ಡೀಲರ್‌ಶಿಪ್‌ಗಳನ್ನು ನವೀಕರಿಸಲು ಸುಮಾರು ರೂ. 260 ಕೋಟಿ ಹೂಡಿಕೆಗೆ ಸಿದ್ದವಾದ ಹೋಂಡಾ
ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ದೇಶಾದ್ಯಂತ ಹರಡಿಕೊಂಡಿರುವ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ನವೀಕರಿಸಲು ಸಿದ್ಧವಾಗಿದ್ದು, ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿದೆ.

ಕಾರ್ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡಲು ಅದರ ಡೀಲರ್ ಪಾಲುದಾರರೊಂದಿಗೆ ಸಹಯೋಗದಲ್ಲಿ ಸುಮಾರು ರೂ. 260 ಕೋಟಿ ಹೂಡಿಕೆ ಮಾಡಲು ಮುಂದಾಗಿರುವ ಹೋಂಡಾ ಕಂಪನಿಯು ಹೊಸ ಡೀಲರ್‌ಶಿಪ್‌ಗಳೊಂದಿಗೆ ಗ್ರಾಹಕರಿಗೆ ಹೆಚ್ಚು ಪ್ರೀಮಿಯಂ ಅನುಭವವನ್ನು ನೀಡುವ ಯೋಜನೆಯಲ್ಲಿದೆ.

ಹೊಸ ಎಸ್‌ಯುವಿ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೂ ಮುನ್ನ ಕಂಪನಿಯು ಕಾರ್ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡಲು ನಿರ್ಧರಿಸಿದ್ದು, ಪ್ರೀಮಿಯಂ ಕಾರು ಮಾದರಿಗಳೊಂದಿಗೆ ಕಾರು ಮಾರಾಟ ಸೌಲಭ್ಯವನ್ನು ಸಹ ನವೀಕರಿಸುತ್ತಿದೆ.

ಭಾರತದಲ್ಲಿ 1995ರಿಂದ ಹೋಂಡಾ ಕಂಪನಿಯು 27 ವರ್ಷಗಳ ಕಾರ್ಯಾಚರಣೆಯ ಅನುಭವ ಹೊಂದಿದ್ದು, ಹೋಂಡಾ ಮಾರಾಟ ಮಾಡಿದ ಕಾರುಗಳು ಸಮಯೋಚಿತ ನವೀಕರಣಗಳು ಮತ್ತು ಪೀಳಿಗೆಯ ಬದಲಾವಣೆಗಳನ್ನು ಪಡೆದಿದ್ದರೂ ಸಹ ಹೋಂಡಾದ ಡೀಲರ್‌ಶಿಪ್‌ಗಳು ಹೆಚ್ಚು ಕಡಿಮೆ ಹಾಗೆಯೇ ಉಳಿದಿವೆ.

ಹೋಂಡಾದ ಡೀಲರ್‌ಶಿಪ್‌ಗಳು ಕ್ರಿಯಾತ್ಮಕ ಮತ್ತು ಪ್ರಾಯೋಗಿಕವಾಗಿದ್ದು, ಈ ಡೀಲರ್‌ಶಿಪ್‌ಗಳು ಹಿಂದಿನ ದಿನದಲ್ಲಿ ಬಹಳ ಪ್ರೀಮಿಯಂ ಆಗಿ ಕಾಣುತ್ತಿದ್ದವು. ಆದಾಗ್ಯೂ ಇತ್ತೀಚೆಗೆ ಆಗುತ್ತಿರುವ ಆಟೋ ಉದ್ಯಮದಲ್ಲಿನ ಬದಲಾವಣೆಗಳು ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ಕಂಪನಿಯು ಇದೇ ಕಾರಣಕ್ಕೆ ಗ್ರಾಹಕರಿಗೆ ಹೊಸ ಖರೀದಿ ಅನುಭವ ನೀಡಲು ಮುಂದಾಗಿದೆ.

ಹೋಂಡಾ ಕಾರ್ಸ್ ಇಂಡಿಯಾ ಈಗ ಭಾರತದಾದ್ಯಂತ ತನ್ನ ಡೀಲರ್‌ಶಿಪ್‌ಗಳನ್ನು ನವೀಕರಿಸಲು ನಿರ್ಧರಿಸಿದ್ದು, ಈ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡಲು ಮತ್ತೊಂದು ಕಾರಣವೆಂದರೆ 2023 ರಲ್ಲಿ ಹೋಂಡಾದಿಂದ ಹಲವು ಹೊಸ ಎಸ್‌ಯುವಿ ಕಾರುಗಳು ಆಗಮನವಾಗಿದೆ.

