Just In
- 55 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 58 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 2 hrs ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- Sports
ಧವನ್ ಹಾಗೂ ತೆಂಡೂಲ್ಕರ್ ನಡುವಿನ ಸಾಮ್ಯತೆ ವಿವರಿಸಿದ ಅಜಯ್ ಜಡೇಜಾ
- Movies
ನನಸಾಯ್ತು ಕಾಫಿನಾಡು ಚಂದು ಕನಸು, ಎಲ್ಲಾ ಶ್ರೇಯ ಅನುಶ್ರೀಗೆ
- News
ಕದ್ದ ಹಣದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಹೈಟೆಕ್ ಕಳ್ಳಿ
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ಬೃಹತ್ ವಾಹನಗಳ ಬ್ಲೈಂಡ್ ಸ್ಪಾಟ್ ಬಗ್ಗೆ ತಿಳಿದುಕೊಳ್ಳಿ: ಇದೇ ಪರಿಸ್ಥಿತಿ ನಿಮಗೂ ಬರಬಹುದು!
ಹೆಚ್ಚಿನ ಜನರಿಗೆ ಬೃಹತ್ ವಾಹಗಳಿಂದ ಏಕೆ ಅಂತರ ಕಾಯ್ದುಕೊಳ್ಳಬೇಕು ಎಂಬುದರ ಬಗ್ಗೆ ಗೊತ್ತೇ ಇಲ್ಲ. ಲಾರಿ, ಟ್ರಕ್‌ಗಳಂತಹ ಬೃಹತ್ ವಾಹನಗಳಿಗೆ ಬ್ಲೈಂಡ್ ಸ್ಪಾಟ್ ಇರುತ್ತದೆ. ಅಂದರೆ ಚಾಲನೆ ವೇಳೆ ಬೃಹತ್ ವಾಹನದೊಳಗಿನಿಂದ ಇಂತಿಷ್ಟೇ ಪ್ರದೇಶ ಗೋಚರಿಸುತ್ತದೆ. ಗೋಚರಿಸದ ಪ್ರದೇಶವನ್ನು ಬ್ಲೈಂಡ್ ಸ್ಪಾಟ್ ಎನ್ನುತ್ತಾರೆ.

ಹೆಚ್ಚಿನ ಜನರು ಇದನ್ನು ಅರ್ಥಮಾಡಿಕೊಳ್ಳದಿದ್ದರಿಂದಲೇ ಭಾರೀ ವಾಹನಗಳಿಂದ ಗೋಚರತೆ ತುಂಬಾ ಕಳಪೆಯಾಗಿರುವ ಕಾರಣ ಅಪಘಾತಗಳು ನಡಿಯುತ್ತವೆ. ಭಾರೀ ವಾಹನಗಳ ಕಳಪೆ ಗೋಚರತೆಯು ಅಪಘಾತಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ತೋರಿಸುವ ದೃಷ್ಯವೊಂದು ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೇರಳದಲ್ಲಿ ಇತ್ತೀಚೆಗೆ ರಸ್ತೆಯಲ್ಲಿ ಬಸ್ಸೊಂದು ಪ್ರಯಾಣಿಕರಿಗಾಗಿ ನಿಲುಗಡೆ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಈ ವೇಳೆ ಹಿಂದೆ ಬರುತ್ತಿದ್ದ ವಾಹನಗಳು ಸಂಪೂರ್ಣವಾಗಿ ನಿಂತಾಗ, ಸ್ಕೂಟರ್‌ನಲ್ಲಿ ವಯಸ್ಸಾದ ಸವಾರನೊಬ್ಬ ಬೃಹತ್ ಟ್ರಕ್‌ವೊಂದರ ಮುಂದೆ ನಿಲ್ಲುತ್ತಾನೆ. ವಾಹನಗಳು ಚಲಿಸಲು ಪ್ರಾರಂಭಿಸಿದಾಗ, ಟ್ರಕ್ ಚಾಲಕನಿಗೆ ತನ್ನ ಮುಂದಿರುವ ಸ್ಕೂಟರ್ ಸವಾರ ಕಾಣುವುದಿಲ್ಲ.
ಏಕೆಂದರೆ ಸ್ಕೂಟರ್ ಸವಾರ ಬ್ಲೈಂಡ್ ಸ್ಪಾಟ್‌ನಲ್ಲಿ ಇರುತ್ತಾನೆ. ಈ ವೇಳೆ ಸ್ಕೂಟರ್ ಸಮೇತ ಚಾಲಕ ಚಕ್ರದಡಿಗೆ ಸಿಲುಕಿ ಟ್ರಕ್‌ನ ರಭಸಕ್ಕೆ ಕೆಲವು ಮೀಟರ್‌ಗಳಷ್ಟು ಟ್ರಕ್ ಎಳೆದೊಯ್ದಿದೆ. ಇದೇ ವೇಳೆ ಸ್ಥಳೀಯರು ಕೂಡಲೇ ಟ್ರಕ್ ಚಾಲಕನ ಕಡೆಗೆ ಕೈ ಬೀಸುತ್ತಾ ನಿಲ್ಲಿಸುವಂತೆ ಕಿರುಚುತ್ತಾರೆ. ಅದೃಷ್ಟವಶಾತ್ ಟ್ರಕ್‌ನ ಟೈರ್‌ಗಳು ಸ್ಕೂಟರ್ ಸವಾರನ ಮೇಲೆ ಏರಲಿಲ್ಲ.

