ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಗಾಗಿ ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೊಕಾರ್ಪ್ ಪಾಲುದಾರಿಕೆ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದ್ದಂತೆ ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ಮೂಲಸೌಕರ್ಯವೂ ಸಹ ಉತ್ತಮಗೊಳ್ಳುತ್ತಿದ್ದು, ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯು ಕಳೆದ ಕೆಲ ತಿಂಗಳಲ್ಲಿ ಸಾಕಷ್ಟು ಹೆಚ್ಚಳವಾಗಿವೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ದಿನಂಪ್ರತಿ ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡಲಾಗುತ್ತಿರುವುದು ಇವಿ ವಾಹನಗಳ ಬಳಕೆಗೆ ಸಾರ್ವಜನಿಕ ಆದ್ಯತೆ ನೀಡುತ್ತಿದ್ದಾರೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಇವಿ ವಾಹನ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಇವಿ ವಾಹನಗಳಿಗೆ ಪೂರಕವಾಗಿ ಈಗಗಾಲೇ ದೇಶದ ಪ್ರಮುಖ ನಗರಗಳಲ್ಲಿ ಸಾವಿರಾರು ಸಾರ್ವಜನಿಕ ಬಳಕೆಯ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಹೆಚ್ಚಳಕ್ಕಾಗಿ ಇದೀಗ ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ತೈಲ ಮಾರಾಟ ಸಂಸ್ಥೆಯಾಗಿರುವ ಭಾರತ್ ಪೆಟ್ರೋಲಿಯಂ ಜೊತೆ ದೇಶದ ಮುಂಚೂಣಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಹೊಸ ಪಾಲುದಾರಿಕೆ ಪ್ರಕಟಿಸಿದೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲು ಹೊಸ ಹೂಡಿಕೆಯೊಂದಿಗೆ ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೊಕಾರ್ಪ್ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಚಾರ್ಜಿಂಗ್ ಜಾಲವನ್ನು ತೆರೆಯಲು ನಿರ್ಧರಿಸಿದ್ದು, ಹೊಸ ಪಾಲುದಾರಿಕೆಯ ಭಾಗವಾಗಿ ಚಾರ್ಜಿಂಗ್ ನಿಲ್ದಾಣಕ್ಕೆ ಭಾರತ್ ಪೆಟ್ರೋಲಿಯಂ ಕಂಪನಿಯು ಅಸ್ತಿತ್ವದಲ್ಲಿರುವ ತನ್ನ ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ಸ್ಥಳಾವಕಾಶ ಒದಗಿಸಲಿದೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಭಾರತ್ ಪೆಟ್ರೋಲಿಯಂ ಕಂಪನಿಯು ಸ್ಥಳಾವಕಾಶ ಒದಗಿಸಿದರೆ ಫಾಸ್ಟ್ ಇವಿ ಚಾರ್ಜಿಂಗ್ ಸೌಲಭ್ಯವನ್ನು ಹೀರೋ ಮೋಟೊಕಾರ್ಪ್ ಕಂಪನಿಯು ನಿರ್ವಹಣೆ ಮಾಡಲಿದ್ದು, ಹೊಸ ಯೋಜನೆಯೊಂದಿಗೆ ಭವಿಷ್ಯ ವಾಹನಗಳಿಂದ ಭಾರೀ ಪ್ರಮಾಣದ ಆದಾಯ ನೀರಿಕ್ಷೆಯಲ್ಲಿವೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಹೀರೋ ಮೋಟೊಕಾರ್ಪ್ ಜೊತೆಗಿನ ಪಾಲುದಾರಿಕೆ ಹೊರತುಪಡಿಸಿ ಭಾರತ್ ಪೆಟ್ರೋಲಿಯಂ ಸ್ವತಂತ್ರವಾಗಿಯೂ ಈಗಾಗಲೇ ಹೊಸ ಯೋಜನೆಯೊಂದಿಗೆ ಇವಿ ಚಾರ್ಜಿಂಗ್ ನಿಲ್ದಾಣಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಮುಂದಿನ ಐದು ವರ್ಷಗಳಲ್ಲಿ ಹಂತ-ಹಂತವಾಗಿ 7 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಯೋಜನೆ ಸಿದ್ದಪಡಿಸಿದೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಮುಂದಿನ ಅಕ್ಟೋಬರ್ ವೇಳೆಗೆ ದೇಶದ ಪ್ರಮುಖ ಕಡೆಗಳಲ್ಲಿ ಒಂದು ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಗುರಿಹೊಂದಿರುವ ಭಾರತ್ ಪೆಟ್ರೋಲಿಯಂ ಕಂಪನಿಯು ಈಗಾಗಲೇ ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿಯೇ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆ ಚಾಲನೆ ನೀಡಿದೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಕಂಪನಿಯು ಇತ್ತೀಚೆಗೆ ಚೆನ್ನೈ-ತಿರುಚಿ-ಮಧುರೈನ ನಡುವಿನ 900 ಕಿಮೀ ಹೆದ್ದಾರಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಫಾಸ್ಟ್ ಚಾರ್ಜಿಂಗ್ ಕಾರಿಡಾರ್ ಪ್ರಾರಂಭಿಸಿದ್ದು, ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ CCS-2 ಮಾನದಂಡ ಹೊಂದಿರುವ ಡಿಸಿ ಫಾಸ್ಟ್-ಚಾರ್ಜರ್‌ಗಳನ್ನು ಅಳವಡಿಸಿದೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಚಾರ್ಜಿಂಗ್ ಸೌಲಭ್ಯದ ಕೊರತೆಯಿಂದಾಗಿ ನಗರ ಪ್ರದೇಶದಿಂದ ದೂರದ ಪ್ರದೇಶಗಳಿಗೆ ಪ್ರಯಾಣ ಬೆಳೆಸಲು ಹಿಂಜರಿಯುವ ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಹೆದ್ದಾರಿಗಳಲ್ಲೂ ಚಾರ್ಜಿಂಗ್ ನಿಲ್ದಾಣ ಲಭ್ಯತೆಯು ಇವಿ ವಾಹನ ಬಳಕೆಯನ್ನು ಉತ್ತೇಜಿಸಲು ನೆರವಾಗಲಿದ್ದು, ಡಿಸಿ ಫಾಸ್ಟ್-ಚಾರ್ಜರ್‌ಗಳ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಟ್ಟದ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಭಾರತ್ ಪೆಟ್ರೋಲಿಯಂ ಜೊತೆ ಹೀರೋ ಮೋಟೋಕಾರ್ಪ್ ಪಾಲುದಾರಿಕೆ

ಇಂಧನ ಚಾಲಿತ ಬದಲಾಗಿ ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸಲು ಎಲ್ಲಾ ಮೂಲಭೂತ ಸೌಕರ್ಯ ಒದಗಿಸುವುವಲ್ಲಿ ಕಂಪನಿಯು ಬದ್ದವಾಗಿದೆ ಎಂದಿರುವ ಭಾರತ್ ಪೆಟ್ರೋಲಿಯಂ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೆದ್ದಾರಿಯಲ್ಲಿ ಇವಿ ವಾಹನಗಳ ಬಳಕೆಯ ಉತ್ತೇಜನಕ್ಕಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದ್ದು, ಇದರಿಂದ ಕೇವಲ ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಇವಿ ವಾಹನಗಳ ಮೂಲಕ ದೂರದ ಪ್ರಯಾಣಕ್ಕೂ ಅನುಕೂಲಕರವಾಗಲಿದೆ.

More from DriveSpark

Article Published On: Wednesday, February 23, 2022, 9:00 [IST]
English summary
Hero motocorp join hands with bharat petroleum for ev charging stations
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+