Just In
- 1 hr ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 1 hr ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 2 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 3 hrs ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
Don't Miss!
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- News
Namma Metro:ರೈಲ್ವೆ ಹಳಿಗೆ ಅಡ್ಡಲಾಗಿ ವೆಬ್ ಗರ್ಡರ್ ನಿರ್ಮಿಸಿ BMRCL, ಏನಿದು?
- Movies
ಜನ್ನತ್ ಟು ಮನ್ನತ್: ಬಾಲಿವುಡ್ ಬಾದ್ ಶಾ ಶಾರುಖ್ ಬಳಿಯಿರುವ 6 ಐಷಾರಾಮಿ ಮನೆಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇವಲ 150 ರೂ.ಗೆ 300 ಕಿ.ಮೀ ಓಡುವ ಹೈಡ್ರೋಜನ್ ಚಾಲಿತ ಕಾರನ್ನು ನಿರ್ಮಿಸಿದ ರೈತನ ಮಗ
ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ರೈತನ ಮಗನೊಬ್ಬ ಮನೆಯಲ್ಲೇ ಹೈಡ್ರೋಜನ್ ಚಾಲಿತ ಕಾರನ್ನು ನಿರ್ಮಿಸಿದ್ದಾನೆ. ಈ ಕಾರು ಕೇವಲ 150 ರೂ.ಗಳಲ್ಲಿ 300 ಕಿ.ಮೀ ಪ್ರಯಾಣಿಸುತ್ತದೆ ಎನ್ನಲಾಗಿದ್ದು, ಈಗಾಗಲೇ ಸ್ಥಳೀಯವಾಗಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ.

"ಹರ್ಷಲ್ ನಕ್ಷಾನೆ" ಈ ಹೈಡ್ರೋಜನ್ ಕಾರನ್ನು ನಿರ್ಮಿಸಿರುವ ಯೂವಕ. ಈತ ಇಲ್ಲಿನ ವಾಣಿ ನಿವಾಸಿಯಾಗಿದ್ದು, ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಮುಗಿಸಿದ್ದಾನೆ. ಮಾಲಿನ್ಯ ಮುಕ್ತ ಹೈಡ್ರೋಜನ್ ಕಾರಿನ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದು, ತನ್ನ ಬಾಲ್ಯದ ಗೆಳೆಯ ಕುನಾಲ್ ಅಸುತ್ಕರ್ ಸಹಾಯದೊಂದಿಗೆ ಬಹುತೇಕ ಕಾರಿನ ನಿರ್ಮಾಣವನ್ನು ಮುಗಿಸಿದ್ದಾನೆ.

ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಹರ್ಷಲ್ ಕಾರನ್ನು ನಿರ್ಮಿಸಿದ್ದಾನೆ. ಈತನ ಪ್ರಕಾರ, ಇದನ್ನು ಸ್ವಯಂ-ಚಾಲನೆಗಾಗಿ (ಆಟೋಮ್ಯಾಟಿಕ್ ಕಾರ್) ವಿನ್ಯಾಸಗೊಳಿಸಲಾಗಿದೆ. ಇದು ಪ್ರಸ್ತುತ ಮೂಲಮಾದರಿಯ ಹಂತದಲ್ಲಿದ್ದು, ತನ್ನ ಉಳಿತಾಯದ ಹಣದಿಂದ 25 ಲಕ್ಷ ರೂಪಾಯಿಯನ್ನು ಕಾರಿಗೆ ಖರ್ಚು ಮಾಡಿರುವುದಾಗಿ ಹರ್ಷಲ್ ತಿಳಿಸಿದ್ದಾನೆ.

ಸೆಲ್ಫ್ ಡ್ರೈವಿಂಗ್ ಸಿಸ್ಟಂ ಮತ್ತು ಹೈಡ್ರೋಜನ್ ಫ್ಯೂಲಿಂಗ್ ಸಿಸ್ಟಮ್ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿರುವುದಾಗಿ ಹರ್ಷಲ್ ತಿಳಿಸಿದ್ದು, ಅದರ ನಿರ್ಮಾಣಕ್ಕೂ ಯೋಜನೆಯನ್ನು ಹೊಂದಿದ್ದಾನೆ. ಕನಿಷ್ಠ 100 ವಾಹನಗಳು ಹಿಡಿಯುವಷ್ಟು ಸ್ಟೋರೇಜ್ ಹೊಂದಿದ ನಂತರ ವಾಹನಗಳನ್ನು ಮಾರಾಟ ಮಾಡಲು ಯೋಜಿಸಿರುವುದಾಗಿ ಹರ್ಷಲ್ ತಿಳಿಸಿದ್ದಾನೆ.

