ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಬೆಲೆ ಇದು.. ಭಾರತದ ಮಾರುಕಟ್ಟೆಯಲ್ಲಿ ಕ್ರಾಂತಿ ಆಗುತ್ತಾ?

ಟಾಟಾ ಪಂಚ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಟಾಟಾ ಮೋಟಾರ್ಸ್ ಇತ್ತೀಚೆಗೆ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ದೃಢಪಡಿಸಿದ್ದು, ಇದರ ಮೇಲೆ ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗಿದೆ. ಟಾಟಾ ಪಂಚ್ ಇವಿಯನ್ನು 2023ರ ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಟಿಯಾಗೊ, ಟಿಗೋರ್ ಮತ್ತು ನೆಕ್ಸಾನ್ ಇವಿ ನಂತರ ಟಾಟಾ ಮೋಟಾರ್ಸ್ ಬಿಡುಗಡೆ ಮಾಡುತ್ತಿರುವ 4ನೇ ಎಲೆಕ್ಟ್ರಿಕ್ ಕಾರು ಇದಾಗಿದೆ. ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಬೆಲೆ ಎಷ್ಟು? ಎಂಬ ಪ್ರಶ್ನೆ ಸದ್ಯ ಭಾರತೀಯ ಗ್ರಾಹಕರ ಮನದಲ್ಲಿ ಮೂಡಿದೆ. ಪಂಚ್ ಎಲೆಕ್ಟ್ರಿಕ್ ಕಾರು ಬೆಲೆ ಟಿಗೋರ್ ಇವಿ ಬೆಲೆಗಿಂತ ಜಾಸ್ತಿ ಹಾಗೂ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗಿಂತ ಕಡಿಮೆ ಇರುತ್ತದೆಯಂತೆ. ಹಾಗಾಗಿ, ಪಂಚ್ ಎಲೆಕ್ಟ್ರಿಕ್ ಕಾರು, ಇವೆರಡುಗಳ ನಡುವಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಬೆಲೆ ಇದು.. ಭಾರತದ ಮಾರುಕಟ್ಟೆಯಲ್ಲಿ ಕ್ರಾಂತಿ ಆಗುತ್ತಾ?

ಪ್ರಸ್ತುತ, ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 12.49 ಲಕ್ಷ ರೂ.ಗಳಾಗಿದ್ದು, ಟಾಪ್ ವೆರಿಯಂಟ್ ಬೆಲೆ 13.75 ಲಕ್ಷ ರೂ. ಇದೆ ಮತ್ತೊಂದೆಡೆ, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ 14.99 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ. ಟಾಪ್ ಎಂಡ್ ಮಾದರಿ ಬೆಲೆ 17.50 ಲಕ್ಷ ರೂ. ಇದ್ದು, ಎಕ್ಸ್ ಶೋರೂಂ ಬೆಲೆಗಳಾಗಿವೆ. ಹಾಗಾಗಿ, ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 12 ಲಕ್ಷ ಮತ್ತು ಟಾಪ್ ವೆರಿಯಂಟ್ ಬೆಲೆ 14 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಟಾಟಾ ಪಂಚ್ ಈ ಬೆಲೆಗೆ ದೊರೆಯುವ ಉತ್ತಮವಾದ ಎಲೆಕ್ಟ್ರಿಕ್ ಕಾರು ಆಗಿದ್ದು, ಎಲೆಕ್ಟ್ರಿಕ್ ಕಾರು ಎರಡು ರೀತಿಯ ಬ್ಯಾಟರಿ ಪ್ಯಾಕ್ ಗಳೊಂದಿಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಸ್ಟ್ಯಾಂಡರ್ಡ್ ವರ್ಷನ್ ಹಾಗೂ ಲಾಂಗ್ ರೇಂಜ್ ವರ್ಷನ್. ಸ್ಟ್ಯಾಂಡರ್ಡ್ ಆವೃತ್ತಿಯು ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿಗೆ ಅಳವಡಿಸಲಾಗಿರುವ 26 kWh ಬ್ಯಾಟರಿ ಪ್ಯಾಕ್ ಮತ್ತು 75 PS ಗರಿಷ್ಠ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಹೊಂದಬಹುದು ಎಂದು ಹೇಳಲಾಗಿದೆ.