ಟ್ರಕ್‌ನ ಚಕ್ರದ ಕೆಳಗೆ ಬೀಳದಂತೆ ಸವಾರನನ್ನು ಸ್ಕೂಟರ್ ರಕ್ಷಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನು ಸವಾರ ಟ್ರಕ್ ಅಡಿಯಲ್ಲಿ ಸಿಲುಕಿಕೊಂಡಿರುವುದನ್ನು ತಿಳಿದ ಚಾಲಕ ವಾಹನವನ್ನು ಹಿಮ್ಮುಖವಾಗಿ ತೆಗೆದುಕೊಂಡ ನಂತರ, ಸವಾರನನ್ನು ಸುರಕ್ಷಿತವಾಗಿ ಹೊರತೆಗೆಯಲು ಸುತ್ತಮುತ್ತಲಿನ ಜನರು ಸಹಕರಿಸಿದ್ದಾರೆ.

ವಿಡಿಯೋ ತುಣುಕಿನಲ್ಲಿ ಸ್ಕೂಟರ್ ಚಾಲಕ ದೈಹಿಕವಾಗಿ ಯಾವುದೇ ಹಾನಿಯಾಗದಿರುವುದನ್ನು ಕಾಣಬಹುದು. ಸವಾರ ಹೆಲ್ಮೆಟ್ ಧರಿಸಿದ್ದರಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ. ಒಂದು ವೇಳೆ ಟ್ರಕ್ ನಿಲ್ಲಿಸದೇ ಹಾಗೇ ಹೋಗಿದ್ದರೆ ದುರಂತವೊಂದಕ್ಕೆ ಕಾರಣವಾಗುತ್ತಿತ್ತು. ಈ ವೀಡಿಯೊವು ಭಾರೀ ವಾಹನಗಳ ಕಳಪೆ ಗೋಚರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಬೃಹತ್ ವಾಹನಗಳ ಬ್ಲೈಂಡ್ ಸ್ಪಾಟ್
ಬೃಹತ್ ವಾಹನಗಳ ಚಾಲಕರು ಬಹು ಎತ್ತರದ ಸ್ಥಾನದಲ್ಲಿ ಕುಳಿತರೂ ಗೋಚರತೆ ತೀರಾ ಕಡಿಮೆಯಿರುತ್ತದೆ. ಅದಕ್ಕಾಗಿಯೇ ಭಾರೀ ವಾಹನ ಚಾಲಕರು ವಾಹನದ ಸುತ್ತಲೂ ಮತ್ತು ಇತರ ವಾಹನಗಳ ಚಾಲಕರನ್ನು ನೋಡುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರ ಅಕ್ಕಪಕ್ಕ ಅಂತ ಕಾಯ್ದುಕೊಂಡು ಮುಂದೆ ಸಾಗಬೇಕು.

ಭಾರೀ ವಾಹನಗಳಿಗೆ ಬ್ಲೈಂಡ್ ಸ್ಪಾಟ್‌ಗಳನ್ನು ತೋರಿಸುವ ಹಲವಾರು ಪ್ರದೇಶಗಳಿರುತ್ತವೆ. ಅದಕ್ಕಾಗಿಯೇ ಈ ಬ್ಲೈಂಡ್ ಸ್ಪಾಟ್‌ಗಳನ್ನು ತಿಳಿದುಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಟ್ರಕ್ ಅಥವಾ ಬಸ್‌ನಂತಹ ಭಾರೀ ವಾಹನಗಳ ಸುತ್ತಲೂ ಚಲಿಸಬೇಕು, ಇಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ.

ಬೃಹತ್ ವಾಹನಗಳ ಹೆಚ್ಚಿನ ಚಾಲಕರು ವಾಹನದ ಮುಂದೆ ತಕ್ಷಣವೇ ಏನಿದೆ ಎಂಬುದನ್ನು ನೋಡುವುದಿಲ್ಲ. ಅದಕ್ಕಾಗಿಯೇ ಹೆಚ್ಚಿನ ಚಾಲಕರು ಭಾರೀ ಟ್ರಾಫಿಕ್ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ನಿಧಾನವಾಗಿ ಚಲಿಸಲು ಪ್ರಯತ್ನಿಸುತ್ತಾರೆ. ಭಾರೀ ಟ್ರಾಫಿಕ್ ಪರಿಸ್ಥಿತಿಯಲ್ಲಿ ಬೃಹತ್ ವಾಹನಗಳಿಂದ ಅಂತರವನ್ನು ಕಾಯ್ದುಕೊಳ್ಳುವುದರಿಂದ ಟ್ರಕ್ ಚಾಲಕರಿಗು ಸಹಕರಿಸಿದಂತಾಗತ್ತದೆ.

