50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ಬಸ್ ಮಾದರಿಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಬೃಹತ್ ಯೋಜನೆ ರೂಪಿಸಿದ್ದು, ವಿವಿಧ ರಾಜ್ಯಗಳಿಗಾಗಿ ಬರೋಬ್ಬರಿ 50 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಗೆ ಮುಂದಾಗಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಹೊಸ ಯೋಜನೆ ಅಡಿ ದೇಶಾದ್ಯಂತ ಪ್ರಮುಖ ರಾಜ್ಯಗಳು ನಗರ ಸಾರಿಗೆ ವಿಭಾಗದಲ್ಲಿ ಇವಿ ಬಸ್‌ಗಳನ್ನು ವೇಗವಾಗಿ ಅವಡಿಸಿಕೊಳ್ಳಲು ಸಹಕಾರಿಯಾಗಲಿದ್ದು, 2030 ರ ವೇಳೆಗೆ ಒಟ್ಟು 50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ (ಇ-ಬಸ್‌ಗಳು) ನಿಯೋಜನೆಗೊಳಿಸಲು ಬೃಹತ್ ಯೋಜನೆಯನ್ನು ರೂಪಿಸುತ್ತಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ದೇಶಾದ್ಯಂತ ಪ್ರಮುಖ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಕಡಿತಗೊಳಿಸಲು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬದಲಾಗಿ ಇವಿ ಮಾದರಿಗಳನ್ನು ಹಂತ-ಹಂತವಾಗಿ ಅಳವಡಿಸಿಕೊಳ್ಳುತ್ತಿದ್ದು, ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ಸಂಸ್ಥೆಯು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ ಇಂಡಿಯಾ (WRI ಇಂಡಿಯಾ) ಜೊತೆಗೂಡಿ ಇವಿ ಬಸ್‌ಗಳನ್ನು ಅಳವಡಿಸುವ ಕುರಿತಾಗಿ ಮಹತ್ವದ ನಿರ್ಧಾರ ಪ್ರಕಟಿಸಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಗ್ರ್ಯಾಂಡ್ ಚಾಲೆಂಜ್‌ನ ಯಶಸ್ಸಿನ ನಂತರ CESL ಸಂಸ್ಥೆಯು ಭಾರತದ ಪ್ರಮುಖ 25 ರಾಜ್ಯಗಳಲ್ಲಿ 2030ರ ವೇಳೆಗೆ 50,000 ಎಲೆಕ್ಟ್ರಿಕ್ ಬಸ್‌ಗಳ (ಇ-ಬಸ್‌ಗಳು) ನಿಯೋಜನೆಯನ್ನು ಮಾಡುವ ಗುರಿಹೊಂದಿದ್ದು, ಇದಕ್ಕಾಗಿ ಸುಮಾರು ರೂ. 80 ಸಾವಿರ ಕೋಟಿ ವೆಚ್ಚ ತಗುಲುವುದಾಗಿ ಅಂದಾಜಿಸಲಾಗಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಹೆಚ್ಚುತ್ತಿರುವ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಮೊದಲು ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ವಿದ್ಯುತ್ ಮಾದರಿಗಳ ಬದಲಿಸುವ ಅವಶ್ಯಕತೆಯನ್ನು ಅರಿತಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ಹೊಸ ಯೋಜನೆಯಡಿ 50 ಸಾವಿರ ಇವಿ ಬಸ್‌ಗಳನ್ನು ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಡೀಸೆಲ್ ಮತ್ತು ಸಿಎನ್‌ಜಿ ಬಸ್‌ಗಳಿಗಿಂತಲೂ ಕ್ರಮವಾಗಿ ಶೇಕಡಾ 27 ಮತ್ತು ಶೇಕಡಾ 23 ಅಗ್ಗವಾಗಿರುವ ಎಲೆಕ್ಟ್ರಿಕ್ ಬಸ್ ಮಾದರಿಗಳು ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲಿದ್ದು, ಹಂತ-ಹಂತವಾಗಿ ಇವಿ ಬಸ್‌ಗಳ ಅಳವಡಿಕೆಯನ್ನು ಹೆಚ್ಚಿಸುವುದರಿಂದ ಮಾಲಿನ್ಯ ಪ್ರಮಾಣವು ತಗ್ಗುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಗ್ರ್ಯಾಂಡ್ ಚಾಲೆಂಜ್ ಅಡಿಯಲ್ಲಿ, CESL ಸಂಸ್ಥೆಯು ಮೊದಲ ಹಂತವಾಗಿ ಐದು ಪ್ರಮುಖ ಮಾಹಾನಗರಗಳಲ್ಲಿ 5,450 ಇ-ಬಸ್‌ಗಳನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಸೂರತ್‌ನಲ್ಲಿ ಹೊಸ ಯೋಜನೆಯ ಮೊದಲ ಹಂತದ ಇ-ಬಸ್‌ಗಳು ರೋಡಿಗಿಳಿಯಲಿವೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಹೊಸ ಯೋಜನೆ ಕುರಿತಂತೆ ಥಿಂಕ್-ಟ್ಯಾಂಕ್, ನೀತಿ ಆಯೋಗದೊಂದಿಗೂ ಗ್ರ್ಯಾಂಡ್ ಚಾಲೆಂಜ್‌ನ ವ್ಯಾಪ್ತಿಯನ್ನು ವಿಸ್ತರಿಸಿರುವ CESl ಸಂಸ್ಥೆಯು ಮತ್ತು ಮುಂದಿನ ಏಳು ವರ್ಷಗಳಲ್ಲಿ 50,000 ಇ-ಬಸ್‌ಗಳ ಬೇಡಿಕೆಯನ್ನು ಅಭಿವೃದ್ಧಿಪಡಿಸಲು ನಿರ್ದೇಶಿಸಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

