ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ದೇಶದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ನವೆಂಬರ್ 7 ರಿಂದ ತನ್ನ ಕಾರುಗಳು ಮತ್ತು SUV ಗಳ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯು ಈ ವರ್ಷ ನಾಲ್ಕನೇ ಬಾರಿಗೆ ಮಾದರಿ ಶ್ರೇಣಿಯಾದ್ಯಂತ ಬೆಲೆ ಪರಿಷ್ಕರಣೆಗಳನ್ನು ಜಾರಿಗೆ ತಂದಿದೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಟಾಟಾದ ಸಂಪೂರ್ಣ ಪ್ರಯಾಣಿಕ ವಾಹನ ಶ್ರೇಣಿಯು ಶೇಕಡಾ 0.9 ರಷ್ಟು ಬೆಲೆ ಏರಿಕೆಗೆ ಸಾಕ್ಷಿಯಾಗಿದೆ. ಹೊಸ ಬೆಲೆಗಳು ನವೆಂಬರ್ 9, 2022 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಘೋಷಿಸಿದೆ. ಒಟ್ಟಾರೆ ಇನ್‌ಪುಟ್ ವೆಚ್ಚದಲ್ಲಿ ಗಮನಾರ್ಹ ಏರಿಕೆಯ ಪರಿಣಾಮವಾಗಿ ಈ ಹೊಸ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಬೆಲೆ ಏರಿಕೆಯು ಮಾಡೆಲ್ ಮತ್ತು ವೇರಿಯಂಟ್‌ಗೆ ಅನುಗುಣವಾಗಿ ಬದಲಾಗುತ್ತದೆ. ಟಾಟಾ ಮೋಟಾರ್ಸ್ ಪ್ರಸ್ತುತ ತನ್ನ ಭಾರತೀಯ ಮಾದರಿ ಶ್ರೇಣಿಯಲ್ಲಿ ಟಿಯಾಗೋ, ಟಿಯಾಗೋ EV, ಟಿಗೋರ್, ಟಿಗೋರ್ EV, ಆಲ್ಟ್ರೋಜ್, ಪಂಚ್, ನೆಕ್ಸಾನ್, ನೆಕ್ಸಾನ್ EV, ಹ್ಯಾರಿಯರ್ ಮತ್ತು ಸಫಾರಿ ಸೇರಿದಂತೆ ಹತ್ತು ಮಾದರಿಗಳನ್ನು ಹೊಂದಿದೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಸದ್ಯ ದೇಶದಲ್ಲಿ ಎಸ್‌ಯುವಿ ವೀಭಾಗದಲ್ಲಿ ಉತ್ತಮ ಬೇಡಿಕೆಯೊಂದಿಗೆ ಟಾಟಾ ಮೋಟಾರ್ಸ್ ಮುನ್ನುಗ್ಗುತ್ತಿದೆ. ಆದರೆ ಇದೀಗ ಬೆಲೆಯೇರಿಕೆಯಿಂದ ಟಾಟಾ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿಕರುವ ಗ್ರಾಹಕರಿಗೆ ಟಾಟಾ ಮೋಟಾರ್ಸ್ ಸಿಹಿ ಸುದ್ದಿಯನ್ನು ಸಹ ಹಂಚಿಕೊಂಡಿದೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಈ ತಿಂಗಳ ಬೆಲೆ ಏರಿಕೆಯ ಹೊರತಾಗಿಯೂ ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಭಾರಿ ರಿಯಾಯಿತಿ ಕೊಡುಗೆಗಳು ಮತ್ತು ಪ್ರಯೋಜನಗಳನ್ನು ಪರಿಚಯಿಸಿದೆ. ಅಂದರೆ ನವೆಂಬರ್ 2022 ರಲ್ಲಿ, ಕಂಪನಿಯು ತನ್ನ ನಾಲ್ಕು ಜನಪ್ರಿಯ ಕಾರುಗಳಾದ ಟಿಯಾಗೊ, ಟಿಗೊರ್, ಹ್ಯಾರಿಯರ್ ಮತ್ತು ಸಫಾರಿ ಮೇಲೆ 65,000 ರೂ. ವರೆಗೆ ರಿಯಾಯಿತಿ ಮತ್ತು ಪ್ರಯೋಜನಗಳನ್ನು ಸಿದ್ಧಪಡಿಸಿದೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಟಾಟಾ ಹ್ಯಾರಿಯರ್ 65,000 ರೂ.ವರೆಗಿನ ಗರಿಷ್ಠ ಪ್ರಯೋಜನಗಳೊಂದಿಗೆ ಲಭ್ಯವಿದೆ, ಇದರಲ್ಲಿ ರೂ. 30,000 ವರೆಗಿನ ನಗದು ರಿಯಾಯಿತಿ, ರೂ. 30,000 ವಿನಿಮಯ ಬೋನಸ್ ಮತ್ತು ರೂ. 5,000 ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಅದೇ ರೀತಿ, ಟಾಟಾ ಸಫಾರಿ ಕಾಜಿರಂಗ ಮತ್ತು ಜೆಟ್ ಆವೃತ್ತಿಗಳು ರೂ. 30,000 ನಗದು ರಿಯಾಯಿತಿಯೊಂದಿಗೆ ಬರುತ್ತವೆ. SUV ಯ ಎಲ್ಲಾ ಇತರ ರೂಪಾಂತರಗಳು ನವೆಂಬರ್ ತಿಂಗಳಿನಲ್ಲಿ 20,000 ರೂಪಾಯಿಗಳ ನಗದು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಖರೀದಿದಾರರು 30,000 ರೂಪಾಯಿಗಳ ವಿನಿಮಯ ಪ್ರಯೋಜನವನ್ನು ಸಹ ಪಡೆಯಬಹುದು.