ಮೆಸ್ಸಿ ಟಾಟಾ ಬ್ರಾಂಡ್ ಅಂಬಾಸಿಡರ್ ಆಗಿದ್ದರೆಂದು ಎಷ್ಟು ಮಂದಿಗೆ ಗೊತ್ತು?...ಸಖತ್ ಸದ್ದು ಮಾಡಿತ್ತು ಈ ಫೋಟೊ
ಟಾಟಾ ಮೋಟಾರ್ಸ್ ತನ್ನ ಬ್ರಾಂಡ್ ಅಂಬಾಸಿಡರ್ ಶೀರ್ಷಿಕೆಗಾಗಿ ದೊಡ್ಡ ಸೆಲೆಬ್ರಿಟಿಗಳೊಂದಿಗೆ ಸಹಿ ಮಾಡಿದ ಇತಿಹಾಸವನ್ನು ಹೊಂದಿದೆ. ನವೆಂಬರ್ 2015 ರಲ್ಲಿ, ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ವಾಹನಗಳಿಗೆ ಅದರ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ ಪ್ರತಿನಿಧಿಸಲು ಫುಟ್‌ಬಾಲ್ ಜಗತ್ತಿನ ಅತಿದೊಡ್ಡ ಆಟಗಾರ ಲಿಯೋನೆಲ್ ಮೆಸ್ಸಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಮೊದಲಿನಿಂದಲೂ ಟಾಟಾ ಮೋಟಾರ್ಸ್ ದೇಶದಲ್ಲಿ ತನ್ನ ಗುರುತನ್ನು ವಿಭಿನ್ನವಾಗಿ ಸಾಭೀತುಪಡಿಸಿಕೊಂಡಿದೆ. ಅಲ್ಲದೇ ದೇಶದಲ್ಲಿ ಟಾಟಾ ಬ್ರಾಂಡ್‌ಗೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಇರುವುದರಿಂದ ಜಾಹೀರಾತಿನ ಅವಶ್ಯಕತೆಯಿಲ್ಲ. ಆದರೂ, ಇತರ ಕಂಪನಿಗಳಂತಲ್ಲದೇ ಎಲ್ಲಾ ರಂಗಗಳಲ್ಲೂ ತನ್ನನ್ನು ಗುರ್ತಿಸಿಕೊಳ್ಳಲು ವಿಭಿನ್ನ ಹೆಜ್ಜೆಗಳೊಂದಿಗೆ ಬ್ರಾಂಡ್‌ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ಇದರ ಭಾಗವಾಗಿಯೇ 2015 ರಲ್ಲಿ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿತು.

ಈ ಮೂಲಕ ಅರ್ಜೆಂಟೀನಾದ ರಾಷ್ಟ್ರೀಯ ಮತ್ತು ಮಾಜಿ ಬಾರ್ಸಿಲೋನಾ ಆಟಗಾರ ಲಿಯೋನೆಲ್ ಮೆಸ್ಸಿ ಅವರನ್ನು ಭಾರತಕ್ಕೆ ಕರೆತಂದು, ಟಾಟಾ ಅಂತರಾಷ್ಟ್ರೀಯ ಸೂಪರ್‌ಸ್ಟಾರ್‌ನಿಂದ ಅನುಮೋದಿಸಲ್ಪಟ್ಟ ಮೊದಲ ಭಾರತೀಯ ಬ್ರ್ಯಾಂಡ್ ಎಂದು ಹೆಸರು ಮಾಡಿತು. ಟಾಟಾ ಮೋಟಾರ್ಸ್ ಈ ಹಿಂದೆ ಮಾರಾಟದಲ್ಲಿ ಹೆಣಗಾಡುತ್ತಿದ್ದ ಸಂದರ್ಭದಲ್ಲಿ Zica (ಈಗಿನ Tiago) ಎಂಬ ಹೊಚ್ಚ ಹೊಸ ಹ್ಯಾಚ್‌ಬ್ಯಾಕ್ ಅನ್ನು ಪರಿಚಯಿಸಲು ಯೋಜಿಸಿತ್ತು. ಆದರೆ ಅದರ ಪರಿಚಯದ ಸಮಯದಲ್ಲಿ ಕಾರಿನ ಹೆಸರನ್ನೇ ಬದಲಿಸುವ ದೊಡ್ಡ ಆಗತವನ್ನು ಟಾಟಾ ಎದುರಿಸಬೇಕಾಯಿತು.
ಏಕೆಂದರೆ ದುರದೃಷ್ಟವಶಾತ್ ಅದೇ ಸಮಯದಲ್ಲಿ ಝಿಕಾ ಎಂಬ ಮಾರಣಾಂತಿಕ ವೈರಸ್ ಏಕಾಏಕಿ ವಿಶ್ವದಾದ್ಯಂತ ಭೀಯನ್ನುಂಟುಮಾಡಿತ್ತು. ಇದು ಟಾಟಾ ಜಿಕಾ ಕಾರಿಗೆ ಮಾರಾಟದಲ್ಲಿ ದುಷ್ಪರಿಣಾಮ ಭೀರುವ ಕಾರಣ ಹ್ಯಾಚ್‌ಬ್ಯಾಕ್ ಅನ್ನು ಇಂದು ನಾವು ತಿಳಿದಿರುವ ಟಿಯಾಗೊ ಎಂದು ಮರುನಾಮಕರಣ ಮಾಡಲು ಕಾರಣವಾಯಿತು. ಟಿಯಾಗೊದ ಬಿಡುಗಡೆ ಪ್ರಚಾರದ ಸಮಯದಲ್ಲಿ ಇದನ್ನು ಜಾಣತನದಿಂದ ತಿರುಗಿಸಲಾಯಿತು, ಇದೇ ಸಂದರ್ಭದಲ್ಲಿ ಕಾರಿನ ಪಕ್ಕದಲ್ಲಿ ಮೆಸ್ಸಿ ನಿಂತಿರುವ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ನಂತರ ನಡೆದಿದ್ದೆಲ್ಲಾ ಇತಿಹಾಸ.

ಇದು ಏಳು ವರ್ಷಗಳ ಹಿಂದಿನ ಲಿಯೋನೆಲ್ ಮೆಸ್ಸಿ ಹಾಗೂ ಟಾಟಾದ ಮೋಟಾರ್ಸ್‌ನ ಒಪ್ಪಂದದ ಭಾಂದವ್ಯ, ಆದರೆ ದೇಶದ ಜನಪ್ರಿಯ ಕಾರು ತಯಾರಕ ಟಾಟಾ ಮೋಟಾರ್ಸ್ ಮತ್ತು ಮೆಸ್ಸಿ ಇಬ್ಬರೂ ಕೂಡ ಸದ್ಯ ತಮ್ಮ ಕ್ಷೇತ್ರಗಳಲ್ಲಿ ಪ್ರಬಲರಾಗಿದ್ದಾರೆ. ಇದೀಗ ಮೆಸ್ಸಿ ತನ್ನ ಮೊದಲ FIFA ವಿಶ್ವಕಪ್ ಅನ್ನು ಗೆದ್ದಿದ್ದಾರೆ. ಹಾಗೆಯೇ ಟಾಟಾ ಕೂಡ ತನ್ನ ಬಲವಾದ ಮಾರಾಟದ ವೇಗವನ್ನು ಉಳಿಸಿಕೊಂಡಿದೆ. ಇದೀಗ Tiago ನ ಎಲೆಕ್ಟ್ರಿಕ್ ಉತ್ಪನ್ನವನ್ನು ಕೂಡ ಯಶಸ್ವಿಯಾಗಿ ಪರಿಚಯಿಸಿದೆ. ಈ ಟಾಟಾ ಟಿಯಾಗೋ ಇವಿ ದೇಶದ ಅತ್ಯಂತ ಕೈಗೆಟುಕುವ EV ಆಗಿದೆ.
