Just In
- 39 min ago
ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?
- 1 hr ago
ಡೀಲರ್ ಬಳಿ ತಲುಪಿದ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG
- 1 hr ago
ಧೂಳೆಬ್ಬಿಸುತ್ತಿರುವ ಮಹೀಂದ್ರಾ XUV400 EV ಬುಕಿಂಗ್ಸ್... ನೆಕ್ಸಾನ್ ಇವಿಗೆ ಸೆಡ್ಡು ಹೊಡಿಯಲಿದೆಯೇ?
- 3 hrs ago
ರೀ ಎಂಟ್ರಿ ಕೊಡಲಿವೆಯೇ ಮಿಂಚಿ ಮರೆಯಾದ ಲೆಜೆಂಡರಿ ಕಾರುಗಳು?: ಹೊಸ ವಿನ್ಯಾಸ, ಎಂಜಿನ್ ಬದಲಾವಣೆ!
Don't Miss!
- Movies
ಬಾಲನಟಿಯರಾಗಿ ಬಂದು ನಾಯಕಿಯರಾಗಿ ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯರ ಜರ್ನಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Sports
ODIನಲ್ಲಿ ಭರ್ಜರಿ ಆಟ, ಆದರೆ ಟಿ20ಯಲ್ಲಿ ವೈಫಲ್ಯ: ಟೀಮ್ ಇಂಡಿಯಾದ 3 ಯುವ ಆಟಗಾರರ ಕಥೆಯಿದು!
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಪೋರ್ಟಿ ಲುಕ್, ಹೊಸ ಫೀಚರ್‌ನೊಂದಿಗೆ ಬಿಡುಗಡೆಯಾದ ಹೀರೋ ಎಕ್ಸ್‌ಟ್ರೀಂ 160R ಸ್ಟೆಲ್ತ್ ಎಡಿಷನ್
ಬಹುನಿರೀಕ್ಷಿತ ಹೀರೋ ಎಕ್ಸ್‌ಟ್ರೀಂ 160R ಸ್ಟೆಲ್ತ್ ಆವೃತ್ತಿ 2.0 (Hero Xtreme 160R Stealth Edition 2.0) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಬೈಕ್‌ನ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ನೋಡಬಹುದು.

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್ ತನ್ನ ಎಕ್ಸ್‌ಟ್ರೀಮ್ 160ಆರ್ ಸ್ಟೆಲ್ತ್ ಆವೃತ್ತಿ 2.0 ಮೋಟಾರ್‌ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಸಾಕಷ್ಟು ಆಧುನಿಕ ತಾಂತ್ರಿಕ ಸೌಲಭ್ಯಗಳೊಂದಿಗೆ ಈ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಹೊಸ ಫೀಚರ್ ಜೋಡಣೆ
ಮೊಬೈಲ್ ಸಂಪರ್ಕದ ವೈಶಿಷ್ಟ್ಯವನ್ನು ಈ ಬೈಕ್‌ನಲ್ಲಿ ನೀಡಲಾಗಿದೆ. ಈ ಕನೆಕ್ಟಿವಿಟಿ ವೈಶಿಷ್ಟ್ಯದ ಮೂಲಕ ಬೈಕ್ ಅನ್ನು ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ಹಾಗಾಗಿ, ಹೊಸದಾಗಿ ಬಿಡುಗಡೆ ಮಾಡಿರುವ ಹೀರೋ ಎಕ್ಸ್‌ಟ್ರೀಂ 160R ಸ್ಟೆಲ್ತ್ ಆವೃತ್ತಿ 2.0 ಬೈಕ್ ಅನ್ನು ಕಳ್ಳರು ಕದ್ದರೂ, ಅದನ್ನು ಕೆಲವೇ ಸೆಕೆಂಡುಗಳಲ್ಲಿ ಪತ್ತೆ ಹಚ್ಚಬಹುದು.