ಮೂಲಮಾದರಿಯ ವಾಹನವು ಸಿಸರ್ ಡೋರ್ಸ್, ಸನ್‌ರೂಫ್, ಆಟೋಮ್ಯಾಟಿಕ್ ಚಾಲನೆ ಸೇರಿದಂತೆ ಮತ್ತಷ್ಟು ಆಧುನಿಕ ಫೀಚರ್ಸ್ ಹೊಂದಿದೆ. ಸೀಮಿತ ಗುಂಪೊಂದು ಈಗಾಗಲೇ ಮುಂಗಡ ಬುಕ್ಕಿಂಗ್‌ಗಳನ್ನು ಕೂಡ ತೆಗೆದುಕೊಳ್ಳುತ್ತಿದೆ. ಆದರೆ ವಾಹನದ ನಿಖರವಾದ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಕಾರಿನ ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗಾಗಿ ನೀವು AiCars.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇದರಲ್ಲಿ ಕಾರಿನ ಚಾಲನೆ ಹಾಗೂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತು ವಿವರಿಸಲಾಗಿದೆ. ಹರ್ಷಲ್ ಪ್ರಸ್ತುತ ಇಂಟರ್ನೆಟ್‌ನಲ್ಲಿ ಸೇವಾ ಪೂರೈಕೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಆತನ ನಿಖರವಾದ ವೃತ್ತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಮನೆಯಲ್ಲಿ ತಯಾರಿಸಿದ ಕಾರುಗಳು ರಸ್ತೆಗಿಳಿಯುವಂತಿಲ್ಲ
ಮಾರ್ಪಾಡು ಮಾಡಿದ ಅಥವಾ ಮನೆಯಲ್ಲಿ ತಯಾರಿಸಿದ ಕಾರುಗಳ ವಿರುದ್ಧ ಭಾರತವು ಕಠಿಣ ನಿಯಮಗಳನ್ನು ಹೊಂದಿದೆ. ರಸ್ತೆಯಲ್ಲಿ ಸಂಚರಿಸಲು ಅವು ಯೋಗ್ಯವಾಗಿವೆಯೇ ಎಂಬುದನ್ನು ಸಾಬೀತುಪಡಿಸಲು ವಿವಿಧ ಅಧಿಕಾರಿಗಳಿಂದ ಅನುಮೋದನೆ ಪಡೆಯುವವರೆಗೆ ಅಂತಹ ವಾಹನಗಳನ್ನು ರಸ್ತೆಗಳಲ್ಲಿ ಅನುಮತಿಸಲಾಗುವುದಿಲ್ಲ.

ಸುಪ್ರೀಂ ಕೋರ್ಟ್ ಮತ್ತು ಮೋಟಾರು ವಾಹನ ಕಾಯಿದೆಯ ಪ್ರಕಾರ, ಮಾಡಿಫಿಕೇಷನ್ ಅಥವಾ ಮನೆಯಲ್ಲಿ ತಯಾರಿಸಿದ ಇಂತಹ ವಾಹನಗಳನ್ನು ರಸ್ತೆಗಳಲ್ಲಿ ಸಂಚರಿಸುವುದನ್ನು ನಿಷೇಧಿಸುತ್ತದೆ. ಈ ವಾಹನಗಳು ಪ್ರಾಜೆಕ್ಟ್ ಕಾರುಗಳಾಗಿದ್ದರೇ ರೇಸಿಂಗ್ ಟ್ರ್ಯಾಕ್ ಅಥವಾ ಫಾರ್ಮ್‌ಹೌಸ್‌ನಂತಹ ಖಾಸಗಿ ಆಸ್ತಿಗಳಲ್ಲಿ ಅವುಗಳನ್ನು ಬಳಸಬಹುದು.

ಒಂದು ವೇಳೆ ಇವು ರಸ್ತೆಗಿಳಿದರೆ ಪೊಲೀಸರು ಅವುಗಳನ್ನು ವಶಪಡಿಸಿಕೊಳ್ಳಬಹುದು. ಇನ್ನೂ ಆಳವಾಗಿ ಹೇಳುವುದಾದರೆ ಭಾರತದಲ್ಲಿ ಬುಲ್‌ಬಾರ್ ಮತ್ತು ಇತರ ಸ್ಟೈಲಿಷ್ ಬಿಡಿಭಾಗಗಳ ಜೋಡಣೆಯನ್ನು ಸಹ ನಿಷೇಧಿಸಲಾಗಿದೆ. ವಾಸ್ತವವಾಗಿ, ವಾಹನಕ್ಕೆ ತುಂಬಾ ದೊಡ್ಡದಾದ ಟೈರ್‌ಗಳನ್ನು ಸಹ ನಿಷೇಧಿಸಲಾಗಿದೆ.

