Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಪಾರದರ್ಶಕತೆಯನ್ನು ಹೆಚ್ಚಿಸಿ ಪ್ರಯಾಣಿಕರು ಮತ್ತು ಚಾಲಕರಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಭಾರತದಾದ್ಯಂತ ಉಬರ್ ಪ್ಲಾಟ್‌ಫಾರ್ಮ್‌ನಲ್ಲಿರುವ ಚಾಲಕರು ರೈಡ್‌ ಸ್ವೀಕರಿಸಲು ನಿರ್ಧರಿಸುವ ಮೊದಲೇ ಟ್ರಿಪ್‌ನ ಗಮ್ಯಸ್ಥಾನವನ್ನು ನೋಡಲು ಅನುವು ಮಾಡಿಕೊಡಲಾಗಿದೆ ಎಂದು ಉಬರ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಉಬರ್ ಚಾಲಕರ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಡ್ರೈವರ್ ಅಡ್ವೈಸರಿ ಕೌನ್ಸಿಲ್ ಸ್ವತಂತ್ರ ಪರಿಶೀಲನಾ ಮಂಡಳಿಯಿಂದ ರಚಿಸಲಾದ ಮೂರು-ಭಾಗಗಳ ಆರು ಮೆಟ್ರೋ ನಗರಗಳಿಂದ ಆಯ್ಕೆಯಾದ 37 ಚಾಲಕರ ಒಮ್ಮತವನ್ನು ಪರಿಶೀಲಿಸಿ ಕ್ಯಾಬ್ ಚಾಲಕರ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಾಗಿದೆ ಎಂದು ಉಬರ್ ತಿಳಿಸಿದೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಇದರಲ್ಲಿ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಮೊದಲ ಅತಿ ದೊಡ್ಡ ಸಮಸ್ಯೆಯಾದ ಟ್ರಿಪ್ ರದ್ದತಿಯನ್ನು ನಿರ್ಮೂಲಿಸಲು ಹೊಸ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಉಬರ್ ಮೇ ತಿಂಗಳಲ್ಲಿ ಪ್ರಾಯೋಗಿಕ ಯೋಜನೆಯನ್ನೂ ಮಾಡಿತ್ತು. ಇದರಲ್ಲಿ ಟ್ರಿಪ್‌ನ ಬುಕಿಂಗ್‌ನ ನಂತರ ಕ್ಯಾನ್ಸಲೇಶನ್‌ಗಳು ಹೆಚ್ಚಾಗುತ್ತಿರುವುದು ಉಬರ್ ಸಂಸ್ಥೆ ಕಂಡುಕೊಂಡಿದೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಈ ರೀತಿಯ ಬುಕಿಂಗ್ ನಂತರದ ಕ್ಯಾನ್ಸಲೇಷನ್‌ಗಳನ್ನು ಕಡಿಮೆ ಮಾಡಲು ರೈಡ್ ಅನ್ನು ಸ್ವೀಕರಿಸುವ ಮೊದಲೇ ಪ್ರಯಾಣಿಕರ ಅಂತಿಮ ಗಮ್ಯಸ್ಥಾನವನ್ನು ನೋಡಲು ತನ್ನ ಚಾಲಕರಿಗೆ ವ್ಯವಸ್ಥೆ ಕಲ್ಪಿಸಿರುವುದಾಗಿ ಉಬರ್ ಹೇಳಿದೆ. ಇದರಿಂದ ಪ್ರಯಾಣಿಕರು ಟ್ರಿಪ್ ಬುಕ್ ಮಾಡಿಕೊಂಡ ನಂತರ ರೈಡ್ ಸ್ವೀಕಾರಕ್ಕೂ ಮುನ್ನವೇ ಚಾಲಕರು ಗಮ್ಯಸ್ಥಾನವನ್ನು ನೋಡಬಹುದಾಗಿದೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ರೈಡ್-ಹೇಲಿಂಗ್ ಅಪ್ಲಿಕೇಶನ್

ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಆರು ಮೆಟ್ರೋ ನಗರಗಳಲ್ಲಿನ Uber ಹಾಗೂ ಚಾಲಕರ ನಡುವಿನ ಸಂವಾದವನ್ನು ಸುಲಭಗೊಳಿಸಲು ಮಾರ್ಚ್ 2022 ರಲ್ಲಿ ಪ್ರಾರಂಭಿಸಲಾದ ರೈಡ್-ಹೇಲಿಂಗ್ ಅಪ್ಲಿಕೇಶನ್, ತನ್ನ ರಾಷ್ಟ್ರೀಯ ಚಾಲಕ ಸಲಹಾ ಮಂಡಳಿಯಿಂದ ಪಡೆದ ಸಲಹೆಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗಿದೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಟ್ರಿಪ್ ರದ್ದತಿಯನ್ನು ಕಡಿಮೆ ಮಾಡಲು ಕಂಪನಿಯು ಮೇ ತಿಂಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಮಾಡಿದೆ. "ಉಬರ್ ಟ್ರಿಪ್ ಸ್ವೀಕಾರ ಮಿತಿಯನ್ನು ತೆಗೆದುಹಾಕಲು ನಿರ್ಧರಿಸಿದೆ. ಎಲ್ಲಾ ನಗರಗಳಿಗೆ ಬೇಷರತ್ತಾದ ವೈಶಿಷ್ಟ್ಯವನ್ನು ಹೊರತಂದಿದೆ. ಇನ್ನು ಮುಂದೆ ಕೂಡ ಉಬರ್ ಚಾಲಕರು ಮತ್ತು ಪ್ರಯಾಣಿಕರಿಂದ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುವುದು. ಅಗತ್ಯವಿದ್ದರೆ ಬದಲಾವಣೆಗಳನ್ನು ಮಾಡಲಾಗುತ್ತದೆ" ಎಂದು ರೈಡ್-ಹೇಲಿಂಗ್ ಸಂಸ್ಥೆ ಹೇಳಿದೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಚಾಲಕ ಸಲಹಾ ಮಂಡಳಿಯ ಎರಡನೇ ಸಭೆಯ ಚರ್ಚೆಯ ಆಧಾರದ ಮೇಲೆ, ಉಬರ್ ಚಾಲಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಅನುಕೂಲವಾಗುವಂತೆ, Uber ಈಗ OTP-ಆಧಾರಿತ ಲಾಗಿನ್ ಅನ್ನು ಪರಿಚಯಿಸಿದೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಇದು ಚಾಲಕರು ಪಾಸ್‌ವರ್ಡ್‌ಗಳು ಅಥವಾ ಇತರ ವಿವರಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲದೆ ಅನುಕೂಲಕರ ರೀತಿಯಲ್ಲಿ ಅಪ್ಲಿಕೇಶನ್‌ಗೆ ಲಾಗ್-ಇನ್ ಮಾಡಲು ಸಹಾಯ ಮಾಡುತ್ತದೆ. ಉಬರ್ ಆಟೋ ಮತ್ತು ಮೋಟೋ ಡ್ರೈವರ್‌ಗಳು ಅಗತ್ಯವಿದ್ದಾಗ ಬೆಂಬಲಕ್ಕಾಗಿ ಕರೆ ಮಾಡಲು ತಮ್ಮ ಉಬರ್ ಅಪ್ಲಿಕೇಶನ್‌ಗೆ ಹೋಮ್ ಫೋನ್ ಬಟನ್ ಅನ್ನು ಸೇರಿಸುತ್ತಾರೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ವೇಟಿಂಗ್ ಚಾರ್ಜ್‌ಗಳ ಬಗ್ಗೆ ತಿಳಿಯದ ಮೋಟೋ ಚಾಲಕರಿಗೆ ಉಬರ್ ಈಗ ರೈಡರ್‌ಗಳು ಟ್ರಿಪ್ ಬುಕ್ ಮಾಡಿದಾಗ ವೇಟಿಂಗ್ ಚಾರ್ಜ್‌ಗಳ ಕುರಿತು ಪುಶ್ ನೋಟಿಫಿಕೇಷನ್ ಕಳುಹಿಸುತ್ತದೆ. "ವಿಮಾನ ನಿಲ್ದಾಣದಲ್ಲಿನ ಚಾಲಕರು ಸಾಮಾನ್ಯವಾಗಿ ವಿಮಾನ ನಿಲ್ದಾಣದ ಶುಲ್ಕಗಳನ್ನು ಮುಂಗಡವಾಗಿ ಪಾವತಿಸದ ನಂತರ ಮರುಪಾವತಿ ಪಡೆಯಬೇಕಾಗಿರುವುದರಿಂದ ಕಾರ್ಯಾಚರಣೆಯ ಸವಾಲನ್ನು ಎದುರಿಸುತ್ತಿದ್ದರು. ಆದರೆ, ಈಗ ಉಬರ್ ಮುಂಬೈ, ದೆಹಲಿ, ಪುಣೆ, ಹೈದರಾಬಾದ್ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ನಗದು ರಹಿತ ಕಾರ್ಯಾಚರಣೆಯನ್ನು ಪರಿಚಯಿಸಿರುವುದಾಗಿ ಉಬರ್ ಹೇಳಿದೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಡ್ರೈವರ್ ಅಡ್ವೈಸರಿ ಕೌನ್ಸಿಲ್‌ನ ಮೊದಲ ಸಭೆಯ ನಂತರ, ಉಬರ್ ಹಲವಾರು ಬದಲಾವಣೆಗಳನ್ನು ತಂದಿದ್ದು, ಇದರಲ್ಲಿ ಏರುತ್ತಿರುವ ಇಂಧನ ಬೆಲೆಗಳ ವೆಚ್ಚವನ್ನು ಸರಿದೂಗಿಸಲು ದರಗಳಲ್ಲಿ ಶೇ15 ವರೆಗೆ ಹೆಚ್ಚಳ, ಚಾಲಕರು ದೂರದ ಪ್ರಯಾಣ ಮಾಡುವಾಗ ಸರಿದೂಗಿಸಲು ದೂರದ ಪಿಕ್-ಅಪ್ ಶುಲ್ಕ, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮತ್ತು ಚಾಲಕರು ಆನ್‌ಲೈನ್ ಪಾವತಿ ವರ್ಗಾವಣೆಯನ್ನು ಸ್ವೀಕರಿಸಲು ಎಲ್ಲಾ ವಾರದ ದಿನಗಳಿಗೆ ಪಾವತಿ ಆವರ್ತನವನ್ನು ಬದಲಾಯಿಸಲಾಗಿದೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಈ ಡ್ರೈವರ್‌ಗಳು ಕಾರು, ಆಟೋ ಮತ್ತು ಮೋಟರ್‌ಬೈಕ್‌ಗಳು ಸೇರಿದಂತೆ Uber ನಲ್ಲಿ ಲಭ್ಯವಿರುವ ಉತ್ಪನ್ನದ ಕೊಡುಗೆಗಳ ಶ್ರೇಣಿಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದವರಾಗಿದ್ದು, ಈ ವಲಯದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಚಾಲಕರ ಪ್ರತಿನಿಧಿಗಳಾಗಿದ್ದಾರೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ

ಕೊರೊನಾ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಾಲೀಕರು ಮತ್ತು ಚಾಲಕರು ಅವರು ಲೋನ್ ಪಡೆದ ಹಣಕಾಸು ಸಂಸ್ಥೆಗಳಿಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ವಾಹನಗಳನ್ನು ಹಿಂತಿರುಗಿಸಲಾಗಿದೆ. ಇದೇ ಕಾರಣಕ್ಕೆ ಕೋವಿಡ್ ಪೂರ್ವದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇ50 ಕ್ಕಿಂತ ಹೆಚ್ಚು ಕ್ಯಾಬ್‌ಗಳು ರಸ್ತೆಯಿಂದ ಹೊರಗುಳಿದಿವೆ ಎಂದು ನಿರ್ವಾಹಕರು ಹೇಳುತ್ತಿದ್ದಾರೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಕೊರೊನಾ ಪೂರ್ವದ ಸಮಯದಲ್ಲಿ, ನಗರದಲ್ಲಿ ಪ್ರತಿದಿನ ಸರಾಸರಿ 40 ಹೊಸ ಟ್ಯಾಕ್ಸಿಗಳು ನೋಂದಣಿಯಾಗುತ್ತಿದ್ದವು. 2020-21 ರಲ್ಲಿ ದಿನಕ್ಕೆ ಮೂರರಂತೆ ನೋಂದಣಿಯಾಗಿವೆ. ಹಿಂದಿನ ಹಣಕಾಸು ವರ್ಷದಲ್ಲಿ ಸರಾಸರಿ ನಾಲ್ಕು ಟ್ಯಾಕ್ಸಿಗಳು ನೋಂದಣಿಯಾಗಿವೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಇನ್ನು ಆಟೋಗಳ ವಿಷಯಕ್ಕೆ ಬಂದರೆ, 2019-20ರಲ್ಲಿ ಸರಾಸರಿ ಹೊಸ ನೋಂದಣಿ ದಿನಕ್ಕೆ 47 ಆಗಿತ್ತು. ಇದು 2020-21ರಲ್ಲಿ ದಿನಕ್ಕೆ ಮೂರಕ್ಕೆ ಇಳಿದಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಹೊಸದಾಗಿ ನೋಂದಣಿಯಾದ ಆಟೋಗಳ ಸಂಖ್ಯೆ ದಿನಕ್ಕೆ ನಾಲ್ಕು ಮಾತ್ರ. ನಗರದಲ್ಲಿ ಟ್ಯಾಕ್ಸಿ ಸೇವೆಗಳು ಹೇಗೆ ವ್ಯತಿರಿಕ್ತವಾಗಿವೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

Uber ಚಾಲಕರಿಗೆ ಶುಭ ಸುದ್ದಿ: ಇನ್ಮುಂದೆ ರೈಡ್ ಸ್ವೀಕರಿಸುವ ಮುನ್ನವೇ ಟ್ರಿಪ್ ಗಮ್ಯಸ್ಥಾನವನ್ನು ನೋಡಬಹುದು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎರಡು ವರ್ಷಗಳ ಹಿಂದೆ ₹ 7.5 ಲಕ್ಷ ಹೂಡಿಕೆ ಮಾಡಿ ವಾಹನ ಖರೀದಿಸಬಹುದಿತ್ತು, ಆದರೆ ಈಗ ₹ 12 ಲಕ್ಷದಿಂದ 13 ಲಕ್ಷ ಹೂಡಿಕೆ ಅಗತ್ಯವಿದೆ. ಅದೊಂದು ದೊಡ್ಡ ಮೊತ್ತ. ಈಗಾಗಲೇ ಭಾರೀ ನಷ್ಟ ಅನುಭವಿಸಿರುವ ಹಲವು ನಿರ್ವಾಹಕರಿಗೆ ಇದು ನಿಲುಕದ್ದು. ಹೊಸ ಕಾರುಗಳನ್ನು ಖರೀದಿಸಲು ಹೆಚ್ಚಿನ ವೆಚ್ಚವಾಗಿರುವುದರಿಂದ, ನಿರ್ವಾಹಕರಿಗೆ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರವು ತೆರಿಗೆಗಳನ್ನು ಕಡಿಮೆ ಮಾಡಬೇಕಿದೆ.

Article Published On: Friday, July 15, 2022, 11:27 [IST]
English summary
Good news for Uber drivers from now on you can see the trip destination before accepting the ride
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+