ಹೀಗಾಗಿ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡುವ ಯೋಜನೆಯನ್ನು ತ್ವರಿತಗೊಳಿಸುತ್ತಿದ್ದು, ಕೋವಿಡ್ ಕಾರಣಕ್ಕೆ ಶೋರೂಂಗಳ ನವೀಕರಣ ಯೋಜನೆಯನ್ನು ತಡೆಹಿಡಿಯಲಾಗಿತ್ತು. ಸದ್ಯ ಹೊಸ ಕಾರುಗಳ ಮಾರಾಟವು ಹೆಚ್ಚುತ್ತಿರುವುದರಿಂದ ಶೋರೂಂ ನವೀಕರಣ ಯೋಜನೆಗೆ ಚಾಲನೆ ನೀಡುತ್ತಿದೆ.

ಹೋಂಡಾದ ಡೀಲರ್‌ಶಿಪ್‌ಗಳನ್ನು ಮೇಲ್ದರ್ಜೆಗೇರಿಸಲು ಕಂಪನಿಯು ಒಟ್ಟು ರೂ. 260 ಕೋಟಿ ಹೂಡಿಕೆ ಮಾಡಬೇಕಿದ್ದು, ಇದು ಹೋಂಡಾದ ಡೀಲರ್ ಪಾಲುದಾರರ ಸಹಯೋಗದಲ್ಲಿರುತ್ತದೆ. ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿನ ಹೋಂಡಾ ಕಂಪನಿಯು ಸುಮಾರು 350 ಡೀಲರ್‌ಶಿಪ್‌ಗಳನ್ನು ಹೊಂದಿದ್ದು, ಈಗಾಗಲೇ ಹಳೆಯ ಶೋರೂಂಗಳ ನವೀಕರಣಕ್ಕಾಗಿ ಸುಮಾರು ರೂ. 100 ಕೋಟಿ ಹೂಡಿಕೆ ಮಾಡಲಾಗಿದೆ.

ಜೊತೆಗೆ ಕಂಪನಿಯು ಶೋರೂಂಗಳ ಉನ್ನತೀರಕರಣದೊಂದಿಗೆ ಸರ್ವಿಸ್ ಕೇಂದ್ರಗಳನ್ನು ಸಹ ಉನ್ನತೀಕರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ತನ್ನ ಗ್ರಾಹಕರಿಗೆ ಹೊಸ ಖರೀದಿ ಅನುಭವ ನೀಡುವ ತವಕದಲ್ಲಿದೆ.

ಇನ್ನು ಹೋಂಡಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್‌ಗಳನ್ನು ಘೋಷಣೆ ಮಾಡಿದ್ದು, ತಿಂಗಳಾಂತ್ಯದ ತನಕ ಹೊಸ ಆಫರ್‌ಗಳು ಲಭ್ಯವಿರಲಿವೆ.

ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಹೋಂಡಾ ಕಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯಲ್ಲಿ ಸ್ಥಿರತೆಗಾಗಿ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳನ್ನು ಗ್ರಾಹಕರು ಈ ತಿಂಗಳಾಂತ್ಯದ ತನಕ ಪಡೆದುಕೊಳ್ಳಬಹುದಾಗಿದೆ.

ಮುಂಬರುವ ಹಬ್ಬದ ಋತುಗಳಲ್ಲಿ ಹೊಸ ವಾಹನಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಸೆಪ್ಟೆಂಬರ್ ಅವಧಿಗಾಗಿ ಹಲವು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ಹಲವಾರು ಉಳಿತಾಯ ಯೋಜನೆಗಳನ್ನು ಪ್ರಕಟಿಸಿದೆ.

ಹೋಂಡಾ ಕಾರು ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಅಮೇಜ್(Amaze), ಜಾಝ್(Jazz), ಡಬ್ಲ್ಯುಆರ್-ವಿ(WR-V), ಸಿಟಿ(City) ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಪ್ರತಿ ಕಾರು ಮಾದರಿಯ ಮೇಲೂ ವಿವಿಧ ಆಫರ್ ಘೋಷಣೆ ಮಾಡಿದೆ.


Click it and Unblock the Notifications