ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಹೋಂಡಾ ಕಾರ್ಸ್ ಇಂಡಿಯಾ(Honda Cars India) ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್‌ಗಳನ್ನು ಘೋಷಣೆ ಮಾಡಿದ್ದು, ತಿಂಗಳಾಂತ್ಯದ ತನಕ ಹೊಸ ಆಫರ್‌ಗಳು ಲಭ್ಯವಿರಲಿವೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಹೋಂಡಾ ಕಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯಲ್ಲಿ ಸ್ಥಿರತೆಗಾಗಿ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳನ್ನು ಗ್ರಾಹಕರು ಈ ತಿಂಗಳಾಂತ್ಯದ ತನಕ ಪಡೆದುಕೊಳ್ಳಬಹುದಾಗಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಮುಂಬರುವ ಹಬ್ಬದ ಋತುಗಳಲ್ಲಿ ಹೊಸ ವಾಹನಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಸೆಪ್ಟೆಂಬರ್ ಅವಧಿಗಾಗಿ ಹಲವು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ಹಲವಾರು ಉಳಿತಾಯ ಯೋಜನೆಗಳನ್ನು ಪ್ರಕಟಿಸಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಹೋಂಡಾ ಕಾರು ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಅಮೇಜ್(Amaze), ಜಾಝ್(Jazz), ಡಬ್ಲ್ಯುಆರ್-ವಿ(WR-V), ಸಿಟಿ(City) ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಪ್ರತಿ ಕಾರು ಮಾದರಿಯ ಮೇಲೂ ವಿವಿಧ ಆಫರ್ ಘೋಷಣೆ ಮಾಡಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್, ಸಿಟಿ ಸೆಡಾನ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಮೇಲೆ ಗರಿಷ್ಠ ರೂ.27,500 ತನಕ ಡಿಸ್ಕೌಂಟ್ ನೀಡುತ್ತಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಹೊಸ ಆಫರ್‌ಗಳಲ್ಲಿ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಎಎಂಟಿ ವರ್ಷನ್ ಸೇರಿದಂತೆ ಎಲ್ಲಾ ಮಾದರಿಗಳ ಮೇಲೂ ರೂ. 8 ಸಾವಿರ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಲಾಯಲ್ಟಿ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯ್ತಿ ಪಡೆದುಕೊಳ್ಳಬಹುದಾಗಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಜಾಝ್ ಮಾದರಿಯ ಎಲ್ಲಾ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯಯು ಗ್ರಾಹಕರಿಗೆ ರೂ. 25 ಸಾವಿರ ತನಕ ಆಫರ್ ಘೋಷಣೆ ಮಾಡಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ, ಎಕ್ಸ್‌ಚೆಂಜ್, ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಸಹ ಲಭ್ಯವಿರಲಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಇನ್ನುಳಿದಂತೆ ಹೋಂಡಾ ಹೊಸ ಆಫರ್‌ ಸಿಟಿ ಸೆಡಾನ್ ಆವೃತ್ತಿಯ ಮೇಲೆ ಹೋಂಡಾ ಕಂಪನಿಯು ಉತ್ತಮ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಸಿಟಿ ಕಾರಿನ ನ್ಯೂ ಜನರೇಷನ್ ಮೇಲೆ ರೂ. 