಲನೆಗೆ ಪೂರಕವಾದ ಎನರ್ಜಿಡ್ರೈವ್ ಸೈಲೆಂಟ್ ಟೈರ್‌ಗಳನ್ನು ಪರಿಚಯಿಸಿರುವ ಸಿಯೆಟ್ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಶ್ರೇಣಿಯನ್ನು ಹೆಚ್ಚಿಸುವಲ್ಲಿ ಇವು ಪರಿಣಾಮಕಾರಿ ಎಂದು ಹೇಳಿಕೊಂಡಿದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಎಲೆಕ್ಟ್ರಿಕ್ ಕಾರ್‌ಗಳಲ್ಲಿ ಎಂಜಿನ್ ಇಲ್ಲದಿರುವ ಕಾರಣ ಕಾರುಗಳ ಕ್ಯಾಬಿನ್ ಸಾಕಷ್ಟು ಶಾಂತವಾಗಿರುತ್ತವೆ. ಈ ವೇಳೆ ಟೈರ್ ಶಬ್ದವು ಕ್ಯಾಬಿನ್ ಒಳಭಾಗದಲ್ಲಿ ಹೆಚ್ಚು ಕೇಳುತ್ತದೆ. ಇದರಿಂದಾಗಿ ಎಲೆಕ್ಟ್ರಿಕ್ ಕಾರಿನ ಕ್ಯಾಬಿನ್‌ನಲ್ಲಿ ಟೈರ್ ಶಬ್ದವನ್ನು ಪರಿಣಾಮಕಾರಿ ತಗ್ಗಿಸುವ ಉದ್ದೇಶದಿಂದಲೇ ಎನರ್ಜಿಡ್ರೈವ್ ಸೈಲೆಂಟ್ ಟೈರ್‌ ಅಭಿವೃದ್ದಿಪಡಿಸಲಾಗಿದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಎನರ್ಜಿಡ್ರೈವ್ ಟೈರ್‌ಗಳ ಮೇಲ್ಮೈ ಸಂಪರ್ಕದಲ್ಲಿ ಕಡಿಮೆ ಶಬ್ದ ಹೊರಹೊಮ್ಮುವಂತೆ ವಿನ್ಯಾಸಗೊಳಿಸಲಾಗಿದ್ದು, ಹೊಸ ತಂತ್ರಜ್ಞಾನವು ಕಂಪನವನ್ನು ಹೀರಿಕೊಳ್ಳುವ ಮೂಲಕ ಶಬ್ದವನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಜೊತೆಗೆ ಎನರ್ಜಿಡ್ರೈವ್ ಟೈರ್‌ಗಳನ್ನು ವಿಶೇಷವಾಗಿ ಮೇಲ್ಮೈ ಸಂಪರ್ಕದಲ್ಲಿ ಕಡಿಮೆ ಎಳೆತವನ್ನು ಉತ್ಪಾದಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಇದು ಎಲೆಕ್ಟ್ರಿಕ್ ಕಾರಿನ ಶ್ರೇಣಿಯನ್ನು ಸಹ ಹೆಚ್ಚಿಸಲು ಸಹಾಯ ಮಾಡುತ್ತದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಹೆಚ್ಚುತ್ತಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಟೋ ಉಪಕರಣ ತಯಾರಕರು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ಬಿಡಿಭಾಗಗಳನ್ನು ಅಭಿವೃದ್ದಿಪಡಿಸುತ್ತಿವೆ. ಅದರಲ್ಲೂ ವಾಹನಗಳ ಸುರಕ್ಷತೆ ಮತ್ತು ಮೈಲೇಜ್‌ನಲ್ಲಿ ಮುಖ್ಯ ಪಾತ್ರ ವಹಿಸುವ ಟೈರ್‌ಗಳು ಸುಧಾರಿತ ತಂತ್ರಜ್ಞಾನ ಹೊಂದುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಭಾರತದಲ್ಲಿ ಸದ್ಯ ಬಜೆಟ್ ಇವಿ ಮಾದರಿಗಳಿಂದ ಹಿಡಿದು ಹಲವಾರು ಐಷಾರಾಮಿ ಇವಿ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಗ್ರಾಹಕರ ಬೇಡಿಕೆಗೆ ಪೂರಕವಾಗಿ ಸಿಯೆಟ್ ಕಂಪನಿಯು ಹೊಸ ಟೈರ್ ಪರಿಚಯಿಸಿರುವ ಗ್ರಾಹಕರಿಗೆ ಆಯ್ಕೆ ಹೆಚ್ಚಿಸಲಿದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಇನ್ನು ದೇಶದಲ್ಲಿ ಮಾರಾಟವಾಗುವ ಟೈರ್‌ಗಳಿಗೆ ಹೊಸ ಮಾನದಂಡಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಹೊಸ ಮಾನದಂಡಗಳನ್ನು ಸಿದ್ದಪಡಿಸಿದ್ದು, ಹೊಸ ಕ್ರಮದೊಂದಿಗೆ ಭಾರತದಲ್ಲಿ ಗುಣಮಟ್ಟ ಮತ್ತು ಸುರಕ್ಷಿತ ಟೈರ್‌ಗಳ ಉತ್ಪಾದನೆಗೆ ಅನುವು ಮಾಡಿಕೊಡುತ್ತಿದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಹೊಸ ಟೈರ್ ಉತ್ಪಾದನಾ ಮಾನದಂಡಗಳು ಮುಂಬರುವ ಅಕ್ಟೋಬರ್ 1ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹೊಸ ಮಾನದಂಡಗಳೊಂದಿಗೆ ಹೊಸ ವಾಹನಗಳಲ್ಲಿ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ. ಟೈರ್‌ಗಳು ಒಂದು ವಾಹನದ ಪ್ರಮುಖ ಅಂಶವಾಗಿದ್ದು, ಟೈರ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡದಿದ್ದರೆ ವಾಹನವು ಎಷ್ಟೇ ಉತ್ತಮವಾಗಿದ್ದರೂ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಅದು ಸೂಪರ್‌ಕಾರ್ ಆಗಿರಲಿ ಅಥವಾ ಟ್ರಕ್ ಆಗಿರಲಿ ಅದರ ಟೈರ್‌ಗಳು ರಸ್ತೆಯ ಸಂಪರ್ಕದ ಏಕೈಕ ಬಿಂದುವಾಗಿರುತ್ತದೆ. ಆದ್ದರಿಂದ ವಾಹನಗಳಲ್ಲಿ ಉತ್ತಮ ಟೈರ್‌ಗಳನ್ನು ಹೊಂದಿರುವುದು ಮುಖ್ಯ ಅಂಶವಾಗಿದ್ದು, ಮಾರುಕಟ್ಟೆಯಲ್ಲಿ ಹಲವಾರು ಮಾದರಿಗಳು ಲಭ್ಯವಿವೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಕೆಲವು ಟೈರ್ ಮಾದರಿಗಳು ಉತ್ತಮ ತಂತ್ರಜ್ಞಾನ ಪ್ರೇರಣೆಯೊಂದಿಗೆ ನಿರ್ಮಾಣಗೊಂಡಿದ್ದರೆ ಇನ್ನು ಕೆಲವು ಟೈರ್ ಮಾದರಿಗಳು ಕಳಪೆ ಗುಣಮಟ್ಟದೊಂದಿಗೆ ಅಗ್ಗದ ದರದಲ್ಲೂ ಖರೀದಿಗೆ ಲಭ್ಯವಿವೆ. ಕಳಪೆ ಟೈರ್ ಮಾದರಿಗಳು ಕೆಲವೊಮ್ಮೆ ಗುಣಮಟ್ಟದ ಕೊರತೆಯಿಂಗಾಗಿ ಅಪಘಾತಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದ್ದು, ಇದರಿಂದ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಕೇಂದ್ರ ಸರ್ಕಾರವು ಟೈರ್ ಉತ್ಪಾದನೆ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಭಾರತದಲ್ಲಿ ಟೈರ್ ಮಾರುಕಟ್ಟೆಯು ಹೆಚ್ಚಾಗಿ ಅಸಂಘಟಿತವಾಗಿದ್ದು, ಅದನ್ನು ನಿಯಂತ್ರಿಸಲಾಗುತ್ತಿಲ್ಲ. ಇದರಿಂದ ಹೊಸ ಮಾನದಂಡಗಳ ಮೂಲಕ ಟೈರ್ ಉತ್ಪಾದನೆಗೆ ಕನಿಷ್ಠ ಗುಣಮಟ್ಟಗಳ ಅಳವಡಿಕೆ ಖಚಿತಪಡಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಟೈರ್ ಉತ್ಪಾದಕರಿಗೆ ಹೊಸ ಮಾನದಂಡಗಳನ್ನು ಪರಿಚಯಿಸುತ್ತಿದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಹೊಸ ಮಾನದಂಡಗಳ ಪ್ರಕಾರ, ಟೈರ್ ಉತ್ಪಾದನೆಗಾಗಿ ಕಾರು, ಬಸ್ ಮತ್ತು ಟ್ರಕ್ ಟೈರ್ ತಯಾರಕರು ರೋಲಿಂಗ್ ರೆಸಿಸ್ಟೆನ್ಸ್, ರೋಲಿಂಗ್ ಸೌಂಡ್ ಮತ್ತು ವೆಟ್ ಗ್ರಿಪ್ ಮಾನದಂಡಗಳನ್ನು ಟೈರ್‌ನಲ್ಲಿ ಅಳವಡಿಸುವುದು ಕಡ್ಡಾಯವಾಗಲಿದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (AMI) 142:2019 ರಲ್ಲಿ ವ್ಯಾಖ್ಯಾನಿಸಲಾದ ಉದ್ಯಮದ ಮಾನದಂಡಗಳು ವಾಹನದ ಟೈರ್ ಗುಣಮಟ್ಟವನ್ನು ವ್ಯಾಖ್ಯಾನಿಸಲಿದ್ದು, ಟೈರ್ ರೆಸಿಸ್ಟೆನ್ಸ್ ಮೂಲಕ ಟೈರ್ ಎಲ್ಲಾ ಭೂಪ್ರದೇಶಗಳಿನ ಹವಾಮಾನವನ್ನು ತಡೆದುಕೊಳ್ಳುವುದನ್ನು ಖಚಿತಪಡಿಸುತ್ತದೆ.

ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿಯೇ ಹೊಸ ಟೈರ್ ಶ್ರೇಣಿ ಪರಿಚಯಿಸಿದ ಸಿಯೆಟ್

ಹಾಗೆಯೇ ರೋಲಿಂಗ್ ಸೌಂಡ್ ಮೂಲಕ ಟೈರ್ ಮೂಲಕ ಟೈರ್ ಘರ್ಷಣೆಯಿಂದಾಗಿ ಉಂಟಾಗುವ ಶಬ್ದ ಮಾಲಿನ್ಯವನ್ನು ತಗ್ಗಿಸಲಿದ್ದು, ವೆಟ್ ಗ್ರಿಪ್ ಮಾನದಂಡವು ಒದ್ದೆಯಾದ ರಸ್ತೆಗಳಲ್ಲೂ ಟೈರ್‌ನ ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

More from DriveSpark

Article Published On: Thursday, July 28, 2022, 19:04 [IST]
English summary
Ceat launched energydrive tyres for electric cars in india
Read more on ಟೈರ್ tyre
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+