CESL ಸಂಸ್ಥೆಯ ಮೊದಲ ಹಂತದಲ್ಲಿ ಪರಿಚಯಿಸಲಾಗುತ್ತಿರುವ ಪ್ರಮುಖ ಐದು ರಾಜ್ಯಗಳಲ್ಲಿನ ಹಳೆಯ ಬಸ್‌ಗಳ ಡೇಟಾವನ್ನು ಸಿದ್ಧಪಡಿಸುತ್ತಿದ್ದು, ಹೊಸ ಇವಿ ಬಸ್‌ಗಳು ಸೇರ್ಪಡೆಯಾಗುತ್ತಿದ್ದಂತೆ ಹಳೆಯ ಡೀಸೆಲ್ ಬಸ್‌ಗಳನ್ನು ಹಂತ-ಹಂತವಾಗಿ ಬದಲಾಯಿಸಲಾಗುತ್ತದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಇದಕ್ಕಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 25 ರಾಜ್ಯಗಳಲ್ಲಿ ಸುಮಾರು 30,000 ಹಳೆಯ ಬಸ್‌ಗಳನ್ನು ಸ್ಕ್ರ್ಯಾಪ್ ಮಾಡಲು ಯೋಜನೆ ಸಿದ್ಧಪಡಿಸಲು CESL ಗೆ ವಿನಂತಿಸಿದ್ದು, ಗ್ರ್ಯಾಂಡ್ ಚಾಲೆಂಜ್ ಅಡಿ ಇ-ಬಸ್‌ಗಳ ಖರೀದಿಗಾಗಿ ವಿಶ್ವದ ಅತಿದೊಡ್ಡ ಟೆಂಡರ್ ಕರೆಯಲಾಗುತ್ತಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಇವಿ ಬಸ್‌ಗಳ ಉತ್ಪಾದನೆಗಾಗಿ ಹೊಸ ಟೆಂಡರ್ ಕರೆಯಲಿರುವ CESL ಸಂಸ್ಥೆಯು ಸ್ಥಳೀಯ ವಾಹನ ಉತ್ಪಾದನಾ ಕಂಪನಿಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದು, ಇದು ಭಾರತದ ಇವಿ ವಾಹನ ಉತ್ಪಾದನಾ ಕಂಪನಿಗಳಿಗೆ ಇದು ಉತ್ತೇಜನ ಸಿಗಲಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳು ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಅದಕ್ಕೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ಎರಡು ವರ್ಷದೊಳಗಾಗಿ 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಣೆಗೆ ಸಿದ್ದವಾಗುತ್ತಿವೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಕೇಂದ್ರ ಸಾರಿಗೆ ಸಚಿವಾಲಯದ ವಾಹನ್ ಪೋರ್ಟಲ್ ಪ್ರಕಾರ ದೇಶದಲ್ಲಿ ಇದುವರೆಗೆ ಸುಮಾರು 10.60 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, ಅದೇ ಸಮಯದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 1,742 ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕಳೆದ ಎರಡು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, 2021-22ರ ಹಣಕಾಸು ವರ್ಷದಲ್ಲಿ ಒಟ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟವು 4,29,217 ಯುನಿಟ್‌ಗಳಾಗಿದ್ದರೆ, 2020-21 ರ ಆರ್ಥಿಕ ವರ್ಷದಲ್ಲಿ ಇದು 1,34,821 ಯುನಿಟ್‌ಗಳಾಗಿತ್ತು.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