27,496 ತನಕ ಆಫರ್ ಲಭ್ಯವಿವೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಸಿಟಿ ಸೆಡಾನ್ ಮಾದರಿಯಲ್ಲಿ ಹೋಂಡಾ ಕಂಪನಿಯು ನ್ಯೂ ಜನರೇಷನ್ ಮಾದರಿಯ ಮಾರಾಟದ ಜೊತೆಗೆ ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಕಾರಿನ ಮಾರಾಟವನ್ನು ಸಹ ಮುಂದುವರಿಸಿದ್ದು, ಹಳೆಯ ತಲೆಮಾರಿನ ಆವೃತ್ತಿಯ ಮೇಲೆ ಕಂಪನಿಯು ರೂ.5 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಕ್ರಾಸ್ಒವರ್ ಎಸ್‌ಯುುವಿ ಕಾರು ಮಾದರಿಯಾದ ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಪೆಟ್ರೋಲ್ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯು ರೂ. 27 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಲಾಯಲ್ಟಿ ಬೋನಸ್ ನೀಡುತ್ತಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಇನ್ನು ಹೆಚ್ಚುತ್ತಿರುವ ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಹೊಸ ವಾಹನಗಳ ಬೆಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಹೆಚ್ಚಳವಾಗುತ್ತಿದ್ದು, ಜಪಾನ್ ಕಾರು ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಕಾರ್ಸ್ ಕೂಡಾ ಭಾರತದಲ್ಲಿ ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆಯನ್ನು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಶೇ.1ರಿಂದ ಶೇ.1.50 ರಷ್ಟು ಬೆಲೆ ಹೆಚ್ಚಿಸಿದ್ದು, ಹೊಸ ದರಪಟ್ಟಿಯಲ್ಲಿ ಪ್ರಮುಖ ಮಾದರಿಗಳ ಬೆಲೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 6 ಸಾವಿರದಿಂದ ರೂ. 39 ಸಾವಿರದಷ್ಟು ಹೆಚ್ಚಿಸಲಾಗಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಹೊಸ ವರ್ಷದ ಆರಂಭದಲ್ಲಿ ಮತ್ತು ಮಾರ್ಚ್ ಮಧ್ಯಂತರದಲ್ಲಿ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಈ ವರ್ಷದ ಮೂರನೇ ಬೆಲೆ ಏರಿಕೆ ಘೋಷಣೆ ಮಾಡಿದ್ದು, ಹೊಸ ಕಾರುಗಳ ಕೆಲವು ಕಾರಣಾಂತರಗಳಿಂದ ನಿರಂತರವಾಗಿ ಬೆಲೆ ಹೆಚ್ಚಳ ಪಡೆದುಕೊಳ್ಳುತ್ತಿವೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಪರಿಷ್ಕೃತ ದರ ಪಟ್ಟಿಯಲ್ಲಿ ಹೋಂಡಾ ಕಂಪನಿಯು ಅಮೇಜ್ ಕಾರು ಮಾದರಿಯ ಡೀಸೆಲ್ ರೂಪಾಂತರಗಳನ್ನು ಹೊರತುಪಡಿಸಿ ಪೆಟ್ರೋಲ್ ಮಾದರಿಗಳ ಬೆಲೆಯಲ್ಲಿ ರೂ. 6,300 ರಿಂದ ರೂ. 11 ಸಾವಿರ ತನಕ ಬೆಲೆ ಹೆಚ್ಚಿಸಲಾಗಿದ್ದು, ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಡೀಸೆಲ್ ರೂಪಾಂತರಗಳ ಬೆಲೆಯಲ್ಲಿ ರೂ. 11 ಸಾವಿರ ಏರಿಕೆ ಮಾಡಲಾಗಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಸೆಪ್ಟೆಂಬರ್ ಅವಧಿಯ ಆಫರ್ ಘೋಷಣೆ

ಜಾಝ್ ಹ್ಯಾಚ್‌ಬ್ಯಾಕ್ ಮಾದರಿಯ ಪ್ರಮುಖ ರೂಪಾಂತರಗಳಲ್ಲೂ ಕೂಡಾ ರೂ. 11 ಸಾವಿರ ತನಕ ಹೆಚ್ಚಳ ಮಾಡಲಾಗಿದ್ದು, 4ನೇ ತಲೆಮಾರಿನ ಸಿಟಿ ಸೆಡಾನ್ ಮಾದರಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಆದರೆ 5ನೇ ತಲೆಮಾರಿನ ಸಿಟಿ ಸೆಡಾನ್ ಮಾದರಿಯ ಬೆಲೆಯಲ್ಲಿ ಸುಮಾರು ರೂ.15 ಸಾವಿರದಿಂದ ರೂ. 39,100 ಬೆಲೆ ಹೆಚ್ಚಿಸಲಾಗಿದ್ದು, ಸಿಟಿ ಹೈಬ್ರಿಡ್ ಕಾರಿನ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

Most Read Articles

Kannada
Read more on ಹೋಂಡಾ honda
English summary
Honda cars offers for spetember 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X