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಟಾಟಾ ಟಿಗೊರ್ ಸೆಡಾನ್ ಮೇಲಿನ ಕೊಡುಗೆಯನ್ನು ರೂ. 20,000 ನಗದು ರಿಯಾಯಿತಿ, ರೂ. 15,000 ಎಕ್ಸ್ಚೇಂಜ್ ಬೋನಸ್ ಮತ್ತು ರೂ. 3,000 ಕಾರ್ಪೊರೇಟ್ ಪ್ರಯೋಜನ ಸೇರಿದಂತೆ ಒಟ್ಟು ರೂ.38,000 ವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. Tigor CNG 10,000 ರೂಪಾಯಿಗಳ ವಿನಿಮಯ ಕೊಡುಗೆಯೊಂದಿಗೆ ಲಭ್ಯವಿದೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಟಾಟಾದ ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್ ಟೈಗೋರ್ 33,000 ರೂ.ವರೆಗಿನ ಪ್ರಯೋಜನಗಳೊಂದಿಗೆ ಲಭ್ಯವಿದೆ. ಅದರ ಎಲ್ಲಾ ರೂಪಾಂತರಗಳು ಈ ಬಾರಿ 20,000 ರೂಪಾಯಿಗಳವರೆಗೆ ನಗದು ರಿಯಾಯಿತಿ, 10,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 3,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತವೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಕಳೆದ ತಿಂಗಳು ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ದೊಡ್ಡ ಬೆಳವಣಿಗೆಯನ್ನು ಸಾಧಿಸಿದೆ. ಅಕ್ಟೋಬರ್ 2021 ರಲ್ಲಿ 34,155 ಯುನಿಟ್‌ಗಳ ಮಾರಾಟಕ್ಕೆ ಹೋಲಿಸಿದರೆ, ಕಂಪನಿಯು ಸುಮಾರು ಶೇ33 ರಷ್ಟು ಹೆಚ್ಚಳವನ್ನು ಈ ಬಾರಿ ಸಾಧಿಸಿದೆ. ಟಾಟಾದ ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು 45,217 ಯುನಿಟ್‌ಗಳಿಗೆ ಏರಿಕೆಯಾಗಿದೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಕಳೆದ ದಿನ, ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ಶ್ರೇಣಿಯು ಭಾರತದಲ್ಲಿ 50,000 ಯುನಿಟ್ ಉತ್ಪಾದನೆಯ ಮೈಲಿಗಲ್ಲನ್ನು ದಾಟಿದೆ. ನೆಕ್ಸಾನ್ EV ಮ್ಯಾಕ್ಸ್ ಪುಣೆ ಬಳಿಯ ರಂಜನ್‌ಗಾಂವ್ ಸ್ಥಾವರದಲ್ಲಿ ಉತ್ಪಾದನಾ ಮಾರ್ಗದಿಂದ ಹೊರಬಂದ 50,000 ನೇ ಎಲೆಕ್ಟ್ರಿಕ್ ವಾಹನವಾಗಿದೆ.

ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳಬೇಡಿ... ಟಾಟಾ ಮೋಟಾರ್ಸ್‌ನಿಂದ ಭರ್ಜರಿ ರಿಯಾಯಿತಿ ಘೋಷಣೆ

ಟಾಟಾ ನೆಕ್ಸಾನ್ ಇವಿ ಮೂಲಕ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರವನ್ನು ಪ್ರವೇಶಿಸಿತ್ತು. ಇಂದು, ಕಂಪನಿಯು ತನ್ನ EV ಶ್ರೇಣಿಯಲ್ಲಿ Nexon EV, Tigor EV, Tiago EV ಮತ್ತು ಎಕ್ಸ್‌ಪ್ರೆಸ್-T EV ಎಂಬ ನಾಲ್ಕು ಮಾದರಿಗಳನ್ನು ಹೊಂದಿದೆ.

Most Read Articles

Kannada
English summary
Dont bother with the price hike Huge discount announcement from tata motors
Story first published: [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X