ಅಂತಹ ವಾಹನಗಳು ಖಂಡಿತವಾಗಿಯೂ ರಸ್ತೆಗಳಲ್ಲಿ ಗಮನ ಸೆಳೆಯುತ್ತವೆಯಾದರೂ ಸ್ಥಳೀಯ ಗ್ಯಾರೇಜ್‌ಗಳಲ್ಲಿ ಸರಿಯಾದ ವೆಲ್ಡಿಂಗ್ ಉಪಕರಣಗಳಿಲ್ಲದೆ ಅವುಗಳನ್ನು ತಯಾರಿಸುವುದರಿಂದ ಅವು ಅಪಾಯಕಾರಿಯಾಗಿರುತ್ತವೆ. ರಸ್ತೆಯಲ್ಲಿ ಹೋಗುವಾಗ ವಾಹನ ಶಿಥಿಲಗೊಂಡರೆ, ಅದು ಗಂಭೀರ ಅಪಘಾತಕ್ಕೆ ಕಾರಣವಾಗಬಹುದು.

ಇದು ಹೀಗಿದ್ದರೇ ಹೈಡ್ರೋಜನ್ ಇಂಧನ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ನಮಗೆ ಇನ್ನೂ ಖಚಿತವಾಗಿಲ್ಲ. ಕೆಲವು ತಿಂಗಳ ಹಿಂದೆ, ಟೊಯೊಟಾ ಭಾರತದಲ್ಲಿ ಮಿರಾಯ್ ಹೈಡ್ರೋಜನ್ ಕಾರನ್ನು ಪ್ರದರ್ಶಿಸಿತು. ಆ ಸಮಯದಲ್ಲಿ ಇಂಧನ ಮೂಲಸೌಕರ್ಯಗಳ ಕೊರತೆಯಿಂದಾಗಿ ಹೈಡ್ರೋಜನ್ ಕಾರುಗಳು ಭಾರತೀಯ ರಸ್ತೆಗಳಲ್ಲಿ ಸಂಚರಿಸಲು ತಡವಾಗುತ್ತಿದೆ.

ಸದ್ಯ ಇಂಧನ ಚಾಲಿತ ವಾಹನಗಳನ್ನು ಕಡಿಮೆ ಮಾಡಲು ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಇಂಧನ ಮೇಲಿನ ಆಧಾರವನ್ನು ಹಾಗೂ ಮಾಲಿನ್ಯವನ್ನು ಕಡಿಮೆ ಮಾಡುವುದು ಇಲ್ಲಿನ ಮುಖ್ಯ ಉದ್ದೇಶವಾಗಿದೆ. ಆದರೆ ಇತ್ತೀಚಿಗೆ ಕಾಣಿಸಿಕೊಂಡಿರುವ ಎಲೆಕ್ಟ್ರಿಕ್ ವಾಹನಗಳ ಬೆಂಕಿ ಅವಘಡಗಳು ಇವಿಗಳ ಮಾರಾಟಕ್ಕೆ ಹೊಡೆತ ನೀಡಿವೆ.

ಪ್ರಮಾಣಿತ ಬ್ಯಾಟರಿ ಹಾಗೂ ವಿಶ್ವಾಸಾರ್ಹ ವಾಹನಗಳ ನಿರ್ಮಾಣಕ್ಕೆ ಸದ್ಯ ಇವಿ ಕಂಪನಿಗಳು ಮುಂದಾಗಿವೆ. ಮುಂದಿನ ದಿನಗಳಲ್ಲಿ ಇವು ಇಂಧನ ಚಾಲಿತ ವಾಹನಗಳನ್ನು ಸೆಡ್ಡು ಹೊಡಿಯಲಿವೆ. ಇದೇ ವೇಳೆ ಇವಿ ವಾಹನಗಳಿಗೆ ಮುಂದಿನ ದಿನಗಳಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾಗಿ ಹೈಡ್ರೋಜನ್ ಹಾಗೂ ಹೈಬ್ರೀಡ್ ವಾಗನಗಳು ಬರಲಿವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹರ್ಷಲ್ ನಕ್ಷಾನೆ ಅಭಿವೃದ್ಧಿಪಡಿಸಿರುವ ಹೈಡ್ರೋಜನ್ ಕಾರು ಭವಿಷ್ಯದಲ್ಲಿ ವಾಹನ ಉದ್ಯಮದಲ್ಲಿ ಭಾರೀ ಸದ್ದು ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರೈತನ ಮಗನಾಗಿ ಜನಿಸಿ ದೇಶವೇ ಮೆಚ್ಚುವಂತಹ ಮಾಲಿನ್ಯ ರಹಿತ ಹೈಡ್ರೋಜನ್ ಕಾರನ್ನು ನಿರ್ಮಿಸಿರುವುದು ಶ್ಲಾಘನೀಯ. ಈ ರೈತನ ಮಗನ ಸಾಧನೆ ಬಗ್ಗೆ ಕಮೆಂಟ್‌ನಲ್ಲಿ ತಿಳಿಸಿ.