ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುವುದರ ಜೊತೆ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿವೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಅಡಿ ವಿವಿಧ ರಾಜ್ಯ ಸರ್ಕಾರಗಳು ಸಾರಿಗೆ ಇಲಾಖೆಯಲ್ಲೂ ಇವಿ ವಾಹನಗಳನ್ನು ಸೇರ್ಪಡೆಗೊಳಿಸುವ ಮೂಲಕ ಹೊಸ ಬದಲಾವಣೆ ಕಾರಣವಾಗಿವೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಫೇಮ್ 2 ಯೋಜನೆ ಅಡಿ ಸಾರ್ವಜನಿಕ ಸಾರಿಗೆ ಇಲಾಖೆಯಲ್ಲಿ ಮಹತ್ವದ ಬದಲಾವಣೆ ನಿರ್ಧರಿಸಿರುವ ಚಂಡೀಗಢ ಸಾರಿಗೆ ಇಲಾಖೆಯು ಹೊಸದಾಗಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ್ದು, ಡೀಸೆಲ್ ಚಾಲಿತ ಬಸ್‌ಗಳ ಸ್ಥಾನಕ್ಕೆ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಚಂಡೀಗಢ ಸಾರಿಗೆ ಇಲಾಖೆಯ ಬೇಡಿಕೆ ಅನ್ವಯ ಅಶೋಕ್ ಲೇಲ್ಯಾಂಡ್ ಕಂಪನಿಯು 40 ಅತ್ಯುತ್ತಮ ದರ್ಜೆಯ ಎಲೆಕ್ಟ್ರಿಕ್ ಬಸ್‍ಗಳನ್ನು ವಿತರಿಸಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಹೊಸ ಇವಿ ಬಸ್‌ಗಳನ್ನು ಸ್ವಿಚ್ ಮೊಬಿಲಿಟಿ ಆಟೋಮೋಟಿವ್ ಲಿಮಿಟೆಡ್ ಕಂಪನಿಯು ನಿರ್ವಹಣೆ ಮಾಡಲಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಫೇಮ್ 2 ಯೋಜನೆಯಡಿಯಲ್ಲಿ ಈ 40 ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಣೆ ಮಾಡಲು ಸ್ವಿಚ್ ಮೊಬಿಲಿಟಿ ಆಟೋಮೋಟಿವ್ ಲಿಮಿಟೆಡ್ ಕಂಪನಿಯು ಗುತ್ತಿಗೆ ಪಡೆದುಕೊಂಡಿದ್ದು, ಹೊಸ ಎಲೆಕ್ಟ್ರಿಕ್ ಬಸ್‌ಗಳು ಪ್ರತಿ ವರ್ಷ ಸರಾಸರಿ 1700 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿವೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಕೇಂದ್ರ ಸರ್ಕಾರವು ಕಳೆದ ವರ್ಷ ಫೇಮ್ 2 ಯೋಜನೆ ಅಡಿಯಲ್ಲಿ ಚಂಡೀಗಢ ಸಾರಿಗೆ ಇಲಾಖೆಗೆ 80 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಅನುಮೋದನೆ ನೀಡಿದ್ದು, ಚಂಡೀಗಢ ಸಾರಿಗೆ ಇಲಾಖೆಯು 2027-28ರ ವೇಳೆಗೆ ಈ ಎಲ್ಲಾ ಪಳೆಯುಳಿಕೆ ಇಂಧನ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳೊಂದಿಗೆ ಬದಲಾಯಿಸುವ ಗುರಿ ಹೊಂದಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಸ್ತುತ 350ಕ್ಕೂ ಹೆಚ್ಚು ಡೀಸೆಲ್ ಬಸ್ಸುಗಳು ಸ್ಥಳೀಯ ಮತ್ತು ಉಪನಗರ ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, ಶೀಘ್ರದಲ್ಲಿಯೇ ಇನ್ನುಳಿದ ಎಲೆಕ್ಟ್ರಿಕ್ ಬಸ್ ವಿತರಣೆ ಪಡೆದುಕೊಳ್ಳುವುದಾಗಿ ಮಾಹಿತಿ ಹಂಚಿಕೊಂಡಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಎಲೆಕ್ಟ್ರಿಕ್ ಬಸ್‌ಗಳ ಸೇವೆ ಆರಂಭಕ್ಕೂ ಮುನ್ನ ಚಾರ್ಜಿಂಗ್ ಸೌಲಭ್ಯಕ್ಕಾಗಿ ಸ್ವಿಚ್ ಮೊಬಿಲಿಟಿ ಆಟೋಮೋಟಿವ್ ಲಿಮಿಟೆಡ್ ಕಂಪನಿಯು ನಿಗದಿತ ಮಾರ್ಗಗಳಲ್ಲಿ ಪ್ರಮುಖ ಬಸ್ ಡಿಪೋಗಳಲ್ಲಿ ಅಗತ್ಯ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಟ್ಟದ ಚಾರ್ಜ್ ಮಾಡಬಹುದಾಗಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಅಶೋಕ್ ಲೇಲ್ಯಾಂಡ್ ಹೊಸ ಎಲೆಕ್ಟ್ರಿಕ್ ಬಸ್‌ಗಳು ಪ್ರತಿ ಚಾರ್ಜ್‌ಗೆ 150 ಕಿ.