ಈ ವೈಶಿಷ್ಟ್ಯವನ್ನು ಹೀರೋ 'ಹೀರೋ ಕನೆಕ್ಟ್ ಟೆಕ್' ಹೆಸರಿನಲ್ಲಿ ನೀಡಿದೆ. ಕಂಪನಿಯು ಈ ಬೈಕ್ ಅನ್ನು ಬ್ಲೂಟೂತ್ ಸಾಧನದ ಮೂಲಕ ಮೊಬೈಲ್ ಫೋನ್‌ಗೆ ಸಂಪರ್ಕಿಸುವ ರೀತಿಯಲ್ಲಿ ವಿನ್ಯಾಸಗೊಳಿಸಿದೆ. ಇದಲ್ಲದೆ, ಹೀರೋ ಎಕ್ಸ್‌ಟ್ರೀಂ 160R ಸ್ಟೆಲ್ತ್ ಆವೃತ್ತಿ 2.0 ಕೆಲವು ಮಿತಿಗಳನ್ನು ದಾಟಿದರೆ ಎಚ್ಚರಿಕೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಕಳ್ಳತನದ ಭಯ ಇರುವುದಿಲ್ಲ.

ಇದರೊಂದಿಗೆ ನಿರ್ದಿಷ್ಟ ವೇಗವನ್ನು ಇದರಲ್ಲಿ ಹೊಂದಿಸಿದ್ದು, ಅದನ್ನು ಮೀರಿದರೆ ಮಾಹಿತಿ ಮತ್ತು ಎಚ್ಚರಿಕೆ ನೀಡುವ ತಂತ್ರಜ್ಞಾನವನ್ನು ಬೈಕ್‌ನಲ್ಲಿ ಅಳವಡಿಸಲಾಗಿದೆ. ಆದ್ದರಿಂದ, ಹೀರೋ ಎಕ್ಸ್‌ಟ್ರೀಂ 160R ಸ್ಟೆಲ್ತ್ ಆವೃತ್ತಿ 2.0 ಮತ್ತೊಂದು ಹಂತದ ತಂತ್ರಜ್ಞಾನದೊಂದಿಗೆ ಬೈಕ್ ಅನ್ನು ಪ್ರಸ್ತುತಪಡಿಸಿದೆ.

ವಿನ್ಯಾಸ
ಹೀರೊ ಮೋಟೊಕಾರ್ಪ್ ಈ ಬೈಕ್ ಅನ್ನು ಆಧುನಿಕ ತಾಂತ್ರಿಕ ಸೌಲಭ್ಯಗಳಲ್ಲದೇ ಹೊಸ ಬಣ್ಣಗಳಿಂದಲೂ ಡಿಸೈನ್ ಮಾಡಿದೆ. ಈ ಬೈಕ್ ಆಕರ್ಷಣೆಯನ್ನು ಹೆಚ್ಚಿಸಲು ಹೊಸದಾಗಿ ಕಪ್ಪು ಬಣ್ಣವನ್ನು ಬಳಸಲಾಗಿದೆ. ಇದರೊಂದಿಗೆ ಹೆಚ್ಚುವರಿ ಆಕರ್ಷಣೆಗಾಗಿ ಬೈಕ್‌ನಲ್ಲಿ ಕೆಂಪು ಬಣ್ಣದ ಅಕ್ಸೆಂಟ್‌ಗಳನ್ನು ಬಳಸಲಾಗಿದೆ.

ಈ ಕೆಂಪು ಆಕ್ಸೆಂಟ್‌ಗಳನ್ನು ಫೋರ್ಕ್‌ನ ಕೆಳಭಾಗ, ಮೊನೊಶಾಕ್, ಎಂಜಿನ್ ಹೆಡ್, ಪಿಲಿಯನ್ ಫೂಟ್ ರೆಸ್ಟ್ ಮತ್ತು ರಿಯರ್ ಗ್ರ್ಯಾಬ್ ರೈಲ್ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಬಳಸಲಾಗಿದೆ. ಇವೆಲ್ಲವೂ ಬೈಕಿಗೆ ವಿಭಿನ್ನ ಮಟ್ಟದ ನೋಟವನ್ನು ನೀಡಲು ಉದ್ದೇಶಿಸಲಾಗಿದೆ. ಹೀರೋ ಎಕ್ಸ್‌ಟ್ರೀಮ್ 160ಆರ್ ಸ್ಟೆಲ್ತ್ ಎಡಿಷನ್ 2.0 ಅನ್ನು ಇಂತಹ ವಿಶೇಷ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ.