ಸ್ಟಾಂಡರ್ಡ್ ICE-ಚಾಲಿತ ಹ್ಯಾಚ್‌ಬ್ಯಾಕ್ ಜೊತೆಗೆ ಸ್ಲಾಟ್‌ಗಳನ್ನು ಹೊಂದಿರುವ ಟಿಯಾಗೊ EV, ಜನವರಿಯಲ್ಲಿ ಅದರ ಮಾಲೀಕರನ್ನು ತಲುಪಲಿದೆ. ಇದು 315 ಕಿ.ಮೀ ವ್ಯಾಪ್ತಿಯನ್ನು ನೀಡುವ ಬಹು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. 8.49 ಲಕ್ಷ ಮತ್ತು 11.79 ಲಕ್ಷ (ಎಕ್ಸ್-ಶೋರೂಮ್) ನಡುವಿನ ಪರಿಚಯಾತ್ಮಕ ಬೆಲೆಗಳೊಂದಿಗೆ Tiago EV ಟಾಟಾದ ಎಲೆಕ್ಟ್ರಿಕ್ ಲೈನ್ಅಪ್ನಲ್ಲಿ ಅತ್ಯಂತ ಕೈಗೆಟುಕುವ EV ಆಗಿದೆ. ಇದು Tigor EV ಸಬ್-ಕಾಂಪ್ಯಾಕ್ಟ್ ಸೆಡಾನ್ ಮತ್ತು Nexon EV ಸಬ್-4m SUV ಅನ್ನು ಒಳಗೊಂಡಿದೆ.
ಟಿಯಾಗೋ ಕಾರಿಗೆ ಉತ್ತಮ ಬೇಡಿಕೆ
ಟಾಟಾ ಮೋಟಾರ್ಸ್ ಕಂಪನಿಯು ಬುಕಿಂಗ್ ಪ್ರಾರಂಭವಾದ ಒಂದು ದಿನದ ನಂತರ ಬರೋಬ್ಬರಿ 10,000 ಯುನಿಟ್‌ಗಳನ್ನು 24 ಗಂಟೆಗಳ ಅವಧಿಯಲ್ಲಿ ಬುಕ್ ಮಾಡಲಾಗಿದೆ ಎಂದು ಘೋಷಿಸಿತ್ತು. ಹಾಗೆಯೇ ಟಾಟಾ ಮೋಟಾರ್ಸ್ ಮುಂದಿನ 10,000 ಬುಕಿಂಗ್‌ಗಳಿಗೆ ಪರಿಚಯಾತ್ಮಕ ಕೊಡುಗೆಯನ್ನು ವಿಸ್ತರಿಸಿತ್ತು. ಟಾಟಾ ಟಿಯಾಗೋ ಇವಿಗಾಗಿ ಬುಕ್ಕಿಂಗ್‌ಗಳು ಈಗ 20,000 ಮಾರ್ಕ್ ಅನ್ನು ದಾಟಿವೆ. ಈ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ವಿತರಣೆಗಳು ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗುತ್ತವೆ.
ಎಲೆಕ್ಟ್ರಿಕ್ ಕಾರಿಗೆ ಗ್ರಾಹಕರಿಂದ ಇಷ್ಟೊಂದು ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದು ಇದೇ ಮೊದಲು. ಈ ಕಾರು ಖರೀದಿಸಲು ಬಯಸುವ ಆಸಕ್ತ ಗ್ರಾಹಕರು ಟಾಟಾ ಡೀಲರ್‌ಶಿಪ್‌ನಲ್ಲಿ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮುಂಗಡ ಬುಕಿಂಗ್ ಮಾಡಬಹುದು. ಬುಕ್ಕಿಂಗ್ ಟೋಕನ್ ಮೊತ್ತ 21,000 ರೂ. ಆಗಿದೆ. ಟಾಟಾ ಮೋಟಾರ್ಸ್ ಕಂಪನಿಯು 2026ರ ವೇಳೆಗೆ ಹತ್ತು ಎಲೆಕ್ಟ್ರಿಕ್ ವಾಹನಗಳ ಪೋರ್ಟ್‌ಫೋಲಿಯೊವನ್ನು ಹೊಂವುದು ಟಾಟಾದ ಯೋಜನೆಗಳ ಭಾಗವಾಗಿದೆ.


Click it and Unblock the Notifications