ಮೀ ದಿಂದ 180 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕ್ಲಚ್ ಮತ್ತು ಗೇರ್ ಶಿಫ್ಟಿಂಗ್ ಇಲ್ಲದೆ ಆರಾಮವಾದ ಚಾಲನಾ ಅನುಭವವನ್ನು ಒದಗಿಸುವ ಹೊಸ ಇವಿ ಬಸ್‌ಗಳು ಸಮರ್ಥ ಕಾರ್ಯಾಚರಣೆಗಾಗಿ ರಿಜನರೇಟಿಂಗ್ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಅಪ್ಲಿಕೇಶನ್ ಮತ್ತು ಕಸ್ಟಮೈಸ್ ಮಾಡಬಹುದಾದ ಸೌಲಭ್ಯ ಹೊಂದಿವೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಇನ್ನು ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢನಲ್ಲಿ ಶೀಘ್ರದಲ್ಲಿಯೇ ಹೊಸ ಎಲೆಕ್ಟ್ರಿಕ್ ವಾಹನ ನೀತಿ ಜಾರಿಗೆ ನಿರ್ಧರಿಸಿದ್ದು, 2022 ಎಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ಇವಿ ನೀತಿ ಅಡಿ ಇವಿ ವಾಹನ ಖರೀದಿದಾರರಿಗೆ ಗರಿಷ್ಠ ಮಟ್ಟದ ಸಬ್ಸಡಿ ನೀಡಲು ತಯಾರಿ ನಡೆಸಲಾಗುತ್ತಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಹೊಸ ಇವಿ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು, ಕಾರು ಮತ್ತು ತ್ರಿ ಚಕ್ರವಾಹನಗಳಿಗೆ ಹೆಚ್ಚಿನ ಮಟ್ಟದ ಸಬ್ಸಡಿ ದೊರೆಯಲಿದ್ದು, ಮುಂದಿನ ಐದು ವರ್ಷಗಳ ಅವಧಿಗಾಗಿ ಘೋಷಣೆ ಮಾಡಲಾಗುತ್ತಿರುವ ಹೊಸ ಇವಿ ನೀತಿಯು ಕೇಂದ್ರಾಡಳಿತ ಪ್ರದೇಶದಲ್ಲಿನ ಇವಿ ವಾಹನ ಬಳಕೆಗೆ ಹೆಚ್ಚಿನ ಪ್ರೊತ್ಸಾಹ ದೊರೆಯಲಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಹೊಸ ಎಲೆಕ್ಟ್ರಿಕ್ ವಾಹನ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ. 30 ಸಾವಿರ ತನಕ ಸಬ್ಸಡಿ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ ಗರಿಷ್ಠ ರೂ.1.50 ಲಕ್ಷದ ತನಕ ಸಬ್ಸಡಿ ಮತ್ತು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಖರೀದಿದಾರರಿಗೆ ಗರಿಷ್ಠ ರೂ. 40 ಸಾವಿರ ತನಕ ಸಬ್ಸಿಡಿ ದೊರೆಯಬಹುದಾಗಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಜೊತೆಗೆ ಹೊಸ ಇವಿ ನೀತಿ ಅಡಿಯಲ್ಲಿ ಅಗತ್ಯ ಪ್ರಮಾಣದ ಇವಿ ಚಾರ್ಜಿಂಗ್ ನಿಲ್ದಾಣಗಳು ಆರಂಭಗೊಳ್ಳಲಿದ್ದು, ಇವಿ ವಾಹನ ಖರೀದಿದಾರರಿಗೆ ಮಾತ್ರವಲ್ಲದೆ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಖಾಸಗಿ ಸಂಸ್ಥೆಗಳಿಗೂ ಹೆಚ್ಚಿನ ಮಟ್ಟದ ಸಬ್ಸಡಿ ಪ್ರೊತ್ಸಾಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಫೇಮ್ 2 ಯೋಜನೆ ಅಡಿ 40 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿದ ಚಂಡೀಗಢ ಸಾರಿಗೆ ಇಲಾಖೆ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಇವಿ ವಾಹನ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

More from DriveSpark

Article Published On: Friday, February 18, 2022, 11:32 [IST]
English summary
Chandigarh transport corporation adds 40 ashok leyland electric bus
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+