ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಭಾರತದ ಅತಿ ದೊಡ್ಡ ಮತ್ತು ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಇದೀಗ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಮಾರುತಿ ಸುಜುಕಿ ಕಂಪನಿಯು ಬಿಡುಗಡೆಗೊಳಿಸಲಿರುವ ಮಾದರಿಗಳಲ್ಲಿ ಫೇಸ್‌ಲಿಫ್ಟ್‌ಗಳು, ಹೊಸ ತಲೆಮಾರಿನ ಆವೃತ್ತಿ ಮತ್ತು ಹೊಸ ಕಾರುಗಳನ್ನು ಒಳಗೊಂಡಿದೆ. ಮಾರುತಿ ಸುಜುಕಿಯು ಹೊಸ ವಿಟಾರಾ, ನವೀಕರಿಸಿದ ವ್ಯಾಗನ್‌ಆರ್ ಮತ್ತು ಎಲ್ಲಾ ಹೊಸ ಮಧ್ಯಮ ಗಾತ್ರದ ಎಸ್‌ಯುವಿ ಸೇರಿದಂತೆ ವ್ಯಾಪಕ ಶ್ರೇಣಿಯ ಹೊಸ ಮಾದರಿಗಳನ್ನು ಕೂಡ ಸಿದ್ಧಪಡಿಸುತ್ತಿದೆ. ಈ ಸಾಲಿನ ಜನಪ್ರಿಯ ಆಲ್ಟೋ ಕಾರು ಕೂಡ ಒಳಗೊಂಡಿದೆ, ಕಂಪನಿಯು ನ್ಯೂ ಜನರೇಷನ್ ಆಲ್ಟೋ ಹ್ಯಾಚ್‌ಬ್ಯಾಕ್ ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಮಾರುತಿ ಆಲ್ಟೋ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ವಿನ್ಯಾಸ

ಹೊಸ ಮಾರುತಿ ಆಲ್ಟೋ ಕಾರು ಹೊಸ ವಿನ್ಯಾಸ ಮತ್ತು ಯಾಂತ್ರಿಕ ಬದಲಾವಣೆಗಳೊಂದಿಗೆ ನವೀಕರಿಸಿದ ಒಳಾಂಗಣದೊಂದಿಗೆ ಬರಲಿದೆ. ನ್ಯೂ ಜನರೇಷನ್ ಆಲ್ಟೋ ಹ್ಯಾಚ್‌ಬ್ಯಾಕ್ ಹಗುರವಾದ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, 2022ರ ಮಾರುತಿ ಆಲ್ಟೋ ಈ ವರ್ಷದ ದೀಪಾವಳಿಯ ಮೊದಲು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಇತ್ತೀಚೆಗೆ ಈ ಎಂಟ್ರಿ ಲೆವೆಲ್ ಕಾರಿನ ಟಿವಿಸಿ ಚಿತ್ರೀಕರಣದ ವೇಳೆ ಕಾಣಿಸಿಕೊಂಡಿದೆ. ಇತ್ತೀಚಿನ ಚಿತ್ರಗಳು ಹೊಸ ಆಲ್ಟೋ ಕಾರಿನ ಮೇಲಿನ ನೋಟದ ಜೊತೆಗೆ ಹಿಂಭಾಗ ಮತ್ತು ಬದಿಯ ಪ್ರೊಫೈಲ್ ಅನ್ನು ಬಹಿರಂಗಪಡಿಸುತ್ತವೆ. ಸುಜುಕಿಯ ಗುರುಗ್ರಾಮ್ ಮೂಲದ ಉತ್ಪಾದನಾ ಘಟಕದಲ್ಲಿ ಹೊಸ ಆಲ್ಟೋದ ಪ್ರಾಯೋಗಿಕ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಹಿಂದಿನ ವರದಿಗಳು ಸೂಚಿಸುತ್ತವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಹೊಸ ಮಾರುತಿ ಆಲ್ಟೋ 2022 ಮಾದರಿಯು ಹೊರಹೋಗುವ ಮಾದರಿಗಿಂತ ಎತ್ತರ ಮತ್ತು ಉದ್ದವಾಗಿರುತ್ತದೆ ಎಂದು ಸ್ಪೈ ಚಿತ್ರಗಳು ಖಚಿತಪಡಿಸುತ್ತವೆ. ಹೊಸ ಮಾದರಿಯು ಸೆಲೆರಿಯೊ ಹ್ಯಾಚ್‌ಬ್ಯಾಕ್‌ನಿಂದ ಸ್ಟೈಲಿಂಗ್ ಸೂಚನೆಗಳನ್ನು ಹಂಚಿಕೊಳ್ಳುತ್ತದೆ. ಹಿಂದಿನ ಸ್ಪೈ ಚಿತ್ರಗಳು ಹೊಸ ಮಾರುತಿ ಆಲ್ಟೋದ ಹೊಸ ಹೊರಭಾಗದೊಂದಿಗೆ ಬರಲಿದೆ ಎಂದು ಬಹಿರಂಗಪಡಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಇದು ದೊಡ್ಡ ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್‌ಗಳು, ಹೊಸ ಬಂಪರ್‌ಗಳು ಮತ್ತು ಮರುಹೊಂದಿಸಿದ ಟೈಲ್‌ಲೈಟ್‌ಗಳೊಂದಿಗೆ ಬರುತ್ತದೆ. ಮುಂಭಾಗದ ಫಾಸಿಕ ಹೊಸ ಸೆಲೆರಿಯೊದೊಂದಿಗೆ ವಿನ್ಯಾಸದ ಹೋಲಿಕೆಗಳೊಂದಿಗೆ ಹೊಸ ಮತ್ತು ದೊಡ್ಡ ಗ್ರಿಲ್ ಅನ್ನು ಹೊಂದಿರುತ್ತದೆ. ಹ್ಯಾಚ್‌ಬ್ಯಾಕ್ ಎತ್ತರವಾಗಿದೆ ಮತ್ತು ಬಾಕ್ಸರ್ ಸೈಡ್ ಪ್ರೊಫೈಲ್ ಹೊಂದಿದೆ. ಹೊಸ ಮಾದರಿಯು ಫ್ಲಾಟರ್ ರೂಫ್‌ಲೈನ್ ಮತ್ತು ಪ್ರಮುಖ ಫೆಂಡರ್‌ಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಹಿಂಭಾಗದ ವಿನ್ಯಾಸವನ್ನು ಸಹ ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದು ಒಂದು ಜೋಡಿ ಆಯತಾಕಾರದ ಟೈಲ್-ಲೈಟ್‌ಗಳು, ಹೊಸ ಬಂಪರ್ ಮತ್ತು ದೊಡ್ಡದಾದ ಟೈಲ್‌ಗೇಟ್‌ನೊಂದಿಗೆ ಬರುತ್ತದೆ. ಹೊಸ ಆಲ್ಟೊ ಹಗುರವಾದ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ವರದಿಯಾಗಿದೆ, ಇದು ಹೊಸ ಎಸ್-ಪ್ರೆಸ್ಸೊ ಮತ್ತು ಸೆಲೆರಿಯೊಗೆ ಆಧಾರವಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಇಂಟಿರಿಯರ್

ಹೊಸ ಮಾರುತಿ ಆಲ್ಟೋ 2022 ಹಲವಾರು ವೈಶಿಷ್ಟ್ಯಗಳು ಮತ್ತು ಇತರ ಭಾಗಗಳನ್ನು ಎಸ್-ಪ್ರೆಸ್ಸೊದೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯಿದೆ. ಹೊಸ ಮಾರುತಿ ಆಲ್ಟೊ ಕ್ಯಾಬಿನ್ ಒಳಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡುತ್ತದೆ. ಹೊರಭಾಗದಂತೆಯೇ, ಹೊಸ ಆಲ್ಟೊದ ಕ್ಯಾಬಿನ್ ದೊಡ್ಡ ಬದಲಾವಣೆಗಳನ್ನು ಪಡೆಯುತ್ತದೆ. ಇದು ಎಲ್ಲಾ ಹೊಸ ಡ್ಯಾಶ್‌ಬೋರ್ಡ್ ಮತ್ತು ಸೆಂಟ್ರಲ್ ಕನ್ಸೋಲ್ ವಿನ್ಯಾಸವನ್ನು ಹೊಂದಿರುತ್ತದೆ. ಹ್ಯಾಚ್‌ಬ್ಯಾಕ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಇತರವುಗಳೊಂದಿಗೆ ಬರುವ ಸಾಧ್ಯತೆಯಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಎಂಜಿನ್

ಈ ನ್ಯೂ ಜನರೇಷನ್ ಮಾರುತಿ ಆಲ್ಟೋ ಕಾರು ಹೊಸ K10C Dualjet 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಐಡಲ್ ಸ್ಟಾರ್ಟ್/ಸ್ಟಾಪ್ ಸಿಸ್ಟಂನೊಂದಿಗೆ ಪಡೆಯುವ ಸಾಧ್ಯತೆಯಿದೆ. ಈ ಎಂಜಿನ್ 67 ಬಿಹೆಚ್‌ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರೊಂದಿಗೆ 47 ಬಿಹೆಚ್‍ಪಿ ಪವರ್ ಮತ್ತು 69 ಎನ್ಎಂ ಟಾರ್ಕ್ ಉತ್ತಮವಾದ 796ಸಿಸಿ, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಬಹುದು. ಎಎಂಟಿ ಗೇರ್‌ಬಾಕ್ಸ್‌ಗಳೆರಡೂ ಕೊಡುಗೆಯಲ್ಲಿರುತ್ತವೆ. ಇನ್ನು ಹ್ಯಾಚ್‌ಬ್ಯಾಕ್ ಸಿಎನ್‌ಜಿ ಆವೃತ್ತಿಯೊಂದಿಗೆ ಬರುವ ಸಾಧ್ಯತೆಗಳಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಹೊಸ ವರದಿಯ ಪ್ರಕಾರ, ನ್ಯೂ ಜನರೇಷನ್ ಮಾರುತಿ ಆಲ್ಟೋ ಕಾರು 2022ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. 