ಇವಿ ಪಾಲಿಸಿ ಅನುಮೋದನೆ: ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯ ಜೊತೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ರಾಜ್ಯ ಮಟ್ಟದ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಇವಿ ವಾಹನಗಳ ಅಳವಡಿಕೆ ಸಬ್ಸಡಿ ಯೋಜನೆಗಳು ಸಾಕಷ್ಟು ಸಹಕಾರಿಯಾಗುತ್ತಿವೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದ್ದು, ದೆಹಲಿ ನಂತರ ಹಲವು ರಾಜ್ಯಗಳು ಇವಿ ವಾಹನಗಳಿಗೆ ಹೆಚ್ಚಿನ ಸಬ್ಸಡಿ ಘೋಷಣೆ ಮಾಡುತ್ತಿವೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಹರಿಯಾಣ ಸರ್ಕಾರವು ಸರ್ಕಾರವು ಇದೀಗ ಹೊಸ ಇವಿ ಪಾಲಿಸಿಗೆ ಅಧಿಕೃತವಾಗಿ ಅನುಮೋದನೆ ನೀಡಿದ್ದು, ಹೊಸ ಇವಿ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳು, ಹೈಬ್ರಿಡ್ ವಾಹನಗಳು, ಇವಿ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳಿಗೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ತಯಾರಕರಿಗೆ ಹಲವಾರು ಧನಸಹಾಯ ಘೋಷಣೆ ಮಾಡಿದೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಹೊಸ ಇವಿ ನೀತಿ ಅಡಿಯಲ್ಲಿ ಹರಿಯಾಣ ಸರ್ಕಾರವು ತನ್ನ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಅಥವಾ ಹೈಬ್ರಿಡ್ ವಾಹನಗಳ ಖರೀದಿದಾರರಿಗೆ ರೂ.3 ಲಕ್ಷದಿಂದ ರೂ. 10 ಲಕ್ಷದವರೆಗೆ ಸಬ್ಸಿಡಿ ಘೋಷಣೆ ಮಾಡಿದ್ದು, ನೋಂದಣಿ ಶುಲ್ಕದಲ್ಲಿ ರಿಯಾಯಿತಿ ಮತ್ತು ಮೋಟಾರ್ ವಾಹನ ತೆರಿಗೆಯಲ್ಲಿ ಸಹ ವಿನಾಯ್ತಿ ಪಡೆಯಲಿದ್ದಾರೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಎಲೆಕ್ಟ್ರಿಕ್ ಕಾರುಗಳಿಗೆ ಬ್ಯಾಟರಿ ಸೌಲಭ್ಯವನ್ನು ಆಧರಿಸಿ ಸಬ್ಸಡಿ ಮೊತ್ತ ನಿರ್ಧಾರವಾಗಲಿದ್ದು, ರೂ. 40 ಲಕ್ಷದ ತನಕದ ಹೈಬ್ರಿಡ್ ಕಾರುಗಳಿಗೆ ಗರಿಷ್ಠ ರೂ. 3 ಲಕ್ಷದ ತನಕ ಸಬ್ಸಡಿ ಸಿಗಲಿದೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಎಲೆಕ್ಟ್ರಿಕ್ ಕಾರುಗಳ ಮೇಲೆ ಶೇ.15 ರಷ್ಟು ಸಬ್ಸಿಡಿ ಜೊತೆಗೆ, ರೂ. 15 ಲಕ್ಷದಿಂದ ರೂ. 40 ಲಕ್ಷ ಬೆಲೆಯ ಎಲೆಕ್ಟ್ರಿಕ್ ಕಾರುಗಳ ಮೇಲೆ ಶೇ. 15 ಸಬ್ಸಿಡಿ ಘೋಷಿಸಲಾಗಿದ್ದು, ಇದರಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್ ಪ್ರೈಮ್, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಮತ್ತು ಎಂಜಿ ಜೆಡ್ಎಸ್ ಇವಿ, ಹ್ಯುಂಡೈ ಕೊನಾ ಇವಿಯಂತಹ ಕಾರುಗಳನ್ನು ಖರೀದಿಸಲು ಸಬ್ಸಿಡಿಯನ್ನು ಪಡೆಯಬಹುದು.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಹಾಗೆಯೇ ಇ-ರಿಕ್ಷಾಗಳು ಮತ್ತು ಲಘು ವಾಣಿಜ್ಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಕ್ರಮವಾಗಿ ರೂ. 25 ಸಾವಿರ ಮತ್ತು ರೂ. 50 ಸಾವಿರ ಸಬ್ಸಿಡಿ ನೀಡಲಿದ್ದು, ಸಬ್ಸಿಡಿ ದರಗಳು ಆಮದು ಮಾಡಲಾದ ಮಾದರಿಗಳಿಗೂ ಅನ್ವಯಿಸುತ್ತವೆ. ಆದರೆ ಪ್ರವೇಶ ಮಟ್ಟದ ಮಾದರಿಯು ಮಾತ್ರ ಸಬ್ಸಿಡಿಗೆ ಅರ್ಹವಾಗಿರಲಿದ್ದು, ಈ ಸಬ್ಸಿಡಿಯು ಮೊದಲ ಬಾರಿಗೆ ಖರೀದಿಸುವವರಿಗೆ ಮಾತ್ರ ಸೀಮಿತವಾಗಿದೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಆಮದು ಮಾಡಿಕೊಳ್ಳುವ ಕಾರುಗಳ ಮೇಲೆ 10 ಲಕ್ಷ ರೂ.ಗಳ ಸಬ್ಸಿಡಿ ಆಮದು ಮಾಡಿಕೊಳ್ಳುವ ಎಲೆಕ್ಟ್ರಿಕ್ ಕಾರುಗಳು ರೂ. 40 ಲಕ್ಷದಿಂದ ರೂ. 70 ಲಕ್ಷ ಬೆಲೆಯೊಂದಿಗೆ ಗರಿಷ್ಠ ರೂ. 10 ಲಕ್ಷ ಅಥವಾ ಶೇ. 15 ರಷ್ಟು ಸಬ್ಸಿಡಿ ಸಿಗಲಿದೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಹೆಚ್ಚುವರಿಯಾಗಿ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳಿಗೂ ಸಹ ಸಬ್ಸಡಿ ಲಭ್ಯವಿದ್ದು, ರೂ. 75 ಸಾವಿರವರೆಗೆ ಸಬ್ಸಿಡಿ ನೀಡಲಾಗುತ್ತದೆ. ಅದೇ ಸಮಯದಲ್ಲಿ, 10 ಲಕ್ಷಕ್ಕಿಂತ ಹೆಚ್ಚು ಬೆಲೆಯ ಎಲೆಕ್ಟ್ರಿಕ್ ಕಾರುಗಳ ಮೇಲೆ ರೂ. 1 ಲಕ್ಷ ರೂಪಾಯಿ ತನಕ ಸಬ್ಸಿಡಿ ಸಿಗಲಿದ್ದು, ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯ ಅಡಿಯಲ್ಲಿನ ಕೊಡುಗೆಗಳು ನೀತಿ ಘೋಷಣೆಯ ಮೊದಲ ಆರು ತಿಂಗಳವರೆಗೆ ಮಾತ್ರ ಲಭ್ಯವಿರಲಿವೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಇದರಲ್ಲಿ ರಾಜ್ಯದಲ್ಲಿ ಇವಿ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಹರಿಯಾಣ ಸರ್ಕಾರವು ಹೊಸ ಚಾರ್ಜಿಂಗ್ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಯೋಜನಾ ವೆಚ್ಚದ 50 ಪ್ರತಿಶತವನ್ನು (ರೂ. 1 ಕೋಟಿವರೆಗೆ) ನೀಡುತ್ತಿದೆ. ಇದರೊಂದಿಗೆ ಆರ್ & ಡಿ ಕೇಂದ್ರಗಳಲ್ಲಿ ಹೊಸ ಇವಿಗಳನ್ನು ಅಭಿವೃದ್ಧಿಪಡಿಸಲು 5 ಕೋಟಿ ರೂಪಾಯಿಗಳವರೆಗೆ ನೆರವು ನೀಡುವುದಾಗಿ ಹೇಳಿದೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಹೊಸ ಸಬ್ಸಡಿ ಯೋಜನೆ ಅಡಿ ಪಳೆಯುಳಿಕೆ ಅಲ್ಲದ ಇಂಧನ ಆಧಾರಿತ ಚಲನಶೀಲತೆಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳಿಗೆ ಹರಿಯಾಣ ಸರ್ಕಾರವು ರೂ. 5 ಕೋಟಿ ಅನುದಾನ ಘೋಷಣೆ ಮಾಡಿದೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಇ-ವಾಹನ ತಯಾರಕ ಕಂಪನಿಗಳಿಗೆ ಪ್ರೋತ್ಸಾಹ

