ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ದೇಶದಲ್ಲಿ ಇಂಧನ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ. ಇದರ ಪರಿಣಾಮವಾಗಿ ಹೆಚ್ಚಿನ ಜನರು ಈಗ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಈ ವೇಳೆ ಟಾಟಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಇತ್ತೀಚೆಗೆ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿತು.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಈ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.49 ಲಕ್ಷವಾಗಿದೆ. ಅಕ್ಟೋಬರ್ 10ರಿಂದ ಬುಕಿಂಗ್ ಆರಂಭಿಸಲಿರುವ ಟಾಟಾ ಮೋಟಾರ್ಸ್ ಕಂಪನಿಯು 2023ರ ಆರಂಭದಲ್ಲಿ ವಿತರಣೆ ಪ್ರಾರಂಭಸುದಾಗಿ ಹೇಳಿದೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಟಾಟಾ ಕಂಪನಿಯು 2026ರ ವೇಳೆಗೆ ಹತ್ತು ಎಲೆಕ್ಟ್ರಿಕ್ ವಾಹನಗಳ ಪೋರ್ಟ್‌ಫೋಲಿಯೊವನ್ನು ಹೊಂದಲು ಟಾಟಾದ ಯೋಜನೆಗಳ ಭಾಗವಾಗಿದೆ. ಇದರ ನೆಟ್‌ವರ್ಕ್ ಆಗಿ 80 ಹೊಸ ನಗರಗಳನ್ನು ಪ್ರವೇಶಿಸಿದೆ. 165ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲಾಗಿದೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು IP67-ರೇಟೆಡ್ 24 kWh ಮತ್ತು 19.2 kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದ್ದು, ಮೊದಲನೆಯದು 315 ಕಿ.ಮೀ ರೇಂಜ್ ಅನ್ನು ನೀಡಿದರೆ, ಎರಡನೆಯದು ಸಿಂಗಲ್ ಚಾರ್ಜ್‌ನಲ್ಲಿ 250 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಕೊಡುಗೆಯನ್ನು ಹೆಚ್ಚು ಆಕರ್ಷಕವಾಗಿಸಲು, ಟಾಟಾ ಎಲೆಕ್ಟ್ರಿಕ್ ಹ್ಯಾಚ್ ಅನ್ನು ಎಂಟು ವರ್ಷ ಅಥವಾ 1.60 ಲಕ್ಷ ಕಿಮೀ ವಾರಂಟಿಯೊಂದಿಗೆ (ಯಾವುದು ಮೊದಲು ಬರುತ್ತದೆಯೋ ಅದು) ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಬರುತ್ತದೆ. ಹೆಚ್ಚಿನ ಅನುಕೂಲಕ್ಕಾಗಿ, ನಾಲ್ಕು ಚಾರ್ಜಿಂಗ್ ಆಯ್ಕೆಗಳು ಸಹ ಲಭ್ಯವಿದೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಟಿಯಾಗೋ ಎಲೆಕ್ಟ್ರಿಕ್ ಕಾರಿನಲ್ಲಿ 3.3 kW ಎಸಿ ಚಾರ್ಜ್ ಮತ್ತು 7.2 kW ಎಸಿ ಚಾರ್ಜ್ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗಿದೆ. 7.2 kW ಎಸಿ ಚಾರ್ಜ್ ಸೌಲಭ್ಯದ ಮೂಲಕ 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. 50kW ಸಾಮರ್ಥ್ಯದ ಡಿಸಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 57 ನಿಮಿಷಗಳಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜ್ ಮಾಡಬಹುದಾಗಿದೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಇನ್ನು 15ಎಎಂಪಿ ಹೋಂ ಚಾರ್ಜರ್ ಮೂಲಕ ಚಾರ್ಜ್‌ ಮಾಡಿದ್ದಲ್ಲಿ ಕನಿಷ್ಠ 15ರಿಂದ 18 ಗಂಟೆ ತೆಗೆದುಕೊಳ್ಳುತ್ತದೆ. ಸ್ವದೇಶಿ ತಯಾರಕರು ಹೇಳುವಂತೆ ಟಿಯಾಗೋ ಎಲೆಕ್ಟ್ರಿಕ್ ಕಾರು 1,000 ರೂ. 1,100 ಕಿಮೀ ಚಾಲನೆಗೆ ಇದು ಹೆಚ್ಚು ಆಕರ್ಷಕವಾದ ಪ್ರತಿಪಾದನೆಯಾಗಿದೆ ಮತ್ತು 250 ಕಿಮೀಗೆ 20 ಯೂನಿಟ್‌ಗಳ ಬಳಕೆಯೊಂದಿಗೆ, ನೀವು ಪ್ರತಿ ಕಿ.ಮೀ.