ಎಂಜಿನ್ ಮತ್ತು ಸಸ್ಪೆನ್ಷನ್
ಇನ್ನು ಮೋಟಾರ್‌ಗೆ ಸಂಬಂಧಿಸಿದಂತೆ, ಇದು ಸಾಮಾನ್ಯ ಎಕ್ಸ್‌ಟ್ರೀಂ 160R ಮಾದರಿಯಲ್ಲಿ ಬಳಸಲಾದ ಅದೇ 163cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಮೋಟರ್ ಅನ್ನು ಪಡೆದಿದೆ. ಮೋಟಾರ್ ಗರಿಷ್ಠ 15.2 HP ಮತ್ತು 14 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಸಸ್ಪೆನ್ಷನ್ ಸೆಟಪ್‌ಗೆ ಸಂಬಂಧಿಸಿದಂತೆ, 37mm ಟೆಲಿಸ್ಕೋಪಿಕ್ ಫೋರ್ಕ್ ಮತ್ತು 7-ಹಂತದ ಪ್ರಿಲೋಡ್ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಅನ್ನು ಬಳಸಲಾಗಿದೆ. ಇವು ರೈಡಿಂಗ್‌ನಲ್ಲಿ ಚಾಲಕನಿಗೆ ಉತ್ತಮ ಚಾಲನಾ ಅನುಭವ ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

ಮುಂದಿನ ಚಕ್ರದಲ್ಲಿ 276 ಎಂಎಂ ಪೆಡಲ್ ಡಿಸ್ಕ್ ಮತ್ತು ಹಿಂದಿನ ಚಕ್ರದಲ್ಲಿ 220 ಎಂಎಂ ಡಿಸ್ಕ್ ಉತ್ತಮ ಬ್ರೇಕಿಂಗ್ ಅನುಭವವನ್ನು ನೀಡುತ್ತದೆ. ಇದರೊಂದಿಗೆ ಸಿಂಗಲ್ ಚಾನೆಲ್ ಎಬಿಎಸ್ ಕೂಡ ನೀಡಲಾಗಿದೆ. ಆದ್ದರಿಂದ ಬ್ರೇಕಿಂಗ್ ಅನುಭವವು ತುಂಬಾ ಅದ್ಭುತವಾಗಿರುತ್ತದೆ ಎಂದು ಹೇಳಬಹುದು.

ಬೆಲೆ
ಈ ಬೈಕ್‌ಗೆ ರೂ. 1.30 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಇದು ದೆಹಲಿಯ ಎಕ್ಸ್ ಶೋ ರೂಂ ಬೆಲೆಯಾಗಿದೆ. ಹಿಂದಿನ ಸ್ಟೆಲ್ತ್ ಆವೃತ್ತಿಗೆ ಹೋಲಿಸಿದರೆ, ರೂ. 7 ಸಾವಿರ ದುಬಾರಿಯಾಗಿದೆ. ಈ ಹೊಸ ಬೈಕಿನ ಆಗಮನವು ಟಿವಿಎಸ್ ಅಪಾಚೆ RTR 1604V, ಬಜಾಜ್ ಪಲ್ಸರ್ N160, ಸುಜುಕಿ ಜಿಕ್ಸರ್ ಮತ್ತು ಯಮಹಾ FZ-FI ನಂತಹ ಬೈಕ್ ಮಾದರಿಗಳೊಂದಿಗೆ ಸ್ಪರ್ಧಿಸಲಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಸ್ಟೆಲ್ತ್ ಆವೃತ್ತಿಯು ಅತ್ಯಂತ ಸುಂದರ ನೋಟವನ್ನು ಹೊಂದಿರುವುದರಿಂದ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಪೈಪೋಟಿಯು ಬಿಗಿಯಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಕಾರಣ ಕಂಪನಿಯು ಸಹ ಆಗಾಗ್ಗೆ ಹೊಸ ನವೀಕರಣ, ಹೊಸ ಫೀಚರ್ಸ್‌ಗಳನ್ನು ನೀಡಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ಇದೀಗ ಬಿಡುಗಡೆಯಾಗಿರುವ ಸ್ಟೆಲ್ತ ಎಡಿಷನ್ ಯಾವಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.