ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಸ್‍ಯುವಿಗಳಿಗೆ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಇದರಿಂದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸುತ್ತಿದೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯ ಅಧ್ಯಕ್ಷ ಮತ್ತು ಸಿಇಒ, ಟಕುಯಾ ತ್ಸುಮುರಾ ಅವರು ಮಾತನಾಡಿ, ದೇಶದಲ್ಲಿ ವಾಹನ ತಯಾರಕರ ಮಾರಾಟದ ಪ್ರಮಾಣವನ್ನು ಸುಧಾರಿಸಲು ಕಂಪನಿಯು 2023 ರಲ್ಲಿ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಕೆಲವು ಪುನರ್ರಚನೆಯನ್ನು ಮಾಡಿದ್ದೇವೆ ಮತ್ತು ಇದು ಸ್ವಲ್ಪ ಕಠಿಣ ಸಮಯವಾಗಿತ್ತು, ಕಂಪನಿಯು ಈಗ ಆರೋಗ್ಯಕರ ಬೆಳವಣಿಗೆಯನ್ನು ಹೊಂದಿದೆ" ಎಂದು ಪಿಟಿಐ ವರದಿಯ ಪ್ರಕಾರ ತ್ಸುಮುರಾ ಹೇಳಿದ್ದಾರೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಎಸ್‍ಯುವಿ ಕಾರುಗಳ ಮಾರಾಟ ಈಗ ಒಟ್ಟಾರೆ ಪ್ರಯಾಣಿಕ ವಾಹನ ವಿಭಾಗದಲ್ಲಿ ಸುಮಾರು 50 ಪ್ರತಿಶತವನ್ನು ಹೊಂದಿದೆ. ನಾವು ಈ ವಿಭಾಗದಲ್ಲಿ ಭಾಗವಹಿಸುತ್ತಿಲ್ಲ. ಮುಂದಿನ ವರ್ಷ ಎಸ್‌ಯುವಿ ಬಿಡುಗಡೆಯೊಂದಿಗೆ ನಾವು ಪರಿಮಾಣವನ್ನು ಹೆಚ್ಚಿಸುತ್ತೇವೆ ಎಂದು ನಮಗೆ ವಿಶ್ವಾಸವಿದೆ" ಎಂದು ಟಕುಯಾ ತ್ಸುಮುರಾ ಹೇಳಿದ್ದಾರೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಹೋಂಡಾ ಕಂಪನಿಯು ಎಸ್‍ಯುವಿ ವಿಭಾಗಕ್ಕೆ ಪ್ರಮುಖ ಮರು-ಪ್ರವೇಶಕ್ಕೆ ಸಜ್ಜಾಗಿದೆ. ಭಾರತದಲ್ಲಿ ಹೋಂಡಾದ ಪ್ರಸ್ತುತ ಉತ್ಪನ್ನ ಪೋರ್ಟ್‌ಫೋಲಿಯೋ ಹೋಂಡಾ ಅಮೇಜ್, ಹೋಂಡಾ ಸಿಟಿ (4ನೇ ಜನರೇಷನ್), ಹೋಂಡಾ ಸಿಟಿ (5ನೇ ಜನರೇಷನ್), ಹೋಂಡಾ ಜಾಝ್ ಮತ್ತು ಹೋಂಡಾ ಡಬ್ಲ್ಯುಆರ್-ವಿ ಒಳಗೊಂಡಿದೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಭಾರತದಲ್ಲಿ ಬೆಳೆಯುತ್ತಿರುವ ಮತ್ತು ಹೆಚ್ಚು ಸ್ಪರ್ಧಾತ್ಮಕ ಎಸ್‍ಯುವಿ ವಿಭಾಗದಲ್ಲಿ ಹೋಂಡಾ ಹೆಚ್‍ಆರ್-ವಿ ಉತ್ತಮವಾದ ಫಿಟ್ ಆಗಿರಬಹುದು. ಇದಲ್ಲದೆ, ಹೋಂಡಾ ಇತ್ತೀಚೆಗೆ, ಯುಎಸ್ ಮಾರುಕಟ್ಟೆಯಲ್ಲಿ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ವಿದೇಶಿ ಮಾರುಕಟ್ಟೆಯಲ್ಲಿ 2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಬಹು ಡ್ರೈವ್‌ಟ್ರೇನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಿತು. ಈ ಹೈಬ್ರಿಡ್ ವ್ಯವಸ್ಥೆಯು ಭಾರತದಲ್ಲಿ ಹೊಸ ಹೋಂಡಾ ಸಿಟಿ ಇಹೆಚ್‌ಇವಿ ಹೈಬ್ರಿಡ್‌ನಲ್ಲಿ ಬರುವಂತೆಯೇ ಇರುತ್ತದೆ. 2022ರ ಹೋಂಡಾ ಹೆಚ್‍ಆರ್-ವಿ ಕ್ರಾಸ್ಒವರ್ ನವೀಕರಣಗಳಿಗೆ ಸಂಬಂಧಿಸಿದಂತೆ, ಹೊಸ ಮತ್ತು ಹೆಚ್ಚು ಆಧುನಿಕ ಮತ್ತು ಫ್ಯೂಚರಿಸ್ಟಿಕ್-ಕಾಣುವ ವಿನ್ಯಾಸಕ್ಕಾಗಿ ಹಳೆಯ ಬಾಹ್ಯ ಶೈಲಿಯನ್ನು ಹೊಂದಿದೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಈ ವಾಹನದ ಮುಂಭಾಗವು ಹೊಸ ಬಾಡಿ ಬಣ್ಣದ ಮಲ್ಟಿ-ಸ್ಲೇಟೆಡ್ ಗ್ರಿಲ್ ಅನ್ನು ಪಡೆಯುತ್ತದೆ ಅದು ಸ್ವಲ್ಪಮಟ್ಟಿಗೆ ಇವಿ ಕಾರಿನಂತೆ ಕಾಣುತ್ತದೆ. ಇದು ಡಿಆರ್‌ಎಲ್‌ಗಳೊಂದಿಗೆ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಮೆಶ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಲೋವರ್ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಸಹ ಹೊಂದಿದೆ, ಬದಿಗೆ ಚಲಿಸುವಾಗ, ನೋಟವು ಕೂಪ್ ಎಸ್‍ಯುವಿನಂತೆ ಕಾಣುತ್ತದೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಈ ಎಸ್‍ಯುವಿ ಹಿಂಭಾಗದಲ್ಲಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಹೆಚ್ಚು ಸ್ಪಷ್ಟವಾದ ಸ್ಕಿಡ್ ಪ್ಲೇಟ್ ಜೊತೆಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಸೆಟ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಈ 2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಇತರ ಫೀಚರ್ಸ್ ಗಳು, ಹೋಂಡಾ ಸೆನ್ಸಿಂಗ್, ಮಧ್ಯದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಸ್ಟ್ಯಾಂಡರ್ಡ್ ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ. ಆರ್‌ಎಸ್ ಡ್ಯುಯಲ್-ಜೋನ್ ಎಸಿಯನ್ನು ನೀಡುತ್ತದೆ,

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಎಸ್,ಇ ಮತ್ತು ವಿ ಟ್ರಿಮ್ ಸಿಂಗಲ್ ಝೋನ್ ಕೂಲಿಂಗ್ ಅನ್ನು ಮಾತ್ರ ಹೊಂದಿದೆ. ಹಿಂಭಾಗದ ಎಸಿ ವೆಂಟ್‌ಗಳು ಎಲ್ಲಾ ಮಾದರಿಗಳಲ್ಲಿ ಸಹ ಸ್ಟ್ಯಾಂಡರ್ಡ್ ಆಗಿರುತ್ತದೆ. ಎರಡು ವಿಭಿನ್ನ ವ್ಹೀಲ್ ಆಯ್ಕೆಗಳಿವೆ. ಹೈ-ಸ್ಪೆಕ್ ಮತ್ತು ಆರ್‌ಎಸ್ ಟ್ರಿಮ್‌ಗಳು 18-ಇಂಚಿನ ವ್ಹೀಲ್ ಗಳನ್ನು ಹೊಂದಿದ್ದರೆ, ಲೋ ಸ್ಪೆಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಕೂಡ ಹೊಂದಿವೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಈ ಹೊಸ 2022ರ ಹೋಂಡಾ ಹೆಚ್‍ಆರ್-ವಿ ಕ್ರಾಸ್ಒವರ್ ನಲ್ಲಿ ಹೈಬ್ರಿಡ್ ಸಿಟಿ ಇಹೆಚ್‌ಇವಿ ಸೆಡಾನ್‌ನಲ್ಲಿ ಬಳಸುತ್ತಿರುವ ಹೋಂಡಾದ ಐ-ಎಂಎಂಡಿ ತಂತ್ರಜ್ಞಾನವನ್ನು ಹೈಬ್ರಿಡ್ ಹೋಂಡಾ ಎಚ್‌ಆರ್-ವಿಯಲ್ಲಿ ನಿಯೋಜಿಸಲಾಗಿದೆ. ಎರಡು ಮೋಟಾರ್‌ಗಳೊಂದಿಗೆ ಜೋಡಿಸಲಾದ 1.5 ಲೀಟರ್ ನ್ಯಾಚುರಲ್ ಆಸ್ಪರಡ್ ಎಂಜಿನ್ ಮತ್ತು ಚ್ಚುವರಿ 1.5-ಲೀಟರ್ ಎಂಜಿನ್ ಆಯ್ಕೆಗಳನ್ನು ಸಹ ಹೊಂದಿದೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಇದರಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪರಡ್ ಎಂಜಿನ್ 131 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೆಲವು ವರದಿಗಳ ಪ್ರಕಾರ ಹೊಸ ಹೆಚ್‍ಆರ್-ವಿ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹೋಂಡಾ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಭಾರತದಲ್ಲಿ ಎಲಿವೇಟ್ ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ನೋಂದಾಯಿಸಿತು. ಭಾರತೀಯ ಮಾರುಕಟ್ಟೆಯ ಬಿಡುಗಡೆಯಾಗಲಿರುವ ಹೊಸ ಹೋಂಡಾ ಎಸ್‍ಯುವಿಗೆ ಎಲಿವೇಟ್ ಎಂಬ ಹೆಸರನ್ನು ನೀಡಬಹುದು ಎಂದು ಕೂಡ ಹೇಳಲಾಗುತ್ತಿದೆ. ಇನ್ನು ಹೋಂಡಾ ಕಂಪನಿಯು ಬಿಡುಗಡೆಯಾದ ಮಿಡ್ ಸೈಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದರೆ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Monday, September 19, 2022, 16:11 [IST]
English summary
Honda planning to launch new suv in 2023 details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+