ಇದರ ಮೈಲೇಜ್ ಸಾಮರ್ಥ್ಯ ಒಂದೇ ಚಾರ್ಜ್‌ನಲ್ಲಿ 300 ಕಿ.ಮೀ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಅಳವಡಿಸಲಾಗಿರುವ 30.2 kWh ಬ್ಯಾಟರಿ ಪ್ಯಾಕ್ ಮತ್ತು 129 PS ಗರಿಷ್ಠ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ ಅನ್ನು ಲಾಂಗ್ ರೇಂಜ್ ಆವೃತ್ತಿಯಲ್ಲಿ ನೀಡಬಹುದು. ಇದು 350 ಕಿ.ಮೀ ಮೈಲೇಜ್ ನೀಡುತ್ತದೆ. ಬೆಲೆ ಹಾಗೂ ಮೈಲೇಜ್ ಅಂಶಗಳನ್ನು ಗಮನಿಸಿದಾಗ ಮಾರುಕಟ್ಟೆಗೆ ಬರಲಿರುವ ಟಾಟಾ ಪಂಚ್ ಇವಿ ಖರೀದಿದಾರರಿಗೆ ಉತ್ತಮ ಅನುಭವ ನೀಡುತ್ತದೆ ಎಂದು ಹೇಳಬಹುದು.

ಇದಲ್ಲದೆ, ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕೂಲ್ಡ್ ಗ್ಲೋವ್ ಬಾಕ್ಸ್ ಮತ್ತು IRA ಸಂಪರ್ಕಿತ ಕಾರು ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು. ಈ ಕಾರಿನಲ್ಲಿ ರಿಯರ್ ವ್ಯೂ ಕ್ಯಾಮೆರಾ ಸೌಲಭ್ಯವನ್ನು ಒದಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ಅದರ ರೇಂಜ್ ಮತ್ತು ಸೌಕರ್ಯಗಳನ್ನು ಪರಿಗಣಿಸಿದರೆ, ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ನಿರೀಕ್ಷಿತ ಬೆಲೆಯು ಅತ್ಯುತ್ತಮವಾದದ್ದು, ಈ ದರದಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಉತ್ತಮವಾಗಿ ಮಾರಾಟವಾಗಬಹುದು.

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಇದೇ ಬೆಲೆ ಅಥವಾ ಕಡಿಮೆ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಪಂಚ್ ಇವಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಬಹುದು ಟಾಟಾ ಪಂಚ್ ಎಲೆಕ್ಟ್ರಿಕ್ ಕಾರನ್ನು ಜನವರಿಯಲ್ಲಿ 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸುವ ಸಾಧ್ಯತೆಯಿದೆ. ಇದರ ನಂತರ, ಇದನ್ನು ಜುಲೈ-ಸೆಪ್ಟೆಂಬರ್ 2023 ರ ಅವಧಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಸದ್ಯ ಮಾರಾಟವಾಗುತ್ತಿರುವ ಟಿಯಾಗೊ ಇವಿಗೆ ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, 20,000ಕ್ಕೂ ಹೆಚ್ಚು ಬುಕಿಂಗ್ ಆಗಿದೆ ಎಂದು ವರದಿಯಾಗಿದೆ.

ಪ್ರಸ್ತುತ, ಟಿಯಾಗೊ ಇವಿ ಬೆಲೆ ರೂ.8.49 ಲಕ್ಷ-11.49 ಲಕ್ಷ (ಎಕ್ಸ್ ಶೋ ರೂಂ, ಭಾರತ) ಇದ್ದು, ಈ ಟಿಯಾಗೊ ಇವಿ ಎರಡು ಬ್ಯಾಟರಿ ಪ್ಯಾಕ್‌ ಹೊಂದಿದೆ. ಚಿಕ್ಕದಾದ 19.2kWh ಬ್ಯಾಟರಿ ಒಂದು ಚಾರ್ಜಿಗೆ 250 ಕಿ.ಮೀ ಮೈಲೇಜ್ ನೀಡುತ್ತದೆ. ಈ ಆವೃತ್ತಿಯು 60.3 ಬಿಹೆಚ್‍ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ದೊಡ್ಡ 24kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ಟಿಯಾಗೊ ಇವಿಯ ಟಾಪ್-ಸ್ಪೆಕ್ 73.75 ಬಿಹೆಚ್‍ಪಿ ಪವರ್ ಉತ್ಪಾದಿಸಲಿದ್ದು, 315 ಕಿ.ಮೀ ಮೈಲೇ ಜ್ ನೀಡುತ್ತದೆ.

Article Published On: Saturday, December 24, 2022, 13:57 [IST]
English summary
Expected price of tata punch electric car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+