ಗೆ 60 ಪೈಸೆ ವೆಚ್ಚವಾಗುತ್ತದೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಈ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೆಡ್‌ಲೈಟ್ ಸುತ್ತಲೂ ಬ್ಲ್ಯೂ ಹೈಲೈಟ್ಸ್ ನೀಡಲಾಗಿದ್ದು, ಕಾರಿನ ಒಳಭಾಗದ ವಿನ್ಯಾಸದಲ್ಲೂ ಕೆಲವು ಹೊಸ ಫೀಚರ್ಸ್ ಹೊರತುಪಡಿಸಿ ಸಾಮಾನ್ಯ ಮಾದರಿಯಂತೆಯೇ ಆಕರ್ಷಣೆಯಾಗಿದೆ. ಎಲೆಕ್ಟ್ರಿಕ್ ಮಾದರಿಯಾಗಿ ಗುರುತಿಸಲು ಬ್ಲ್ಯೂ ಆಕ್ಸೆಂಟ್ ಸಹಕಾರಿಯಾಗಿದ್ದು, ಗೇರ್ ಸ್ಥಾನದಲ್ಲಿ ಇದೀಗ ಡ್ರೈವ್ ಮೋಡ್ ಡಯಲ್ ನೀಡಲಾಗಿದೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಈ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ 7 ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೇ, ಅಂಡ್ರಾಯಿಡ್ ಮತ್ತು ಆಟೋ ಕಾರ್ ಪ್ಲೇ, 8 ಸ್ಪೀಕರ್ಸ್ ಹರ್ಮನ್ ಆಡಿಯೋ ಸಿಸ್ಟಂ, ಜೆಡ್ ಕನೆಕ್ಟ್ ಟೆಲಿಮ್ಯಾಟಿಕ್ ಸಿಸ್ಟಂ ಹೊಂದಿದ್ದು, ಪ್ರೀಮಿಯಂ ಅನುಭವಕ್ಕಾಗಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್ಸ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಸ್ಟಾರ್ಟ್ ಮತ್ತು ಸ್ಟಾಪ್ ಪುಶ್ ಬಟನ್ ಅನ್ನು ಹೊಂದಿದೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಸುರಕ್ಷತೆಗಾಗಿ ಈ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, 4 ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೀಟ್ ಬೆಲ್ಟ್ ರಿಮೆಂಡರ್ ಅನ್ನು ನೀಡಲಾಗಿದೆ. ಗ್ರಾಹಕರು ಈ ಹೊಸ ಕಾರನ್ನು ಟೀಲ್ ಬ್ಲ್ಯೂ, ಡೇ ಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಮಿಡ್‌ನೈಟ್ ಪ್ಲಮ್ ಮತ್ತು ಟ್ರೋಪಿಕಲ್ ಮಿಸ್ಟ್ ಬಣ್ಣಗಳಲ್ಲಿ ಖರೀದಿಸಬಹುದು.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟಾಟಾ ಕಂಪನಿಯು ಸಿಟಿ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ ನೀಡಿದ್ದು, ಹೊಸ ಕಾರಿನ 19.2 kWh ಬ್ಯಾಟರಿ ಆಯ್ಕೆಯ ಮಾದರಿಯು 60 ಬಿಎಚ್‌ಪಿ ಮತ್ತು 105 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 24 kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು 74 ಬಿಎಚ್‌ಪಿ ಮತ್ತು 114 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಕೈಗೆಟುಕುವ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ, ನೆಕ್ಸಾನ್ ಮ್ಯಾಕ್ಸ್ ಇವಿ, ಟಿಗೋರ್ ಇವಿ ಮತ್ತು ಎಕ್ಸ್‌ಪ್ರೆಸ್ಸ್-ಟಿ ಇವಿ ಕಾರುಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಕಂಪನಿಯು ಇತ್ತೀಚೆಗೆ ಗ್ರಾಹಕರ ಬೇಡಿಕೆಯೆಂಂತೆ ಬಜೆಟ್ ಬೆಲೆಯೊಳಗೆ ಟಿಯಾಗೋ ಇವಿ ಮಾದರಿಯನ್ನು ಹೊರತಂದಿದೆ. ಇದರಿಂದ ಹೆಚ್ಚಿನ ಗ್ರಾಹಕರ ಗಮನಸೆಳೆಯಬಹುದು.

Most Read Articles

Kannada
English summary
Do you know the running cost of the new tata tiago ev find here all details
Story first published: Wednesday, October 5, 2022, 14:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X