Just In
- 56 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 17 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 18 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- Finance
ಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟು
- News
Breaking: ಯುಪಿ ಉಪಚುನಾವಣೆ: ರಾಂಪುರದಲ್ಲಿ ಎಸ್ಪಿ ಅಭ್ಯರ್ಥಿ, ಅಜಂಗಢದಲ್ಲಿ ಬಿಜೆಪಿ ಮುನ್ನಡೆ
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ರಾಜಧಾನಿಯಲ್ಲಿ ಶೀಘ್ರದಲ್ಲಿಯೇ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿವೆ 100 ಹೊಸ ಇವಿ ಚಾರ್ಜಿಂಗ್ ನಿಲ್ದಾಣಗಳು
ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡಲಾಗುತ್ತಿರುವುದರಿಂದ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಹೊಸ ಯೋಜನೆಗಳ ಪರಿಣಾಮ ಇವಿ ವಾಹನಗಳ ನೋಂದಣಿ ಪ್ರಮಾಣವು ಸಾಕಷ್ಟು ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚುತ್ತಿರುವ ಪರಿಣಾಮ ಇವಿ ವಾಹನಗಳು ಇನ್ನು ಹೆಚ್ಚಿನ ಮಟ್ಟದಲ್ಲಿ ರಸ್ತೆಗಿಳಿಯುತ್ತಿವೆ.

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಹೆಚ್ಚಿಸಲಾಗುತ್ತಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ವಿವಿಧ ರಾಜ್ಯಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ನಿಲ್ದಾಣ ಕಾರ್ಯಾರಂಭಕ್ಕೆ ಸಿದ್ದವಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡಾ ಹೆಚ್ಚಿನ ಸಂಖ್ಯೆಯ ಚಾರ್ಜಿಂಗ್ ನಿಲ್ದಾಣಗಳು ಕಾರ್ಯಾರಂಭಿಸುತ್ತಿದ್ದು, ಜೂನ್ ಅಂತ್ಯಕ್ಕೆ ದೆಹಲಿ ಹೊಸದಾಗಿ ಸುಮಾರು 100 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಆರಂಭಗೊಳ್ಳುತ್ತಿವೆ.

ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಪಾರ್ಕಿಂಗ್ ಸ್ಥಳಗಳಲ್ಲಿ, ಮಾಲ್‌ಗಳಲ್ಲಿ, ಸೂಪರ್ ಮಾರುಕಟ್ಟೆಗಳಲ್ಲಿ ಸ್ಥಳ ಲಭ್ಯತೆ ಆಧರಿಸಿ ಹೊಸ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಲಾಗಿತ್ತಿದ್ದು, ಇವಿ ವಾಹನಗಳಿಗೆ ನೀಡಲಾಗುವ ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ ರೂ. 2 ನಿಗದಿಪಡಿಸಿದೆ.

ಇದು ಇವಿ ವಾಹಗಳಿಗೆ ಇತರೆ ರಾಜ್ಯಗಳಲ್ಲಿ ನೀಡುವ ವಿದ್ಯುತ್‌ಗಿಂತಲೂ ಅತಿ ಕಡಿಮೆ ದರವಾಗಿದ್ದು, ಆರಂಭದಲ್ಲಿ ಇವಿ ವಾಹನಗಳನ್ನು ಉತ್ತೇಜಿಸಲು ದೆಹಲಿ ಸರ್ಕಾರ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸಲು ನಿರ್ಧರಿಸಿದೆ.

ದೇಶಾದ್ಯಂತ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿರುವುದರಿಂದ ವಾಯು, ಶಬ್ದ ಮಾಲಿನ್ಯ ಕಡಿಮೆ ಮಾಡಿ ಕಾರ್ಬನ್ ಹೊರಸೂಸುವಿಕೆ ತಗ್ಗಿಸಲು ಸಹಕಾರಿಯಾಗುತ್ತಿದ್ದು, ಇ-ವಾಹನ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿವಿಧ ರಾಜ್ಯ ಸರ್ಕಾರಗಳು ಹಲವು ಹೊಸ ಯೋಜನೆಗಳನ್ನು ಆರಂಭಿಸುತ್ತಿವೆ.

ದೆಹಲಿಯಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲೂ ಕೂಡಾ ಇವಿ ವಾಹನಗಳ ಹೆಚ್ಚಳಕ್ಕಾಗಿ ಹಲವಾರು ಹೊಸ ಯೋಜನೆಗಳನ್ನು ಆರಂಭಿಸಿದ್ದು, ಇನ್ನೆರಡು ತಿಂಗಳಿನಲ್ಲಿ ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಬರೋಬ್ಬರಿ ಒಂದು ಸಾವಿರ ಹೊಸ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಇಂಧನ ಸಚಿವ ವಿ ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ.

ಮುಂದಿನ ತಿಂಗಳಾಂತ್ಯಕ್ಕೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ಪ್ರವಾಸಿ ತಾಣಗಳು, ಹೆದ್ದಾರಿ ಮತ್ತು ಸರಕಾರಿ ಕಚೇರಿ ಆವರಣದಲ್ಲಿ ಕನಿಷ್ಠ ಒಂದು ಸಾವಿರ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದಿರುವ ಇಂಧನ ಸಚಿವರು ಇ-ವಾಹನ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ಇನ್ನು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇವಿ ವಾಹನ ಮಾರಾಟವು ಕಳೆದ ಕೆಲ ತಿಂಗಳಿನಿಂದ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ರಾಜ್ಯ ಸಾರಿಗೆ ಇಲಾಖೆಯಲ್ಲಿ ಮೊದಲ ಬಾರಿಗೆ ಇವಿ ವಾಹನಗಳ ನೋಂದಣಿ ಪ್ರಮಾಣ 1 ಲಕ್ಷ ಮಾದರಿಗಳ ಗುರಿತಲುಪಿದೆ.

ಇವಿ ವಾಹನಗಳ ನೋಂದಣಿ ಮೊದಲ ಸ್ಥಾನದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮೊದಲ ಸ್ಥಾನದಲ್ಲಿದ್ದು, ತದನಂತರ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, ಇವಿ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಕೂಡಾ ಹೆಚ್ಚಳವಾಗುತ್ತಿದೆ.

ಮಾಹಿತಿಗಳ ಪ್ರಕಾರ ದೇಶಾದ್ಯಂತ ಇದುವರೆಗೆ ಸುಮಾರು 10 ಲಕ್ಷ ಇವಿ ವಾಹನಗಳು ನೋಂದಣಿಯಾಗಿವೆ ಎನ್ನಲಾಗಿದ್ದು, ಸಾಮಾನ್ಯ ವಾಹನಗಳ ನೋಂದಣಿ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಇದು ತೀರಾ ಕಡಿಮೆ ಪ್ರಮಾಣ ಎನ್ನಬಹುದು. ಹೀಗಾಗಿ ಇವಿ ವಾಹನಗಳ ಉತ್ತೇಜನಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇವಿ ವಾಹನಗಳ ಹೆಚ್ಚಳಕ್ಕೆ ಮುಖ್ಯವಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲಾಗುತ್ತಿದೆ.

ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಇವಿ ವಾಹನ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಸಹ ಕ್ರಮ ಕೈಗೊಳ್ಳಲಾಗುತ್ತಿದೆ.

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆಯನ್ನು ಆರಂಭಿಸುತ್ತಿವೆ.