Just In
- 12 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 13 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
- 14 hrs ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
- 14 hrs ago
ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ಬಿಡುಗಡೆ
Don't Miss!
- News
ಆಸ್ಪತ್ರೆಗೆ ಬಂದವರಿಗೆ ರೋಗ ಪುಕ್ಕಟೆ! ಇದು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ಕತೆ!
- Lifestyle
Today Rashi Bhavishya: ಭಾನುವಾರದ ದಿನ ಭವಿಷ್ಯ: ಸಿಂಹ, ವೃಶ್ಚಿಕ, ಮಕರ, ಮೀನ ರಾಶಿಯ ವ್ಯಾಪಾರಿಗಳಿಗೆ ಲಾಭದ ದಿನ
- Sports
Eng vs NZ 3rd Test: ಪಂದ್ಯಕ್ಕೆ ಮಳೆ ಕಾಟ, ಸಂಕಷ್ಟದಲ್ಲಿ ನ್ಯೂಜಿಲೆಂಡ್
- Movies
ನಿರೀಕ್ಷೆ ಹುಟ್ಟಿಸಿದ 'ನಿರೀಕ್ಷೆ': 'ಹೋಮ್' ಸಿನಿಮಾ ಟ್ರೈಲರ್ ಬಿಡುಗಡೆ
- Technology
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
- Finance
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮೇಲೆ ದಂಡ ವಿಧಿಸಿದ ಆರ್ಬಿಐ
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಔರಾ ಎಸ್ಎಕ್ಸ್ ಸಿಎನ್‌ಜಿ ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ
ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಔರಾ ಸಿಎನ್‌ಜಿ ಆವೃತ್ತಿಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಗ್ರಾಹಕರ ಬೇಡಿಕೆಗೆ ತಕ್ಕಂತೆ ಔರಾ ಸಿಎನ್‌ಜಿ ಮಾದರಿಯಲ್ಲಿ ಎಸ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದೆ.

ಔರಾ ಸಿಎನ್‌ಜಿ ಎಸ್ ವೆರಿಯೆಂಟ್ ಮಾತ್ರ ಹೊಂದಿದ್ದ ಕಂಪನಿಯು ಇದೀಗ ಎಸ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.57 ಲಕ್ಷ ಬೆಲೆ ಹೊಂದಿದೆ. ಔರಾ ಎಸ್ ಸಿಎನ್‌ಜಿ ಮಾದರಿಗಿಂತ ಹೊಸ ವೆರಿಯೆಂಟ್ ಸುಮಾರು ರೂ. 79 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್‌ನಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದೆ.

ಹೊಸ ವೆರಿಯೆಂಟ್‌ನಲ್ಲಿ ಕಂಪನಿಯು ಹಳೆಯ ಮಾದರಿಯಲ್ಲಿನ ಎಂಜಿನ್ ತಾಂತ್ರಿಕತೆಯನ್ನೇ ಮುಂದುವರಿಸಿದ್ದರೂ ಗ್ರಾಹಕರ ಬೇಡಿಕೆಯೆಂಟೆ ಹಲವು ಹೊಸ ಪ್ರೀಮಿಯಂ ಫೀಚರ್ಸ್ ಹೊಂದಿರಲಿದ್ದು, ಎಸ್‌ಎಕ್ಸ್ ಸಿಎನ್‌ಜಿ ಮಾದರಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಕಿಟ್ ಹೊಂದಿದೆ.

ಔರಾ ಸಿಎನ್‌ಜಿ ಎರಡು ಆವೃತ್ತಿಗಳಲ್ಲೂ ಕಂಪನಿಯು ಐದು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಜೋಡಣೆ ಮಾಡಿದ್ದು, ಈ ಎಂಜಿನ್ 68.5 ಬಿಎಚ್‌ಪಿ ಪವರ್ ಮತ್ತು 95.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಔರಾ ಎಸ್ಎಕ್ಸ್ ವೆರಿಯೆಂಟ್ ಟಾಟಾ ಟಿಗೋರ್ ಜೆಡ್ಎಕ್ಸ್ ಸಿಎನ್‌ಜಿ ಮಾದರಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಲಿದ್ದು, ಪ್ರತಿ ಕೆಜಿ ಸಿಎನ್‌ಜಿಗೆ ಹೊಸ ಮಾದರಿಯು ಗರಿಷ್ಠ 23 ಕಿ.ಮೀ ಮೈಲೇಜ್ ನೀಡಲಿದೆ. ಹೆಚ್ಚಿನ ಮಟ್ಟದ ಫೀಚರ್ಸ್‌ಗಳಿಂದಾಗಿ ಎಸ್ಎಕ್ಸ್ ಸಿಎನ್‌ಜಿ ಮೈಲೇಜ್ ತುಸು ತಗ್ಗಿದ್ದು, ಬೆಸ್ ವೆರಿಯೆಂಟ್ ಎಸ್ ಸಿಎಸ್‌ಜಿ ವೆರಿಯೆಂಟ್ ಪ್ರತಿ ಕೆಜಿಗೆ 28 ಕಿ.ಮೀ ಮೈಲೇಜ್ ನೀಡುತ್ತದೆ.

ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲಿ ಸದ್ಯ ಮುಂಚೂಣಿಯಲ್ಲಿರುವ ಔರಾ ಕಾರು ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್ ಪ್ಲಸ್ ಮತ್ತು ಎಸ್ಎಕ್ಸ್ ಆಪ್ಷನ್ ಎನ್ನುವ ಐದು ವೆರಿಯೆಂಟ್‌ಗಳನ್ನು ಹೊಂದಿದ್ದು, ಇದರಲ್ಲಿ ಎಸ್ ಮತ್ತು ಎಸ್ಎಕ್ಸ್ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಮಾದರಿಗಳಿವೆ.

ಹ್ಯುಂಡೈ ಕಂಪನಿಯು ಸದ್ಯ ಔರಾ ಕಾರು ಮಾದರಿಯಲ್ಲಿ 1.2 ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಟಾಪ್ ಎಂಡ್ ವೆರಿಯೆಂಟ್‌ನಲ್ಲಿ ಟರ್ಬೊ ಪೆಟ್ರೋಲ್ ಮತ್ತು ಇನ್ನಿತರೆ ವೆರಿಯೆಂಟ್‌ಗಳಲ್ಲಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

1.2 ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಪೆಟ್ರೋಲ್ ಮಾದರಿಯು ಫೋರ್ ಸಿಲಿಂಡರ್ ಮೂಲಕ 81.86 ಬಿಎಚ್‌ಪಿ, 113.8 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಟರ್ಬೊ ಪೆಟ್ರೋಲ್ ಮಾದರಿಯು ತ್ರಿ ಸಿಲಿಂಡರ್ ಮೂಲಕ 98.63 ಬಿಎಚ್‌ಪಿ ಮತ್ತು 172 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಎಮಿಷನ್ ಜಾರಿ ನಂತರ ಸಣ್ಣ ಗಾತ್ರದ ಕಾರುಗಳಲ್ಲಿ ಡೀಸೆಲ್ ಕಾರು ಮಾರಾಟವನ್ನು ಕೈಬಿಟ್ಟಿರುವ ಹ್ಯುಂಡೈ ಕಂಪನಿಯು ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಗಳ ಆಯ್ಕೆ ನೀಡುತ್ತಿದ್ದು, ಈಗಾಗಲೇ ಹಲವಾರು ಪ್ರತಿ ಸ್ಪರ್ಧಿ ಸಿಎನ್‌ಜಿ ಮಾದರಿಗಳು ಖರೀದಿಗೆ ಲಭ್ಯವಿವೆ.

ದುಬಾರಿ ಇಂಧನಗಳ ಪರಿಣಾಮ ಹೊಸ ಕಾರು ಖರೀದಿದಾರರು ಹೆಚ್ಚು ಮೈಲೇಜ್ ಪ್ರೇರಿತ ಸಿಎನ್‌ಜಿ ಕಾರುಗಳತ್ತ ಮುಖ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಉತ್ಪಾದನಾ ಕಂಪನಿಗಳು ಸಹ ಹೆಚ್ಚು ಮೈಲೇಜ್ ಪ್ರೇರಿತ ಸಿಎನ್‌ಜಿ ಮಾದರಿಗಳನ್ನು ಪರಿಚಯಿಸುತ್ತಿವೆ.

ಸಿಎನ್‌ಜಿ ಕಾರಗಳ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಕಂಪನಿಯು ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮಾರುತಿ ಸುಜುಕಿ ಕಾರುಗಳಿಗೆ ಪೈಪೋಟಿಯಾಗಿ ಹ್ಯುಂಡೈ ಔರಾ ಸೇರಿದಂತೆ ಪ್ರಮುಖ ಸಿಎನ್‌ಜಿ ಕಾರುಗಳು ಮಾರುಕಟ್ಟೆ ಪ್ರವೇಶಿಸಿವೆ.

ಸಿಎನ್‌ಜಿ ಕಾರುಗಳು ಪೆಟ್ರೋಲ್ ಕಾರುಗಳೊಂದಿಗೆ ಸಂಯೋಜನೆ ಹೊಂದಿದ್ದು, ಇವು ಡೀಸೆಲ್ ಕಾರು ಮಾದರಿಗಳಿಂತಲೂ ಹೆಚ್ಚಿನ ಮೈಲೇಜ್ ಜೊತೆಗೆ ಪರಿಸರ ಸ್ನೇಹಿ ಮಾದರಿಗಳಾಗಿವೆ. ಪರ್ಯಾಯ ಇಂಧನ ವ್ಯವಸ್ಥೆಯಾಗಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಇದು ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಿದ್ದು, ಮಿತವ್ಯಯವೆನಿಸಿಕೊಂಡಿದೆ.

ಹೀಗಿದ್ದರೂ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಸಿಎನ್‌ಜಿ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಸ್ವಲ್ಪ ಕಡಿಮೆಯಾಗಿರಲಿದ್ದು, ಅದೇ ಅದರಲ್ಲಿ ಇಂಧನ ದಕ್ಷತೆ ಹೆಚ್ಚಿರುತ್ತದೆ.