ಸಿಗ್ನಲ್‌ನಲ್ಲಿ ಮಗುವನ್ನು ಬೀಳಿಸಿಕೊಂಡು ಹಾಗೇಹೋದ ಚಾಲಕ
ಟ್ರಾಫಿಕ್ ಸಿಗ್ನಲ್‌ನಲ್ಲಿ ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆಳಗೆ ಬಿದ್ದಿರುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಕಂಡುಬರುವಂತೆ ಅಕ್ಕ-ಪಕ್ಕ ಬರುತ್ತಿದ್ದ ಕಾರಿನ ಚಾಲಕರು ಕೂಡಲೇ ಎಚ್ಚೆತ್ತು ಬಾಲಕಿಯನ್ನು ಅಪಾಯದಿಂದ ರಕ್ಷಿಸಿದ್ದಾರೆ.

ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರಿದಿ ಪ್ರಕಾರ, ಶಾಂಘೈನ ದಕ್ಷಿಣಕ್ಕೆ ಪೂರ್ವ ಚೀನಾದ ನಗರವಾದ ನಿಂಗ್ಬೋದಲ್ಲಿನ ಟ್ರಾಫಿಕ್ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿದೆ. ಹಿಂದಿನ ಸೀಟಿನ ಕಿಟಕಿಯಿಂದ ಹೊರಗೆ ಬಂದಿದ್ದ ಬಾಲಕಿ, ಕಾರು ಚಲಿಸಲು ಪ್ರಾರಂಭಿಸಿದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿರುವುದನ್ನು ವೀಡಿಯೊ ತೋರಿಸುತ್ತದೆ.

ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಎಸ್‌ಸಿಎಂಪಿ ತಿಳಿಸಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಅಲ್ಲಿನ ಟ್ರಾಫಿಕ್ ಜಂಕ್ಷನ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಷ್ಯಗಳು ಸಖತ್ ವೈರಲ್ ಆಗಿವೆ.

ಈ ಘಟನೆ ವೇಳೆ ಚಾಲಕನಿಗೆ ಅರಿವಿಲ್ಲದಂತೆ ತೋರುತ್ತಿದೆ. ಮಗು ಬಿದ್ದಿರುವುದು ತಿಳಿಯದೇ ಹಾಗೆಯೇ ಹೊರಟು ಹೋಗತ್ತಾನೆ. ಆದರೆ ಅದೃಷ್ಟವಶಾತ್ ಹಿಂದೆ ಬರುತ್ತಿದ್ದ ವಾಹನ ಸವಾರರು ಕೂಡಲೇ ಬ್ರೇಕ್ ಹಾಕಿ ಅಪಾಯವನ್ನು ತಪ್ಪಿಸಿದ್ದಾರೆ. ಕೂಡಲೇ ಬಾಲಕಿಯನ್ನು ಸುರಕ್ಷಿತವಾಗಿ ಕರೆತರಲು ಹೋಗಿದ್ದಾರೆ. ಕಾರುಗಳನ್ನು ನಿಲ್ಲಿಸುವವರೆಗೂ ಆ ಬಾಲಕಿ ಅಳುತ್ತಾ ಅಲ್ಲೇ ಮಲಗಿದ್ದಳು.

ವೀಡಿಯೊದಲ್ಲಿ ಕಂಡುಬರುವಂತೆ ಸ್ಥಳೀಯರಲ್ಲಿ ಒಬ್ಬರು ಹುಡುಗಿಯನ್ನು ತ್ವರಿತವಾಗಿ ತಲುಪಿ ಅವಳನ್ನು ಎತ್ತಿಕೊಂಡು ರಸ್ತೆಯಿಂದ ಹೊರಬಂದಿದ್ದಾರೆ. ಸ್ಥಳೀಯ ಸುದ್ದಿವಾಹಿನಿಗಳ ಪ್ರಕಾರ, ಮಗು ಸುರಕ್ಷಿತವಾಗಿದೆ ಎಂದು ತಿಳಿದ ನಂತರ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಪೋಷಕರಿಗೆ ಮಗುವನ್ನು ಒಪ್ಪಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಬಸ್ಸುಗಳು ಸೇರಿದಂತೆ ಭಾರೀ ವಾಹನವನ್ನು ಹಿಂದಿಕ್ಕುವಾಗ ನೀವು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳಿ. ಹೆಚ್ಚಾಗಿ ಇಂತಹ ವಾಹನಗಳ ಬ್ರೇಕ್ ಲೈಟ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂತಹ ವಾಹನಗಳ ಬಳಿ ಎಚ್ಚರವಾಗಿರುವುದು ಜೀವ ಉಳಿಸಿಕೊಳ್ಳುವ ಜಾನ್ಮೆಯಾಗಿರುತ್ತದೆ.