ಹರಿಯಾಣ ಸರ್ಕಾರವು ಇವಿ ಪಾಲಿಸಿಯಡಿಯಲ್ಲಿ ಇವಿ ತಯಾರಕ ಕಂಪನಿಗಳಿಗೆ ಫಿಕ್ಸೆಡ್ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ (FCI), SGST, ಸ್ಟ್ಯಾಂಪ್ ಡ್ಯೂಟಿ, ಉದ್ಯೋಗ ಸೃಷ್ಟಿ ಇತ್ಯಾದಿಗಳ ಮೇಲೆ ಪ್ರೋತ್ಸಾಹವನ್ನು ನೀಡುವ ಮೂಲಕ ವಿವಿಧ ಹಣಕಾಸಿನ ಪ್ರೋತ್ಸಾಹವನ್ನು ನೀಡುತ್ತದೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಹಾಗೆಯೇ ಇವಿ ನೀತಿಯ ಅಡಿಯಲ್ಲಿ 20 ವರ್ಷಗಳ ಅವಧಿಗೆ ವಿದ್ಯುತ್ ಸುಂಕದ ವಿನಾಯಿತಿಯೊಂದಿಗೆ ಸ್ಟ್ಯಾಂಪ್ ಡ್ಯೂಟಿಯ ಪ್ರತಿಶತ 100 ರಷ್ಟು ಮರುಪಾವತಿಯ ಮಾಡುವುದಾಗಿ ಘೋಷಣೆ ಮಾಡಿದ್ದು, SGST ಮರುಪಾವತಿ 10 ವರ್ಷಗಳ ಅವಧಿಗೆ ಶೇ. 50 ವರೆಗೆ ಇರಲಿದೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಜೊತೆಗೆ ಹರಿಯಾಣ ಸರ್ಕಾರವು ತನ್ನ ರಾಜ್ಯದಲ್ಲಿ ಉತ್ಪಾದನೆಗೊಳ್ಳುವ ಎಲೆಕ್ಟ್ರಿಕ್ ವಾಹನಗಳು, ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳು, ಇವಿ ಬ್ಯಾಟರಿಗಳು, ಚಾರ್ಜಿಂಗ್ ಮೂಲಸೌಕರ್ಯ ಇತ್ಯಾದಿಗಳನ್ನು ತಯಾರಿಸುವ ಕಂಪನಿಗಳಿಗೆ ಸಬ್ಸಿಡಿಯೊಂದಿಗೆ ವಿವಿಧ ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತಂದಿದೆ.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಬೃಹತ್ ಉದ್ಯಮ ವ್ಯವಹಾರದಲ್ಲಿನ ಫಿಕ್ಸೆಡ್ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್‌ನ (ಎಫ್‌ಸಿಐ) ಶೇಕಡಾ 20 ರಷ್ಟು ಅಥವಾ 20 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಪಡೆಯಲಿದ್ದು, ಬಂಡವಾಳ ಹೂಡಿಕೆಯ ಮೇಲೆ ಬೃಹತ್ ಕೈಗಾರಿಕೆಗಳಿಗೆ ರೂ.10 ಕೋಟಿ ಅಥವಾ ಶೇ.10ರಷ್ಟು ಸಬ್ಸಿಡಿ ನೀಡಲಾಗುವುದು.

ಹರಿಯಾಣದಲ್ಲಿ ಇವಿ ಕಾರು ಖರೀದಿ ಮೇಲೆ ರೂ.10 ಲಕ್ಷದ ತನಕ ಸಬ್ಸಡಿ

ಅದೇ ಸಮಯದಲ್ಲಿ ಮಧ್ಯಮ ಗಾತ್ರದ ಉದ್ಯಮಕ್ಕೆ FCI ಯ ಪ್ರತಿಶತ 20 ರಷ್ಟು ಅಥವಾ ರೂ. 50 ಲಕ್ಷದವರೆಗೆ ಸಹಾಯಧನವನ್ನು ನೀಡಲಿದ್ದು, ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಶೇ. 20 ಅಥವಾ ರೂ.40 ಲಕ್ಷದವರೆಗೆ ಮತ್ತು ಸೂಕ್ಷ್ಮ ಉದ್ಯಮ ವಿಭಾಗಗಳಿಗೆ ಶೇ. 25ರಷ್ಟು ಸಬ್ಸಿಡಿ ದೊರೆಯಲಿದೆ.

More from DriveSpark

Article Published On: Thursday, July 14, 2022, 20:14 [IST]
English summary
Haryana govt approves 2022 electric vehicle policy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+