India
YouTube

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಇಂಡಿಯಾ(Hyundai India) ಕಂಪನಿಯು ತನ್ನ ಜನಪ್ರಿಯ ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಯಾದ ಕ್ರೆಟಾದಲ್ಲಿ ಹೊಸ ಆವೃತ್ತಿಯೊಂದನ್ನು ಸೀಮಿತ ಅವಧಿಗಾಗಿ ಬಿಡುಗಡೆ ಮಾಡಿದ್ದು, ಹೊಸ ಕ್ರೆಟಾ ನೈಟ್ ಎಡಿಷನ್ ವಿನೂತನ ಬಣ್ಣದ ಆಯ್ಕೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯು ಕ್ರೆಟಾ ಎರಡನೇ ತಲೆಮಾರಿನ ಆವೃತ್ತಿಯ ಮಾರಾಟದೊಂದಿಗೆ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಕ್ರೆಟಾ ಪ್ರಿಯರಿಗಾಗಿ ಇದೀಗ ನೈಟ್ ಎಡಿಷನ್ ಪರಿಚಯಿಸಿದೆ. ಹೊಸ ಕಾರು ಎಸ್ ಪ್ಲಸ್ ಮತ್ತು ಎಸ್ಎಕ್ಸ್(ಒ) ಮಾದರಿಯನ್ನು ಆಧರಿಸಿ ಬಿಡುಗಡೆಯಾಗಿದ್ದು, ಹೊಸ ಕಾರಿನ ವಿವರಣೆ ಒಳೊಂಡಿರುವ ಹೊಸ ಟಿವಿ ಜಾಹೀರಾತು ಪ್ರಕಟಗೊಂಡಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಕ್ರೆಟಾ ಹೊಸ ನೈಟ್ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.13.51 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.18.18 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಯಲ್ಲಿ ಎರಡು ವೆರಿಯೆಂಟ್‌ಗಳೊಂಗಿದೆ ಮಾರಾಟ ಮಾಡಲಾಗುತ್ತಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯು ಹೊಸ ಮಾದರಿಯನ್ನು ವಿಭಿನ್ನವಾಗಿ ಗುರುತಿಸಲು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹಲವಾರು ಹೊಸ ಬದಲಾವಣೆಗಳನ್ನು ನೀಡಿದ್ದು, ಬ್ಲ್ಯಾಕ್ ಔಟ್ ಗ್ರಿಲ್‌ನಲ್ಲಿ ರೆಡ್ ಆಕ್ಸೆಂಟ್ ವಿನ್ಯಾಸವು ಹೊಸ ಕಾರಿನ ಮುಂಭಾಗದ ನೋಟಕ್ಕೆ ಮತ್ತಷ್ಟು ಬಲಿಷ್ಠತೆ ನೀಡುತ್ತದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಇದರೊಂದಿಗೆ ಗ್ಲಾಸ್ ಬ್ಲ್ಯಾಕ್ ಕಲರ್ ಆಯ್ಕೆ ಹೊಂದಿರುವ ಹೊಸ ಮಾದರಿಯು ಫ್ರಂಟ್ ಮತ್ತು ರಿಯರ್ ಸ್ಕೀಡ್ ಪ್ಲೇಟ್, ಸಿ ಪಿಲ್ಲರ್, ರೂಫ್ ರೈಲ್, ಔಟ್‌ಸೈಡ್ ರಿಯರ್ ವ್ಯೂ ಮಿರರ್, ಶಾರ್ಕ್‌ ಫಿನ್ ಮತ್ತು ಟೈಲ್‌ಲ್ಯಾಂಪ್‌ಗಳು ಕಡುಗಪ್ಪು ಬಣ್ಣದೊಂದಿಗೆ ಬೂಟ್ ಲಿಡ್ ಮತ್ತು ಸೈಡ್ ಶೋಲ್ಡರ್‌ಗಳ ಮೇಲೆ ಡಾರ್ಕ್ ನೈಟ್ ಬ್ಯಾಜ್ಡ್ ಹೊಂದಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಹಾಗೆಯೇ ಹೊಸ ಆವೃತ್ತಿಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 16 ಇಂಚು ಮತ್ತು 17 ಇಂಚಿನ ಡಾರ್ಕ್ ಮೆಟಲ್ ಹೊಂದಿರುವ ಅಲಾಯ್ ವ್ಹೀಲ್ ಜೋಡಿಸಿದ್ದು, ಹೊಸ ಕಾರಿನ ಒಳಭಾಗವು ಕೂಡಾ ಸಂಪೂರ್ಣವಾಗಿ ಕಪ್ಪು ಬಣ್ಣದೊಂದಿಗೆ ಸಜ್ಜುಗೊಂಡಿದೆ.

ಎಸಿ ಯುನಿಟ್‌ಗಳಿಗೆ ಮತ್ತು ಆಸನಗಳಿಗೆ ರೆಡ್ ಆಕ್ಸೆಂಟ್ ನೀಡಿರುವ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಪನೊರಮಿಕ್ ಸನ್‌ರೂಫ್, ಫುಲ್ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ ನೀಡಲಾಗಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಸ್ಟ್ಯಾಂಡರ್ಡ್ ಕ್ರೆಟಾದಲ್ಲಿ ಕಂಪನಿಯು 1.5 ಲೀಟರ್ ಪೆಟ್ರೋಲ್, 1.4 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಿದ್ದರೆ ಹೊಸ ನೈಟ್ ಎಡಿಷನ್‌ನಲ್ಲಿ 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾತ್ರ ನೀಡಲಾಗಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಹೊಸ ಎಂಜಿನ್‌ಗಳಲ್ಲಿ ಕಂಪನಿಯು 6 ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಐಎಂಟಿ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ ಮಾಡಿದ್ದು, ಇನ್ನುಳಿದ ತಾಂತ್ರಿಕ ಅಂಶಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಇನ್ನು ಕೈಗೆಟುಕುವ ಬೆಲೆ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಕ್ರೆಟಾ ಕಾರು ಕಾಲ ಕಾಲಕ್ಕೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಾ ಗ್ರಾಹಕರ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯ ಇತರೆ ಕಾರುಗಳ ಮಾದರಿಗಳ ಪೈಕಿ ಕ್ರೆಟಾ ಮಾದರಿಯು ಭಾರೀ ಪ್ರಮಾಣದ ಆದಾಯ ತಂದುಕೊಟ್ಟಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳ ಮಾರಾಟದಲ್ಲಿ ಇತರೆ ಮಾದರಿಗಳಿಂತಲೂ ಹೆಚ್ಚು ದುಬಾರಿಯಾಗಿದ್ದರೂ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಹೊಸ ಕಾರು ಹಳೆಯ ತಲೆಮಾರಿನ ಆವೃತ್ತಿಗಿಂತಲೂ ಹೆಚ್ಚು ಬಲಿಷ್ಠ, ಪ್ರೀಮಿಯಂ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಒಟ್ಟು ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ನೈಟ್ ಎಡಿಷನ್ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.44 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ. 18.18 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಕೆಲವೇ ದಿನಗಳಲ್ಲಿ 2022ರ ಮಾದರಿಯೊಂದಿಗೆ ಮಾರುಕಟ್ಟೆ ಪ್ರವೇಶಿಸುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Hyundai creta knight edition new tvc released details
Story first published: Tuesday, May 17, 2022, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X