2019-20 ರ ಆರ್ಥಿಕ ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಒಟ್ಟು ಮಾರಾಟವು 1,68,300 ಯುನಿಟ್‌ಗಳಾಗಿದ್ದು, ಕಳೆದು ಮೂರು ವರ್ಷಗಳ ಇವಿ ವಾಹನ ಮಾರಾಟ ಸಂಖ್ಯೆಯು ತೀವ್ರಗತಿಯಲ್ಲಿ ಹೆಚ್ಚಳವಾಗಿರುವ ಸ್ಪಷ್ಟವಾಗಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಸದ್ಯ ವ್ಯಯಕ್ತಿಕ ಬಳಕೆಯ ಇವಿ ವಾಹನಗಳ ಅಳವಡಿಕೆ ತೀವ್ರವಾಗುತ್ತಿದ್ದರೂ ಸಾರ್ವಜನಿಕ ಬಳಕೆಯ ಇವಿ ವಾಹನಗಳ ಅಳವಡಿಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದು, ಕಾರಣಾಂತರಗಳಿಂದ ಸಾರ್ವಜನಿಕ ಬಳಕೆಯ ಇವಿ ವಾಹನಗಳ ಅಳವಡಿಕೆಯಲ್ಲಿ ನಿಧಾನವಾಗುತ್ತಿದೆ.

50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 80 ಸಾವಿರ ಕೋಟಿ ಖರ್ಚು ಮಾಡಲಿದೆ ಕೇಂದ್ರ ಸರ್ಕಾರ

ಇದರಿಂದ ಸಾರ್ವಜನಿಕ ಬಳಕೆ ಇವಿ ವಾಹನಗಳ ಅಳವಡಿಕೆಯನ್ನು ತೀವ್ರಗೊಳಿಸಲು CESL ಸಂಸ್ಥೆಯ ಮೊದಲ ಹಂತದಲ್ಲಿ ಕೆಲವೇ ದಿನಗಳಲ್ಲಿ 5,450 ಇ-ಬಸ್‌ಗಳನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದು, ಹಂತ-ಹಂತವಾಗಿ 2030ರ ವೇಳೆಗೆ 50,000 ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ಯೋಜನೆ ರೂಪಿಸಲಾಗಿದೆ.

Most Read Articles

Kannada
English summary
Central govt to purchase 50000 electric bus in rs 80000 crore
Story first published: Thursday, July 21, 2022, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X