2000 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ತೋ ದೇಶದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಬಹಳ ಸಮಯದಿಂದ ಈ ಕಾರು ಮೊದಲ ಆಯ್ಕೆಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಹೊಸ ವರದಿಯ ಪ್ರಕಾರ, ನ್ಯೂ ಜನರೇಷನ್ ಮಾರುತಿ ಆಲ್ಟೋ ಕಾರು 2022ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. 2000 ದಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ತೋ ದೇಶದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಬಹಳ ಸಮಯದಿಂದ ಕಾರು ಮೊದಲ ಆಯ್ಕೆಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಆದರೆ ಕೆಲವು ವರ್ಷಗಳಿಂದ ಖರೀದಿದಾರರು ಎಸ್‍ಯುವಿಗಳತ್ತ ಹೆಚ್ಚು ಒಲವು ತೋರುತ್ತಿರುವುದರಿಂದ ಆಲ್ಟೋ ಮಾರಾಟವು ಗಣನೀಯವಾಗಿ ಕುಸಿದಿದೆ. ಇನ್ನು ಹ್ಯಾಚ್‌ಬ್ಯಾಕ್‌ಗಳು ಅಥವಾ ಸಣ್ಣ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತವಾಗಿ ಉಳಿಯಬಹುದು. ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ ನ್ಯೂ ಜನರೇಷನ್ ಮಾರುತಿ ಆಲ್ಟೋ ಕಾರನ್ನು ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಆಲ್ಟೋ ಕಾರಿನ ವಿಶೇಷತೆಗಳು...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನ್ಯೂ ಜನರೇಷನ್ ಮಾರುತಿ ಸುಜುಕಿ ಆಲ್ಟೋ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಸುಧಾರಿತ ಸುರಕ್ಷತೆಗಾಗಿ ಉತ್ತಮ ಗುಣಮಟ್ಟದ ಸ್ಟೀಲ್‌ನೊಂದಿಗೆ ಪ್ಲಾಟ್‌ಫಾರ್ಮ್ ಅನ್ನು ಮಾರ್ಪಡಿಸಲಾಗುತ್ತದೆ. ಈ ಹೊಸ ಮಾರುತಿ ಆಲ್ಟೋ ಗಾತ್ರದಲ್ಲಿ ಸ್ವಲ್ಪ ದೊಡ್ದದಿರುತ್ತದೆ, ಏಕೆಂದರೆ ಸ್ಪೈ ಚಿತ್ರಗಳಲ್ಲಿ, ಇದು ಹೊರಹೋಗುವ ಮಾದರಿಗಿಂತ ಉದ್ದ, ಅಗಲ ಮತ್ತು ಎತ್ತರವಾಗಿ ಕಾಣುತ್ತಿದೆ.

Article Published On: Monday, July 25, 2022, 10:54 [IST]
English summary
Find here some top highlights of new 2022 maruti alto details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+